Malai Biomaterials: ಇಲ್ಲಿ ತೆಂಗಿನ ನೀರಿನಿಂದ ತಯಾರಾಗ್ತಿದೆ ಅದ್ಭುತ ಬ್ಯಾಗ್

Published : Jun 23, 2023, 03:44 PM ISTUpdated : Jun 23, 2023, 04:14 PM IST
Malai Biomaterials: ಇಲ್ಲಿ ತೆಂಗಿನ ನೀರಿನಿಂದ ತಯಾರಾಗ್ತಿದೆ ಅದ್ಭುತ ಬ್ಯಾಗ್

ಸಾರಾಂಶ

ಪರಿಸರ ನಷ್ಟಕ್ಕೆ ಮಾನವ ಕಾರಣವಾಗ್ತಿದ್ದಾನೆ. ಪ್ಲಾಸ್ಟಿಕ್, ಲೆದರ್ ನಮ್ಮ ಜೀವನದ ಮೇಲೆ ದೊಡ್ಡ ಬರೆ ಎಳೆಯುತ್ತಿದೆ. ಈ ಮಧ್ಯೆ ಪರಿಸರ ಸ್ನೇಹಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ. ಕೇರಳದಲ್ಲಿರುವ ಸ್ಟಾರ್ಟ್ ಅಪ್ ಕಂಪನಿಯೊಂದು ಎಲ್ಲರ ಗಮನ ಸೆಳೆಯುತ್ತಿದೆ.  

ಪ್ರಾಣಿಗಳ ಮೇಲೆ ಕ್ರೌರ್ಯ ಮಾತ್ರವಲ್ಲದೆ ಪರಿಸರದ ಮೇಲೆ ಭಾರಿ ಪರಿಣಾಮ ಬೀರುವ ಚರ್ಮದ ಉದ್ಯಮದ ವಿರುದ್ಧ ಪರಿಸರವಾದಿಗಳು ಬಹಳ ಹಿಂದಿನಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಟ್ಯಾನಿಂಗ್ ಪ್ರಕ್ರಿಯೆಗಳು ದಟ್ಟವಾದ ಕಪ್ಪು ಹೊಗೆಯನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ. ವಿಷಕಾರಿ ತ್ಯಾಜ್ಯ ನೀರನ್ನು ಸೇರುತ್ತಿದೆ. ಇದ್ರ ವಿರುದ್ಧದ ಪ್ರತಿಭಟನೆ ಮಧ್ಯೆಯೇ ಪರಿಸರಕ್ಕೆ ಅನುಕೂಲವಾದ, ಚರ್ಮಕ್ಕೆ ಪರ್ಯಾಯವನ್ನು ಕಂಡು ಹಿಡಿಯಲಾಗಿದೆ. ಸಸ್ಯಹಾರಿ ಸ್ಟಾರ್ಟ್ ಅಪ್ ಕಂಪನಿ ತೆಂಗಿನ ನೀರಿನಿಂದ ಪರಿಸರ ಸ್ನೇಹಿ ವಸ್ತುಗಳನ್ನು ತಯಾರಿಸುತ್ತದೆ. ಈ ಸ್ಟಾರ್ಟ್ ಅಪ್ ಕಂಪನಿಯಲ್ಲಿ ಬ್ಯಾಗ್, ಪರ್ಸ್, ಶೂ ಸೇರಿದಂತೆ ಅನೇಕ ವಸ್ತುಗಳು ಸಿದ್ಧವಾಗುತ್ತವೆ. ನಾವಿಂದು ಆ ಸ್ಟಾರ್ಟ್ ಅಪ್ ಕಂಪನಿ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಯಾವಾಗ ಪ್ರಾರಂಭವಾಯ್ತು ಕಂಪನಿ (Company) : 2018ರಲ್ಲಿ ಕೇರಳದಲ್ಲಿ ಈ ಸ್ಟಾರ್ಟ್ ಅಪ್ (Start Up) ಕಂಪನಿ ಶುರು ಮಾಡಲಾಗಿದೆ. ಇಲ್ಲಿ ತಯಾರಾಗುವ ವಸ್ತುಗಳು ಚರ್ಮದಂತೆ ಕಾಣುತ್ತವೆ. ಚರ್ಮ (Leather) ದಂತ ಫೀಲ್ ನಿಮಗೆ ನೀಡುತ್ತದೆ. ಆದ್ರೆ ವಸ್ತುಗಳು ಚರ್ಮದ್ದಲ್ಲ. ತೆಂಗಿನ ನೀರಿನಿಂದ ಇದನ್ನು ತಯಾರಿಸಲಾಗುತ್ತದೆ. ಈ ಸ್ಟಾರ್ಟ್ ಅಫ್ ಕಂಪನಿ ಹೆಸರು ಮಲೈ ಬಯೋಮೆಟೀರಿಯಲ್ಸ್ ಡಿಸೈನ್ ಪ್ರೈವೆಟ್ ಲಿಮಿಟೆಡ್. ಇದನ್ನು ಸ್ಲೋವಾಕಿಯಾದ ಸುಸ್ಮಿತ್ ಸಿ ಸುಸಿಲಾನ್ ಮತ್ತು ಝಝಾನಾ ಗೊಂಬೊಸೊವಾ ಸ್ಥಾಪಿಸಿದರು.

BLACK RICE CULTIVATION: ಆರೋಗ್ಯಕರ ಈ ಬೆಳೆ ಬೆಳೆದ್ರೆ ಬಾಳು ಬಂಗಾರ!

ಪರಿಸರಕ್ಕೆ ಹಾನಿಯಾಗಬಲ್ಲ ಪ್ಲಾಸ್ಟಿಕ್ ಸುದ್ದಿಗಳನ್ನು ಇವರಿಬ್ಬರು ದಿನ ಕೇಳ್ತಿದ್ದರು. ಆರೋಗ್ಯಕರ ಹಾಗೂ ನೈಸರ್ಗಿಕ ವಸ್ತುಗಳನ್ನೇ ಬಳಸಿಕೊಂಡು ವಸ್ತುಗಳನ್ನು ತಯಾರಿಸಲು ಆಲೋಚನೆ ಮಾಡಿದ್ರು.  ಇದ್ರ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದ ಝಝಾನಾ, ಕಡಿಮೆ ಅವಧಿಯಲ್ಲಿ ಇದ್ರ ಉತ್ಪನ್ನಗಳನ್ನು ತಯಾರಿಸಬಹುದು ಎಂಬುದನ್ನು ಮನಗಂಡರು. ಹಾಗೆಯೇ ಇದ್ರಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ ಎಂಬುದನ್ನು ಪತ್ತೆ ಮಾಡಿದ್ರು. ಯುಕೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅವಕಾಶವಿರಲಿಲ್ಲ. ಹಾಗಾಗಿಯೇ ಝಝಾನಾ ಕೇರಳಕ್ಕೆ ಬಂದ್ರು. ತೆಂಗಿನ ನೀರನ್ನು ಬ್ಯಾಕ್ಟೀರಿಯಾ ಜೊತೆ ಬೆರೆಸಿ ಪ್ರಯೋಗ ಶುರು ಮಾಡಿದ್ರು. ಅದೇ ಕೊನೆಯಲ್ಲಿ ಉತ್ಪನ್ನವಾಗಿ ಸಿದ್ಧವಾಯ್ತು.

ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ? : ಇದು ಮುಖ್ಯವಾಗಿ ಎರಡು ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ. ತೆಂಗಿನ ನೀರನ್ನು ಕೇರಳದ ತೆಂಗಿನ ಸಂಸ್ಕರಣಾ ಘಟಕದಿಂದ ಪಡೆಯಲಾಗುತ್ತದೆ. ನಂತ್ರ  ಹುದುಗುವಿಕೆ ಕೆಲಸ ನಡೆಯುತ್ತದೆ. ಅಲ್ಲಿ ತೆಂಗಿನ ನೀರನ್ನು ವಿಶೇಷ ರೀತಿಯ ಬ್ಯಾಕ್ಟೀರಿಯಾಕ್ಕೆ ನೀಡಲಾಗುತ್ತದೆ. ಒಮ್ಮೆ ಅದನ್ನು ಹುದುಗಿಸಿದ ನಂತರ, ಸಕ್ಕರೆಯ ಸಾರವನ್ನು ಸೆಲ್ಯುಲೋಸ್ ಆಗಿ ಪರಿವರ್ತಿಸಲಾಗುತ್ತದೆ ಮತ್ತು ಹಾಳೆಗಳನ್ನು ಅಥವಾ ಯಾವುದೇ ಆಕಾರವನ್ನು ನೀಡಲಾಗುತ್ತದೆ. ನಂತ್ರ ಅದಕ್ಕೆ ಬಣ್ಣ ನೀಡಿ, ಬೇಕಾದ ವಸ್ತುವನ್ನು ತಯಾರಿಸಲಾಗುತ್ತದೆ. ಇದಲ್ಲದೆ ಇಲ್ಲಿ ಉತ್ಪನ್ನಗಳನ್ನು ತಯಾರಿಸಲು ತ್ಯಾಜ್ಯ ತೆಂಗಿನಕಾಯಿ, ಬಾಳೆ ಕಾಂಡಗಳು, ಅಗಸೆ ನಾರುಗಳನ್ನು ಸಹ ಬಳಸುತ್ತಾರೆ. ಇದು, ಚರ್ಮದ ಉತ್ಪನ್ನಕ್ಕಿಂತ ಉತ್ತಮವಾಗಿದೆ.

Earn Money: ಈ ಸೈಟಿಗೆ ವಾಯ್ಸ್ ಓವರ್ ಕೊಟ್ಟು, ಕೈ ತುಂಬಾ ಹಣ ಗಳಿಸಿ

ಲಂಡನ್ ಡಿಸೈನ್ ವೀಕ್ ಮತ್ತು ಪ್ರೇಗ್ ಡಿಸೈನ್ ವೀಕ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಇದ್ರ ಪ್ರದರ್ಶನಕ್ಕೆ ಹೆಚ್ಚು ಮಾನ್ಯತೆಯನ್ನು ನೀಡಿದೆ. ಜೊತೆಗೆ, ಅವರು ಎಲ್ಲೆ ಡೆಕೋರ್ ಡಿಸೈನ್ ಅವಾರ್ಡ್, ಗ್ರ್ಯಾಂಡ್ ಚೆಕ್ ಡಿಸೈನ್ ಮತ್ತು ಸರ್ಕ್ಯುಲರ್ ಡಿಸೈನ್ ಚಾಲೆಂಜ್‌ನಂತಹ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅನೇಕ ಪ್ರಸಿದ್ಧ ಕಂಪನಿಗಳು ಇವರಿಂದ ಪ್ಲಾಂಡರ್  ಖರೀದಿ ಮಾಡ್ತಿವೆ. ಕರೋನಾ ಸಂದರ್ಭದಲ್ಲಿ ಇವರಿಗೂ ಸಾಕಷ್ಟು ನಷ್ಟವಾಗಿತ್ತು. ಕೆಲ ತಿಂಗಳು ಕೆಲಸ ಸಂಪೂರ್ಣ ನಿಂತಿತ್ತು. ಆದ್ರೂ ಮತ್ತೆ ಎದ್ದು ಬಂದಿದ್ದಾರೆ. ತೆಂಗಿನ ನೀರಿನಿಂದ ಮಾಡಿದ ಈ ಉತ್ಪನ್ನಗಳು ಅನೇಕ ವರ್ಷಗಳವರೆಗೆ ಬಾಳಿಕೆ ಬರುತ್ತದೆ. ನೀವು ಅದನ್ನು ವಿಲೇವಾರಿ ಮಾಡಲು ಬಯಸಿದ್ದರೆ ಸುಲಭವಾಗಿ ಮಾಡಬಹುದು. ಉತ್ಪನ್ನವನ್ನು ನಿಮ್ಮ ಮಿಶ್ರಿತ ತ್ಯಾಜ್ಯದೊಂದಿಗೆ ಇರಿಸಬಹುದು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಏರಿಕೆಯಾಗ್ತಿರೋ ಚಿನ್ನವನ್ನು ಲಾಭದಾಯಕವಾಗಿ ಹೇಗೆ ಖರೀದಿಸಬೇಕು? ತಜ್ಞರ ಸಲಹೆ
YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ