ಐಸಿಐಸಿಐ ಮಾಜಿ ಸಿಇಒ ಚಂದ್ರ ಕೊಚ್ಚಾರ್ ವಜಾಗೊಳಿಸಿದ್ದು ಸರಿ: ಬಾಂಬೆ ಹೈಕೋರ್ಟ್

By Anusha KbFirst Published Nov 11, 2022, 12:26 PM IST
Highlights

ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದ್ರ ಕೊಚ್ಚಾರ್ ಅವರ ನಿವೃತ್ತಿ ನಂತರದ ಮನವಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದ್ದು, ಕೊಚ್ಚಾರ್ ಅವರನ್ನು ವಜಾ ಮಾಡಿದ್ದು ಸರಿಯಾಗಿದೆ ಎಂದು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಗಹ್ಲಾ ಹೇಳಿದ್ದಾರೆ.

ಮುಂಬೈ: ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದ್ರ ಕೊಚ್ಚಾರ್ ಅವರ ನಿವೃತ್ತಿ ನಂತರದ ಮನವಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದ್ದು, ಕೊಚ್ಚಾರ್ ಅವರನ್ನು ವಜಾ ಮಾಡಿದ್ದು ಸರಿಯಾಗಿದೆ ಎಂದು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಗಹ್ಲಾ ಹೇಳಿದ್ದಾರೆ. ಅಲ್ಲದೇ ಚಂದ್ರಾ ಕೊಚ್ಚಾರ್ ಅವರಿಗೆ ಮಧ್ಯಂತರ ಪರಿಹಾರ ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಬಾಂಬೆ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಆರ್.ಐ ಗೆಹ್ಲಾ ಈ ತೀರ್ಪು ನೀಡಿದೆ. ಅಲ್ಲದೇ 2018ರಲ್ಲಿ ಚಂದ್ರ ಕೊಚ್ಚಾರ್ ಅವರು ಸ್ವಾಧೀನಪಡಿಸಿಕೊಂಡ  6.90 ಲಕ್ಷ ಷೇರುಗಳನ್ನು ಮುಟ್ಟದಂತೆ ಚಂದ್ರ ಕೊಚ್ಚಾರ್ ಅವರನ್ನು ಹೇಳಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. 

ಒಂದು ವೇಳೆ ಕೊಚ್ಚಾರ್ ಅವರು ತಮ್ಮ ಷೇರುಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಏನಾದರೂ ವ್ಯವಹಾರಗಳನ್ನು ನಡೆಸಿದ್ದರೆ ಅದನ್ನು ಬಹಿರಂಗಪಡಿಸಬೇಕು. ಆರು ವಾರಗಳ ಒಳಗೆ ಈ ಬಗ್ಗೆ ಅಫಿಡವಿಟ್ ಸಲ್ಲಿಸಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಬ್ಯಾಂಕ್ ಸಿಇಒ ಹುದ್ದೆಯಿಂದ ಕೊಚ್ಚಾರ್ ಅವರನ್ನು ವಜಾಗೊಳಿಸಿದ್ದು ಕೂಡ ಮಾನ್ಯವಾಗಿದೆ ಎಂದು ನ್ಯಾಯಮೂರ್ತಿ ಗಹ್ಲಾ ಹೇಳಿದ್ದಾರೆ. ನಾನು ಈ ವಜಾವನ್ನು ಮಾನ್ಯವಾದ ಅಥವಾ ಸರಿಯಾದ ವಜಾ ಎಂದು ಪರಿಗಣಿಸಿದ್ದೇನೆ ಎಂದು ನ್ಯಾಯಮೂರ್ತಿ  ಗಹ್ಲಾ ಹೇಳಿದರು.

ICICI ಮಾಜಿ ಮುಖ್ಯಸ್ಥೆ ಕೋಚರ್ 78 ಕೋಟಿ ಆಸ್ತಿ ಜಪ್ತಿ!

ಐಸಿಐಸಿಐ ಬ್ಯಾಂಕ್ (ICICI), ಚಂದ್ರ ಕೊಚ್ಚಾರ್ (Chandra Kochhar) ಅವರು ರಾಜೀನಾಮೆ ನೀಡುವ ಸಮಯದಲ್ಲಿನ ಕೆಲ ವ್ಯವಹಾರಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿಲ್ಲ. ಈ ವಿಚಾರಳನ್ನು ವಿಚಾರಣಾ ವರದಿಯ ಸ್ವೀಕೃತಿಯಲ್ಲಿ(receipt) ಮಾತ್ರ ಬಹಿರಂಗಪಡಿಸಲಾಗಿದೆ. ಅಲ್ಲದೇ ಈ ವಜಾವೂ ಮಾನ್ಯವಾದ ವಜಾ ಎಂದು ಭಾವಿಸುತ್ತೇನೆ ಹಾಗೂ ಚಂದ್ರ ಕೊಚ್ಚಾರ್ ಅವರು ಶುದ್ಧ ಹಸ್ತದಿಂದ ನ್ಯಾಯಾಲಯಕ್ಕೆ ಬಂದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.  ಕೊಚ್ಚರ್ ಅವರು 2018 ರಲ್ಲಿ ತಮ್ಮ ಉದ್ಯೋಗದಾತರಿಂದ ವಿಶೇಷ ಪ್ರಯೋಜನಗಳನ್ನು ಕೋರಿದ್ದರು ಎಂದು ವರದಿಯಲ್ಲಿದೆ. 2012 ರಲ್ಲಿ ವಿಡಿಯೋಕಾನ್ ಗ್ರೂಪ್‌ಗೆ  3,250 ಕೋಟಿ ರೂಪಾಯಿ ಸಾಲ ನೀಡುವ ವಿಚಾರದಲ್ಲಿ ಅಕ್ರಮ ಎಸಗಿದ್ದಾರೆ ಎಂದು  ಕೊಚ್ಚಾರ್ ವಿರುದ್ಧ ಕೇಂದ್ರೀಯ ತನಿಖಾ ಮಂಡಳಿ ಆರೋಪಿಸಿತ್ತು. ಅಲ್ಲದೇ ಕೊಚ್ಚಾರ್ ಅವರು ಕಂಪನಿಯ ನೀತಿ ಸಂಹಿತೆ ಮತ್ತು ಆಂತರಿಕ ನೀತಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಐಸಿಐಸಿಐ ಬ್ಯಾಂಕ್ ಹೇಳಿತ್ತು.

ಐಸಿಐಸಿಯಿಂದ ಚಂದಾ ಕೊಚ್ಚರ್ ಔಟ್: ತನಿಖೆಯಲ್ಲಿ ಉಳಿದಿಲ್ಲ ಡೌಟ್!

ವಿಡಿಯೋಕಾನ್‌ಗೆ ನೀಡಿದ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರ ಕೊಚ್ಚಾರ್ ಅವರ ಪತಿ ದೀಪಕ್ ಕೊಚ್ಚಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು 2020ರಲ್ಲಿ ಬಂಧಿಸಿದ್ದರು. ಐಸಿಸಿಐ ಹಾಗೂ ವಿಡಿಯೋಕಾನ್‌ ಅಕ್ರಮ ಸಾಲ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಡಿ ಅಧಿಕಾರಿಗಳು ದೀಪಕ್‌ ಕೊಚ್ಚಾರ್‌ (Deepak kochhar) ಅವರನ್ನ ವಿಚಾರಣೆಗೆ ಆಹ್ವಾನಿಸಿದ್ದರು, ಸುಧೀರ್ಘ ವಿಚಾರಣೆಯ ನಂತರ ಅವರನ್ನು ಬಂಧಿಸಿದ್ದರು.  ದೀಪಕ್ ಕೊಚ್ಚಾರ್ ಅವರ ಸಂಸ್ಥೆಗೆ ವಿಡಿಯೋಕಾನ್ (videocon) ಸಂಸ್ಥೆಯಿಂದ 64 ಕೋಟಿ ಹಣ ನೀಡಲಾಗಿತ್ತು. ಐಸಿಐಸಿಐ ಬ್ಯಾಂಕ್‌ನಿಂದ ಸಾಲ ಬಿಡುಗಡೆ ಮಾಡಿದ ಕಾರಣಕ್ಕೆ ಗಿಫ್ಟ್ ಆಗಿ ಚಂದ್ರ ಕೊಚ್ಚಾರ್ ಪತಿ ದೀಪಕ್ ಕೊಚ್ಚಾರ್ ಸಂಸ್ಥೆಗೆ ಈ ಹಣ ನೀಡಲಾಗಿತ್ತು. 
 

click me!