ನೇಪಾಳದ ಏಕೈಕ ಬಿಲಿಯೇನರ್ ಆಗಿರುವ ಇವರ ಕಂಪನಿಯ ಉತ್ಪನ್ನ ಭಾರತದ ಮಾರುಕಟ್ಟೆಯಲ್ಲಿಯೂ ಮಾರಾಟವಾಗುತ್ತದೆ.
ಬೆಂಗಳೂರು: ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಅಂದ್ರೆ ಅದು ಎಲನ್ ಮಸ್ಕ್. ರಿಲಯನ್ಸ್ ಇಂಡಸ್ಟ್ರಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಭಾರತದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಫೋರ್ಬ್ಸ್ ವರದಿ ಪ್ರಕಾರ, ಎಲನ್ ಮಸ್ಕ್ ಆಸ್ತಿ 247 ಬಿಲಿಯನ್ ಡಾಲರ್ ಆಗಿದ್ರೆ, ಮುಕೇಶ್ ಅಂಬಾನಿ ಬಳಿ 107.41 ಬಿಲಿಯನ್ ಡಾಲರ್ ಆಸ್ತಿ ಇದೆ. ಭಾರತದ ನೆರೆಯ ರಾಷ್ಟ್ರವಾಗಿರುವ ನೇಪಾಳದ ಓರ್ವ ಉದ್ಯಮಿ ಮಾತ್ರ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ನೇಪಾಳದ ಉದ್ಯಮಿ ಬಿನೋದ್ ಚೌಧರಿ ಅವರ ನಿವ್ವಳ ಆಸ್ತಿ 1.8 ಬಿಲಿಯನ್ ಡಾಲರ್ ಆಗಿದ್ದು, ಇವರ ಕಂಪನಿಯ ಉತ್ಪನ್ನ ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತದೆ. ಮ್ಯಾಗಿ ಅಂತಹ ದೊಡ್ಡ ಕಂಪನಿಗೆ ಬಿನೋದ್ ಚೌಧರಿ ಅವರ ಉತ್ಪನ್ನ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆಯನ್ನು ನೀಡುತ್ತಿದೆ.
ಫೋರ್ಬ್ಸ್ ಪ್ರಕಾರ, ಬಿನೋದ್ ಚೌಧರಿ ನೇಪಾಳದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ದೇಶದ ಏಕೈಕ ಬಿಲಿಯೇನರ್ ಆಗಿರುವ ಬಿನೋದ್ ಚೌಧರಿ ಅವರು ಜನಪ್ರಿಯ ಇನ್‌ಸ್ಟಂಟ್ ನೂಡಲ್ಸ್ ಬ್ರಾಂಡ್ ವಾಯಿ-ವಾಯಿ (Wai-Wai) ಸ್ಥಾಪಕರಾಗಿದ್ದಾರೆ. ಭಾರತದ ಮಾರುಕಟ್ಟೆಯಲ್ಲಿ ಮ್ಯಾಗಿ ನೂಡಲ್ಸ್‌ಗೆ Wai-Wai ತೀವ್ರ ಸ್ಪರ್ಧೆಯನ್ನು ನೀಡುತ್ತಿದೆ. ನೇಪಾಳದ ಅರ್ಥವ್ಯವಸ್ಥೆಯಲ್ಲಿ ಬಿನೋದ್ ಚೌಧರಿ ಪ್ರಮುಖ ಪಾತ್ರವಹಿಸುತ್ತಾರೆ.
ಕಠ್ಮಂಡು ನಗರದ ವ್ಯಾಪಾರಿ ಕುಟುಂಬದಲ್ಲಿ ಜನಿಸಿದ ಬಿನೋದ್ ಚೌಧರಿ ಅವರು ಬಾಲ್ಯದಿಂದಲೂ ಬ್ಯುಸಿನೆಸ್‌ನತ್ತ ಹೆಚ್ಚು ಆಕರ್ಷಿತರಾಗಿದ್ದರು. ಜೆಆರ್‌ಡಿ ಟಾಟಾ ಮತ್ತು ನಟ ಅಮಿತಾಬ್ ಬಚ್ಚನ್ ಅಂತಹ ಮಹಾನ್ ನಾಯಕರಿಂದ ಸ್ಪೂರ್ತಿ ಪಡೆದುಕೊಂಡಿದ್ದಾರೆ. ತಮ್ಮ ಯಶಸ್ಸಿಗೆ ಕಠಿಣ ಪರಿಶ್ರಮವೇ ಎಂದು ಬಿನೋದ್ ಚೌಧರಿ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಕನಸುಗಳು ನನಸು ಮಾಡಿಕೊಳ್ಳವುದಕ್ಕ ಕಠಿಣ ಪರಿಶ್ರಮದಿಂದ ಕೆಲಸ ಮಾಡಬೇಕು ಎಂದು ಚೌಧರಿ ಹೇಳುತ್ತಾರೆ.
ಒಂದು ಬಾರಿ ಥೈಲ್ಯಾಂಡ್ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ಅಲ್ಲಿಯ ಜನರು ಇನ್‌ಸ್ಟಂಟ್ ನೂಡಲ್ಸ್ ಬಳಕೆ ಮಾಡೋದನ್ನು ಗಮನಿಸಿದ್ದರು. ಇನ್‌ಸ್ಟಂಟ್ ನೂಡಲ್ಸ್ ಥೈಲ್ಯಾಂಡ್‌ನ ಜನಪ್ರಿಯ ಆಹಾರಗಳಲ್ಲಿ ಒಂದಾಗಿದೆ. ಈ ಆಹಾರದಿಂದ ಪ್ರೇರಣೆ ಪಡೆದ ಬಿನೋದ್ ಚೌಧರಿ, ನೇಪಾಳಕ್ಕೆ ಬಂದು Wai-Wai ಹೆಸರಿನ ಇನ್‌ಸ್ಟಂಟ್ ನೂಡಲ್ಸ್ ಆರಂಭಿಸಿದರು. ಕ್ವಿಕ್ ಕುಕ್ಕಿಂಗ್‌ನಿಂದಾಗಿ ಕಡಿಮೆ ಸಮಯದಲ್ಲಿಯೇ Wai-Wai ನೂಡಲ್ಸ್ ನೇಪಾಳದಲ್ಲಿ ಬಹುಬೇಗ ಫೇಮಸ್ ಆಯ್ತು. ಇದೀಗ ಭಾರತ ಸೇರಿದಂತೆ ಹಲವು ದೇಶಗಳಲ್ಲಿ Wai-Wai ನೂಡಲ್ಸ್ ಮಾರುಕಟ್ಟೆಯನ್ನು ಹೊಂದಿದೆ.
ಎಸ್‌ಬಿಐನ ಎರಡು ಸ್ಕೀಂಗಳು ಗ್ರಾಹಕರನ್ನು ಮಾಡ್ತಿವೆ ಕೋಟ್ಯಧಿಪತಿ; ಹಿರಿಯ ನಾಗರೀಕರಿಗೆ ಹೆಚ್ಚು ಲಾಭ
ಬಿನೋದ್ ಚೌಧರಿ ಕೇವಲ Wai-Wai ನೂಡಲ್ಸ್‌ಗೆ ಮಾತ್ರ ಸೀಮಿತವಾಗಿಲ್ಲ. ನ್ಯಾಷನಲ್ ಪ್ಯಾನಾಸೋನಿಕ್‌ನಲ್ಲಿಯೂ ಬಿನೋದ್ ಚೌಧರಿ ಪಾಲುದಾರಿಕೆಯನ್ನು ಹೊಂದಿದ್ದಾರೆ. ನೇಪಾಳದ ಮಾರುಕಟ್ಟೆಯಲ್ಲಿ ಸುಜುಕಿ ಕಾರ್ ತರುವ ಪ್ರಯತ್ನದಲ್ಲಿರುವ ಬಿನೋದ್ ಚೌಧರಿ, ಹೊಸ ಅನ್ವೇಷನಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಹೆಚ್ಚು ಆಸಕ್ತರಾಗಿರುತ್ತಾರೆ. ಇದರ ಜೊತೆ ಹಲವು ವಲಯಗಳಲ್ಲಿ ಬಿನೋದ್ ಚೌಧರಿ ಬಂಡವಾಳ ಹೂಡಿಕೆ ಮಾಡಿದ್ದಾರೆ.
1990ರಲ್ಲಿ ಸಿಂಗಾಪುರದಲ್ಲಿ ಸಿನೋವೇಷನ್ ಗ್ರೂಪ್ ಹೆಸರಿನ ಕಂಪನಿಯನ್ನು ಸಹ ಆರಂಭಿಸಿದ್ದಾರೆ. 1995ರಲ್ಲಿ ದುಬೈ ಸರ್ಕಾರದ ಅಧೀನದ ನಾಬಿಲ್ ಬ್ಯಾಂಕ್‌ನಲ್ಲಿಯೂ ವಿಶೇಷ ಪಾಲುದಾರಿಕೆ ಪಡೆದುಕೊಂಡರು. ಈ ಒಪ್ಪಂದ ಬಿನೋದ್ ಚೌಧರಿಯವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಿತು ಎಂದು ವರದಿಯಾಗಿದೆ.
ಬಿನೋದ್ ಚೌಧರಿ ಅಕೌಂಟಿಂಗ್ ವಿಷಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಭಾರತದಲ್ಲಿ ಚಾರ್ಟೆಡ್ ಅಕೌಂಟೆನ್ಸಿ ಅಭ್ಯಾಸ ಮಾಡಬೇಕು ಕನಸು ಕಂಡಿದ್ದರು. ತಂದೆ ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆ ಕುಟುಂಬದ ವ್ಯವಹಾರ ನೋಡಿಕೊಳ್ಳುವ ಜವಾಬ್ದಾರಿ ಬಿನೋದ್ ಅವರ ಹೆಗಲಿಗೆ ಶಿಫ್ಟ್ ಆಯ್ತು. ಕುಟುಂಬದ ವ್ಯವಹಾರ ನೋಡಿಕೊಳ್ಳುತ್ತಾ ತಮ್ಮ ಕೌಶಲ್ಯದಿಂದ ಇಂದು ನೇಪಾಳದ ಅತಿ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಕಂಗಾಲು ಪಾಕಿಸ್ತಾನದ ಟಾಪ್ 10 ಶ್ರೀಮಂತರ ಪಟ್ಟಿ; ಅಂಬಾನಿ ಒಬ್ಬರೇ ಇವರೆಲ್ಲರನ್ನೂ ಖರೀದಿಸಬಹುದು!