
ನ್ಯೂಯಾರ್ಕ್(ಮೇ.13) ವಿಶ್ವದ ಅತೀ ದೊಡ್ಡ ಉದ್ಯಮ ಸಾಮ್ರಾದ್ಯ ಕಟ್ಟಿದ ಉದ್ಯಮಿಗಳು, ತಂತ್ರಜ್ಞರು ಹಲವು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅತೀ ಸಣ್ಣ ಹೂಡಿಕೆಯೊಂದಿಗ ಆರಂಭಿಸಿ ಇದೀಗ ಬಹುರಾಷ್ಟ್ರೀಯ ಕಂಪನಿಯಾಗಿ ಬೆಳೆದು ನಿಂತಿದೆ. ಪ್ರತಿ ದಿನ ಕೋಟಿ ಕೋಟಿ ರೂಪಾಯಿ ಆದಾಯಗಳಿಸುತ್ತಿದೆ. ಲಕ್ಷಾಂತರ ಮಂದಿ ಉದ್ಯೋಗ ಪಡೆದಿದ್ದಾರೆ. ಪ್ರತಿ ದಿಗ್ಗಜ ಕಂಪನಿಗಳು ಶ್ರಮ, ಪರಿಶ್ರಮ, ಹೋರಾಟಗಳ ಮೂಲಕ ಸಾಧನೆ ಮಾಡಿದೆ. ಇದೀಗ ದಿಗ್ಗಜ ಕಂಪನಿಗಳನ್ನೇ ಫೇಸ್‌ಬುಕ್ ಅತೀ ಕಡಿಮೆ ಸಮಯದಲ್ಲಿ ಹಿಂದಿಕ್ಕಿದೆ. ಹೌದು 1 ಟ್ರಿಲಿಯನ್ ಮೌಲ್ಯದ ಕಂಪನಿಯಾಗಲು ಫೇಸ್‌ಬುಕ್ ಕೇವಲ 17 ವರ್ಷ ತೆಗೆದುಕೊಂಡಿದೆ. ಇತರ ಕಂಪನಿಗಳಿಗೆ ಹೋಲಿಕೆ ಮಾಡಿದರೆ ಇದು ಮಹತ್ತರ ಮೈಲಿಗಲ್ಲಾಗಿದೆ.
ಮಾರುಕಟ್ಟೆಯಲ್ಲಿ ಕಂಪನಿಯೊಂದುಗ 1 ಟ್ರಿಲಿಯನ್ ಅಮರಿಕನ್ ಡಾಲರ್ ಕಂಪನಿಯಾಗುವುದು ಸುಲಭದ ಮಾತಲ್ಲ. ಹೊಸದಾಗಿ ಆರಂಭಿಸಿದ ಕಂಪನಿ ಹಂತ ಹಂತಾಗಿ ಬೆಳೆದು ನಿಂತು ಸಾಧನೆ ಮಾಡುತ್ತದೆ.ಹೀಗಾಗಿ ಇದು ಸುದೀರ್ಘ ಪಯಣ. ದಿನ ಬೆಳಗಾಗುವುದರೊಳಗೆ ಯಾವ ಕಂಪನಿ ಕೂಡ ಟ್ರಿಯನ್ ಮೌಲ್ಯ ಕಂಪನಿಯಾಗಿ ಬೆಳೆದು ನಿಂತಿಲ್ಲ.
ಫೇಸ್‌ಬುಕ್ CEO ಮಾರ್ಕ್ ಜುಕರ್‌ಬರ್ಗ್ ತಿಂಗಳ ಸ್ಯಾಲರಿ ಕೇವಲ 85 ರೂ, ಆದರೂ ಶ್ರೀಮಂತ ಹೇಗೆ?
ಮೈಕ್ರೋಸಾಫ್ಟ್‌ಗೆ 44 ವರ್ಷ, ಫೇಸ್‌ಬುಕ್‌ಗೆ 17 ವರ್ಷ
ಮೈಕ್ರೋಸಾಫ್ಟ್ ಜಗತ್ತಿನ ಅತೀ ಹೆಚ್ಚು ಮೌಲ್ಯಹೊಂದಿದ ಕಂಪನಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೈಕ್ರೋಸಾಫ್ಟ್ ಕಂಪನಿಯ ಮಾರ್ಕೆಟ್ ವಾಲ್ಯೂ ಬರೋಬ್ಬರಿ 3.26 ಟ್ರಿಯನ್ ಅಮೆರಿಕನ್ ಡಾಲರ್. ಇದು ಹಲವು ದೇಶಗಳ ಜಿಡಿಪಿಗಿಂತ ಹೆಚ್ಚು. ಬಿಲ್ ಗೇಟ್ಸ್ ಹಾಗೂ ಇತರರು ಸೇರಿ ಆರಂಭಿಸಿದ ಈ ಮೈಕ್ರೋಸಾಫ್ಟ್ ಕಂಪನಿ ಹಂತ ಹಂತವಾಗಿ ಬೆಳೆದು ನಿಂತಿದೆ. ಮೈಕ್ರೋಸಾಫ್ಟ್ ಮಾರುಕಟ್ಟೆಯಲ್ಲಿ 1 ಟ್ರಿಯನ್ ಅಮರಿಕನ್ ಡಾಲರ್ ವ್ಯೂಲ್ಯೂ ಗಡಿ ದಾಟಲು ಬರೋಬ್ಬರಿ 44 ವರ್ಷ ತೆಗೆದುಕೊಂಡಿತ್ತು. ಇನ್ನು ಅಮೆಜಾನ್ ಸಂಸ್ಥೆ ಆರಂಭಿಸಿ ವಿಶ್ವದಲ್ಲೇ ಅತೀ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಜೆಫ್ ಬೆಜೋಸ್ ತಮ್ಮ ಅಮೇಜಾನ್ ಕಂಪನಿ 1 ಟ್ರಿಲಿಯನ್ ಡಾಲರ್ ಮೌಲ್ಯಕ್ಕೆ ತಲುಪಲು 24 ವರ್ಷ ಕಾಯಬೇಕಾಯಿತು. ಅಮೆಜಾನ್ ಸಂಸ್ಥಾಪಕ ಜೆಫ್ ಬಜೋಸ್ ಸತತ ಹೋರಾಟ, ಪರಿಶ್ರಮದ ಮೂಲಕ ಈ ಸಾಧನೆ ಮಾಡಿದ್ದರು. ಇದೀಗ ಕಂಪನಿ ಟ್ರಿಲಿಯನ್ ವ್ಯೂಲ್ಯೂ ಹೆಚ್ಚಿಸಿಕೊಳ್ಳುತ್ತಾ ಸಾಗುತ್ತಿದೆ. ವಿಶ್ವದ ಅತೀ ಹೆಚ್ಚು ಶ್ರೀಮಂತ , ನಂ.1 ಸ್ಥಾನದಲ್ಲಿರುವ ಎಲಾನ್ ಮಸ್ಕ್, ತಮ್ಮ ಟೆಸ್ಲಾ ಕಂಪನಿ ಮೂಲಕ ಅತೀ ಹೆಚ್ಚಿನ ಆದಾಯಗಳಿಸುತ್ತಿದ್ದಾರೆ. ಆದರೆ ಇದೇ ಟೆಸ್ಲಾ ಕಂಪನಿ 1 ಟ್ರಿಯನ್ ಮಾರ್ಕೆಟ್ ವ್ಯಾಲ್ಯೂ ಪಡೆದುಕೊಳ್ಳಲು 18 ವರ್ಷ ತೆಗೆದುಕೊಂಡಿತ್ತು. ಇನ್ನು ಜಗತ್ತೇ ಅವಲಂಬಿಸಿರುವ ಗೂಗೂಲ್ 1 ಟ್ರಿಲಿಯನ್ ವ್ಯಾಲ್ಯೂ ಕಂಪನಿಯಾಗಿ ಹೊರಹೊಮ್ಮಲು 21 ವರ್ಷಗಳನ್ನೇ ತೆಗೆದುಕೊಂಡಿದೆ.
ಆದರೆ ಫೇಸ್‌ಬುಕ್ 1 ಟ್ರಿಲಿಯನ್ ಮಾರ್ಕೆಟ್ ವ್ಯಾಲ್ಯೂ ರೀಚ್ ಆಗಲು 17 ವರ್ಷ ತೆಗೆದುಕೊಂಡಿದೆ. ಈ ಮೂಲಕ ಅತೀ ಕಡಿಮೆ ಸಮಯದಲ್ಲಿ 1 ಟ್ರಿಲಿಯನ್ ಸಾಧನೆ ಮಾಡಿದ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2021ರಲ್ಲಿ ಫೇಸ್‌ಬುಕ್ ಮಾತೃಸಂಸ್ಥೆ ಹೆಸರನ್ನು ಮೆಟಾ ಎಂದು ಬದಲಾಯಿಸಿಕೊಂಡಿತ್ತು. ವಿಶೇಷ ಅಂದರೆ ಫೇಸ್‌ಬುಕ್ ಆರಂಭಿಸುವಾಗ ಮಾರ್ಕ್ ಜುಕರ್‌ಬರ್ಗ್ ವಯಸ್ಸು ಕೇವಲ 19 ಮಾತ್ರ.
ಫೇಸ್‌ಬುಕ್‌ನಲ್ಲಿ ಬರೋ ಜಾಹೀರಾತು ಕ್ಲಿಕ್ ಮಾಡುವ ಮುನ್ನ ಎಚ್ಚರ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.