ITR e-Verification: ಆಧಾರ್ ಒಟಿಪಿ ಮೂಲಕ ಆದಾಯ ತೆರಿಗೆ ರಿಟರ್ನ್ ಇ-ಪರಿಶೀಲನೆ ಹೇಗೆ? ಇಲ್ಲಿದೆ ಮಾಹಿತಿ

By Suvarna NewsFirst Published Jul 6, 2022, 8:51 PM IST
Highlights

ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿದ ಬಳಿಕ ಅದರ ಇ-ಪರಿಶೀಲನೆ ಕೂಡ ಮುಖ್ಯ. ಇ-ಪರಿಶೀಲನೆ ಬಳಿಕವೇ ಐಟಿಆರ್ ಸಲ್ಲಿಕೆ ಪೂರ್ಣವಾಗೋದು. ಐಟಿಆರ್ ಇ-ಪರಿಶೀಲನೆಗೆ ಅನೇಕ ವಿಧಾನಗಳಿದ್ರೂ ಆಧಾರ್ ಒಟಿಪಿ ಮೂಲಕ ಸುಲಭವಾಗಿ ಈ ಕಾರ್ಯವನ್ನು ಮಾಡಿ ಮುಗಿಸಬಹುದು. ಅದು ಹೇಗೆ? ಇಲ್ಲಿದೆ ಮಾಹಿತಿ.
 

Business Desk: 2021-22ನೇ ಹಣಕಾಸು ಸಾಲಿನ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕ. ಇನ್ನು ಅಡಿಟ್ ಗೊಳಪಡೋ ಇತರ ತೆರಿಗೆದಾರರಿಗೆ ರಿಟರ್ನ್ ಸಲ್ಲಿಕೆಗೆ ಅಕ್ಟೋಬರ್ 31 ಕೊನೆಯ ದಿನಾಂಕ. ಆದಾಯ ತೆರಿಗೆ ರಿಟರ್ನ್ (ITR) ಮೂಲತಃ ಒಂದು ದಾಖಲೆಯಾಗಿದ್ದು,ಆದಾಯ ತೆರಿಗೆ ಕಾಯ್ದೆ (Income Tax Act) ನಿಬಂಧನೆಗಳಿಗೆ ಅನುಗುಣವಾಗಿ ಫೈಲ್ ಮಾಡಲಾಗುತ್ತದೆ. ಇದರಲ್ಲಿ ಆ ವ್ಯಕ್ತಿಯ ಆದಾಯ, ಲಾಭ ಹಾಗೂ ನಷ್ಟಗಳ ಜೊತೆಗೆ ಇತರ ತೆರಿಗೆ ಕಡಿತಗಳ ಮಾಹಿತಿಗಳೂ ಇರುತ್ತವೆ. 

ಇನ್ನು ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆಯ ಕೊನೆಯ ಹಂತವೇ ಅದರ ಪರಿಶೀಲನೆ. ಐಟಿಆರ್ ಸಲ್ಲಿಕೆ ಮಾಡಿದ 120 ದಿನಗಳೊಳಗೆ ಇ-ಪರಿಶೀಲನೆ (e-verification) ನಡೆಸಬೇಕು, ಇಲ್ಲವಾದ್ರೆ ಆ ಐಟಿಆರ್ ಅಮಾನ್ಯವಾಗುತ್ತದೆ. ಆಧಾರ್ ಒಟಿಪಿ ಮೂಲಕ ಆದಾಯ ತೆರಿಗೆ ರಿಟರ್ನ್ ಇ-ಪರಿಶೀಲನೆ ನಡೆಸಬಹುದು. ಅದು ಹೇಗೆ? ಇಲ್ಲಿದೆ.

Post Office Scheme:ಪ್ರತಿ ತಿಂಗಳು 2500 ರೂ. ಆದಾಯ ಗಳಿಸಬೇಕಾ? ಹಾಗಾದ್ರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ

ಹಂತ ಹಂತವಾದ ಮಾಹಿತಿ.
ಹಂತ 1: ಇ-ಫೈಲಿಂಗ್ ಪೋರ್ಟಲ್ ಹೋಮ್ ಪೇಜ್ ಗೆ ತೆರಳಿ e-Verify Return ಮೇಲೆ ಕ್ಲಿಕ್ ಮಾಡಿ.
ಹಂತ 2: ಆಧಾರ್ ಸಂಖ್ಯೆಯನ್ನು ಪ್ಯಾನ್ ಜೊತೆಗೆ ಲಿಂಕ್ ಮಾಡಿ (ಈ ತನಕ ಲಿಂಕ್ ಮಾಡದಿದ್ರೆ).
ಹಂತ 3: ಆಧಾರ್ ಅನ್ನು ಯಶಸ್ವಿಯಾಗಿ ಲಿಂಕ್ ಮಾಡಿದ ಬಳಿಕ ಸ್ಕ್ರೀನ್ ಮೇಲೆ ಕ್ಲಿಕ್ ಮಾಡಿ.
ಹಂತ 4: ಆಧಾರ್ ಒಟಿಪಿ ಬಳಸಿಕೊಂಡು ರಿಟರ್ನ್ ಇ-ಪರಿಶೀಲನೆ ಆಯ್ಕೆಯನ್ನು ಆರಿಸಿ.
ಹಂತ 5: ಒಟಿಪಿ ಸೃಷ್ಟಿಸಿ ಅದರ ಮಾಹಿತಿ ನಿಮ್ಮ ನೋಂದಾಯಿತ ಮೊಬೈಲ್ ಗೆ ಬರುತ್ತದೆ.
ಹಂತ 6:  ಈಗ ನಿಮ್ಮ ಮೊಬೈಲ್ ಗೆ ಬಂದಿರುವ ಒಟಿಪಿಯನ್ನು ಇ-ಫೈಲಿಂಗ್ ಪೋರ್ಟಲ್ ನಲ್ಲಿ ನಮೂದಿಸಿ ಆಗ ನಿಮ್ಮ ಪರಿಶೀಲನೆ ಪ್ರಕ್ರಿಯೆ ಮುಗಿಯುತ್ತದೆ.

ಆದಾಯ ತೆರಿಗೆ ರಿಟರ್ನ್ ಇ-ಪರಿಶೀಲನೆ (e-verification) ಮಾಡಲು ಆರು ವಿಧಾನಗಳನ್ನು ಅನುಸರಿಸಬಹುದು.  ನೆಟ್ ಬ್ಯಾಂಕಿಂಗ್, ಬ್ಯಾಂಕ್ ಎಟಿಎಂ, ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಒಟಿಪಿ, ಡಿಮ್ಯಾಟ್ ಖಾತೆ, ನೋಂದಾಯಿತ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿ.
ಆನ್ ಲೈನ್ (Online) ಮೂಲಕ ಐಟಿಆರ್ ಸಲ್ಲಿಕೆ ಮಾಡಿದ ಪ್ರತಿಯಲ್ಲಿ ಸಹಿ ಹಾಕಿ ಬೆಂಗಳೂರಿನ (Bengaluru) ಕೇಂದ್ರೀಯ ಪರಿಶೀಲನಾ ಕೇಂದ್ರಕ್ಕೆ (CPC) ಸ್ಪೀಡ್ ಪೋಸ್ಟ್ (Speed post) ಕಳುಹಿಸೋ ಮೂಲಕವೂ ದೃಢೀಕರಿಸಲು ಸಾಧ್ಯವಿದೆ. ಇ-ದೃಢೀಕರಣಗೊಳ್ಳದ ಐಟಿ ರಿಟರ್ನ್ ಗಳನ್ನು ಆದಾಯ ತೆರಿಗೆ ಇಲಾಖೆ (Incme Tax Department) ಪರಿಗಣಿಸೋದಿಲ್ಲ.

ಆದಾಯ ತೆರಿಗೆ ನಿಯಮಗಳ ಪ್ರಕಾರ ತೆರಿಗೆ ಪಾವತಿದಾರ ಐಟಿಆರ್ ಸಲ್ಲಿಕೆ ಮಾಡಿದ 120 ದಿನಗಳೊಳಗೆ ಅದನ್ನು ದೃಢೀಕರಿಸಬೇಕು. ಒಂದು ವೇಳೆ ಐಟಿಆರ್ ಸಲ್ಲಿಕೆ ಮಾಡಿಯೂ ಅದನ್ನು ದೃಢೀಕರಿಸದಿದ್ರೆ ಆಗ ಅಂಥ ಐಟಿಆರ್ 'ಅಪೂರ್ಣ ರಿಟರ್ನ್' ಎಂದು ಪರಿಗಣಿಸಲ್ಪಡುತ್ತದೆ. ಅಷ್ಟೇ ಅಲ್ಲ, ಅಂಥ ಐಟಿಆರ್ ಗಳನ್ನು ಆದಾಯ ತೆರಿಗೆ ಇಲಾಖೆ ಪರಿಗಣಿಸದ ಪರಿಣಾಮ ನೀವು ಆ ವರ್ಷ ತೆರಿಗೆ ಪಾವತಿಸಿಲ್ಲವೆಂದೇ ದಾಖಲೆಗಳಲ್ಲಿ ನಮೂದಾಗುತ್ತದೆ. 

Family Finance: ತಿಂಗಳ ಕೊನೇಲಿ ಪರ್ಸಲ್ಲಿ ಕಾಸಿರಬೇಕಂದ್ರೆ ಹೀಗಿರಲಿ ಪ್ಲ್ಯಾನ್!

ಐಟಿಆರ್ ಸಲ್ಲಿಕೆ ವಿಳಂಬವಾದ್ರೆ ಏನಾಗುತ್ತೆ?
ನಿಗದಿತ ದಿನಾಂಕದೊಳಗೆ ಐಟಿಆರ್ ಸಲ್ಲಿಕೆ ಮಾಡದಿದ್ರೂ ವಿಳಂಬ ಐಟಿಆರ್ ಸಲ್ಲಿಕೆಗೆ ಅವಕಾಶವಿದ್ದರೂ ತೆರಿಗೆದಾರರು ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಈ ವರ್ಷ ತೆರಿಗೆದಾರರು ಅನುಭವಿಸಿದ ನಷ್ಟವನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ಅವರು ಗಳಿಸೋ ಲಾಭಕ್ಕೆ ಸರಿಹೊಂದಿಸೋ (Setoff) ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಇನ್ನು ತೆರಿಗೆದಾರರ ಆದಾಯದಿಂದ ಈಗಾಗಲೇ ಹೆಚ್ಚುವರಿಯಾಗಿ ಕಡಿತಗೊಂಡ ತೆರಿಗೆಗೆ ಸೂಕ್ತ ದಾಖಲೆಗಳನ್ನು ಒದಗಿಸಿದ್ರೆ ಅದನ್ನು ಆದಾಯ ತೆರಿಗೆ ಇಲಾಖೆ ಮರುಪಾವತಿ (Refund) ಮಾಡುತ್ತದೆ. ಆದ್ರೆ ಅಂತಿಮ ಗಡುವಿನೊಳಗೆ  ಐಟಿಆರ್ ಫೈಲ್ ಮಾಡದ ತೆರಿಗೆದಾರರಿಗೆ ಮರುಪಾವತಿ ಮಾಡೋದಿಲ್ಲ. 

click me!