ವರದಿ: ಡೆಲ್ಲಿ ಮಂಜು
ನವದೆಹಲಿ(ಜು.06): ನೀವು ಈ ಈಯರ್ ಎಂಡ್ ಟ್ರಿಪ್ ಪ್ಲಾನ್ ಮಾಡ್ತಾ ಇದ್ದೀರಾ ? ಅಥವಾ ಇಂಡಿಯಾ ಕ್ಯಾಪಿಟಲ್‍ನಲ್ಲಿ ಸುತ್ತಾಡಬೇಕು ? ಈಯರ್ ಎಂಡ್‍ನ ಮೈಮರಗಟ್ಟುವ ಚಳಿಯನ್ನು ಎಂಜಾಯ್ ಮಾಡಬೇಕು ಅನ್ನೋ ಪ್ಲಾನ್ ಏನಾದ್ರೂ ಇದ್ಯಾ ? ಇದ್ದರೇ ಮಾತ್ರ ಮಿಸ್ ಮಾಡ್ಕೋ ಬೇಡಿ..! ಯಾಕಪ್ಪ ಅಂದ್ರೆ ನಿಮ್ಮ ಪ್ಲಾನ್‍ನಂತೆ ಬಂದ್ರೆ ನಿಮ್ಮನ್ನು ಸ್ವಾಗತಿಸಲು ಡೆಲ್ಲಿ ಸರ್ಕಾರ ವಿಶೇಷ ಸಿದ್ದತೆ ಮಾಡಿಕೊಂಡಿದೆ.
ವಿಷಯ ಏನಪ್ಪ ಅಂದ್ರೆ ಡೆಲ್ಲಿ ಸರ್ಕಾರ, ದೊಡ್ಡಮಟ್ಟದಲ್ಲಿ `ಡೆಲ್ಲಿ ಶಾಪಿಂಗ್ ಫೆಸ್ಟಿವಲ್' ಆಯೋಜಿಸುತ್ತಿದೆ. ದುನಿಯಾದಲ್ಲೇ ದೊಡ್ಡ ಶಾಪಿಂಗ್ ಫೆಸ್ಟಿವಲ್ ಮಾಡೋದಾಗಿ ಡೆಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಘೋಷಿಸಿದ್ದಾರೆ. ಇಲ್ಲಿಯ ತನಕ ಯಾವ ಸರ್ಕಾರವೂ ಮಾಡಿಲ್ಲ ಅಂಥ ಶಾಪಿಂಗ್ ಫೆಸ್ಟಿವಲ್ ಮಾಡಲು ದೆಹಲಿ ಸರ್ಕಾರ ನಿರ್ಧರಿಸಿದೆ ಎಂದ್ರು.
ದೇವೇಗೌಡ್ರ ಬಗ್ಗೆ ರಾಜಣ್ಣ ವಿವಾದಾತ್ಮಕ ಹೇಳಿಕೆ ಖಂಡಿಸಿದ ಡಿಕೆ ಬ್ರದರ್ಸ್..!
ತಿಂಗಳ ಹಬ್ಬ : ಜನವರಿ 28 ರಿಂದ ಫೆಬ್ರವರಿ 26ರ ತನಕ ಅಂದರೆ 30 ದಿನಗಳ ಕಾಲ ಶಾಪಿಂಗ್ ಫೆಸ್ಟಿವಲ್ ನಡೆಯಲಿದೆ. ಶ್ರೀಮಂತ, ಮಧ್ಯಮ ವರ್ಗ, ಬಡವ, ಯುವಕ, ಯವತಿ, ಹಿರಿಯರು ಹೀಗೆ ಎಲ್ಲರನ್ನೂ ಆರ್ಕಷಿಸುವ ಮಾದರಿಯಲ್ಲಿ ಇರಲಿದೆ ಈ ಶಾಪಿಂಗ್ ಫೆಸ್ಟಿವಲ್. ಇದಕ್ಕಾಗಿ ಹಲವು ತಿಂಗಳುಗಳಿಂದ ದೆಹಲಿ ಸರ್ಕಾರ ಸಿದ್ದತೆ ನಡೆಸಿದೆ. ಕಾರ್ಪೋರೇಟ್ ವಲಯ, ಸರ್ಕಾರ ಕೈ ಜೋಡಿಸಿದ್ದು ಇಡೀ ಇಂಡಿಯಾ ಇತ್ತ ಕಡೆ ತಿರುಗಿ ನೋಡುವಂತೆ ಫೆಸ್ಟಿವಲ್ ಮಾಡಲು ನಿರ್ಧರಿಸಲಾಗಿದೆ ಅಂತ ಕೇಜ್ರವಾಲ್ ಹೇಳಿದರು.
ದೆಹಲಿಯ ಅನುಭವಗಳನ್ನು ಪಡೆಯಲು ಎಲ್ಲರಗೂ ಆಹ್ವಾನ ನೀಡಲಾಗುತ್ತಿದೆ. ದೆಹಲಿಯ ಜನರು, ಅವರ ಸಂಸ್ಕ್ರತಿ, ವಿಜ್ಞಾನ, ಆಹಾರ, ಇತರೆ ಪದ್ಧತಿಗಳು, ಹಾಡು, ಕುಣಿತ ಹೀಗೆ ಹಲವು ವಿಧಗಳಲ್ಲಿ ದೆಹಲಿಯ ಸಂಸ್ಕ್ರತಿಯನ್ನು ಅನಾವರಣ ಮಾಡಲಾಗುತ್ತದೆ. ಯುವಕರಿಗೆ, ಮಕ್ಕಳಿಗೆ, ಫ್ಯಾಮಿಲಿ ಎಲ್ಲರಿಗೂ ಕೂಡ ಇಲ್ಲಿ ಮನರಂಜನೆ ಇರುತ್ತೆ ಎನ್ನುತ್ತಿದೆ ದೆಹಲಿಯ ಸರ್ಕಾರ,
30 ದಿನಗಳು ನಡೆಯುವ ಈ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಕಾರ್ಯಕ್ರಮಗಳು ಇರಲಿವೆ. ಈ ಕಾರ್ಯಕ್ರಮಗಳಲ್ಲಿ ದೆಹಲಿ ಸಂಸ್ಕ್ರತಿ ಅನಾವರಣವಾಗಲಿದೆ. ಇದರ ಸಲುವಾಗಿಯೇ ದೆಹಲಿಗೆ ಬಂದು, ಅನುಭವಗಳನ್ನು ಪಡೆಯಬೇಕು ಅನ್ನೋದು ಆಪ್ ಸರ್ಕಾರದ ಉದ್ದೇಶ. ಈ ಫೆಸ್ಟಿವಲ್‍ನಲ್ಲಿ ಸಿಕ್ಕಾಪಟ್ಟೆ ರಿಯಾಯ್ತಿಗಳು (ಡಿಸ್ಕೌಂಟ್) ದೊರೆಯಲಿವೆ. ಮಾಲ್‍ಗಳು ಸಿಂಗಾರಗೊಳಲಿವೆ. ಪ್ರಮುಖ ಬಜಾರ್‍ಗಳು ಸಿಂಗಾರಗೊಳಲ್ಲಿವೆ. ಪ್ರತಿ ಉತ್ಪನ್ನದ ಮೇಲೂ ಒಂದಲ್ಲೊಂದು ರೀತಿ ಡಿಸ್ಕೌಂಡ್ ದೊರೆಯಲಿದೆ. ಇನ್ನು ಆಧ್ಯಾತ್ಮೀಕತೆ, ವೆಲ್‍ನೆಸ್ (ಆರೋಗ್ಯ), ತಂತ್ರಜ್ಞಾನ, ಆಟಗಳು ಅದರಲ್ಲೂ ಕಂಪ್ಯೂಟರ್ ಗೇಮ್ಸ್ ಜೊತೆಗೆ ಅನಿಯಮಿತ (ಅನ್ ಲಿಮಿಟೆಡ್) ಮನೋರಂಜನೆಗೆ ಜಾಗ ಮಾಡಿಕೊಡಲಾಗಿದೆ. ದೇಶದ ಪ್ರಮುಖ ಕಲಾವಿದರಿಂದ ಹೆಚ್ಚು ಕಡಿಮೆ 200 ಕಾರ್ಯಕ್ರಮಗಳು ನಡೆಸಿಕೊಡಲಾಗುತ್ತದೆ ಅಂಥ ವಿವರಣೆ ನೀಡಿದೆ ದೆಹಲಿ ಸರ್ಕಾರ.
ಡಿಜಿಟಲ್ ತಂತ್ರಜ್ಞಾನದ ಬಳಕೆಯಿಂದ ಸಂಸತ್‌ನಲ್ಲಿ 668 ಕೋಟಿ ರೂಪಾಯಿ ಉಳಿತಾಯ
ಜೊತೆಗೆ ಡೆಲ್ಲಿಯ ಆಹಾರ ಪದಾರ್ಥಗಳು ಎಲ್ಲರೂ ರುಚಿಸಬೇಕು ಅನ್ನೋದು ಡೆಲ್ಲಿ ಸರ್ಕಾರ ಉದ್ದೇಶ ಹಾಗಾಗಿ ದೊಡ್ಡ ದೊಡ್ಡ ರೆಸ್ಟಾರಂಟ್, ಹೋಟಲ್ ಉದ್ಯಮಿಗಳ ಜೊತೆ ಮಾತುಕತೆ ನಡೆಸಿದ್ದು ಇದಕ್ಕಾಗಿಯೇ ಫುಡ್ ಬಜಾರ್‍ಗಳು ಇರಲಿವೆ. ಜೊತೆಗೆ ಡೆಲ್ಲಿಯ ಈ ಶಾಪಿಂಗ್ ಫೆಸ್ಟಿವಲ್‍ನಲ್ಲಿ ಹೆಚ್ಚು ಹೆಚ್ಚು ಮಂದಿ ಭಾಗವಹಿಸಲು ಏರ್ ಟ್ರಾವೆಲ್ರ್ಸ್, ಟೂರ್ ಅಂಡ್ ಟ್ರಾವೆಲರ್ಸ್ ಜೊತೆಯೂ ಮಾತುಕತೆ ನಡೆಸಿದ್ದು ವಿಶೇಷ ಪ್ರವಾಸಿ ಪ್ಯಾಕೇಜ್‍ಗಳು ಮಾಡಿಕೊಳ್ಳಲು ಕೂಡ ಸೂಚಿಸಲಾಗಿದೆ. ಇಂಥ ದೊಡ್ಡ ಶಾಪಿಂಗ್ ಫೆಸ್ಟಿವಲ್ ಮತ್ತಷ್ಟು ಮೆರುಗು ನೀಡಲು ಓಪನಿಂಗ್ ಹಾಗು ಕ್ಲೋಸಿಂಗ್ ವಿಶೇಷ ಸಮಾರಂಭಗಳನ್ನು ಆಯೋಜಿಸಲಾಗಿದೆ ಅಂಥ ವಿವರಿಸಿದರು ಕೇಜ್ರವಾಲ್. ಹಾಗಾಗಿ ಫೆಬ್ರವರಿಯಲ್ಲಿ ಡೆಲ್ಲಿಗೆ ಬರೋದು ಮಿಸ್ ಮಾಡ್ಕೋಬ್ಯಾಡಿ..!