ಉತ್ತಮ ಹೆದ್ದಾರಿ 5 ಟ್ರಿಲಿಯನ್‌ ಆರ್ಥಿಕತೆಗೆ ಸಹಕಾರಿ, ಆತ್ಮ ನಿರ್ಭರ ಭಾರತದ ಭದ್ರ ಬುನಾದಿ

ನಮ್ಮ 5 ಟ್ರಿಲಿಯನ್‌ ಅಮೆರಿಕನ್‌ ಡಾಲರ್‌ ಜಿಡಿಪಿ ಗುರಿಯು ಒಂದು ಮಹತ್ವಾಕಾಂಕ್ಷೆಯದ್ದಾಗಿದೆ ಮತ್ತು ಅದನ್ನು ಸಾಧಿಸುವ ಕಾರ್ಯತಂತ್ರವು ಮೂಲ ಸೌಕರ್ಯಗಳ ಸೃಷ್ಟಿಸುತ್ತ ಸುತ್ತುತ್ತದೆ.

Highways Sector Can Help Nation Achieve 5 Trillion Economy Nitin Gadkari hls

ಆರ್ಥಿಕ ಬೆಳವಣಿಗೆಯನ್ನು ಸೃಷ್ಟಿಸುವುದು ಮತ್ತು ಬೆಳವಣಿಗೆಯ ಪ್ರಯೋಜನಗಳನ್ನು ಎಲ್ಲರಿಗೂ ತಲುಪಿಸುವುದು ಆಡಳಿತದ ಪ್ರಮುಖ ಮೈಲಿಗಲ್ಲು. ಹೊಸ ಆರ್ಥಿಕ ಅವಕಾಶಗಳಿಗಾಗಿ ಸೂಕ್ತ ವಾತಾವರಣವನ್ನು ಸೃಷ್ಟಿಸುವ ಗುರಿ ಹೊಂದಿರುವ ನೀತಿಗಳಿಂದ ಉತ್ತಮ ಗುಣಮಟ್ಟದ ಜೀವನ ಮತ್ತು ಸುಲಭದ ಜೀವನ ಫಲಿತಾಂಶಗಳು ಲಭ್ಯವಾಗಿವೆ. ಹೆಚ್ಚಿನ ಆರ್ಥಿಕ ಬೆಳವಣಿಗೆಯಿಂದಾಗಿ ಸಾಮಾಜಿಕ ಅಭಿವೃದ್ಧಿಗೆ ಹೆಚ್ಚಿನ ನಿಧಿಗಳು ಲಭ್ಯವಾಗುವಂತೆ ಮಾಡಿದ್ದು, ಅಂತಿಮವಾಗಿ ಬೆಳವಣಿಗೆ ಮತ್ತು ಅಭಿವೃದ್ಧಿಯ ಪಥದತ್ತ ನಮ್ಮನ್ನು ಕೊಂಡೊಯ್ಯುತ್ತಿದೆ.

ನಮ್ಮ 5 ಟ್ರಿಲಿಯನ್‌ ಅಮೆರಿಕನ್‌ ಡಾಲರ್‌ ಜಿಡಿಪಿ ಗುರಿಯು ಒಂದು ಮಹತ್ವಾಕಾಂಕ್ಷೆಯದ್ದಾಗಿದೆ ಮತ್ತು ಅದನ್ನು ಸಾಧಿಸುವ ಕಾರ್ಯತಂತ್ರವು ಮೂಲ ಸೌಕರ್ಯಗಳ ಸೃಷ್ಟಿಸುತ್ತ ಸುತ್ತುತ್ತದೆ. ಅಂದರೆ ಆತ್ಮನಿರ್ಭರ ಭಾರತದ ಭದ್ರ ಬುನಾದಿಯೊಂದಿಗೆ ಬೆಳವಣಿಗೆಗೆ ಪೂರಕ ಪರಿಸರ ವ್ಯವಸ್ಥೆಯನ್ನು ರಚಿಸುವುದರ ಸುತ್ತ ಒಳಗೊಂಡಿದೆ. ನಾವು 75ನೇ ಸ್ವಾತಂತ್ರೋತ್ಸವದ 75 ವರ್ಷಗಳ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಹೊತ್ತಿನಲ್ಲಿ ನಾವು ಮಹತ್ವಾಕಾಂಕ್ಷೆಯ ಅಭಿವೃದ್ಧಿ ಪಯಣವನ್ನು ಪ್ರಾರಂಭಿಸಿದ್ದೇವೆ.

Nitin Gadkari Target ಪ್ರತಿ ದಿನ 60 ಕಿಮೀ ರಸ್ತೆ ನಿರ್ಮಿಸುವ ಗುರಿ, ಹೊಸ ದಾಖಲೆಗೆ ಸಜ್ಜಾದ ನಿತಿನ್ ಗಡ್ಕರಿ!

ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು 2014ರಿಂದ ಸರ್ಕಾರದ ಪ್ರಯತ್ನಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಯು ಕೇಂದ್ರ ಬಿಂದುವಾಗಿದೆ. ಭೌತಿಕ ಮೂಲ ಸೌಕರ್ಯ ಮಾತ್ರವಲ್ಲದೆ ಡಿಜಿಟಲ್‌ ಮೂಲ ಸೌಕರ್ಯ ವೃದ್ಧಿಗೂ ಗಮನ ನೀಡಲಾಗಿದೆ. ಯುಪಿಐ ಉಪ ಕ್ರಮದ ಮೂಲಕ ಸೃಷ್ಟಿಸಲಾದ ಡಿಜಿಟಲ್‌ ಮೂಲ ಸೌಕರ್ಯದಲ್ಲೂ ಒಂದು ಯಶಸ್ಸನ್ನು ಸಾಧಿಸಲಾಗಿದೆ. ಭೌತಿಕ ಮೂಲ ಸೌಕರ್ಯಗಳ ಸೃಷ್ಟಿಯು ಅಷ್ಟೇ ಸಮಾನವಾಗಿದ್ದು, ಅದು ಆರ್ಥಿಕ ಬೆಳವಣಿಗೆಯ ಮೇಲೆ ಅದರ ಗುಣಾತ್ಮಕ ಪರಿಣಾಮಗಳನ್ನು ಬೀರಲಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಮೂಲ ಸೌಕರ್ಯದಲ್ಲಿ ಹೆಚ್ಚಿನ ಹೂಡಿಕೆಗೆ ಭಾರಿ ಒತ್ತು ನೀಡುತ್ತಿದೆ.

ಮೂಲಸೌಕರ್ಯಗಳ ಸೃಷ್ಟಿಗೆ ಭಾರಿ ಪ್ರಮಾಣದ ಹೂಡಿಕೆ ಅಗತ್ಯವನ್ನು ಪರಿಗಣಿಸಿ, ಕೈಗೆತ್ತಿಕೊಳ್ಳಬೇಕಾದ ಎಲ್ಲಾ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳ ಸ್ಪಷ್ಟನೀಲನಕ್ಷೆಯನ್ನು ರೂಪಿಸಲು ನಿರ್ಧರಿಸಲಾಯಿತು. ರಾಷ್ಟ್ರೀಯ ಮೂಲ ಸೌಕರ್ಯ ಪೈಪ್‌ಲೈನ್‌ (ಎನ್‌ಐಪಿ) ಅಸ್ತಿತ್ವಕ್ಕೆ ತಂದು, 111 ಲಕ್ಷ ಕೋಟಿ ರು. ಹೂಡಿಕೆ ಅಗತ್ಯವಿರುವ ಯೋಜನೆಗಳನ್ನು ಗುರುತಿಸಲಾಗಿದೆ. ಇತ್ತೀಚೆಗೆ ಆರಂಭಿಸಲಾದ ಪಿಎಂ ಗತಿ ಶಕ್ತಿ ಕಾರ್ಯಕ್ರಮದೊಂದಿಗೆ ಎನ್‌ಐಪಿ ಸೇರಿಕೊಂಡು ಉತ್ತಮ ಸಮನ್ವಯ ಮತ್ತು ಯೋಜನೆಯ ಆಧಾರದ ಮೇಲೆ ಸಂಪೂರ್ಣ ಕಾರ್ಯ ವಿಧಾನ ಮತ್ತು ಸಕಾಲದಲ್ಲಿ ಸೇವೆ ವಿತರಣೆಯನ್ನು ಖಾತ್ರಿಪಡಿಸುತ್ತಿದೆ.

ನಮ್ಮಂತಹ ವೈವಿಧ್ಯಮಯ ದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಲು ಸಮಗ್ರವಾದ ಯೋಜನೆ ಮತ್ತು ಸಹಕಾರದ ಅಗತ್ಯವಿದೆ. ಭಾರತ ಮಾಲಾ ಕಾರ್ಯಕ್ರಮವು ಸಮಗ್ರ ರೀತಿಯಲ್ಲಿ ಹೆದ್ದಾರಿ ಅಭಿವೃದ್ಧಿಯ ನೀಲ ನಕ್ಷೆಯನ್ನು ನಮಗೆ ನೀಡಿದೆ. ಈ ಕಾರ್ಯಕ್ರಮದಡಿ 34,800 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣವನ್ನು ಕಲ್ಪಿಸಿದೆ. ಈ ಕಾರ್ಯಕ್ರಮವು ಕಾರಿಡಾರ್‌ ಆಧಾರಿತ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯನ್ನು ಒಳಗೊಂಡಿದ್ದು, ಅದು ದೇಶದ 550ಕ್ಕೂ ಅಧಿಕ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಟ್ಟು ಸರಕು ಸಾಗಣೆಯ ಶೇ.70-80ರಷ್ಟುಅಗತ್ಯವನ್ನು ಪೂರೈಸಲಿದೆ.

ಸ್ಥಳೀಯ ಉತ್ಪಾದನೆಯಿಂದ ಟೆಸ್ಲಾಗೆ ಸಾಕಷ್ಟು ಲಾಭ: ನಿತಿನ್ ಗಡ್ಕರಿ

ಬ್ರೌನ್‌ಫೀಲ್ಡ್‌ ವಿಸ್ತರಣೆ ಮತ್ತು ಹೆದ್ದಾರಿಗಳ ಸುಧಾರಣೆಯು ಪ್ರಮುಖ ಉದ್ದೇಶವನ್ನು ಹೊಂದಿವೆ, ಆದರೆ ಪ್ರಮುಖ ಸರಕು ಮೂಲ- ಕೇಂದ್ರ ಸ್ಥಾನಗಳನ್ನು ಸಂಪರ್ಕಿಸಲು ನಿಯಂತ್ರಿತ ಗ್ರೀನ್‌ಫೀಲ್ಡ್‌ ಎಕ್ಸ್‌ಪ್ರೆಸ್‌ ವೇಗಳನ್ನು ನಿರ್ಮಿಸುವ ಮೂಲಕ ಸಾಗಣೆ ವೆಚ್ಚಗಳನ್ನು ತಗ್ಗಿಸಲು ಕ್ರಮ ಕೈಗೊಂಡಿದ್ದು, ಅದು ಇಡೀ ಪಥವನ್ನೇ ಪರಿಣಾಮಕಾರಿಯಾಗಿ ಬದಲಾಯಿಸುತ್ತಿದೆ. ಕ್ರಮೇಣ, ಭಾರತಮಾಲಾ ಒಂದನೇ ಹಂತದ ಭಾಗವಾಗಿ 5 ಪ್ರಮುಖ ಎಕ್ಸ್‌ಪ್ರೆಸ್‌ ವೇಗಳು ಮತ್ತು 17 ನಿಯಂತ್ರಿತ ಕಾರಿಡಾರ್‌ಗಳನ್ನು ಒಟ್ಟು .3.6 ಲಕ್ಷ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

ಇದೀಗ ಭಾರತಮಾಲಾ ಕಾರ್ಯಕ್ರಮದ ಎರಡನೇ ಹಂತವನ್ನು ಪ್ರಾರಂಭಿಸುವ ಸಮಯ ಬಂದಿದ್ದು ಮತ್ತು ದೇಶದಾದ್ಯಂತದ ಜನರ ನಿರೀಕ್ಷೆಗಳನ್ನು ಪರಿಗಣಿಸಿ ಅತ್ಯುನ್ನತ ಮಟ್ಟದ ಮಹತ್ವಾಕಾಂಕ್ಷೆಯನ್ನು ಹೊಂದಿದ್ದೇವೆ. 2009-10ರಿಂದ 2013-14ನೇ ಹಣಕಾಸು ವರ್ಷದ ನಡುವೆ ವಾರ್ಷಿಕ ಸರಾಸರಿ 5,900 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯ ರಸ್ತೆ ನಿರ್ಮಾಣ ಮಾಡಲಾಗುತ್ತಿತ್ತು, 2014-15 ಹಣಕಾಸು ವರ್ಷದಿಂದೀಚೆಗೆ ವರ್ಷಕ್ಕೆ 11,000 ಕಿ.ಮೀ. ನಿರ್ಮಾಣ ಮಾಡಲಾಗುತ್ತಿದ್ದು, ಬಹುತೇಕ ದುಪ್ಪಟ್ಟಾಗಿದೆ. ಅಂತೆಯೇ, ವಾರ್ಷಿಕ ನಿರ್ಮಾಣದ ವೇಗವು 2014-15 ಹಣಕಾಸು ವರ್ಷದಲ್ಲಿ 4,900 ಕಿಲೋಮೀಟರ್‌ನಿಂದ 2013-14 ಹಣಕಾಸು ವರ್ಷದಿಂದೀಚೆಗೆ ವಾರ್ಷಿಕ 9,000 ಕಿಲೋ ಮೀಟರ್‌ಗೆ ಅಂದರೆ 1.8 ಪಟ್ಟು ಹೆಚ್ಚಾಗಿದೆ.

ಸಾಗಣೆ ವೆಚ್ಚವನ್ನು ತಗ್ಗಿಸಬೇಕು ಮತ್ತು ಕೇವಲ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುವ ಮೂಲಕ ಅದು ಸ್ವಲ್ಪ ಮಟ್ಟಿಗೆ ಆಗಿದ್ದರೂ ಹೆದ್ದಾರಿಗಳಲ್ಲಿನ ಹೂಡಿಕೆಯಿಂದ ಲಾಭವನ್ನು ಹೆಚ್ಚಿಸಲು ಅದು ಸಾಕಾಗುವುದಿಲ್ಲ. ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್‌ ಯೋಜನೆಯಲ್ಲಿ ಹೊಂದಿರುವ ದೂರದೃಷ್ಟಿಯ ಪ್ರಕಾರ ಸಮಗ್ರ ಮತ್ತು ದಕ್ಷ ಸಾರಿಗೆ ಸೇವೆಯನ್ನು ಖಾತ್ರಿಪಡಿಸಿಕೊಳ್ಳಲು ಮಲ್ಟಿಮಾಡಲ್‌ ಲಾಜಿಸ್ಟಿP್ಸ… ಪಾರ್ಕ್ಗಳು (ಎಂಎಂಎಪಿಲ್‌) ನಿರ್ಣಾಯಕ ಪಾತ್ರ ವಹಿಸಲಿವೆ. ಸಾಗಾಣೆ ವಲಯದಲ್ಲಿನ ಅದಕ್ಷತೆಯನ್ನು ಪರಿಹರಿಸಲು ದೇಶಾದ್ಯಂತ 35 ಆಯಕಟ್ಟಿನ ಸ್ಥಳಗಳಲ್ಲಿ ಎಂಎಂಎಲ್‌ಪಿಗಳನ್ನು (ಜೋಗಿಘೋಪಾ, ನಾಗ್ಪುರ, ಚೆನ್ನೈ, ಇಂದೋರ್‌, ಬೆಂಗಳೂರು ಮತ್ತಿತರ ಕಡೆ) ಎಂಎಂಎಲ್‌ಪಿಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈ 35 ಎಂಎಂಎಲ್‌ಪಿಗಳು ರಾಷ್ಟ್ರದ ರಸ್ತೆ ಸರಕು ಸಾಗಣೆಯ ಶೇ.50ರಷ್ಟುಬೇಡಿಕೆಯನ್ನು ಪೂರೈಸುತ್ತವೆ.

RSS ಆಸ್ಪತ್ರೆ ಕೇವಲ ಹಿಂದೂಗಳಿಗಾ? ರತನ್ ಟಾಟಾ ಪ್ರಶ್ನೆಗೆ ಗಡ್ಕರಿ ಉತ್ತರ!

ಎಡಪಂಥೀಯ ಉಗ್ರವಾದದಿಂದ ಭಾದಿತವಾದ ಜಿಲ್ಲೆಗಳಲ್ಲಿ ಹೆದ್ದಾರಿಗಳ ಅಭಿವೃದ್ಧಿಯು 2014ರಿಂದೀಚೆಗೆ ವಿಶೇಷ ಗಮನವನ್ನು ಪಡೆದುಕೊಂಡಿವೆ. ಉದಾಹರಣೆಗೆ ಛತ್ತೀಸ್‌ಗಢ, ಒಡಿಶಾ ಮತ್ತು ಆಂಧ್ರಪ್ರದೇಶದ ಹಿಂದುಳಿದ ಜಿಲ್ಲೆಗಳ ಮೂಲಕ ಹಾದುಹೋಗುವಂತೆ ರಾಯ್‌ಪುರ ಮತ್ತು ವಿಶಾಖಪಟ್ಟಣಂ ನಡುವಿನ ಗ್ರೀನ್‌ಫೀಲ್ಡ್‌ ಕಾರಿಡಾರ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಲಡಾಖ್‌ನ ಬಾಲ್ತಾಲ್‌ (ಸೋನಾಮಾಗ್‌ರ್‍) ಮತ್ತು ಮಿನಾಮಾಗ್‌ರ್‍ ನಡುವಿನ ಅಂತರವನ್ನು 40 ಕಿ.ಮೀ.ನಿಂದ 13 ಕಿ.ಮೀ ವರೆಗೆ ತಗ್ಗಿಸಲು 14.96 ಕಿ.ಮೀ., ಶ್ರೀನಗರ-ಲೆಹ್‌ ರಸ್ತೆಯಲ್ಲಿ 14.96 ಕಿಲೋಮೀಟರ್‌ನ ಜೋಜಿಲಾ ಸುರಂಗ ಮಾರ್ಗ ನಿರ್ಮಿಸಲಾಗಿದ್ದು, ಅದು ಪ್ರಯಾಣದ ಸಮಯವನ್ನು ಮೂರು ಗಂಟೆಗಳಿಂದ 15 ನಿಮಿಷಗಳಿಗೆ ಕಡಿತಗೊಳಿಸುತ್ತದೆ.

ಮೂಲಸೌಕರ್ಯ ಅಭಿವೃದ್ಧಿಯ ಪ್ರಮಾಣಕ್ಕೆ ತಕ್ಕಂತೆ ಬೃಹತ್‌ ಪ್ರಮಾಣದಲ್ಲಿ ಹೂಡಿಕೆಯ ಅಗತ್ಯವಿದೆ. ರಾಷ್ಟ್ರೀಯ ಮಾನಿಟೈಜೇಷನ್‌ ಪೈಪ್‌ಲೈನ್‌ನ ಭಾಗವಾಗಿ, ಎನ್‌ಎಚ್‌ಎಐ ರಸ್ತೆ ಯೋಜನೆಗಳಲ್ಲಿ ಹಣ ತೊಡಗಿಸಲು ಇನ್ವೈಟ್‌ಗಳನ್ನು ಆರಂಭಿಸಿದೆ. ಸ್ವತ್ತುಗಳ ದೀರ್ಘಾವಧಿಯ ಸ್ವರೂಪದ ದೃಷ್ಟಿಯಿಂದ, ಇನ್ವೈಟ್‌ನ ಘಟಕಗಳನ್ನು ಅಂತಾರಾಷ್ಟ್ರೀಯ ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರೊಂದಿಗೆ ಆರಂಭಿಸಲಾಗಿದೆ. 5 ರಸ್ತೆಗಳನ್ನು ಒಳಗೊಂಡ ಆರಂಭಿಕ ಬಂಡವಾಳವು ವಿದೇಶಿ ಹೂಡಿಕೆದಾರರಿಂದ ಶೇ.50ರಷ್ಟುಹೂಡಿಕೆಯೊಂದಿಗೆ 8,000 ಕೋಟಿ ರೂ. ಎತ್ತುವಳಿ ಮಾಡಿದೆ.

ಪರಿಸರ ರಕ್ಷಣೆಗೂ ಆದ್ಯತೆ

ಕೊನೆಯದಾಗಿ ಮತ್ತು ಮುಖ್ಯವಾಗಿ, ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವಾಗ ಪರಿಸರವನ್ನು ರಕ್ಷಿಸುವುದು ಉತ್ತಮ ಸಮತೋಲಿತ ಕ್ರಿಯೆಯಾಗಿದೆ. ಅಂತಹ ಸಂದರ್ಭಗಳನ್ನು ಎದುರಿಸುವಾಗ ಪರಿಸರವನ್ನು ರಕ್ಷಿಸುವ ಕಡೆಗೆ ಒಲುವು ತೋರುವುದು ನನ್ನ ಕಾರ್ಯ ವಿಧಾನವಾಗಿದೆ. ಹೆದ್ದಾರಿಗಳ ಉದ್ದಕ್ಕೂ ಮರಗಳನ್ನು ನೆಡುವ ಪ್ರಗತಿಯನ್ನು ತಾನು ಖುದ್ದಾಗಿ ಪರಿಶೀಲನೆ ನಡೆಸಿದ್ದೇನೆ. ಹಸಿರು ಕಾರಿಡಾರ್‌ಅನ್ನು ಅಭಿವೃದ್ಧಿಪಡಿಸುವ ಅಗತ್ಯ ಮತ್ತು ಪ್ರಾಮುಖ್ಯವನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಅಭಿವೃದ್ಧಿ ಸಚಿವಾಲಯ (ಎಂಒಆರ್‌ ಟಿಎಚ್‌)ಕ್ಕೆ ಮನವರಿಕೆಯಾಗಿದೆ ಮತ್ತು ಸುಸ್ಥಿರ ಪರಿಸರ ಬೆಳವಣಿಗೆಗಾಗಿ ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಹಸಿರು ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲು 2015ರ ಸೆಪ್ಟೆಂಬರ್‌ನಲ್ಲಿ ಹಸಿರು ಹೆದ್ದಾರಿಗಳಲ್ಲಿ (ಗಿಡಗಳನ್ನು ನಡೆವುದು, ಸ್ಥಳಾಂತರ ಮಾಡುವುದು, ಸೌಂದರ್ಯೀಕರಣ ಮತ್ತು ನಿರ್ವಹಣೆ) ಕಾರ್ಯ ನೀತಿಯನ್ನು ಘೋಷಿಸಿತು. ಆ ನೀತಿಯ ನಂತರದ ವರ್ಷಗಳಲ್ಲಿ 2016-17 ರಿಂದ 2020-21 ರವರೆಗಿನ ಅವಧಿಯಲ್ಲಿ 2 ಕೋಟಿಗೂ ಅಧಿಕ ಗಿಡಗಳನ್ನು ನೆಡಲಾಗಿದೆ.

ಎನ್‌ಎಚ್‌ಎಐ 2021-2022ರಲ್ಲಿ ನವೆಂಬರ್‌ವರೆಗೆ ಒಟ್ಟಾರೆ 63 ಲಕ್ಷಕ್ಕೂ ಅಧಿಕ ಹೊಸ ಸಸಿಗಳನ್ನು ನೆಡಲಾಗಿದೆ, ಅದರಲ್ಲಿ ಜಾಗ ಲಭ್ಯವಿರುವೆಡೆ 27.5 ಲಕ್ಷ ಸಸಿಗಳನ್ನು ನೆಟ್ಟಿರುವುದು ಮತ್ತು ರಸ್ತೆ ಮಧ್ಯ ಭಾಗದಲ್ಲಿ 35.6 ಲಕ್ಷ ಹೊಸ ಸಸಿಗಳನ್ನು ನೆಟ್ಟಿರುವುದು ಸೇರಿದೆ. ಇದಲ್ಲದೆ, ಕ್ಷೇತ್ರ ತಪಾಸಣೆಯ ಸಾಂಪ್ರದಾಯಿಕ ವಿಧಾನಗಳ ಜೊತೆಗೆ ಡ್ರೋಣ್‌ ವಿಡಿಯೋಗ್ರಫಿ ಮತ್ತು ಜಿಯೋ ಟ್ಯಾಗಿಂಗ್‌ ಮತ್ತಿತರ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಸ್ಯಕ್ಷೇತ್ರದ ಮೇಲೆ ತೀವ್ರ ನಿಗಾ ಇರಿಸಲಾಗಿದೆ.

ಹೆದ್ದಾರಿ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ನಾವು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದು, ಪ್ರಪಂಚದಲ್ಲೇ ಅತಿ ಹೆಚ್ಚು ಅಂದರೆ ದಿನಕ್ಕೆ 37 ಕಿಲೋಮೀಟರ್‌ ಹೆದ್ದಾರಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

- ಶ್ರೀ ನಿತಿತ್‌ ಗಡ್ಕರಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು

Latest Videos
Follow Us:
Download App:
  • android
  • ios