World Economy: ಬ್ರಿಟನ್‌ ಹಿಂದಿಕ್ಕಿ 5ನೇ ಸ್ಥಾನಕ್ಕೇರಿದ ಭಾರತ

Published : Sep 03, 2022, 09:47 AM ISTUpdated : Sep 03, 2022, 05:02 PM IST
World Economy: ಬ್ರಿಟನ್‌ ಹಿಂದಿಕ್ಕಿ 5ನೇ ಸ್ಥಾನಕ್ಕೇರಿದ ಭಾರತ

ಸಾರಾಂಶ

ವಿಶ್ವ ಆರ್ಥಿಕತೆಯಲ್ಲಿ ಭಾರತ ಮತ್ತೆ ನಂ. 5 ಸ್ಥಾನಕ್ಕೇರಿದ್ದು, ಬ್ರಿಟನ್‌ ಹಿಂದಿಕ್ಕಿ ಈ ಸಾಧನೆ ಮಾಡಿದೆ. ದೇಶದ ಆರ್ಥಿಕತೆ ಗಾತ್ರ 854.7 ಶತಕೋಟಿ ಡಾಲರ್‌ಗೆ ಹೆಚ್ಚಾಗಿದ್ದು, ಈ ಮೂಲಕ ಭಾರತ ಟಾಪ್‌ 5 ಸ್ಥಾನ ಪಡೆದುಕೊಂಡಿದೆ. 

ಲಂಡನ್‌: ಮತ್ತೊಮ್ಮೆ ಬ್ರಿಟನ್‌ (Britain) ಹಿಂದಿಕ್ಕಿರುವ ಭಾರತವು (India) ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿ (5th Biggest Economy) ಹೊರಹೊಮ್ಮಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (International Monetary Fund) (ಐಎಂಎಫ್‌) ಜಿಡಿಪಿ ದತ್ತಾಂಶವು ತಿಳಿಸಿದೆ. 2021ರ ಆರ್ಥಿಕ ವರ್ಷದ (Financial Year) ಕೊನೆಯ ತ್ರೈಮಾಸಿಕದಲ್ಲಿ 5ನೇ ಅತಿದೊಡ್ಡ ಆರ್ಥಿಕತೆ ಎನಿಸಿದ ಭಾರತ 2022ರ ಮೊದಲ ತ್ರೈಮಾಸಿಕದಲ್ಲೂ ಮುನ್ನಡೆ ಕಾಯ್ದುಕೊಂಡಿದೆ. ಈ ಹಿಂದೆ 2019ರಲ್ಲೂ ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ ಎನಿಸಿಕೊಂಡಿತ್ತು.
ಬ್ರಿಟನ್‌ನಲ್ಲಿ 4 ದಶಕಗಳಲ್ಲೇ ಅತಿಹೆಚ್ಚು ಹಣದುಬ್ಬರ ಕಂಡುಬಂದಿದ್ದು, ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಹೀಗಾಗಿ ಈಗಾಗಲೇ ಭಾರಿ ಕುಸಿತ ಕಂಡಿರುವ ಆರ್ಥಿಕತೆ 2024ರಲ್ಲಿ ಇನ್ನಷ್ಟು ಕುಸಿಯುವ ಆತಂಕ ಇದೆ ಎಂದು ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ (Bank of England) ಹೇಳಿದೆ. ಬ್ರಿಟನ್‌, ಪ್ರಮುಖವಾಗಿ ಲಂಡನ್‌ನಲ್ಲಿ ಜೀವನ ವೆಚ್ಚ ತೀರಾ ಹೆಚ್ಚಾಗಿದ್ದು, ಇದರಿಂದ ಬ್ರಿಟನ್‌ ಸರ್ಕಾರಕ್ಕೆ ಮತ್ತಷ್ಟು ಹೊಡೆತ ಬಿದ್ದಿದೆ. 

ಆದರೆ ಮತ್ತೊಂದೆಡೆ ಈ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ.7 ಕ್ಕಿಂತ ಹೆಚ್ಚಿರಲಿದೆ ಎಂದು ಈಗಾಗಲೇ ಅಂದಾಜಿಸಲಾಗಿದೆ. ಭಾರತದ ಆರ್ಥಿಕತೆಯ ಗಾತ್ರ ಮಾರ್ಚ್‌ನಲ್ಲಿ ಮುಕ್ತಾಯವಾದ ತ್ರೈಮಾಸಿಕದಲ್ಲಿ 854.7 ಬಿಲಿಯನ್‌ ಡಾಲರ್‌ಗಳಷ್ಟಿದೆ. ಅದೇ ಬ್ರಿಟನ್‌ ಆರ್ಥಿಕತೆ ಗಾತ್ರ 816 ಬಿಲಿಯನ್‌ ಡಾಲರ್‌ಗಳಿಗೆ ಕುಸಿದಿದೆ. ಈ ಲೆಕ್ಕಾಚಾರವು ಅಮೆರಿಕ ಡಾಲರ್‌ಗಳನ್ನು ಆಧರಿಸಿದೆ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ GDP ಅಂಕಿಅಂಶಗಳನ್ನು ಒಳಗೊಂಡಿದೆ. ಬ್ಲೂಮ್‌ಬರ್ಗ್ ಟರ್ಮಿನಲ್‌ನಲ್ಲಿ IMF ಡೇಟಾಬೇಸ್ ಮತ್ತು ಐತಿಹಾಸಿಕ ವಿನಿಮಯ ದರಗಳನ್ನು ಬಳಸಿಕೊಂಡು ಈ ಲೆಕ್ಕಾಚಾರಗಳನ್ನು ಮಾಡಲಾಗಿದೆ.

GDP Growth Rate: ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 13.5 ವೇಗವಾಗಿ ಬೆಳೆದ ಭಾರತದ ಜಿಡಿಪಿ: ಚೀನಾದ್ದು 0.4 ಅಷ್ಟೇ..!

ಅಂತಾರಾಷ್ಟ್ರೀಯ ಶ್ರೇಯಾಂಕದಲ್ಲಿ ಯುಕೆ (UK) ಕುಸಿತವು, ಮುಂದಿನ ಪ್ರಧಾನ ಮಂತ್ರಿಗೆ ಒತ್ತಡ ಹೆಚ್ಚಾಗಲಿದೆ. ಕನ್ಸರ್ವೇಟಿವ್ ಪಕ್ಷದ ಸದಸ್ಯರು ಸೋಮವಾರ ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುತ್ತಾರೆ. ರಿಷಿ ಸುನಕ್ ಅವರನ್ನು ಸೋಲಿಸಿ, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರು ಮುಂದಿನ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿದೆ.
4 ದಶಕಗಳಲ್ಲೇ ಹೆಚ್ಚು ವೇಗವಾಗಿ ಹಣದುಬ್ಬರ ಎದುರಿಸುತ್ತಿರುವ ಬ್ರಿಟನ್‌ ರಾಷ್ಟ್ರವನ್ನು ವಿಜೇತರು ಮುನ್ನಡೆಸಬೇಕಿದೆ. ಮತ್ತು ಆರ್ಥಿಕ ಹಿಂಜರಿತದ ಅಪಾಯಗಳು  2024 ರವರೆಗೂ ಉಳಿಯಬಹುದು ಎಂದು ಬ್ಯಾಂಕ್ ಆಫ್ ಇಂಗ್ಲೆಂಡ್ ಈಗಾಗಲೇ ಎಚ್ಚರಿಸಿದ್ದು, ಇದನ್ನೂ ಸಹ ಯುಕೆಯ ನೂತನ ಪ್ರಧಾನಿ ಪರಿಗಣಿಸಬೇಕಿದೆ. 

ಇದಕ್ಕೆ ವ್ಯತಿರಿಕ್ತವಾಗಿ, ಭಾರತದ ಆರ್ಥಿಕತೆಯು ಈ ವರ್ಷ 7% ಕ್ಕಿಂತ ಹೆಚ್ಚು ಬೆಳೆಯುವ ಮುನ್ಸೂಚನೆ ಇದೆ. ಈ ತ್ರೈಮಾಸಿಕದಲ್ಲಿ ಭಾರತೀಯ ಷೇರುಗಳ ಮೌಲ್ಯ ಹೆಚ್ಚಾಗುತ್ತಿದ್ದು, MSCI ಉದಯೋನ್ಮುಖ ಮಾರುಕಟ್ಟೆಗಳ ಸೂಚ್ಯಂಕದಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ಚೀನಾ ಮಾತ್ರ ಈ ಮಾರುಕಟ್ಟೆಗಳ ಸೂಚ್ಯಂಕದಲ್ಲಿ ಮೊದಲನೇ ಸ್ಥಾನದಲ್ಲಿದೆ. ಎರಡನೇ ತ್ರೈಮಾಸಿಕದಲ್ಲಿ UK GDP ಕೇವಲ 1% ನಷ್ಟು ಬೆಳವಣಿಗೆಯನ್ನು ಕಂಡಿತು ಮತ್ತು ಹಣದುಬ್ಬರಕ್ಕೆ ಸರಿಹೊಂದಿಸಿದ ನಂತರ, 0.1% ರಷ್ಟು ಕುಗ್ಗಿತು. ಈ ವರ್ಷ ಭಾರತೀಯ ಕರೆನ್ಸಿ ರೂಪಾಯಿಯ ವಿರುದ್ಧ ಪೌಂಡ್ 8% ಕುಸಿತವಾಗಿದೆ. IMF ನ ಸ್ವಂತ ಮುನ್ಸೂಚನೆಗಳು ಈ ವರ್ಷ ವಾರ್ಷಿಕ ಆಧಾರದ ಮೇಲೆ ಭಾರತವು ಡಾಲರ್ ಲೆಕ್ಕದಲ್ಲಿ ಯುಕೆ ಅನ್ನು ಹಿಂದಿಕ್ಕಿದೆ ಎಂದು ತೋರಿಸುತ್ತದೆ.

ಈ ಮೂಲಕ ಏಷ್ಯಾದ ಶಕ್ತಿ ಕೇಂದ್ರವನ್ನು US, ಚೀನಾ, ಜಪಾನ್ ಮತ್ತು ಜರ್ಮನಿಯ ಹಿಂದೆ ಇರಿಸಿದೆ. ಒಂದು ದಶಕದ ಹಿಂದೆ, ಭಾರತವು ಅತಿದೊಡ್ಡ ಆರ್ಥಿಕತೆಗಳಲ್ಲಿ 11 ನೇ ಸ್ಥಾನದಲ್ಲಿದ್ದರೆ, ಯುಕೆ 5 ನೇ ಸ್ಥಾನದಲ್ಲಿತ್ತು.
ದೇಶದ ಆರ್ಥಿಕತೆ ಭದ್ರವಾಗಿದೆ: ಸಮರ್ಥಿಸಿಕೊಂಡ ವಿತ್ತ ಸಚಿವೆ

ದೇಶದ ಜಿಡಿಪಿ (ಲಕ್ಷ ಕೋಟಿ ಡಾಲರ್‌ಗಳಲ್ಲಿ)

ಅಮೆರಿಕ - 23

ಚೀನಾ - 17.7

ಜಪಾನ್‌ - 4.9

ಜರ್ಮನಿ - 4.2

ಭಾರತ - 3.2

ಬ್ರಿಟನ್‌ - 3.1

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!