ಹ್ಯುಂಡೈ ಮೋಟಾರ್​ ಇಂಡಿಯಾ ಷೇರು ಶೇ.3ರಷ್ಟು ಕುಸಿತ: ಐಪಿಓ ಹೂಡಿಕೆದಾರರು ಕಂಗಾಲು

By Suchethana D  |  First Published Oct 22, 2024, 11:40 AM IST

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಷೇರು ಷೇರುಪೇಟೆಗೆ ಎಂಟ್ರಿಕೊಟ್ಟಿದ್ದು,  ಹೂಡಿಕೆದಾರರಿಗೆ ನಿರಾಸೆ ಉಂಟು ಮಾಡಿದೆ. ಆಗಿದ್ದೇನು? 
 


ಭಾರತದ ಎರಡನೇ ಅತಿದೊಡ್ಡ ಕಾರು ತಯಾರಕ ಕಂಪನಿ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಷೇರು ಇಂದು (ಮಂಗಳವಾರ) ಷೇರುಪೇಟೆಗೆ ಎಂಟ್ರಿಕೊಟ್ಟಿದ್ದು,  ಹೂಡಿಕೆದಾರರಿಗೆ ನಿರಾಸೆ ಉಂಟು ಮಾಡಿದೆ.  ಹ್ಯುಂಡೈ ಮೋಟಾರ್‌ ಇಂಡಿಯಾ ಐಪಿಒ ಲಿಸ್ಟಿಂಗ್‌ ದಿನದಂದು ಲಾಭ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದ ಐಪಿಒ ಪ್ರಿಯರು ಈ ಬೆಳವಣಿಗೆಯಿಂದಾಗಿ ತೀವ್ರ ನಿರಾಶರಾಗಿದ್ದಾರೆ.  IPOಗೆ ಅರ್ಜಿ ಸಲ್ಲಿಸಿ, ವಿತರಣೆ ಪಡೆದುಕೊಂಡವರು  ಇಂದು ಬೆಳಿಗ್ಗೆ  ತಮ್ಮ ಪೋರ್ಟ್‌ಪೊಲಿಯೋ ನೋಡಿದ್ದರು.  GMP  ಮುನ್ಸೂಚನೆ ನೀಡಿದ್ದರ ಅನ್ವಯ ಪ್ರತಿಷೇರಿಗೆ ಸುಮಾರು ಶೇಕಡಾ 3ರಷ್ಟು ದರ ಹೆಚ್ಚಾಗುವ ಸೂಚನೆ ಲಭಿಸಿತ್ತು.  ಆದರೆ, IPOಗೆ ನೀಡಿರುವ ದರಕ್ಕಿಂತಲೂ ಶೇಕಡಾ 1.32 ರಷ್ಟು ಕಮ್ಮಿ ದರದಲ್ಲಿ ಹ್ಯುಂಡೈ ಮೋಟಾರ್‌ IPO ಲಿಸ್ಟ್‌ ಆಗಿದೆ. ಪ್ರತಿಷೇರಿಗೆ IPO ದರ 1,960 ರೂಪಾಯಿ ಇತ್ತು. ಆದರೆ, 1,934 ರೂಪಾಯಿಗೆ ಲಿಸ್ಟ್‌ ಆಗಿತ್ತು. ಈಗ 11 ಗಂಟೆ ಸಮಯದಲ್ಲಿ  ಶೇಕಡಾ 2ರ ಆಸುಪಾಸಿನಲ್ಲಿ ಇಳಿಕೆ ಹಾದಿಯಲ್ಲಿಯೇ ಮುನ್ನೆಡೆಯುತ್ತಿದೆ.

ದಕ್ಷಿಣ ಕೊರಿಯಾದ ವಾಹನ ತಯಾರಕ ಕಂಪನಿ ಹ್ಯುಂಡೈನ ಭಾರತೀಯ ಅಂಗಸಂಸ್ಥೆಯಾದ ಹುಂಡೈ ಮೋಟಾರ್ ಇಂಡಿಯಾ ತನ್ನ ಆರಂಭಿಕ ಷೇರು ಮಾರಾಟಕ್ಕೆ ನೀರಸ ಪ್ರಕ್ರಿಯೆ ಪಡೆದುಕೊಂಡಿದೆ. ಅರ್ಹ ಸಾಂಸ್ಥಿಕ ಖರೀದಿದಾರರಿಂದ ಉತ್ತಮ ಬೇಡಿಕೆ ಪಡೆದುಕೊಂಡಿತ್ತು. ಭಾರತದ ಐಪಿಒ ಇತಿಹಾಸದಲ್ಲಿಯೇ ಅತಿದೊಡ್ಡ ಐಪಿಒ ಎಂಬ ಖ್ಯಾತಿಗೆ ಹ್ಯುಂಡೈ ಪಾತ್ರವಾಗಿದೆ. ಆದರೆ, ಜಿಎಂಪಿ ವಿಷಯದಲ್ಲಿ ಸಾಕಷ್ಟು ಚಂಚಲ ವಾತಾವರಣ ಇತ್ತು. 27,870 ಕೋಟಿ ರೂಪಾಯಿ IPO 2.3 ಪಟ್ಟು ಬಿಡ್‌ ಪಡೆದಿದ್ದು, ಕೊನೆಯ ದಿನದ ಬಿಡ್ ವೇಳೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಚಂದಾದಾರಿಕೆ ಪಡೆದಿತ್ತು. ಆದರೆ ಕಂಪೆನಿಯ ಷೇರು ಹೂಡಿಕೆದಾರರಿಗೆ ಭಾರೀ ನಿರಾಸೆ ಮೂಡಿಸಿದೆ. ಈ ಸ್ಟಾಕ್‌ ಬೆಳಿಗ್ಗೆ 10.21ಕ್ಕೆ ಎನ್‌ಎಸ್‌ಇನಲ್ಲಿ ಪ್ರತಿ ಷೇರಿಗೆ 1,860.25 ರೂಪಾಯಿಗಳಂತೆ ವಹಿವಾಟು ನಡೆಸುತ್ತಿದೆ ಮತ್ತು 3.81% ಇಳಿಕೆಯಾಗಿದೆ. ಇನ್ನು ಬಿಎಸ್‌ಇನಲ್ಲಿ ಪ್ರತಿ ಷೇರಿಗೆ 1,866.65 ರಂತೆ ವಹಿವಾಟು ನಡೆಸಿದ್ದು, 4.76% ಕುಸಿತ ಕಂಡಿದೆ. 

Tap to resize

Latest Videos

ವಾರೀ ಎನರ್ಜೀಸ್ ಐಪಿಒ: ಹೂಡಿಕೆ ಮಾಡುವ ಮುನ್ನ ಇದನ್ನು ತಿಳಿದುಕೊಳ್ಳಿ
 
ಕಡಿಮೆ ಜಿಎಂಪಿ ಇದ್ದ ಕಾರಣ ಹೂಡಿಕೆದಾರರು ಈ  ಜನರು IPO ದಿಂದ ದೂರ ಉಳಿದಿದ್ದರು.  ಆದರೆ, ದೀರ್ಘಕಾಲದ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಹಲವಾರು ಮಂದಿ  ಅರ್ಜಿ ದಾಖಲಿಸಿದ್ದರು.  ಆದರೆ ಈಗ ಷೇರು ಲಿಸ್ಟ್‌ ಆದ ಬಳಿಕ ಇನ್ನಷ್ಟು ದರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಹ್ಯುಂಡೈ ಮೋಟಾರ್‌ ಇಂಡಿಯಾದ ಷೇರುಗಳನ್ನು ಖರೀದಿಸುವ ಸಾಧ್ಯತೆ ಇದೆ.

ಕಂಪೆನಿಯು IPO  ಮೂಲಕ ಷೇರುಗಳನ್ನು ಪಡೆದು ಕೂಡಲೇ  ಮಾರಾಟ ಮಾಡಿದರೆ ನಷ್ಟವಾಗುವುದು ಗ್ಯಾರೆಂಟಿ.  ಹಾಕಿರುವ ಹಣ ವಾಪಸ್​ ಬರಲಿ ಎಂದುಕೊಳ್ಳುವವರು  ಈ ಷೇರುಗಳು ಪ್ಲಸ್‌ ಆಗುವವರೆಗೆ ಕಾಯಬೇಕಾಗುತ್ತದೆ.  ಪ್ಲಸ್‌ 18ರ ಮೇಲೆ ಆದರೆ ಅದು ನಷ್ಟಕ್ಕೆ ದಾರಿ ಮಾಡಿಕೊಡುತ್ತದೆ.   ಅಲ್ಪಾವಧಿ ಷೇರು ಮಾರಾಟಕ್ಕೆ ಶೇಕಡ 18 ತೆರಿಗೆ ಕಟ್ಟುವ ಕಾರಣ ಈ ಷೇರು ದರ ಶೇಕಡಾ 18ಕ್ಕಿಂತ ಮೇಲಕ್ಕೆ ಹೋದಾಗ ಮಾರಾಟ ಮಾಡಲು ಕೆಲವರು ಕಾತರದಿಂದ ಕಾಯುತ್ತಿದ್ದಾರೆ. 
 

ಹೊಸ ITR Portal 3.0 ಶೀಘ್ರ ಆರಂಭ; ಅದರ ವೈಶಿಷ್ಟ್ಯ ಮತ್ತು ವಿವರಗಳ ಬಗ್ಗೆ ತಿಳಿಯಿರಿ

click me!