ಸಾವಿರ ರೂಪಾಯಿಗೆ ಸಾಹಸ ಮಾಡ್ತಿದ್ದ ಹುಡುಗ ಇಂದು 1 ಬಿಲಿಯನ್ ಡಾಲರ್ ಕಂಪನಿ ಮಾಲೀಕ‌!

By Santosh Naik  |  First Published Jun 11, 2022, 5:50 PM IST

ವೃತ್ತಿಯಲ್ಲಿ ಭೌತಶಾಸ್ತ್ರದ ಶಿಕ್ಷಕ, ಮಕ್ಕಳ ಪಾಲಿನ ಮಾರ್ಗದರ್ಶಕ. ಹೆಚ್ಚಲ್ಲ, ಕೆಲವೇ ವರ್ಷಗಳ ಹಿಂದೆ ತಿಂಗಳಿಗೆ 5 ಸಾವಿರ ರೂಪಾಯಿ ಸಂಬಳ ಪಡೆಯಲು ಪರದಾಟ ನಡೆಸುತ್ತಿದ್ದ ಅಲಕ್ ಪಾಂಡೆ, ಈ ನಡುವೆ 75 ಕೋಟಿ ರೂಪಾಯಿ ಮೌಲ್ಯದ ಕೆಲಸವನ್ನು ತಿರಸ್ಕರಿಸಿದ್ದರು. ಯಾಕೆಂದರೆ, ತಮ್ಮದೇ ಆದ ಸ್ವಂತ ಎಜುಟೆಕ್ ಕಂಪನಿ ಸ್ಥಾಪನೆ ಮಾಡುವ ಗುರಿ ಅವರಲ್ಲಿತ್ತು.


ಪ್ರಯಾಗರಾಜ್ (ಜೂನ್ 11):‌ ಕೆಲವೇ ವರ್ಷಗಳ ಹಿಂದೆ ತಿಂಗಳಿಗೆ ಕೆಲ ಸಾವಿರ ರೂಪಾಯಿ ಗಳಿಸುವ ಸಲುವಾಗಿ ಸಾಹಸ ಮಾಡುತ್ತಿದ್ದ ಹುಡುಗ ಇಂದು ಅಂದಾಜು 1 ಬಿಲಿಯನ್ ಅಮೆರಿಕನ್ ಡಾಲರ್ (1 billion USD ) ಮೌಲ್ಯದ ಮಾಲೀಕ. ಹೌದು,  ಉತ್ತರ ಪ್ರದೇಶದ ಪ್ರಯಾಗ್ ರಾಜ್ (Prayagraj) ನಗರದಲ್ಲಿನ 29 ವರ್ಷದ ಯುವಕ ಈಗ ಸಾವಿರಾರು ಕೋಟಿ ರೂಪಾಯಿ ಕಂಪನಿಯ ಮಾಲೀಕ. ಯಾರು ಎನ್ನುವ ಕುತೂಹಲ ನಿಮಗೆ ಬಂದೇ ಬರುತ್ತೆ, 29 ವರ್ಷದ ಅಲಾಖ್ ಪಾಂಡೆ (alakh pandey) ಈ ಸಾಧಕ.

ವೃತ್ತಿಯಲ್ಲಿ ಭೌತಶಾಸ್ತ್ರದ (physics) ಶಿಕ್ಷಕ, ಮಕ್ಕಳ ಪಾಲಿನ ಮಾರ್ಗದರ್ಶಕ. ಹೆಚ್ಚಲ್ಲ, ಕೆಲವೇ ವರ್ಷಗಳ ಹಿಂದೆ ತಿಂಗಳಿಗೆ 5 ಸಾವಿರ ರೂಪಾಯಿ ಸಂಬಳ ಪಡೆಯಲು ಪರದಾಟ ನಡೆಸುತ್ತಿದ್ದ ಅಲಕ್ ಪಾಂಡೆ, ಈ ನಡುವೆ 75 ಕೋಟಿ ರೂಪಾಯಿ ಮೌಲ್ಯದ ಕೆಲಸವನ್ನು ತಿರಸ್ಕರಿಸಿದ್ದರು. ಯಾಕೆಂದರೆ, ತಮ್ಮದೇ ಆದ ಸ್ವಂತ ಎಜುಟೆಕ್ (Edtech) ಕಂಪನಿ ಸ್ಥಾಪನೆ ಮಾಡುವ ಗುರಿ ಅವರಲ್ಲಿತ್ತು. ತಮ್ಮ ಎಜುಟೆಕ್ ಕಂಪನಿ ಫಿಸಿಕ್ಸ್ ವಾಲಾಗೆ (PhysicsWallah) ಅಂದಾಜು 777 ಕೋಟಿ ರೂಪಾಯಿ ಹಣವನ್ನು ರೈಸ್ ಮಾಡುವಲ್ಲಿ ಯಶಸ್ವಿಯಾಗುವ ಮೂಲಕ ಭಾರತದ ಹೊಸ ಸ್ಟಾರ್ಟ್ ಅಪ್ ಅನ್ನು ಸ್ಥಾಪನೆ ಮಾಡಿದ್ದಾರೆ. ಆ ಮೂಲಕ ಭಾರತದ ಹೊಸ ಯೂತ್ ಐಕಾನ್ ಎನಿಸಿಕೊಂಡಿದ್ದಾರೆ.

2016 ರಲ್ಲಿ ಯೂಟ್ಯೂಬ್‌ ಚಾನೆಲ್‌ ಅನ್ನು ಆರಂಭಿಸಿದ ಇವರ ಕಂಪನಿ ಈಗ 1 ಬಿಲಿಯನ್‌ ( ರೂ. 8,551 ಕೋಟಿಗೂ ಹೆಚ್ಚು) ಮೌಲ್ಯದ ಕಂಪನಿಯಾಗಿದೆ. ಆದರೆ ವಿಷಯಗಳು ನಾವು ಅಂದುಕೊಂಡಂತೆ ಇರಲಿಲ್ಲ,  ಅಲಾಖ್‌ 6 ನೇ ತರಗತಿಯಲ್ಲಿ ಓದುತ್ತಿರುವಾಗಲೇ ಮಕ್ಕಳಿಗೆ ಟ್ಯೂಶನ್‌ ತೆಗೆದುಕೊಳ್ಳುತ್ತಿದ್ದರು. 200 ರುಪಾಯಿಗೋಸ್ಕರ  ಸೈಕಲ್‌ ಮೇಲೆ 5 ಕಿಲೋಮಿಟರ್‌ ಹೋಗಿ ಬರುತ್ತಿದ್ದರು. "2008 ರಲ್ಲಿ ನಾನು ಪರೀಕ್ಷೆಯಲ್ಲಿ ಪಾಸಾದಾಗ  ಕಂಪ್ಯೂಟರ್ ಸೈನ್ಸ್ ವಿಷಯವನ್ನು ವಿದ್ಯಾಭ್ಯಾಸ ಮಾಡಲು IERT ಗೆ ಸೇರಿದ್ದೆ. 2 ವರ್ಷದ ಬಳಿಕ ಅಲಖ್ ತನ್ನ ಪಿಯುಸಿ ಮುಗಿಸಿ ಕಾನ್ಪುರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ್ದ. ಓದುವ ಮಧ್ಯದಲ್ಲಿಯೇ ಕಾರಣಾಂತರಗಳಿಂದ ಇಂಜಿನಿಯರಿಂಗ್‌ ಕೋರ್ಸ್‌ ಕೈಬಿಟ್ಟ. ಇಂಜಿನಿಯರಿಂಗ್ ಓದುವ ವೇಳೆ ಆತನ ಮೇಲೆ ಅತಿಯಾದ ಒತ್ತಡವಿತ್ತು. ಅದೇ ಕಾರಣಕ್ಕಾಗಿ ಆತ ನಮ್ಮೆಲ್ಲರಿಂದಲೂ ದೂರವೇ ಉಳಿದುಕೊಂಡಿದ್ದ.  ಆದರೆ, ಆತನಿಗೆ ತನ್ನ ಕನಸುಗಳ ಬಗ್ಗೆ ಸ್ಪಷ್ಟತೆ ಇತ್ತು' ಎಂದು ಅಲಖ್ ಅವರ ಸಹೋದರಿ ಅದಿತಿ ಹೇಳಿದ್ದಾರೆ. 

"ಇಂಜಿನಿಯರಿಂಗ್ ಅನ್ನು ಮಧ್ಯದಲ್ಲಿಯೇ ತೊರೆಯಬೇಡ ಎಂದು ನಾವೆಲ್ಲರೂ ಆರಂಭದಲ್ಲಿ ಆತನಿಗೆ ಸಲಹೆ ನೀಡಿದ್ದೆವು. ಆದರೆ, ಬಹುರ ದಿನಗಳಲ್ಲಿ ಆತ ಏನು ಮಾಡಬಲ್ಲ ಎನ್ನುವ ಬಗ್ಗೆ ನಮಗೆಲ್ಲರಿಗೂ ವಿಶ್ವಾಸವಿತ್ತು' ಎಂದು ಅದಿತಿ ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.  

:ಅಲಾಖ್‌ 2016ರಲ್ಲಿ ಭೌತಶಾಸ್ತ್ರ ಕಲಿಸಲು ತಮ್ಮದೆ ಆದ ಯೂಟ್ಯೂಬ್‌ ಚಾನೆಲ್‌ ಅನ್ನು ಪ್ರಾರಂಭಿಸಿದರು.  ಚಾನೆಲ್ ಆರಂಭವಾದ ಕೆಲ ತಿಂಗಳಲ್ಲಿಯೇ ಜನಪ್ರಿಯವಾಗಿತ್ತು. ಆಗ ತನಗೊಂದು ವೆಬ್ ಸೈಟ್ ಮಾಡಿಕೊಡುವಂತೆ ನನ್ನನ್ನು ಕೇಳಿದ್ದ. ಆದರೆ, ನಾನು ಕೆಲವೊಂದು ವರ್ಷಗಳ ಕಾಲ ಇದನ್ನು ಮಾಡಿರಲಿಲ್ಲ. ಆದರೆ, ಖಂಡಿತಾ ಆತನಿಗೊಂದು ವೆಬ್ ಸೈಟ್ ಮಾಡಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದೆ. ಪ್ರತಿ ವರ್ಷ ಜನ್ಮದಿನದ ದಿನ ಬರ್ತ್ ಡೇ ಗಿಫ್ಟ್ ಆಗಿ ವೆಬ್ ಸೈಟ್ ಅನ್ನು ನೀಡುತ್ತೇನೆ ಎಂದು ಆತನಿಗೆ ಹೇಳುತ್ತಿದ್ದೆ' ಎಂದು ಆದಿತಿ ವಿವರಿಸಿದ್ದಾರೆ.

ಆತನ ಯಶಸ್ಸಿಗೆ ಅವನಲ್ಲಿದ್ದ ಪ್ಯಾಷನ್ ಕಾರಣ: ಅಲಾಖ್ ಅವರ ತಂದೆ ಸತೀಶ್‌ ಪಾಂಡೆ ಕೆಲ ಆಸಕ್ತಿದಾಯಕ ವಿಚಾರಗಳನ್ನು ತಿಳಿಸಿದ್ದಾರೆ. "ಅವನ ಸ್ವಂತ ತಿಳುವಳಿಕೆಯಿಂದ ತನ್ನ ಜೀವನವನ್ನು ಚೇತರಿಸಿಕೊಳ್ಳುವ ಮತ್ತು ಉದ್ಯಮಶೀಲತೆಯ ಮನೋಭಾವವನ್ನು ಪಡೆದಿದ್ದಾನೆ ಮತ್ತು ಕನಸುಗಳನ್ನು ಬೆನ್ನಟ್ಟುವ ವಿಷಯದಲ್ಲೂ ಗೆದ್ದಿದ್ದಾನೆ' ಎಂದು ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ. ಆಂಗ್ಲೋ ಬೆಂಗಾಲಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಬಳಿಕ ನಾನು 1970ರಲ್ಲಿ ಸಿಎಂಪಿ ಪದವಿ ಕಾಲೇಜಿನಲ್ಲಿ ಬಿಎ ಪದವಿಗೆ ಸೇರಿಕೊಂಡಿದ್ದೆ. ಆದರೆ, ಮೊದಲ ವರ್ಷದ ನಂತರ ನಾನು ಕಾಲೇಜ್ ಅನ್ನು ತೊರೆದು ಕಾಂಟ್ರ್ಯಾಕ್ಟರ್ ಕೆಲಸಕ್ಕೆ ಸೇರಿದ್ದೆ ಎಂದು ಅಲಾಖ್ ಅವರ ತಂದೆ ಹೇಳುತ್ತಾರೆ.

EPF WITHDRAW: ಇಪಿಎಫ್ ಹಣ ವಿತ್ ಡ್ರಾ ಮಾಡೋದು ಈಗ ಸುಲಭ; ಆನ್ ಲೈನ್ ನಲ್ಲಿ ನೀವೇ ಈ ಹಂತಗಳನ್ನು ಪೂರ್ಣಗೊಳಿಸಿದ್ರೆ ಸಾಕು

ಇಂಜಿನಿಯರಿಂಗ್ ಅನ್ನು ಅರ್ಧಕ್ಕೆ ಬಿಟ್ಟು, ಭೌತಶಾಸ್ತ್ರದ ಪ್ರಾಧ್ಯಪಕನಾಗಿ ತಿಂಗಳಿಗೆ 5 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ ಅಲಾಖ್ ಪಾಂಡೆ, 75 ಕೋಟಿ ರೂಪಾಯಿ ಕೆಲಸದ ಆಫರ್ ಅನ್ನು ತಿರಸ್ಕರಿಸಿದ್ದರು. ಇವೆಲ್ಲದರ ಹಿಂದೆ ಇದ್ದಿದ್ದು, ಆತನ ಪ್ಯಾಷನ್ ಎನ್ನುತ್ತಾರೆ ಅವರ ತಂದೆ. ಬಾಲ್ಯದಲ್ಲಿ ಎದುರಾದ ಸವಾಲುಗಳನ್ನು ನೋಡಿದ್ದ ಅಲಾಖ್ ಪಾಂಡೆ, ಕೋಚಿಂಗ್ ಸಂಸ್ಥೆಗಳಲ್ಲಿ ಶುಲ್ಕ ಕಟ್ಟಲಾಗದೇ ಪರದಾಡುವ ಬಡ ವಿದ್ಯಾರ್ಥಿಗಳಿಗೆ ಸಹಾಯಕ್ಕೆ ಬರಬೇಕು ಎಂದು ತೀರ್ಮಾನ ಮಾಡಿದ್ದರು.

ಕೋವಿಡ್‌ ಬಳಿಕ ಕ್ಷಿಪ್ರ ವಿತ್ತ ಪ್ರಗತಿ, ಭಾರತದ ರೇಟಿಂಗ್‌ ಏರಿಸಿದ ಫಿಚ್‌

"ಭೌತಶಾಸ್ತ್ರ ತಿಳಯದೇ ಇರುವ ವಿದ್ಯಾರ್ಥಿಗಳು ಸರಳ ರೀತಿಯಲ್ಲಿ ಕಲಿಯಬೇಕು, ಅದಕ್ಕಾಗಿ ನಾನು ಪ್ರಾರಂಭಿಸಿದೆ ನನ್ನ ಯೂಟ್ಯೂಬ್ ಚಾನೆಲ್," ಅಲಖ್ ಅವರು ಹಲವಾರು ಒಳ್ಳೆಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. "ದೆಹಲಿಯಲ್ಲಿ ಅಪ್ನಾ ಚಾರ್ ಆಶ್ರಮವನ್ನು ಬೆಂಬಲಿಸುವುದು, ಅಗತ್ಯವಿರುವವರಿಗೆ ಮಾನವೀಯ ನೆರವು, ಹರಿಯಾಣದಲ್ಲಿನ ಅನಾಥಾಶ್ರಮ, ಚಿಕಿತ್ಸೆಗೆ ಧನಸಹಾಯ, ಕ್ಯಾನ್ಸರ್ ನಿಂದ ಬಳಲುತ್ತಿರುವವರಿಗೆ ಸಹಾಯ, ಪ್ರಯಾಗರಾಜ್‌ನಲ್ಲಿ 200 ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧನಸಹಾಯ. ಇತ್ಯಾದಿ, ಎಂದು ಹೇಳಿದರು. ಕೆಲ ತಿಂಗಳ ಹಿಂದೆ ಶಿವಾನಿ ಎನ್ನುವ ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಲಾಖ್ ಪಾಂಡೆ ಅವರ ಕಂಪನಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಆಗುವ ಮುನ್ನವೇ 1 ಬಿಲಿಯನ್ ಡಾಲರ್ ಮೌಲ್ಯದ ಕಂಪನಿ ಎನಿಸಿಕೊಂಡಿದೆ.

Tap to resize

Latest Videos

click me!