ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದೆ. ಇನ್ನುಮುಂದೆ ವಿದೇಶಗಳಿಂದ ಲ್ಯಾಪ್‌ಟಾಪ್, ಕಂಪ್ಯೂಟರ್, ಟ್ಯಾಬ್ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ.
ನವದೆಹಲಿ(ಆ.03) ಇನ್ನು ಮುಂದೆ ಮೇಡ್ ಇನ್ ಚೀನಾ ಲ್ಯಾಪ್‌ಟಾಪ್, ಟ್ಯಾಬ್, ಕಂಪ್ಯೂಟರ್‌ಗಳು ಭಾರತದಲ್ಲಿ ಸಿಗುವುದು ಕಷ್ಟ. ಚೀನಾ ಮಾತ್ರವಲ್ಲ, ವಿದೇಶಗಳಲ್ಲಿ ಉತ್ಪಾದನೆಗೊಳ್ಳುವ ಈ ವಸ್ತುಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವ ಪರಿಪಾಠಕ್ಕೆ ನಿರ್ಬಂಧ ವಿಧಿಸಲಾಗಿದೆ. ವಿದೇಶಗಳಿಂದ ಲ್ಯಾಪ್‌ಟಾಪ್, ಟ್ಯಾಬ್, ಕಂಪ್ಯೂಟರ್ ಆಮದನ್ನು ಭಾರತ ನಿರ್ಬಂಧಿಸಿದೆ. ಅಧಿಕೃತ ಲೈಸೆನ್ಸ್ ಇದ್ದವರೂ ಮಾತ್ರ ಟ್ಯಾಬ್ ಅಥವಾ ಲ್ಯಾಪ್‌ಟಾಪ್ ಆಮದುಮಾಡಿಕೊಳ್ಳಲು ಸಾಧ್ಯವಿದೆ. ಈ ಮೂಲಕ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಭಾರತದಲ್ಲೇ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಹೊಸ ನೀತಿ ತಕ್ಷಣದಿಂದಲೇ ಜಾರಿಯಾಗಿದೆ.
ಅಮೇರಿಕ ಸೇರಿದಂತೆ ಪ್ರತಿಷ್ಠಿತ ಕಂಪನಿ ಉತ್ಪನ್ನಗಳ ಹಲವು ಕಂಪೋನೆಂಟ್‌ಗಳು ಚೀನಾದಲ್ಲೇ ಉತ್ಪಾದನೆಯಾಗುತ್ತಿದೆ. ಬಳಿಕ ಅಸೆಂಬಲ್ ಮಾಡಿ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ. ಹಲವು ಕಂಪನಿಗಳು ಚೀನಾ ಸೇರಿದಂತೆ ಇತರ ದೇಶಗಳಿಂದ ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಹೀಗಾಗಿ ಚೀನಾ ವಸ್ತು ಬೇಡ ಎಂದು ಹೆಚ್‌ಪಿ ಅಥವಾ ಇನ್ಯಾವುದೇ ಲ್ಯಾಪ್‌ಟಾಪ್, ಟ್ಯಾಬ್ ಖರೀದಿಸಿದರೂ ಅದು ಮೇಡ್ ಇನ್ ಚೀನಾ ಇರುತ್ತಿತ್ತು. ಇನ್ನು ಮುಂದೆ ವಿದೇಶದಿಂದ ಆಮದು ಮಾಡಿಕೊಳ್ಳಲು ಭಾರತ ನಿರ್ಬಂಧ ವಿಧಿಸಿದೆ.
undefined
ದೇಶದ ಸರಕು ರಫ್ತಿನಲ್ಲಿ ದಾಖಲೆಯ ಏರಿಕೆ: ಕಳೆದ ವರ್ಷಕ್ಕಿಂತ 14% ಭರ್ಜರಿ ಏರಿಕೆ
ಅಧಿಕೃತ ಲೈಸೆನ್ಸ್ ಹೊಂದಿದ ಕಂಪನಿಗಳಿಗೆ ಮಾತ್ರ ವಿದೇಶದಿಂದ ಆಮದುಮಾಡಿಕೊಳ್ಳಲು ಅವಕಾಶವಿದೆ. ಭಾರತದಲ್ಲೇ ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆ ಮಾಡಲು ಕೇಂದ್ರ ಸರ್ಕಾರ ಹೆಚ್ಚಿನ ಗಮನ ಕೇಂದ್ರೀಕರಿಸಿದೆ. ಭಾರತ ಮೊಬೈಲ್ ಉತ್ಪಾದನೆಯಲ್ಲಿ ಮಹತ್ವದ ಸಾಧನೆ ಮಾಡಿದೆ. ಭಾರತದಲ್ಲೇ ಮೊಬೈಲ್ ಉತ್ಪಾದನೆಯಾಗುತ್ತಿದ್ದು,ವಿದೇಶಗಳಿಗೂ ರಫ್ತಾಗುತ್ತಿದೆ. ಇದೀಗ ಲ್ಯಾಪ್‌ಟಾಪ್, ಟ್ಯಾಬ್, ಕಂಪ್ಯೂಟರ್ ಕ್ಷೇತ್ರದಲ್ಲೂ ಇದೇ ಸಾಧನೆಗೆ ಭಾರತ ಮುಂದಾಗಿದೆ. ಹೀಗಾಗಿ ಭಾರತದಲ್ಲೇ ಉತ್ಪಾದನೆ ಆರಂಭಿಸಲು ಹೆಚ್ಚಿನ ಒತ್ತು ನೀಡಲಾಗಿದೆ.
ಲೈಸೆನ್ಸ್ ಮೂಲಕ ಆಮದು ಮಾಡಿಕೊಳ್ಳಲುವವರಿಗೂ ಆಮದು ಸುಂಕ ಹೆಚ್ಚು ಪಾವತಿ ಮಾಡಬೇಕಿದೆ. ಇದರಿಂದ ವಿದೇಶಗಳಿಗೆ ಅವಲಂಬನೆ ತಪ್ಪಿಸಿ, ಭಾರತದಲ್ಲೇ ಸಂಪೂರ್ಣವಾಗಿ ಉತ್ಪದಾನೆ ಹಾಗೂ ರಫ್ತಿಗೆ ಕೇಂದ್ರ ಸರ್ಕಾರ ಯೋಜನೆ ಸಿದ್ಧಪಡಿಸಿದೆ. ಕಳೆದ ವರ್ಷ ಎಪ್ರಿಲ್-ಜೂನ್ ಮೂರು ತಿಂಗಳ ಅವಧಿಯಲ್ಲಿ 19.7 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಲ್ಯಾಪ್‌ಟಾಪ್, ಕಂಪ್ಯೂಟರ್, ಟ್ಯಾಬ್‌ಗಳು ಆಮದುಗೊಂಡಿದೆ. 2021ಕ್ಕೆ ಹೋಲಿಸಿದರೆ ಶೇಕಡಾ 6.25ರಷ್ಟು ಹೆಚ್ಚಳ.
ಶಸ್ತ್ರಾಸ್ತ್ರ ಆಮದು ಪ್ರಮಾಣದಲ್ಲಿ ಭಾರತವೇ ನಂ.1: Arms ಪೂರೈಕೆಯಲ್ಲಿ ರಷ್ಯಾಗೆ ಸಿಂಹಪಾಲು
ಕೇಂದ್ರದ ಹೊಸ ನೀತಿಯಿಂದ ಭಾರತ ವಿಶ್ವದಲ್ಲೇ ಎಲೆಕ್ಟ್ರಾನಿಕ್ ಹಬ್ ಆಗಿ ಮಾರ್ಪಡಲಿದೆ. ಇಷ್ಟೇ ಅಲ್ಲ ಇಲ್ಲಿಂದ ರಫ್ತು ವ್ಯವಾಹರ ಹೆಚ್ಚಾಗಲಿದೆ. ಕೇಂದ್ರದ ಹೊಸ ನೀತಿಯಿಂದ ಹೆಚ್‌ಪಿ, ಡೆಲ್, ಏಸರ್, ಸ್ಯಾಮ್‌ಸಂಗ್, ಪ್ಯಾನಸೋನಿಕ್, ಆ್ಯಪಲ್, ಲೆನೋವಾ ಸೇರಿದಂತೆ ಹಲವು ಕಂಪನಿಗಳಿಗೆ ಭಾರಿ ಹೊಡೆತ ಬೀಳಲಿದೆ. ಹೊಸ ನೀತಿಯಿಂದ ಈ ಕಂಪನಿಗಳು ಭಾರತದಲ್ಲಿ ಉತ್ಪಾದನ ಘಟಕ ಆರಂಭಿಸಬೇಕಿದೆ. ಇನ್ನು ಈಗ ಇರುವಂತೆ ವಿದೇಶಗಳಿಂದ ಆಮದುಕೊಳ್ಳುವುದು ದುಬಾರಿಯಾಗಲಿದೆ. ಹೀಗಾಗಿ ಭಾರತದಲ್ಲೇ ಉತ್ಪನ್ನ ಮಾಡುವ ಸಣ್ಣ ಸಣ್ಣ ಕಂಪನಿಗಳಿಗೆ ಇದೀಗ ಭಾರಿ ಬೇಡಿಕೆ ಹೆಚ್ಚಾಗಲಿದೆ.