₹221 ಕೋಟಿ ಸಂಬಳ ಪಡೆಯುವ ಟೆಕ್ CEO ಯಾಮಿನಿ ರಂಗನ್; ಗಂಡನಿಗೆ ಕೊಡೋ ಟೈಮ್ ಎಷ್ಟು?

Published : May 13, 2025, 06:06 PM ISTUpdated : May 13, 2025, 06:38 PM IST
₹221 ಕೋಟಿ ಸಂಬಳ ಪಡೆಯುವ ಟೆಕ್ CEO ಯಾಮಿನಿ ರಂಗನ್; ಗಂಡನಿಗೆ ಕೊಡೋ ಟೈಮ್ ಎಷ್ಟು?

ಸಾರಾಂಶ

ಹಬ್‌ಸ್ಪಾಟ್ ಸಿಇಒ ಯಾಮಿನಿ ರಂಗನ್ ವಾರಾಂತ್ಯದಲ್ಲಿ ಕೆಲಸ-ಜೀವನ ಸಮತೋಲನ ಕಾಪಾಡುವ ವಿಧಾನ ವೈರಲ್ ಆಗಿದೆ. ಶುಕ್ರ-ಶನಿವಾರ ಕೆಲಸದಿಂದ ದೂರವಿರುವ ಇವರು, ಭಾನುವಾರ ವೈಯಕ್ತಿಕ ಕೆಲಸಗಳಿಗೆ ಮೀಸಲಿಡುತ್ತಾರೆ. ವಾರದ ಯೋಜನೆ ರೂಪಿಸಲು ಈ ಸಮಯ ಬಳಸುತ್ತಾರೆ. ಕುಟುಂಬದೊಂದಿಗೆ ಸಮಯ ಕಳೆಯಲು ಶನಿವಾರ ಮೀಸಲು.

ಕೋಟಿ ಕೋಟಿ ಆಸ್ತಿಯ ಟೆಕ್ ಕಂಪನಿ ಸಿಇಒ ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಹೇಗೆ ಸಮತೋಲನವನ್ನು ಕಾಪಾಡಿಕೊಳ್ಳುತ್ತಾರೆ ಎನ್ನುವ ಬಗ್ಗೆ ಒಂದು ಪೋಸ್ಟ್ ವೈರಲ್ ಆಗ್ತಿದೆ. ಯುಎಸ್ ಟೆಕ್ ಕಂಪನಿಯ ಸಿಇಒ ಆಗಿರುವ ಭಾರತೀಯ ಮೂಲದ ಯಾಮಿನಿ ರಂಗನ್, ಭಾನುವಾರ ಕೆಲಸ ಮಾಡಿದ್ರೂ ತಮ್ಮ ಜೀವನ ಹೇಗೆ ಸಮತೋಲನದಲ್ಲಿ ಇಡುತ್ತಾರೆ ಎಂದು ವಿವರಿಸಿದ್ದಾರೆ. 34 ಬಿಲಿಯನ್ ಡಾಲರ್ ಮೌಲ್ಯದ ಸಾಫ್ಟ್‌ವೇರ್ ಕಂಪನಿ ಹಬ್‌ಸ್ಪಾಟ್‌ನ ಸಿಇಒ ಯಾಮಿನಿ ರಂಗನ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ದ ಗ್ರಿಟ್ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಅವರು, ಶುಕ್ರವಾರ ರಾತ್ರಿ ಮತ್ತು ಶನಿವಾರ ಕೆಲಸದಿಂದ ದೂರ ಮಾತ್ರ ದೂರವಿರುತ್ತಾರೆ. ಈ ಸಮಯದಲ್ಲಿ ಯಾವುದೇ ಆಫೀಸ್ ಸಂಬಂಧಿತ ವಿಷಯಗಳಿಗೆ ಅವರು ಯಾವುದೇ ರೀತಿಯಲ್ಲಿಯೂ ಸ್ಪಂದಿಸಲ್ಲ. ಈ ಸಮಯವನ್ನು ಅವರು ಗೋಲ್ಡ್‌ಮನ್ ಸ್ಯಾಚ್ಸ್‌ನಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ತಮ್ಮ ಗಂಡನ ಜೊತೆ ಸಮಯ ಕಳೆಯಲು ಮೀಸಲಿಟ್ಟಿದ್ದಾರೆ. ಆದರೆ, ಭಾನುವಾರ ಅವರ ಕೆಲಸದ ಅವಧಿಯ ವಾರದ ಆರಂಭವಾಗುತ್ತದೆ. ಭಾನುವಾರವನ್ನು ವೈಯಕ್ತಿಕ ಕೆಲಸದ ದಿನವಾಗಿ ಅವರು ಬಳಕೆ ಮಾಡಿಕೊಳ್ಳುತ್ತಾರೆ. ಇದು ಅವರ ಕೆಲಸದ ದಿನದ ಶಿಸ್ತು ಆಗಿದೆ ಎಂದು ಹೇಳಿಕೊಳ್ಳುತ್ತಾರೆ.

ಭಾನುವಾರ ಕೆಲಸ ಮಾಡುವುದಲ್ಲಿ ಯಾಮಿನಿ ರಂಗನ್ ಅವರಿಗೆ ಯಾವ ತೊಂದರೆಯೂ ಇಲ್ಲವೆಂದು ಹೇಳಿದ್ದಾರೆ. ಭಾನುವಾರ ಕೆಲಸ ಮಾಡುವುದನ್ನು ನಾನು ತುಂಬಾ ಎಂಜಾಯ್ ಮಾಡ್ತೀನಿ. ಸಾಮಾನ್ಯವಾಗಿ ನನಗೆ ಕೆಲಸದಿಂದ ದೂರ ಇರೋದು ಎಂದರೆ ತುಂಬಾ ಕಷ್ಟ. ಆದರೂ ಪ್ರತಿ ಶುಕ್ರವಾರ ರಾತ್ರಿ ಮತ್ತು ಶನಿವಾರ ರಜೆ ತಗೋತೀನಿ. ಈ ಸಮಯದಲ್ಲಿ ಗಂಡನ ಜೊತೆ ವಾಕಿಂಗ್, ಯೋಗ, ಧ್ಯಾನ, ಓದುವಿಕೆ ಕೆಲವು ಅಭ್ಯಾಸಗಳನ್ನು ನಾನು ಮಾಡುತ್ತೇನೆ. ಇನ್ನು ನಾನು ಭಾನುವಾರ ಮಾಡುವ ನನ್ನ ವೈಯಕ್ತಿಕ ಸಂಬಂಧಿತ ಕೆಲಸದ ಅವಧಿಯಲ್ಲಿ ಮುಂದಿನ ಒಂದು ವಾರದಲ್ಲಿ 'ಏನು ಕಲಿಯುತ್ತೇನೆ, ಏನು ಮಾಡುತ್ತೇನೆ, ಏನು ಯೋಚನೆ ಮಾಡುತ್ತೇನೆ ಹಾಗೂ ಏನು ಬರೆಯಬೇಕು ಎನ್ನುವುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಅದು ಸಂಪೂರ್ಣವಾಗಿ ನನ್ನದೇ ವೇಳಾಪಟ್ಟಿ ಆಗಿದೆ ಎಂದು ಯಾಮಿನಿ ಹೇಳಿಕೊಂಡಿದ್ದಾರೆ.
 
ಕೆಲಸದಲ್ಲಿ ವಿರಾಮ ತಗೊಳ್ಳದೆ ಇದ್ದಾಗ ದಣಿವು ಅನುಭವಿಸಿದ್ದೀನಿ. ಹಾಗಾಗಿ ಶನಿವಾರಗಳು ನನಗೆ ಬೆಲೆಬಾಳುವ ವಾರಾಂತ್ಯದ ದಿನಗಳಾಗಿವೆ. ನಾನು ಭಾನುವಾರ ಕೆಲಸ ಮಾಡಿದರೂ, ನನ್ನ ಸಿಬ್ಬಂದಿ ಮೇಲ್‌ಗಳಿಗೆ ಉತ್ತರಿಸಬೇಕು ಅಂತ ಬಯಸಲ್ಲ. ಸೋಮವಾರ ಬೆಳಿಗ್ಗೆ ಇನ್‌ಬಾಕ್ಸ್‌ಗೆ ಬರಬೇಕಾದ ಮೇಲ್‌ಗಳನ್ನು ಶೆಡ್ಯೂಲ್ ಮಾಡಲು ಭಾನುವಾರ ಸಮಯ ಕಳೆಯುತ್ತೇನೆ. ಸಾಮಾನ್ಯ ದಿನಗಳಲ್ಲಿ ಬೆಳಿಗ್ಗೆ 6 ಗಂಟೆಗೆ ಕೆಲಸ ಶುರು ಮಾಡುತ್ತೇನೆ. ಇನ್ನು 7 ಗಂಟೆಗೆ ಕಾನ್ಫರೆನ್ಸ್ ಕಾಲ್‌ಗಳಲ್ಲಿ ಭಾಗವಹಿಸುತ್ತೇನೆ. ರಾತ್ರಿ 11 ಗಂಟೆಯವರೆಗೂ ಕೆಲಸ ಮಾಡುತ್ತೇನೆ ಎಂದು ಹೇಳುತ್ತಾರೆ.

ಕೋವಿಡ್‌ಗೆ ಮೊದಲು ಯಾಮಿನಿ ಮಾರ್ಕೆಟಿಂಗ್ ಸಾಫ್ಟ್‌ವೇರ್ ಕಂಪನಿ ಸೇರಿದರು. 2021ರ ಸೆಪ್ಟೆಂಬರ್‌ನಲ್ಲಿ ಹಬ್‌ಸ್ಪಾಟ್‌ನ ಸಿಇಒ ಆದರು. ಡ್ರಾಪ್‌ಬಾಕ್ಸ್, ವರ್ಕ್‌ಡೇ, ಎಸ್‌ಎಪಿ ಮುಂತಾದ ದೊಡ್ಡ ಕಂಪನಿಗಳಲ್ಲಿ ನಾಯಕತ್ವದ ಹುದ್ದೆ ನಿರ್ವಹಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಹುಟ್ಟಿ ಬೆಳೆದ ಯಾಮಿನಿ ಅವರು, ಭಾರತೀಯಾರ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ನಂತರ 21ನೇ ವಯಸ್ಸಿನಲ್ಲಿ ಯುಎಸ್‌ಗೆ ಹೋದರು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಬರ್ಕ್‌ಲಿಯಲ್ಲಿರುವ ಹಾಸ್ ಸ್ಕೂಲ್ ಆಫ್ ಬಿಸಿನೆಸ್‌ನಿಂದ ಎಂಬಿಎ ಪದವಿ ಪಡೆದರು. ಇದೀಗ 26 ಮಿಲಿಯನ್ ಡಾಲರ್ (ಭಾರತೀಯ ರೂಪಾಯಿ ಮೌಲ್ಯದಲ್ಲಿ 221 ಕೋಟಿ ರೂ.) ಸಂಬಳದೊಂದಿಗೆ, ಯುಎಸ್‌ನಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಭಾರತೀಯ ಮೂಲದ ಸಿಇಒಗಳಲ್ಲಿ ಒಬ್ಬರಾಗಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ
Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?