ಇಶಾ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ ಮೌಲ್ಯ 9,26,055 ಕೋಟಿ ರೂ. ಆಗಿದ್ದು, ಇದರ ಮುಂದೆ ತಂದೆ ಮುಖೇಶ್ ಅಂಬಾನಿ ಅವರ ಇತರ ಪ್ರಮುಖ ಸಂಸ್ಥೆಗಳು ಹಿಂದೆ ಬಿದ್ದಿವೆ.
ಮುಂಬೈ (ಆಗಸ್ಟ್ 3, 2023): ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ದೇಶದಲ್ಲಷ್ಟೇ ಅಲ್ಲ ಏಷ್ಯಾದಲ್ಲೇ ಅತಿ ಶ್ರೀಮಂತ ವ್ಯಕ್ತಿ. ಆದರೆ, ಈ ಪೈಕಿ ಅವರ ಸಂಸ್ಥೆಯಾದ ರಿಲಯನ್ಸ್ ರೀಟೇಲ್ ಕಂಪನಿಯನ್ನು ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಕಳೆದ ವರ್ಷ ಆಗಸ್ಟ್‌ನಲ್ಲಿ ಕಂಪನಿಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದರು. ಅವರು ಕಂಪನಿಯ ನೂತನ ನಾಯಕಿಯಾಗಿದ್ದೇ ಆಗಿದ್ದು ಕಂಪನಿಯ ಅದೃಷ್ಟ ಮತ್ತಷ್ಟು ಖುಲಾಯಿಸಿದೆ. ಅಪ್ಪ ಮುಖ್ಯಸ್ಥರಾಗಿರೋ ಇತರೆ ಕಂಪನಿಗಳಿಗಿಂತ ಮಗಳು ಅಧಿಕಾರ ವಹಿಸಿಕೊಂಡಿರೋ ಕಂಪನಿ ಮೌಲ್ಯವೇ ಈಗ ಹೆಚ್ಚಾಗಿದೆ.
ಹೌದು, ಇಶಾ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ ಮೌಲ್ಯ 9,26,055 ಕೋಟಿ ರೂ. ಆಗಿದ್ದು, ಇದರ ಮುಂದೆ ತಂದೆ ಮುಖೇಶ್ ಅಂಬಾನಿ ಅವರ ಇತರ ಪ್ರಮುಖ ಸಂಸ್ಥೆಗಳು ಹಿಂದೆ ಬಿದ್ದಿವೆ. ಇಶಾ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ ಕಂಪನಿಯ ಮೌಲ್ಯ ಈಗ 9,26,055 ಕೋಟಿ ($ 112 ಬಿಲಿಯನ್) ಮೌಲ್ಯವನ್ನು ಹೊಂದಿದೆ ಎಂದು ಬ್ರೋಕರೇಜ್ ಸಂಸ್ಥೆ ಬರ್ನ್‌ಸ್ಟೈನ್ ವರದಿ ಹೇಳುತ್ತದೆ. ರಿಲಯನ್ಸ್ ರಿಟೇಲ್‌ನ ಮೌಲ್ಯವು RIL ನ ತೈಲ-ರಾಸಾಯನಿಕಗಳ (O2C) ವ್ಯವಹಾರದ 47,12,95 ಕೋಟಿ ($ 57 ಶತಕೋಟಿ) ಮೌಲ್ಯದ ವ್ಯವಹಾರಕ್ಕಿಂತ ಸುಮಾರು 2 ಪಟ್ಟು ಹೆಚ್ಚಾಗಿದೆ ಎಂದೂ ಬರ್ನ್‌ಸ್ಟೈನ್‌ನ ವರದಿ ಸೂಚಿಸುತ್ತದೆ.
ಇದನ್ನು ಓದಿ: ಅಂಬಾನಿ ಅಳಿಯನ ಕಂಪನಿಯ ಷೇರು ಖರೀದಿಸಿದ ರತನ್ ಟಾಟಾ: ಪಿರಾಮಲ್ ಕಂಪನಿಯ ಭವಿಷ್ಯವೇ ಬದಲು!
ಹೊಸ ಪಾಲುದಾರಿಕೆಗಳು ಮತ್ತು ವಿಸ್ತರಣೆಗೆ ಬಂದಾಗ ಇಶಾ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ ಕಂಪನಿ ಹೆಚ್ಚು ಆಕ್ರಮಣಕಾರಿಯಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್‌ನ ಚಿಲ್ಲರೆ ವಿಭಾಗವು ಆಫ್‌ಲೈನ್ ಸ್ಟೋರ್, ಜಿಯೋಮಾರ್ಟ್ ಮತ್ತು ಹೊಸ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚು ಹೂಡಿಕೆ ಮಾಡಿದೆ. ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆ ಇದ್ದು, ಮತ್ತು ಮಾರ್ಜಿನ್ ವಿಸ್ತರಣೆ ಕಂಪನಿಯ ಮೌಲ್ಯಮಾಪನ ಹೆಚ್ಚುತ್ತಿರುವ ಹಿಂದಿನ ಪ್ರಮುಖ ಕಾರಣ ಎಂದು ನಂಬಲಾಗಿದೆ.
ಇನ್ನು, ರಿಲಯನ್ಸ್‌ನ ಬಡ್ಡಿ, ತೆರಿಗೆ, ಡಿಪ್ರಿಸಿಯೇಷನ್ ಮತ್ತು ಭೋಗ್ಯ (EBITDA) ಕ್ಕೂ ಮೊದಲಿನ ಗಳಿಕೆಗಳ ಏರಿಕೆಯು ಹೆಚ್ಚಾಗಿ ಡಿಜಿಟಲ್ ಚಿಲ್ಲರೆ ವ್ಯಾಪಾರ ಮತ್ತು ಹೊಸ ಶಕ್ತಿಯ ಏರಿಕೆಯಿಂದ ನಡೆಸಲ್ಪಡುತ್ತದೆ ಎಂದು ಬ್ರೋಕರೇಜ್ ಸಂಸ್ಥೆ ಬರ್ನ್‌ಸ್ಟೈನ್ ಅಂದಾಜಿಸಿದೆ. ಈ ಮಧ್ಯೆ, ಆರ್ಥಿಕ ವರ್ಷ 2027ರ ವೇಳೆಗೆ ರಿಲಯನ್ಸ್ ರಿಟೇಲ್‌ನ ವೆಚ್ಚವು 18,900 ಕೋಟಿ ರೂಪಾಯಿಗಳನ್ನು ತಲುಪುತ್ತದೆ ಎಂದೂ ಅಂದಾಜಿಸಿದೆ. ಇದು ರಿಲಯನ್ಸ್ ಇಂಡಸ್ಟ್ರೀಸ್‌ನ ಒಟ್ಟು ಬಂಡವಾಳ ವೆಚ್ಚದ ಸುಮಾರು 19% ರಷ್ಟಿದೆ.
ಇದನ್ನೂ ಓದಿ: ಮುಂಬೈಗೆ ಆಗಮಿಸಿದ ಇಶಾ ಅಂಬಾನಿ, ಮಕ್ಕಳಿಗೆ ಅದ್ಧೂರಿ ಸ್ವಾಗತ: 300 ಕೆಜಿ ಚಿನ್ನ ದಾನ ಮಾಡ್ತಿರೋ ಅಂಬಾನಿ ಕುಟುಂಬ..!
ರಿಲಯನ್ಸ್ ರಿಟೇಲ್ ಹೊರತಾಗಿ, ಬ್ರೋಕರೇಜ್ ಸಂಸ್ಥೆ ಬರ್ನ್‌ಸ್ಟೈನ್ ರಿಲಯನ್ಸ್ ಇಂಡಸ್ಟ್ರೀಸ್‌ನ ಇ-ಕಾಮರ್ಸ್ ವಿಭಾಗವಾದ ಜಿಯೋಮಾರ್ಟ್ ಪ್ಲಾಟ್‌ಫಾರ್ಮ್‌ಗಳನ್ನು 77 ಬಿಲಿಯನ್ ಡಾಲರ್ ಮತ್ತು ಉದಯೋನ್ಮುಖ ನವೀಕರಿಸಬಹುದಾದ ಇಂಧನ ವ್ಯವಹಾರವನ್ನು 17 ಬಿಲಿಯನ್ ಡಾಲರ್‌ಗೆ ಮೌಲ್ಯೀಕರಿಸಿದೆ.
ಮುಖೇಶ್ ಅಂಬಾನಿಯವರು ಇಶಾ ಅಂಬಾನಿ ಅವರನ್ನು ಆಗಸ್ಟ್ 2022 ರಲ್ಲಿ ರಿಲಯನ್ಸ್ ರೀಟೇಲ್‌ನ ಹೊಸ ನಾಯಕಿ ಎಂದು ಹೆಸರಿಸಿದ್ದರು. ಆ ಸಮಯದಲ್ಲಿ, ಸಂಸ್ಥೆಯು 2 ಲಕ್ಷ ಕೋಟಿ ರೂ. ವಹಿವಾಟು ಸಾಧಿಸಲು ಸಾಧ್ಯವಾಗಿತ್ತು. ಜಿಮ್ಮಿ ಚೂ, ಜಾರ್ಜಿಯೊ ಅರ್ಮಾನಿ, ಹ್ಯೂಗೋ ಬಾಸ್, ವರ್ಸೇಸ್, ಮೈಕೆಲ್ ಕಾರ್ಸ್, ಬ್ರೂಕ್ಸ್ ಬ್ರದರ್ಸ್, ಅರ್ಮಾನಿ ಎಕ್ಸ್‌ಚೇಂಜ್, ಬರ್ಬೆರಿ ಮತ್ತು ಇತರ ಅನೇಕ ಜಾಗತಿಕ ಬ್ರ್ಯಾಂಡ್‌ಗಳು ರಿಲಯನ್ಸ್ ರಿಟೇಲ್ ಪಾಲುದಾರ ಬ್ರ್ಯಾಂಡ್‌ಗಳಾಗಿದ್ದು, ಭಾರತದಲ್ಲಿ ಲಭ್ಯವಿದೆ.
ಇದನ್ನೂ ಓದಿ: ಅವಳಿ ಮಕ್ಕಳಿಗೆ ತಾಯಿಯಾದ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ