ನಿತ್ಯ ಒಂದಿಷ್ಟು ಕೂದಲು ಉದುರೋದು, ಹುಟ್ಟೋದು ಸಾಮಾನ್ಯ. ಈ ಉದುರಿದ ಕೂದಲನ್ನು ಕಸಕ್ಕೆ ಹಾಕ್ದೆ ಅದ್ರಿಂದ ಹಣ ಮಾಡುವ ಮಹಿಳೆಯರು ಸಾಕಷ್ಟು ಮಂದಿ. ಕೆಲ ಪ್ರದೇಶದಲ್ಲಿ ಇದೊಂದು ದೊಡ್ಡ ವ್ಯವಹಾರವಾಗಿ ಹೊರಹೊಮ್ಮಿದೆ.
ಹಬ್ಬ(festival) ಬರ್ತಿದ್ದಂತೆ ಹಣ್ಣು, ತರಕಾರಿ, ಹೂವಿನ ಬೆಲೆ (Price) ಏರಿಕೆ ಆಗೋದನ್ನು ನೀವು ಕೇಳಿದ್ದೀರಿ. ಆದ್ರೀಗ ಅವಶ್ಯಕ ವಸ್ತು ಮಾತ್ರವಲ್ಲ ಕೂದಲಿನ ಬೆಲೆ ಕೂಡ ಹೆಚ್ಚಾಗಿದೆ. ಹಬ್ಬದ ಸಮಯದಲ್ಲಿ ತಲೆ ಕೂದಲಿ (hair )ನ ಬೆಲೆ ಏರಿದೆ ಅಂದ್ರೆ ನೀವು ನಂಬ್ಲೇಬೇಕು. ಇಷ್ಟು ದಿನ ಕೆ.ಜಿಗೆ 2500 ಇದ್ದ ಕೂದಲ ಬೆಲೆ 3 ಸಾವಿರದವರೆಗೆ ಖರೀದಿಯಾಗ್ತಿದೆ. ಇದು, ಕೂದಲು ಮಾರಾಟಗಾರರು (hair sellers) ಮತ್ತು ಖರೀದಿದಾರರಿಗೆ ಬಂಪರ್ ಎನ್ನಬಹುದು. ಹಿಂದೆ ಉದುರಿದ ಕೂದಲನ್ನು ಮಹಿಳೆಯರು ಕಸಕ್ಕೆ ಹಾಕ್ತಿದ್ದರು. ಆದ್ರೀಗ ಅದನ್ನು ಸಂಗ್ರಹಿಸಿಟ್ಟುಕೊಳ್ತಿದ್ದಾರೆ. ಇದ್ರಿಂದ ಪರಿಸರ ರಕ್ಷಣೆಯಾಗ್ತಿದೆ. ಜೊತೆಗೆ ಸಣ್ಣ ಪ್ರಮಾಣದ ಹಣ ಮಹಿಳೆ ಕೈ ಸೇರುತ್ತಿದೆ.
ಭಾರತದಲ್ಲಿ ಕೂದಲು ಮಾರಾಟ ವ್ಯವಹಾರ ಅತಿ ವೇಗವಾಗಿ ಸಾಗ್ತಿದೆ. ಕೂದಲು ಇದ್ಯಮ್ಮ ಕೂದಲು ಅಂತ ಬೀದಿಯಲ್ಲಿ ಕೂಗ್ತಾ ಬರೋರನ್ನು ಸಾಮಾನ್ಯ ಅಂತ ತಿಳಿಬೇಡಿ. ಅವರು ತಿಂಗಳಿಗೆ ಸಾವಿರಾರು ರೂಪಾಯಿ ಹಣ ಗಳಿಸ್ತಾರೆ. ಈಗ ಕೂದಲಿಗೆ ಇರುವ ಬೆಲೆಯೇ ಇದಕ್ಕೆ ಕಾರಣ. ಕೂದಲು ಉದುರ್ತಾ ಇದೆ ಅಂತ ಟೆನ್ಷನ್ ಮಾಡ್ಕೊಳ್ತಿದ್ದ ಕೆಲ ಮಹಿಳೆಯರು ಇದನ್ನೇ ಈಗ ಆದಾಯಕ್ಕೆ ಬಳಸಿಕೊಳ್ತಿದ್ದಾರೆ. ಪ್ರತಿ ದಿನ ಉದುರುವ ಕೂದಲನ್ನು ಸಂಗ್ರಹಿಸಿ ಅದನ್ನು ವಾರ ಅಥವಾ ತಿಂಗಳಿಗೊಮ್ಮೆ ಮಾರಾಟ ಮಾಡ್ತಿದ್ದಾರೆ.
undefined
ಬಾಲಿವುಡ್‌ನ ರಿಚೆಸ್ಟ್ ಕಿಡ್ ಈ ಗ್ರೀಕ್ ಗಾಡ್: ಇಷ್ಟೊಂದು ಶ್ರೀಮಂತನಾ ಹೃತಿಕ್ ರೋಷನ್?
ಭಾರತದ ಮೂಲೆ ಮೂಲೆಗೆ ಕೂದಲು ಖರೀದಿ ವ್ಯಾಪಾರಿಗಳು ಬರ್ತಾರೆ. ಅವರು ಕೂದಲಿನ ತೂಕ ನೋಡಿ ಅದಕ್ಕೆ ತಕ್ಕಂತೆ ಹಣವನ್ನು ನೀಡ್ತಾರೆ. ಕೆಲವರು ಕೂದಲಿನ ಬದಲು ಪಾತ್ರೆಗಳನ್ನು ನೀಡ್ತಾರೆ. ಯಾವುದು ಬೇಕೆ ಎಂಬುದು ಮಹಿಳೆಯರ ಆಯ್ಕೆ. ಕೂದಲು ಸಂಗ್ರಹಿಸಿಟ್ಟುಕೊಳ್ಳುವ ಮಹಿಳೆಯರು, ಖರೀದಿದಾರರು ಬರ್ತಿದ್ದಂತೆ ಅವರಿಗೆ ಕೂದಲು ನೀಡ್ತಾರೆ. ಅಗತ್ಯವಿದ್ರೆ ಪಾತ್ರೆ ಇಲ್ಲವೆ ಹಣವನ್ನು ಪಡೆಯುತ್ತಾರೆ. ಕೆಲವರು ಖರೀದಿದಾರರ ನಂಬರ್ ಇಟ್ಕೊಂಡಿದ್ದು, ಕೂದಲಿನ ಸಂಗ್ರಹ ಹೆಚ್ಚಾದಂತೆ ಖರೀದಿದಾರರಿಗೆ ಕರೆ ಮಾಡಿ, ಕೂದಲನ್ನು ಮಾರಾಟ ಮಾಡ್ತಾರೆ. ಕೂದಲು ಖರೀದಿ ಮಾಡಿದ ವ್ಯಾಪಾರಸ್ಥರು ಅದನ್ನು ದೊಡ್ಡ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ಹೆಚ್ಚಿನ ಹಣವನ್ನು ಗಳಿಸ್ತಾರೆ.
ತಿಂಗಳಲ್ಲಿ ಸಣ್ಣ ನಗರದಲ್ಲೇ 1500 ಕಿಲೋಗಿಂತ ಹೆಚ್ಚು ಕೂದಲು ಸಂಗ್ರಹವಾಗುತ್ತದೆ. ಅದನ್ನು ಮುಂಬೈ, ದೆಹಲಿ, ಬೆಂಗಳೂರು ಸೇರಿದಂತೆ ದೊಡ್ಡ ನಗರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಅದನ್ನು ಸಂಸ್ಕೃರಿಸಿ, ಬೇರೆ ಬೇರೆ ವಸ್ತುಗಳನ್ನು ತಯಾರಿಸಲಾಗುತ್ತದೆ. ವಿಗ್ ಸೇರಿದಂತೆ ಅನೇಕ ಕೂದಲಿಗೆ ಸಂಬಂಧಿಸಿದ ವಸ್ತುಗಳು ಸಿದ್ಧವಾಗುತ್ತಿದ್ದು, ಅದಕ್ಕೆ ಬೇಡಿಕೆ ಹೆಚ್ಚಿದೆ. ಚೀನಾ, ಅಮೆರಿಕ, ಬ್ರಿಟನ್, ಮಲೇಷ್ಯಾ, ಥಾಯ್ಲೆಂಡ್, ಬಾಂಗ್ಲಾದೇಶ, ಶ್ರೀಲಂಕಾ, ಮಾಲ್ಡೀವ್ಸ್, ಬರ್ಮಾ ಮತ್ತು ಯುರೋಪ್‌ನಲ್ಲಿ ಭಾರತದ ವರ್ಜಿನ್ ಹೇರ್ ಮತ್ತು ರೆಮಿ ಹೇರ್‌ಗೆ ಬೇಡಿಕೆ ಹೆಚ್ಚಾಗಿದೆ. ಕಸ್ಟಮೈಸ್ ವಿಗ್ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗ್ತಿದೆ. ಚೀನಾ, ಮಾನವನ ಕೂದಲನ್ನು ಖರೀದಿ ಮಾಡುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಐಷಾರಾಮಿ ಹೋಟೆಲ್ ನಲ್ಲಿ ಉಳಿದ್ಕೊಂಡ್ರೂ ಕೈ ಖಾಲಿಯಾಗ್ಲಿಲ್ಲ, ಕ್ರೆಡಿಟ್ ಕಾರ್ಡ್ ಬಳಸಿ 3 ಲಕ್ಷ
ಉದ್ದ ಕೂದಲು ಹಾಗೂ ಚಿಕ್ಕ ಕೂದಲಿಗೆ ಬೇರೆ ಬೇರೆ ಬೆಲೆ ಹಾಗೂ ಬೇಡಿಕೆಯಿದೆ. ಭಾರತದ ಕೂದಲಿಗೆ ವಿದೇಶದಲ್ಲಿ ಹೆಚ್ಚು ಬೇಡಿಕೆ ಇರಲು ಕಾರಣವೆಂದ್ರೆ, ಭಾರತೀಯ ಕೂದಲು ಶುದ್ಧವಾಗಿದೆ. ಅವುಗಳಿಗೆ ಯಾವುದೇ ರೀತಿಯ ರಾಸಾಯನಿಕವನ್ನು ಬಳಸಲಾಗುವುದಿಲ್ಲ. 2023ರಲ್ಲಿ ಈ ಕೂದಲು ಮಾರುಕಟ್ಟೆ 73 ಸಾವಿರ ಕೋಟಿ ದಾಟಿದೆ. ಈ ವರ್ಷ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕೂದಲು ಮಾರುಕಟ್ಟೆ ಎಷ್ಟು ವಿಸ್ತಾರವಾಗಿದೆ ಅಂದ್ರೆ ಕೂದಲಿನ ನಕಲಿ ಮಾರಾಟದಲ್ಲೂ ಹೆಚ್ಚಳ ಕಂಡು ಬಂದಿದೆ. ಭಾರತ – ಬಾಂಗ್ಲಾ ಗಡಿಯಲ್ಲಿ, ಗಡಿಭದ್ರತಾ ಪಡೆಗಳು ಅಕ್ರಮ ಕೂದಲು ಮಾರಾಟಗಾರರನ್ನು ಬಂಧಿಸಿದ್ದರು.