ಭಾರತ ವಿಶ್ವದ 5ನೇ ಅತೀದೊಡ್ಡ ಆರ್ಥಿಕತೆ; 5ನೇ ಬಲಹೀನ ಆರ್ಥಿಕತೆಯಿಂದ ಇಲ್ಲಿಯ ತನಕದ ಪಯಣ ಹೇಗಿತ್ತು?

Published : Jun 23, 2023, 05:08 PM ISTUpdated : Jun 23, 2023, 05:29 PM IST
ಭಾರತ ವಿಶ್ವದ 5ನೇ ಅತೀದೊಡ್ಡ ಆರ್ಥಿಕತೆ; 5ನೇ ಬಲಹೀನ ಆರ್ಥಿಕತೆಯಿಂದ ಇಲ್ಲಿಯ ತನಕದ ಪಯಣ ಹೇಗಿತ್ತು?

ಸಾರಾಂಶ

ಭಾರತ ವಿಶ್ವದ ಐದನೇ ಅತೀದೊಡ್ಡ ಆರ್ಥಿಕತೆಯಾಗಿ ಗುರುತಿಸಿಕೊಂಡಿದೆ. ಕೆಲವೇ ವರ್ಷಗಳ ಹಿಂದೆ ವಿಶ್ವದ ಐದನೇ ಬಲಹೀನ ಆರ್ಥಿಕತೆಯಾಗಿದ್ದ ಭಾರತ ವೇಗವಾಗಿ ಈ ಬದಲಾವಣೆ ದಾಖಲಿಸಲು ಹೇಗೆ ಸಾಧ್ಯವಾಯಿತು? ಇದರ ಹಿಂದಿರುವ ಭಾರತ ಸರ್ಕಾರದ ಶ್ರಮವೇನು? ಇಲ್ಲಿದೆ ಮಾಹಿತಿ. 

Business Desk: ಅಮೆರಿಕಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಕಾಂಗ್ರೆಸ್ ಅನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಭಾರತ ಜಗತ್ತಿನ ಐದನೇ ಅತೀ ದೊಡ್ಡ ಅರ್ಥವ್ಯವಸ್ಥೆಯಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಬಿಜೆಪಿ ಸರ್ಕಾರ ದೇಶದ ಚುಕ್ಕಾಣಿ ಹಿಡಿಯುವ ಸಂದರ್ಭದಲ್ಲಿ 10ನೇ ಸ್ಥಾನದಲ್ಲಿದ್ದು, ಈಗ ಐದನೇ ಸ್ಥಾನಕ್ಕ ಏರಿಕೆ ಕಂಡಿದೆ ಎಂಬ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ಶೀಘ್ರದಲ್ಲಿ ಭಾರತ ವಿಶ್ವದ 3ನೇ ಅತೀದೊಡ್ಡ ಆರ್ಥಿಕತೆಯಾಗಿ ಪ್ರಗತಿ ಹೊಂದುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ದೇಶದ ಯುವಜನತೆ, ಉದ್ಯಮಿಗಳು, ರೈತರು ಹೀಗೆ ಎಲ್ಲ ವರ್ಗದ ಜನರು ದೇಶದ ಆರ್ಥಿಕತೆಯನ್ನು ಬಲಿಷ್ಠಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದ್ದಾರೆ. ಭಾರತ ಇತ್ತೀಚಿನ ಕೆಲವು ವರ್ಷಗಳಲ್ಲಿ ಆರ್ಥಿಕವಾಗಿ ಸಾಕಷ್ಟು ಪ್ರಾಬಲ್ಯವನ್ನು ಸಾಧಿಸಿದೆ ಎಂದೇ ಹೇಳಬಹುದು. ಕೋವಿಡ್ -19 ಹಾಗೂ ಆ ಬಳಿಕ ಜಗತ್ತಿನ ಅನೇಕ ದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಹಣದುಬ್ಬರ ಏರಿಕೆ ಅಮೆರಿಕದಂತಹ ಬಲಿಷ್ಠ ರಾಷ್ಟ್ರವನ್ನೇ ಅಲುಗಾಡಿಸಿದೆ. ಆದರೆ,  ಭಾರತದ ಆರ್ಥಿಕತೆ ಮಾತ್ರ ದೊಡ್ಡ ಹೊಡೆತವನ್ನೇನೂ ಅನುಭವಿಸಲಿಲ್ಲ. ದೇಶದಲ್ಲಿನ ಹಣದುಬ್ಬರ ನಿಯಂತ್ರಣಕ್ಕೆ ರೆಪೋ ದರ ಏರಿಕೆ ಜೊತೆಗೆ ಕೆಲವು ಸಾಮಗ್ರಿಗಳ ಬೆಲೆಯೇರಿಕೆ ತಡೆ ಕ್ರಮಗಳ ಮೂಲಕ ಮೂಗುದಾರ ಹಾಕಲು ಸರ್ಕಾರ ಯಶಸ್ವಿಯಾಗಿದೆ.

ಐಎಂಎಫ್ ವಿಶ್ವ ಆರ್ಥಿಕ ವರದಿ ಏನ್ ಹೇಳಿದೆ?
ಅಂತಾರಾಷ್ಟ್ರೀಯ ಮುದ್ರಾ ಕೋಶದ ಮೂಲಕ ವಿಶ್ವ ಆರ್ಥಿಕ ಔಟ್ ಲುಕ್ ವರದಿಯನ್ನು ಪ್ರಕಟಿಸಲಾಗಿದೆ. ಇದರಲ್ಲಿ ಪ್ರಸ್ತುತ ಸಂದರ್ಭದಲ್ಲಿ ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ತಿಳಿಸಲಾಗಿದೆ. ಐಎಂಎಫ್ ವರದಿ ಪ್ರಕಾರ 2013-14ನೇ ಸಾಲಿನಲ್ಲಿ ಭಾರತ ಆರ್ಥಿಕ ಸ್ಥಿತಿ ಈಗಿನಗಿಂತ ಸಂಪೂರ್ಣ ವ್ಯತಿರಿಕ್ತವಾಗಿತ್ತು. ಆ ಸಮಯದಲ್ಲಿ ಭಾರತದ ಆರ್ಥಿಕತೆ ವಿಶ್ವದಲ್ಲೇ ಐದನೇ ಅತ್ಯಂತ ಬಲಹೀನ ಅರ್ಥವ್ಯವಸ್ಥೆ ಎಂದು ಪರಿಗಣಿಸಲಾಗಿತ್ತು. ಆದರೆ, ಇಂದು ವಿಶ್ವದ ಐದನೇ ಅತೀದೊಡ್ಡ ಆರ್ಥಿಕತೆಯಾಗಿ ಭಾರತ ಬೆಳೆದು ನಿಂತಿದೆ.

ಭಾರತೀಯರ ಸ್ವಿಸ್‌ ಬ್ಯಾಂಕ್‌ ಠೇವ​ಣಿ 30 ಸಾವಿರ ಕೋಟಿ ರು.ಗೆ ಇಳಿ​ಕೆ: ಭಾರ​ತದ ಜಿಡಿಪಿ ದರ ಶೇ.6.3

ಭಾರತ ಸರ್ಕಾರದ ಪ್ರಯತ್ನದಿಂದ ಈ  ಬದಲಾವಣೆ
ಭಾರತದ ಅರ್ಥವ್ಯವಸ್ಥೆಯಲ್ಲಿ ಅತೀಕಡಿಮೆ ಸಮಯದಲ್ಲಿ ಈ ಸುಧಾರಣೆಯಾಗೋದಕ್ಕೆ ಕೇಂದ್ರ ಸರ್ಕಾರದ ಅನೇಕ ಪ್ರಯತ್ನಗಳೇ ಕಾರಣ. ಜಿಎಸ್ ಟಿ ಜಾರಿ, ಪಿಎಲ್ ಐ ಮುಂತಾದ ಯೋಜನೆಗಳ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಯಿತು. ಹಾಗೆಯೇ ಉದ್ಯಮ ಸ್ಥಾಪನೆಗೆ ಸಂಬಂಧಿಸಿದ ನಿಯಮಗಳಲ್ಲಿ ಸುಧಾರಣೆ, ವಿದೇಶಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಸೇರಿದಂತೆ ಉದ್ಯಮಸ್ನೇಹಿ ಕ್ರಮಗಳು ದೇಶದ ಉದ್ಯಮ ರಂಗದ ಅಭಿವೃದ್ಧಿಗೆ ನೆರವು ನೀಡಿವೆ. ಇನ್ನು ಪ್ರಧಾನ ಮಂತ್ರಿ ಜನ್ ಧನ್ ಯೋಜನೆ, ಆಯುಷ್ಯಮಾನ್ ಭಾರತ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಜಲ್ ಜೀವನ್ ಮಿಷನ್ ಮುಂತಾದ ಯೋಜನೆಗಳ ಮೂಲಕ ಜನರ ಜೀವನ ಮಟ್ಟವನ್ನು ಉತ್ತಮಪಡಿಸಲಾಗಿದೆ.

ದೇಶದಲ್ಲಿ ಕಳೆದ ಆರ್ಥಿಕ ಸಾಲಿನಲ್ಲಿ ಅತೀಹೆಚ್ಚು ತೆರಿಗೆ ಪಾವತಿಸಿದ ಕಂಪನಿ ಯಾವುದು? ಇಲ್ಲಿದೆ ಟಾಪ್ 10 ಪಟ್ಟಿ

ಅಮೆರಿಕ ನಂ.1 ಆರ್ಥಿಕ ವ್ಯವಸ್ಥೆ
ವಿಶ್ವದ 10 ಟಾಪ್ ಅರ್ಥವ್ಯವಸ್ಥೆಗಳಲ್ಲಿ ಅಮೆರಿಕ ನಂ.1 ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಚೀನಾ, ಮೂರನೇ ಸ್ಥಾನದಲ್ಲಿ ಜಪಾನ್ ಹಾಗೂ ನಾಲ್ಕನೇ ಸ್ಥಾನದಲ್ಲಿ ಜರ್ಮನಿ, ಐದರಲ್ಲಿ ಭಾರತ ಇದೆ. ಇನ್ನು ಆರನೇ ಸ್ಥಾನದಲ್ಲಿ ಇಂಗ್ಲೆಂಡ್ , ಏಳನೇ ಸ್ಥಾನದಲ್ಲಿ ಇಟಲಿ, ಎಂಟನೇ ಸ್ಥಾನದಲ್ಲಿ ಇಟಲಿ, 9ನೇ ಸ್ಥಾನದಲ್ಲಿ ಕೆನಡಾ ಹಾಗೂ 10ನೇ ಸ್ಥಾನದಲ್ಲಿ ಬ್ರೆಜಿಲ್ ಇದೆ. 2013-14ನೇ ಸಾಲಿನಲ್ಲಿ ಭಾರತದ ಅರ್ಥವ್ಯವಸ್ಥೆ 112.34 ಲಕ್ಷ ಕೋಟಿ ರೂ. ಇತ್ತು. 2022-23ನೇ ಸಾಲಿನಲ್ಲಿ ಇದು ಬೆಳೆದು 273.08 ಲಕ್ಷ ಕೋಟಿ ರೂ.ಗೆ ತಲುಪಿದೆ. 


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!