3 ಕೋವಿಡ್‌ ಅಲೆ ಹೊರತೂ ಭಾರತದ ಆರ್ಥಿಕತೆ ಪುಟಿದೆದ್ದಿದೆ: ಅಮೆರಿಕ ಪ್ರಶಂಸೆ

Published : Jun 12, 2022, 07:15 AM ISTUpdated : Jun 12, 2022, 08:03 AM IST
3 ಕೋವಿಡ್‌ ಅಲೆ ಹೊರತೂ ಭಾರತದ ಆರ್ಥಿಕತೆ ಪುಟಿದೆದ್ದಿದೆ: ಅಮೆರಿಕ ಪ್ರಶಂಸೆ

ಸಾರಾಂಶ

*- ಭಾರತದ ಲಸಿಕಾ ಅಭಿಯಾನದ ಬಗ್ಗೆಯೂ ಮೆಚ್ಚುಗೆ * 3 ಕೋವಿಡ್‌ ಅಲೆ ಹೊರತೂ ಭಾರತದ ಆರ್ಥಿಕತೆ ಪುಟಿದೆದ್ದಿದೆ: ಅಮೆರಿಕ ಪ್ರಶಂಸೆ  

 

ವಾಷಿಂಗ್ಟನ್‌(ಜೂ.12): ಮೂರು ಕೋವಿಡ್‌ ಅಲೆಗಳ ಹೊರತಾಗಿಯೂ ಭಾರತದ ಆರ್ಥಿಕತೆ ಪ್ರಬಲವಾಗಿ ಪುಟಿದೆದ್ದಿದೆ ಎಂದು ಅಮೆರಿಕದ ಹಣಕಾಸು ಸಚಿವಾಲಯ ಪ್ರಶಂಸೆ ವ್ಯಕ್ತಪಡಿಸಿದೆ. 2021ರ ಮಧ್ಯಭಾಗದಲ್ಲಿ ಭಾರತವನ್ನು ಬಹುವಾಗಿ ಕಾಡಿದ ಕೋವಿಡ್‌ 2ನೇ ಅಲೆಯು, ದೇಶದ ಆರ್ಥಿಕತೆ ಚೇತರಿಕೆಯನ್ನು ಸ್ವಲ್ಪ ವಿಳಂಬ ಮಾಡಿತು ಎಂದು ಹಣಕಾಸು ಸಚಿವಾಲಯದ ಅರ್ಧ ವಾರ್ಷಿಕ ವರದಿ ಹೇಳಿದೆ.

‘ಎರಡನೇ ಅಲೆಯ ಮಾರಕ ಪರಿಣಾಮಗಳ ಹೊರತಾಗಿಯೂ, ಹಣಕಾಸು ವರ್ಷದ ಎರಡನೇ ಭಾಗದಲ್ಲಿ ದೇಶದಲ್ಲಿ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಿದ ಪರಿಣಾಮ ಆರ್ಥಿಕ ಚಟುವಟಿಕೆಗಳು ಪ್ರಬಲವಾಗಿಯೇ ಪುಟಿದೆದ್ದವು. 2020ರಲ್ಲಿ ದೇಶದ ಆರ್ಥಿಕತೆ ಶೇ. ಮೈನಸ್‌ 7ಕ್ಕೆ ಕುಸಿದಿದ್ದು, 2021ರ ದ್ವಿತಿಯಾರ್ಧದಲ್ಲಿ ಆರ್ಥಿಕತೆಯ, ಕೋವಿಡ್‌ ಪೂರ್ವ ಸ್ಥಿತಿ ತಲುಪಿತು. ಜೊತೆಗೆ 2021ರಲ್ಲಿ ಒಟ್ಟಾರೆ ಬೆಳವಣಿಗೆ ಪ್ರಮಾಣವು ಶೇ.8ರನ್ನು ಮುಟ್ಟಿತ್ತು ಎಂದು ವರದಿ ಹೇಳಿದೆ.

2022ರ ಆರಂಭದಿಂದಲೇ ಭಾರತವು, ಒಮಿಕ್ರೋನ್‌ ಉಪತಳಿಯಿಂದಾಗಿ 3ನೇ ಅಲೆಯ ಪ್ರಭಾವಕ್ಕೆ ಸಿಕ್ಕಿತ್ತು. ಆದರೆ ಸೋಂಕಿತರ ಸಾವು ಮತ್ತು ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮಗಳು ಸೀಮಿತವಾಗಿತ್ತು ಎಂದು ವರದಿ ಹೇಳಿದೆ.

ಕೋವಿಡ್‌ ಬಳಿಕ ಕ್ಷಿಪ್ರ ವಿತ್ತ ಪ್ರಗತಿ, ಭಾರತದ ರೇಟಿಂಗ್‌ ಏರಿಸಿದ ಫಿಚ್‌

ಸರ್ಕಾರದ ನೆರವು:

2021ರಲ್ಲಿ ಕಾಣಿಸಿಕೊಂಡ ಕೋವಿಡ್‌ ಅಲೆಯ ಹಿನ್ನೆಲೆಯಲ್ಲಿ, ಸರ್ಕಾರ ಆರ್ಥಿಕತೆಗೆ ವಿತ್ತೀಯ ನೆರವನ್ನು ಮುಂದುವರೆಸಿತು. 2022ರಲ್ಲಿ ವಿತ್ತೀಯ ಕೊರತೆ ಪ್ರಮಾಣವು ಶೇ.6.9ರಷ್ಟುಇರಬಹುದು. ಇದು ಕೋವಿಡ್‌ ಪೂರ್ವ ಸ್ಥಿತಿಗಿಂತ ಅಧಿಕ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. 2020ರ ಮೇ ತಿಂಗಳಿನಿಂದಲೂ ಭಾರತದ ಕೇಂದ್ರೀಯ ಬ್ಯಾಂಕ್‌ ಸಾಲದ ಬಡ್ಡಿದರವನ್ನು ಶೇ.4ರಲ್ಲೇ ಉಳಿಸಿಕೊಂಡಿತು. ಆದರೆ 2021ರ ಜನವರಿಯಿಂದ ಮಾರುಕಟ್ಟೆಯಲ್ಲಿದ್ದ ಭಾರೀ ಪ್ರಮಾಣದ ಹಣದ ಹರಿವನ್ನು ನಿಯಂತ್ರಿಸುವ ಕೆಲಸ ಆರಂಭಿಸಿತು ಎಂದು ವರದಿ ಹೇಳಿದೆ.

ಭಾರತದ ಆರ್ಥಿಕತೆ ಉತ್ತಮ ಚೇತರಿಕೆ: ಕೋವಿಡ್-19 ನ ಮೂರು ಅಲೆಗಳ ಹೊಡೆತದ ನಡುವೆಯೂ ಭಾರತದ ಆರ್ಥಿಕತೆ ಅದ್ಭುತವಾಗಿ ಹಾಗೂ ಪ್ರಬಲವಾಗಿ ಚೇತರಿಕೆ ಕಂಡಿದೆ ಎಂದು ಅಮೆರಿಕದ ಖಜಾನೆ (US Treasury report)  ತನ್ನ ಕಾಂಗ್ರೆಸ್ ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಭಾರತದ (India) ಪಾಲಿಗೆ ಸಾಕಷ್ಟು ಆಘಾತ ನೀಡಿದ ಕೋವಿಡ್-19 ಎರಡನೇ ತರಂಗವು 2021 ರ ಮಧ್ಯದವರೆಗೆ ಬೆಳವಣಿಗೆಯ ಮೇಲೆ ಹೆಚ್ಚು ಪ್ರಭಾವವನ್ನು ಬೀರಿತ್ತು ಇದರಿಂದಾಗಿ ದೇಶದ ಆರ್ಥಿಕ ಚೇತರಿಕೆಯನ್ನು ವಿಳಂಬವಾಗಿತ್ತು ಎಂದು ಖಜಾನೆಯು ಅರೆ-ವಾರ್ಷಿಕ ವರದಿಯಲ್ಲಿ ತಿಳಿಸಿದೆ.

"ಆದಾಗ್ಯೂ, ಭಾರತದ ವ್ಯಾಕ್ಸಿನೇಷನ್ ಹಾಕುವ ಪ್ರಕ್ರಿಯೆ ವೇಗವಾದಂತೆ ಆರ್ಥಿಕ ಚಟುವಟಿಕೆಯು ವರ್ಷದ ದ್ವಿತೀಯಾರ್ಧದಲ್ಲಿ ಬಲವಾಗಿ ಮರುಕಳಿಸಿತು" ಎಂದು ಖಜಾನೆಯು ಭಾರತದ ಲಸಿಕೆ ಪ್ರಯತ್ನಗಳನ್ನು ಶ್ಲಾಘಿಸುವ ವೇಳೆ ತಿಳಿಸಿದೆ. 2021 ರ ಅಂತ್ಯದ ವೇಳೆಗೆ, ಭಾರತದ ಜನಸಂಖ್ಯೆಯ ಸುಮಾರು 44 ಪ್ರತಿಶತದಷ್ಟು ಜನರು ಸಂಪೂರ್ಣವಾಗಿ ಲಸಿಕೆಗೆ ಒಳಗಾಗಿದ್ದಾರೆ ಎಂದು ಅದು ಹೇಳಿದೆ, 2020 ರಲ್ಲಿ ಏಳು ಪ್ರತಿಶತದಷ್ಟು ಕುಗ್ಗಿದ ನಂತರ, ಉತ್ಪಾದನೆಯು 2021 ರ ಎರಡನೇ ತ್ರೈಮಾಸಿಕದ ವೇಳೆಗೆ ಪೂರ್ವ-ಸಾಂಕ್ರಾಮಿಕ ಮಟ್ಟಕ್ಕೆ ಮರಳಿದೆ.

ಉತ್ತಮ ಹೆದ್ದಾರಿ 5 ಟ್ರಿಲಿಯನ್‌ ಆರ್ಥಿಕತೆಗೆ ಸಹಕಾರಿ, ಆತ್ಮ ನಿರ್ಭರ ಭಾರತದ ಭದ್ರ ಬುನಾದಿ

2022 ರ ಆರಂಭದಿಂದ, ಓಮಿಕ್ರಾನ್ ರೂಪಾಂತರದಿಂದ ಎದುರಾದ ಮೂರನೇ ಅಲೆಯ ಆತಂಕವನ್ನು ಭಾರತ ಏಕಾಏಕಿ ಎದುರಿಸಿತ್ತು. ಆದರೆ ಸಾವಿನ ಸಂಖ್ಯೆ ಮತ್ತು ದೊಡ್ಡ ಮಟ್ಟದ ಆರ್ಥಿಕ ಹಿಂಜರಿತ ಈ ಸಮಯದಲ್ಲಿ ಆಗಿರಲಿಲ್ಲ ಎಂದಿದೆ.

ಜಿಗಿ ಜಿಗಿದು ಕುಣಿಯುತ್ತಿದೆ ದೇಶದ ಜಿಡಿಪಿ: ಮೋದಿ ಮೋಡಿ ವರ್ಕ್ ಔಟ್ ಆಯ್ತಾ?

2021 ರಲ್ಲಿ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಆರ್ಥಿಕತೆಗೆ ಹಣಕಾಸಿನ ಬೆಂಬಲವನ್ನು ನೀಡುವುದನ್ನು ಮುಂದುವರೆಸಿದೆ ಎಂದು ಅದು ಹೇಳಿದೆ. 2022 ರ ಹಣಕಾಸು ವರ್ಷದಲ್ಲಿ ಒಟ್ಟಾರೆ ವಿತ್ತೀಯ ಕೊರತೆಯು ಜಿಡಿಪಿಯ ಶೇಕಡಾ 6.9 ಕ್ಕೆ ತಲುಪುತ್ತದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ, ಇದು ಸಾಂಕ್ರಾಮಿಕ ರೋಗಕ್ಕೆ ಮುಂಚಿನ ಕೊರತೆಗಳಿಗಿಂತ ಹೆಚ್ಚಾಗಿದೆ ಎಂದು ಅದು ಹೇಳಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Gold Silver Price Today: ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ