ನವದೆಹಲಿ: ಡಿಹೆಚ್‌ಎಫ್‌ಎಲ್, ಎಸ್ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ(Mumbai) ಮತ್ತು ಪುಣೆಯಲ್ಲಿ(Pune) ಸಿಬಿಐ (CBI)ದಾಳಿ ನಡೆಸಿದೆ. ಅಶ್ವಿನಿ ಭೋನ್ಸಾಲೆ (Ashwini Bhonsale), ಶಾಹಿದ್ ಬಲ್ವಾ(Shahid Balwa) ಮತ್ತು ವಿನೋದ್ ಗೋಯೆಂಕಾ (Vinod Goenka) ಸೇರಿದಂತೆ ಪ್ರಮುಖ ಬಿಲ್ಡರ್‌ಗಳಿಗೆ ಸೇರಿದ ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಈ ಬಿಲ್ಡರ್‌ಗಳು ನಡೆಸುತ್ತಿರುವ ಖಾಸಗಿ ಕಂಪನಿಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಹಿನ್ನೆಲೆಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ ಈ ದಾಳಿ ನಡೆಸಿದೆ. ಶನಿವಾರ ತಡರಾತ್ರಿವರೆಗೂ ದಾಳಿ ಮುಂದುವರಿದಿದ್ದು, ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 28 ರಂದು ಕೇಂದ್ರೀಯ ತನಿಖಾ ದಳ (ಸಿಬಿಐ) ರೇಡಿಯಸ್ ಡೆವಲಪರ್ಸ್‌ನ ಏಜೆಂಟ್ ಸಂಜಯ್ ಛಾಬ್ರಿಯಾ ಅವರನ್ನು ಬಂಧಿಸಿತು.
Avantha Fraud Case : ಯೆಸ್ ಬ್ಯಾಂಕ್‌ನ ರಾಣಾ ಕಪೂರ್, ಗೌತಮ್ ಥಾಪರ್‌ಗೆ ಜಾಮೀನು
ಆರ್ಥಿಕ ರಾಜಧಾನಿ ಮುಂಬೈನಲ್ಲಿ ವಸತಿ ಯೋಜನೆಗಾಗಿ ಮುಂಬೈ ಮೂಲದ ರೇಡಿಯಸ್ ಡೆವಲಪರ್ಸ್ ಸಂಸ್ಥೆ ವಾಧವಾನ್‌ನ ಡಿಹೆಚ್‌ಎಫ್‌ಎಲ್‌ನಿಂದ ಅಂದಾಜು 3,000 ಕೋಟಿ ರೂ ಹಣವನ್ನು ಸಾಲ ಪಡೆದಿತ್ತು. ರೇಡಿಯಸ್ ಡೆವಲಪರ್ಸ್ ಸಂಸ್ಥೆಗೆ DHFL ನೀಡಿದ ಸಾಲವು ಹಣದ (ನಿಧಿಗಳ) ತಿರುವು (diversion of funds) ನ ಭಾಗವಾಗಿರಬಹುದು ಎಂದು ಮೂಲಗಳು ಶಂಕೆ ವ್ಯಕ್ತಪಡಿಸಿವೆ. ಇದು ಒಂದು ಸಮಯದಲ್ಲಿ ಡಿಹೆಚ್‌ಎಫ್‌ಎಲ್‌ಗೆ ನೀಡಲ್ಪಟ್ಟ ಹಣವಾಗಿರಬಹುದು ಎಂಬುದು ತನಿಖಾ ಸಂಸ್ಥೆಯ ಸಂಶಯವಾಗಿದೆ.
Yes bank case ಯೆಸ್ ಬ್ಯಾಂಕ್ ಕಪೂರ್‌ರಿಂದ 5050 ಕೋಟಿ ರೂ ಅಕ್ರಮ ಹಣ ವರ್ಗ, ಇಡಿ!
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರೇಡಿಯಸ್ ಡೆವಲಪರ್ಸ್‌ನ ಸಂಜಯ್ ಛಾಬ್ರಿಯಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ನಡೆಸಿತ್ತು. ನಂತರ ಮಾರ್ಚ್ 7, 2020 ರಂದು ಸಿಬಿಐ ಸಲ್ಲಿಸಿದ ಎಫ್‌ಐಆರ್ ಅನ್ನು ಆಧರಿಸಿ ಛಾಬ್ರಿಯಾ ಅವರನ್ನು ಬಂಧಿಸಲಾಗಿತ್ತು. ಈ ಎಫ್‌ಐಆರ್‌ನಲ್ಲಿ ಮಾಜಿ ಯೆಸ್ ಬ್ಯಾಂಕ್ ಸಹ-ಸಂಸ್ಥಾಪಕ (Yes Bank co-founder) ರಾಣಾ ಕಪೂರ್ (Rana Kapoor) ಹಾಗೂ ಅವರ ಕುಟುಂಬ, ಕಪಿಲ್ ವಾಧವನ್ (Kapil Wadhawan) ಮತ್ತು ಧೀರಜ್ ವಾಧವನ್ (Dheeraj Wadhawan) ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಯೆಸ್ ಬ್ಯಾಂಕ್‌ನ ಮಾಜಿ ಪ್ರವರ್ತಕ ಕಪೂರ್ ಅವರು 2018-2019ರಲ್ಲಿ DHFL ನ ಪ್ರವರ್ತಕರು ಮತ್ತು ನಿರ್ದೇಶಕ ಕಪಿಲ್ ವಾಧವನ್ ಮತ್ತು ಇತರರೊಂದಿಗೆ ಕ್ರಿಮಿನಲ್ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಸಿಬಿಐ ಹೇಳಿದೆ. 2018 ರಲ್ಲಿ DHFL ನ ಅಲ್ಪಾವಧಿಯ ಡಿಬೆಂಚರ್‌ಗಳಲ್ಲಿ (long-term security yielding a fixed rate of interest,)ಯೆಸ್ ಬ್ಯಾಂಕ್ ರೂ 3,700 ಕೋಟಿ ಹೂಡಿಕೆ ಮಾಡಿದೆ ಎಂದು ತನಿಖಾ ಸಂಸ್ಥೆ ಹೇಳಿಕೊಂಡಿದೆ. ಅದೇ ಸಮಯದಲ್ಲಿ, ವಾಧವನ್ ರಾಣಾ ಕಪೂರ್ ಮತ್ತು ಅವರ ಕುಟುಂಬ ಸದಸ್ಯರಿಗೆ ರೂ 600 ಕೋಟಿ ಕಿಕ್‌ಬ್ಯಾಕ್ ಪಾವತಿಸಿದ್ದಾರೆ ಎಂದು ಆರೋಪಿಸಲಾಗಿದೆ. ವರದಿಗಳ ಪ್ರಕಾರ, ಯೆಸ್ ಬ್ಯಾಂಕ್‌ನಿಂದ 3,700 ಕೋಟಿ ಬಾಂಡ್ ಹೂಡಿಕೆಯನ್ನು DHFL ಇನ್ನೂ ರಿಡೀಮ್ ಮಾಡಿಲ್ಲ.
ಮನಿ ಲಾಂಡರಿಂಗ್ ತನಿಖೆಯ ಸಂದರ್ಭದಲ್ಲಿ ಆಕ್ಷೇಪಣೆಗಳ ಹೊರತಾಗಿಯೂ ರಾಣಾ ಕಪೂರ್ ಅವರು ತಮ್ಮ ನಂಬಿಕೆಯ ಸಂಬಂಧಿಗಳಿಗೆ 750 ಕೋಟಿ ರೂಪಾಯಿ ಸಾಲವನ್ನು ಅನುಮೋದಿಸಿದ್ದಾರೆ ಎಂದು ಯೆಸ್ ಬ್ಯಾಂಕ್ ಉನ್ನತ ಅಧಿಕಾರಿಗಳ ಹೇಳಿಕೆಯನ್ನು ಜಾರಿ ನಿರ್ದೇಶನಾಲಯ ದಾಖಲಿಸಿದೆ.