2025ಕ್ಕೆ ಹೊಸ ವ್ಯವಹಾರ ಆರಂಭಿಸಲು ಯೋಚಿಸುತ್ತಿದ್ದೀರಾ? ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ 10 ವ್ಯಾಪಾರಗಳ ಪಟ್ಟಿ ಇಲ್ಲಿದೆ. ಈ ಐಡಿಯಾಗಳು ನಿಮ್ಮ ಆರ್ಥಿಕ ಸ್ವಾತಂತ್ರ್ಯಕ್ಕೆ ನಾಂದಿ ಹಾಡಬಹುದು.
Business Ideas: 2025ಕ್ಕೆ ಹೊಸ ವ್ಯವಹಾರ ಆರಂಭಿಸಬೇಕೆಂದು ಯೋಚನೆ ಮಾಡುತ್ತಿದ್ದೀರಾ? ಇಂದು ನಾವು ನಿಮಗೆ ಕಡಿಮೆ ಬಂಡವಾಳದ 10 ಬ್ಯುಸಿನೆಸ್ ಐಡಿಯಾಗಳನ್ನು ತಂದಿದ್ದೇವೆ. ಈ ವ್ಯವಹಾರ ಆರಂಭಿಸಲು ಯಾವುದೇ ವಿಶೇಷ ತರಬೇತಿಯೂ ಬೇಕಾಗಲ್ಲ. ನೀವು ವಾಸವಾಗಿರುವ ಪ್ರದೇಶದಲ್ಲಿ ನಿಮ್ಮ ಆರ್ಥಿಕ ಶಕ್ತಿಗೆ ಅನುಸಾರವಾಗಿ ಸ್ವಂತದಾದ ವ್ಯವಹಾರ ಆರಂಭಿಸಬಹುದು. ಅಷ್ಟೇ ಅಲ್ಲ ಹಂತ ಹಂತವಾಗಿ ನಿಮ್ಮ ವ್ಯವಹಾರವನ್ನು ವಿಸ್ತರಿಸಿಕೊಳ್ಳುವ ಆಯ್ಕೆಯೂ ಇಲ್ಲಿವೆ. ಈ 10 ವ್ಯವಹಾರಗಳಲ್ಲಿ ಪ್ರತಿನಿತ್ಯವು ಸೀಮಿತ ಲಾಭ ಇದ್ದೇ ಇರುತ್ತದೆ. ಯಾವುದೇ ವ್ಯವಹಾರ ಆರಂಭಿಸಿದ ಮೊದಲ ದಿನದಿಂದಲೇ ಹಾಕಿದ ಎಲ್ಲಾ ಬಂಡವಾಳಕ್ಕೆ ಲಾಭ ಸಿಗಲ್ಲ. ಹಾಗಾಗಿ ವ್ಯಾಪಾರ ಮಾಡೋನಿಗೆ ತಾಳ್ಮೆ ಇರಬೇಕಾಗುತ್ತದೆ.
ಕಡಿಮೆ ಬಂಡವಾಳದ 10 ಬ್ಯುಸಿನೆಸ್ ಐಡಿಯಾಗಳು
1.ಟೀ ಮಾರಾಟ: ಭಾರತದ ಯಾವುದೇ ಭಾಗಕ್ಕೂ ತೆರಳಿದ್ರೂ ಟೀ ಕುಡಿಯುವ ಜನರು ಸಿಗುತ್ತಾರೆ. ಸಣ್ಣದಾದ ಅಂಗಡಿಯಲ್ಲಿ ಈ ವ್ಯಾಪಾರವನ್ನು ಹೆಚ್ಚು ಜನ ಸೇರುವ ಸ್ಥಳದಲ್ಲಿ ಆರಂಭಿಸಬಹುದು..
2.ಮಿಲ್/ಗಿರಣಿ: ಗ್ರಾಮೀಣ ಭಾಗದಲ್ಲಿ ಹಿಟ್ಟು ಮಾಡುವ ಕೇಂದ್ರಗಳಿಗೆ ಭಾರೀ ಬೇಡಿಕೆ ಇದೆ. ನೀವಿರುವ ಸ್ಥಳದಲ್ಲಿಯೇ ಸಣ್ಣ ಪ್ರಮಾಣದಲ್ಲಿ ಈ ಮಿಲ್ ಆರಂಭಿಸಬಹುದು.
undefined
3.ಹಾಲು ಮಾರಾಟ: ವರ್ಷದ ಎಲ್ಲಾ ದಿನದಲ್ಲಿ ಮಾರಾಟವಾಗುವ ವಸ್ತು ಅಂದ್ರೆ ಅದು ಹಾಲು. ಅಧಿಕೃತ ಡೈರಿಗಳಿಂದಲೇ ಅನುಮತಿ ಪಡೆದು ಹಾಲು ಹಾಗೂ ಇನ್ನಿತರ ಉತ್ಪನ್ನಗಳನ್ನು ಮಾರಾಟ ಮಾಡಬಹುದು.
4.ಫಾರ್ಮಸಿ: ನೀವು ಫಾರ್ಮಸಿ ಅಭ್ಯಾಸ ಮಾಡಿದ್ದು, ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಇಷ್ಟವಿರದಿದ್ದರೆ ನಿಮ್ಮದೇ ಆದ ಸ್ವಂತ ಔಷಧ ಮಳಿಗೆ ಆರಂಭಿಸಬಹುದು. ಈ ವ್ಯಾಪಾರದಲ್ಲಿ ಲಾಭದ ಅತ್ಯಧಿಕವಾಗಿರುತ್ತದೆ.
5.ಚಿಲ್ಲರೆ ಅಂಗಡಿ: ದಿನಸಿ ಪದಾರ್ಥ ಸೇರಿದಂತೆ ದಿನನಿತ್ಯ ಜೀವನಕ್ಕೆ ಬೇಕಾಗುವ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಯನ್ನು ಆರಂಭಿಸಬಹುದು. ಇದು ಸಹ ಕಡಿಮೆ ಬಂಡವಾಳದಲ್ಲಿಯೇ ಆರಂಭಿಸಬಹುದು ವ್ಯಾಪಾರವಾಗಿದೆ.
6.ಕೋಳಿ ಫಾರಂ: ಈ ವ್ಯವಹಾರವನ್ನು ಕಡಿಮೆ ಬಂಡಳವಾದಲ್ಲಿ ಆರಂಭಿಸಿ, ಹಂತ ಹಂತವಾಗಿ ವಿಸ್ತರಿಸಿಕೊಳ್ಳುವ ಎಲ್ಲಾ ಅವಕಾಶಗಳು ಇಲ್ಲಿವೆ. ಕೆಲಸದ ಜೊತೆ ಲಾಭದ ಪ್ರಮಾಣ ಉತ್ತಮವಾಗಿರುತ್ತದೆ.
7.ಆಯಿಲ್ ಮಿಲ್: ನಿಮ್ಮೂರಿನಲ್ಲಿ ನಿಮ್ಮದೇ ಆದ ಸಾಂಪ್ರದಾಯಿಕ ಶೈಲಿಯಲ್ಲಿ ಅಡುಗೆ ಎಣ್ಣೆ ಮಾರಾಟ ಮಾಡಬಹುದು. ರೈತರಿಂದ ನೇರವಾಗಿ ಎಣ್ಣೆ ಕಾಳುಗಳನ್ನು ಖರೀದಿಸಿ ಈ ಬ್ಯುಸಿನೆಸ್ ಆರಂಭಿಸಬಹುದು.
8.ಚಿಪ್ಸ್ ಮಾರಾಟ: ಆಲೂಗಡ್ಡೆ, ಬಾಳೆಕಾಯಿ ಸೇರಿದಂತೆ ವಿವಿಧ ಚಿಪ್ಸ್ ಮಾರಾಟ ಮಾಡುವ ಉತ್ತಮ ಹಣ ಸಂಪಾದಿಸಬಹುದು. ನಂತರ ಇತರೆ ಕುರುಕಲು ತಿಂಡಿಗಳನ್ನು ಮಾರಾಟ ಮಾಡಬಹುದಾಗಿದೆ.
ಇದನ್ನೂ ಓದಿ: ತಿಂಗಳಿಗೆ 10 ಸಾವಿರ ಗಳಿಸುತ್ತಿದ್ದವನ ಖಾತೆಯಲ್ಲಿ 2 ಕೋಟಿ ರೂಪಾಯಿ; ಇದು ನಿಮ್ಮ ಸುತ್ತಮುತ್ತವೇ ಇರೋ ಬ್ಯುಸಿನೆಸ್?
9.ಶುಂಠಿ-ಬೆಳ್ಳುಳ್ಳಿ ಪೇಸ್ಟ್: ಇದು ಮಾರುಕಟ್ಟೆಯಲ್ಲಿ ಬೇಡಿಕೆ ಹೊಂದಿರುವ ವಸ್ತುಗಳಲ್ಲಿ ಒಂದಾಗಿದೆ. ಮನೆಯಲ್ಲಿಯೇ ಪೇಸ್ಟ್ ತಯಾರಿಸಿ, ಚಿಕ್ಕ ಪೊಟ್ಟಣಗಳಲ್ಲಿ ಮಾರಾಟ ಮಾಡಬಹುದು. ಹಂತ ಹಂತವಾಗಿ ನಿಮ್ಮದೇ ಬ್ರ್ಯಾಂಡ್ ಸೃಷ್ಟಿಸುವ ಅವಕಾಶಗಳು ಇಲ್ಲಿವೆ.
10.ಸೈಬರ್ ಕೆಫೆ: ಆರಂಭದಲ್ಲಿಒಂದು ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್ ತೆಗೆದುಕೊಂಡು ಸೈಬರ್ ಕೆಫೆ ಆರಂಭಿಸಬಹುದು. ನಂತರ ಕಂಪ್ಯೂಟರ್ ಸಂಖ್ಯೆಗಳನ್ನು ಹೆಚ್ಚಿಸಿಕೊಂಡು ವಿವಿಧ ತರಬೇತಿಗಳನ್ನು ಆರಂಭಿಸಬಹುದು.
Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವುದಿಲ್ಲ. ಯಾವುದೇ ವ್ಯವಹಾರ ಆದ್ರೂ ಅದು ಮಾರುಕಟ್ಟೆಯ ಅಪಾಯಗಳನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ: ಯಾವುದೇ ಡಿಗ್ರಿ ಬೇಡ, ಮನೆಯಂಗಳದಲ್ಲಿಯೇ ವ್ಯವಹಾರ ಆರಂಭಿಸಿ, ವಾರಕ್ಕೆ ₹9 ಸಾವಿರ ಲಾಭ ಸಂಪಾದಿಸಿ