ಹಣಕಾಸು ಸಚಿವಾಲಯದ ಹೇಳಿಕೆಯ ಪ್ರಕಾರ, ಸರ್ಕಾರವು ತನ್ನ ಅತ್ಯಧಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವನ್ನು ಏಪ್ರಿಲ್ 2022 ರಲ್ಲಿ ಮಾಡಿದ್ದು, ಸಾರ್ವಕಾಲಿಕ ದಾಖಲೆಯ ಸುಮಾರು 1.68 ಲಕ್ಷ ಕೋಟಿ ರೂ. ಹಣವನ್ನು ಸಂಗ್ರಹ ಮಾಡಿದ್ದಾಗಿ ತಿಳಿಸಿದೆ.
ನವದೆಹಲಿ (ಮೇ.1): ಕೇಂದ್ರ ಹಣಕಾಸು ಇಲಾಖೆ (Finance Ministry) ಏಪ್ರಿಲ್ ನಲ್ಲಿ ಸಂಗ್ರಹವಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಮಾಸಿಕ ಮಾಹಿತಿಯನ್ನು ನೀಡಿದ್ದು, 2022ರ ಏಪ್ರಿಲ್ ಲ್ಲಿ ಜಿಎಸ್ ಟಿ ಸಂಗ್ರಹ (GST Collection) 1.68 ಲಕ್ಷ ಕೋಟಿಗೆ ಏರಿದ್ದು, ಇದು ಸಾರ್ವಕಾಲಿಕ ಗರಿಷ್ಠ ಎಂದು ಹಣಕಾಸು ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಏಪ್ರಿಲ್‌ನಲ್ಲಿನ ಒಟ್ಟು ಜಿಎಸ್‌ಟಿ (GST) ಸಂಗ್ರಹವು ಮಾರ್ಚ್‌ನಲ್ಲಿ ಸಂಗ್ರಹ ಮಾಡಿದ್ದ 1.42 ಲಕ್ಷ ಕೋಟಿ ರೂಪಾಯಿಗಳ ಈವರೆಗಿನ ದಾಖಲೆಗಿಂತ ಹೆಚ್ಚಿನ ಮೊತ್ತವಾಗಿದೆ. ಮಾರ್ಚ್ (March) ತಿಂಗಳಲ್ಲಿ ಮಾಡಿರುವ ಜಿಎಸ್ ಟಿ ಸಂಗ್ರಹಕಕ್ಕಿಂತ ಏಪ್ರಿಲ್ (April) ತಿಂಗಳಲ್ಲಿ 25 ಸಾವಿರ ಕೋಟಿ ರೂಪಾಯಿ ಅಧಿಕ ಜಿಎಸ್ ಟಿ ಸಂಗ್ರಹವನ್ನು ಮಾಡಲಾಗಿದೆ ಎಂದು ತಿಳಿಸಿದೆ.
ಏಪ್ರಿಲ್ ತಿಂಗಳ ಆರಂಭದಲ್ಲಿಯೇ ಹಣಕಾಸು ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ, ಏಪ್ರಿಲ್ ತಿಂಗಳಲ್ಲಿ ಭಾರತದ ಜಿಎಸ್ ಟಿ ಸಂಗ್ರಹ ದಾಖಲೆ 1.50 ಕೋಟಿ ರೂಪಾಯಿ ದಾಟಬಹುದು ಎಂದು ವಿಶ್ಲೇಷಕರು ಅಂದಾಜು ಮಾಡಿದ್ದರು.
GST collections of April of Rs 1.67 lakh crore include CGST Rs 33,159 crore, SGST Rs 41,793 crore, IGST Rs 81,939 crore (including Rs 36,705 crore collected on import of goods) & cess Rs 10,649 crore (including Rs 857 crore collected on import of goods). (2/5) pic.twitter.com/D8G6VXD6d1
— NSitharamanOffice (@nsitharamanoffc)
ಹಾಲಿ ಹಣಕಾಸು ವರ್ಷದ 2022ರಲ್ಲಿ 14.83 ಲಕ್ಷ ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹ ಮಾಡಲಾಗಿದ್ದು, 2021ರ ಹಣಕಾಸು ವರ್ಷದಲ್ಲಿ ಮಾಡಿದ್ದ ಸಂಗ್ರಹಕ್ಕಿಂತ ಶೇ.30ರಷ್ಟು ಹೆಚ್ಚಾಗಿದೆ. 2021ರ ಹಣಕಾಸು ವರ್ಷದಲ್ಲಿ 11.37 ಲಕ್ಷ ಕೋಟಿ ರೂಪಾಯಿ ಸಂಗ್ರಹ ಮಾಡಲಾಗಿತ್ತು.
ವಂಚನೆ-ವಿರೋಧಿ ಚಟುವಟಿಕೆಗಳ (anti-evasion activities) ಜೊತೆಗೆ ನಡೆಯುತ್ತಿರುವ ಆರ್ಥಿಕ ಚೇತರಿಕೆ ಮತ್ತು ಸುಂಕ ರಚನೆಗಳನ್ನು ಸರಿಪಡಿಸಲು ಜಿಎಸ್‌ಟಿ ಕೌನ್ಸಿಲ್ ಕೈಗೊಂಡ ವಿವಿಧ ದರಗಳ ತರ್ಕಬದ್ಧ ಕ್ರಮಗಳು ( various rate rationalisation measures ) ಜಿಎಸ್‌ಟಿ ಸಂಗ್ರಹಗಳಲ್ಲಿ ಹೆಚ್ಚಳಕ್ಕೆ ಕಾರಣವೆಂದು ಹಣಕಾಸು ಸಚಿವಾಲಯ ಹೇಳಿದೆ.
ಏಪ್ರಿಲ್ 2022 ರ ಒಟ್ಟು GST ಆದಾಯವು 1,67,540 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ, ಅದರಲ್ಲಿ ಸಿಜಿಎಸ್ ಟಿ ( CGST ) 33,159 ಕೋಟಿ ರೂಪಾಯಿಗಳು, ಎಸ್ ಜಿಎಸ್ ಟಿ ( SGST) 41,793 ಕೋಟಿ ರೂಪಾಯಿ ಆಗಿದ್ದರೆ, , ಐಜಿಎಸ್ ಟಿ ( IGST ) 81,939 ಕೋಟಿ ರೂಪಾಯಿಗಳು (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 36,705 ಕೋಟಿ ರೂಪಾಯಿಗಳು ಸೇರಿದಂತೆ) ಮತ್ತು 10,649 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ ರೂ 857 ಕೋಟಿ ಸೇರಿದಂತೆ) ಎಂದು ಮಾಹಿತಿ ನೀಡಿದ್ದಾರೆ.
GST ಹೆಚ್ಚಳದ ಭೀತಿ ದೂರ; ಶೇ.5 ತೆರಿಗೆ ಸ್ಲ್ಯಾಬ್ ಶೇ.8ಕ್ಕೆ ಏರಿಕೆ ವರದಿಯಲ್ಲಿ ಹುರುಳಿಲ್ಲ: ಕೇಂದ್ರ ಸರ್ಕಾರ
ಜಿಎಸ್‌ಟಿ ಸಂಗ್ರಹಗಳು ಹೆಚ್ಚುತ್ತಿರುವಾಗ, ತೆರಿಗೆ ದರಗಳನ್ನು (Ta Slab) ತರ್ಕಬದ್ಧಗೊಳಿಸಲು ಚರ್ಚೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ. ಏಪ್ರಿಲ್ 25 ರಂದು ಹಣಕಾಸು ಸಚಿವಾಲಯವು, ದರಗಳ ಕುರಿತು ಚರ್ಚಿಸಲು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಚಿಸಲಾದ ಮಂತ್ರಿಗಳ ಗುಂಪು (Group of Ministers) ಇನ್ನೂ ತಮ್ಮ ವರದಿಯನ್ನು ಸಲ್ಲಿಸಿಲ್ಲ ಎಂದು ಹೇಳಿದೆ.
GST Rules: ಏ.1ರಿಂದ ಹೊಸ ನಿಯಮ ಜಾರಿ; ಭಾರತದ ಲಕ್ಷಾಂತರ ಕಂಪೆನಿಗಳಿಗೆ ಎದುರಾಗಲಿದೆ ಹೊಸ ಸವಾಲು
ಜಿಎಸ್ ಟಿ ಸಂಗ್ರಹದಲ್ಲಿ ಏರಿಕೆ: ಜೂನ್ 2021ರಲ್ಲಿ92,800 ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿದ್ದರೆ, ಜುಲೈನಲ್ಲಿ 1.16 ಲಕ್ಷ ಕೋಟಿ, ಆಗಸ್ಟ್ ನಲ್ಲಿ 1.12 ಲಕ್ಷ, ಸೆಪ್ಟೆಂಬರ್ ನಲ್ಲಿ 1.17 ಲಕ್ಷ, ಅಕ್ಟೋಬರ್ ನಲ್ಲಿ 1.30 ಲಕ್ಷ, ನವೆಂಬರ್ ನಲ್ಲಿ 1.31 ಲಕ್ಷ, ಡಿಸೆಂಬರ್ ನಲ್ಲಿ 1.29 ಲಕ್ಷ, ಜನವರಿಯಲ್ಲಿ 1.40 ಲಕ್ಷ, ಫೆಬ್ರವರಿಯಲ್ಲಿ 1.33 ಲಕ್ಷ ಹಾಗೂ ಮಾರ್ಚ್ ನಲ್ಲಿ 1.42 ಲಕ್ಷ ಕೋಟಿ ಜಿಎಸ್ ಟಿ ಸಂಗ್ರಹವಾಗಿತ್ತು.