ಗುಡ್ ಬೈ2018: ಭರಪೂರ ಸುದ್ದಿಗಳ ವರ್ಷ, ಓದುಗರ ಮೆಚ್ಚುಗೆ ತಂದ ಹರ್ಷ!

By nikhil vkFirst Published Dec 30, 2018, 1:56 PM IST
Highlights

2018ರಲ್ಲಿ ಸುವರ್ಣನ್ಯೂಸ್.ಕಾಂನಲ್ಲಿ ಸುದ್ದಿಗಳ ಮಹಾಪೂರ| BUSINESS SECTION ಒಂದರಲ್ಲೇ ಸುದ್ದಿಗಳ ಪ್ರವಾಹ| 2018ರರಲ್ಲಿ BUSINESS SECTIONನಲ್ಲಿ ಅತಿ ಹೆಚ್ಚು ಓದಿದ ಸುದ್ದಿಗಳು| ಪೆಟ್ರೋಲ್, ಡೀಸೆಲ್ ಬೆಲೆ ಏರಿಳಿತಕ್ಕೆ ಓದುಗರ ಪ್ರಾಶಸ್ತ್ಯ| ಬ್ಯಾಂಕ್ ಬಂದ್ ಆದರೆ ದೇಶದ ಎದೆಬಡಿತವೂ ಬಂದ್| ಯಾವ ಸುದ್ದಿಗಳಿಗೆ ಓದುಗರ ಶಹಬ್ಬಾಸ್ ಗಿರಿ?, ಯಾವ ಸುದ್ದಿಗೆ ತಪರಾಕಿ? 

ಬೆಂಗಳೂರು(ಡಿ.30): 2018 ಇನ್ನೇನು ಮುಗಿಯುತ್ತಾ ಬಂದಿದೆ. ಭೂಮಿಯ ಆಯಸ್ಸಿಗೆ, ಮಾನವ ಜನಾಂಗದ ಇತಿಹಾಸಕ್ಕೆ ಮತ್ತೊಂದು ವರ್ಷ ಸೇರ್ಪಡೆಯಾಗಲಿದೆ. 2019ರ ರೂಪದಲ್ಲಿ ಮತ್ತೊಂದು ಹೊಸ ವರ್ಷ ನಮ್ಮ ಜೀವನದಲ್ಲಿ ಪ್ರವೇಶ ಪಡೆಯಲಿದೆ.

ವರ್ಷಾಂತ್ಯದಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನವನ್ನೊಮ್ಮೆ ರಿವೈಂಡ್ ಮಾಡಿ ನೋಡುವುದುಂಟು. ಏನಾಯ್ತು?, ಏನಾಗಬೇಕಿತ್ತು?, ಸರಿ ಏನು?, ತಪ್ಪು ಮಾಡಿದ್ದೆಲ್ಲಿ?, ಹೀಗೆ ವರ್ಷದ ರಿಪೋರ್ಟ್ ಕಾರ್ಡ್ ಮನಸ್ಸಲ್ಲೇ ರೆಡಿ ಮಾಡಲಾಗುತ್ತದೆ.

ಹಾಗೆ ದೇಶ ಕೂಡ ಒಂದು ವರ್ಷದ ಅವಧಿಯಲ್ಲಿ ತಾನು ಮುನ್ನಡೆದ ಹಾದಿಯ ಕುರಿತು ಒಮ್ಮೆ ಗ್ಲ್ಯಾನ್ಸ್ ಮಾಡುತ್ತದೆ. ಅದರಂತೆ ನಿಮ್ಮ ಸುವರ್ಣನ್ಯೂಸ್.ಕಾಂ ಕೂಡ ತನ್ನ ಒಂದು ವರ್ಷದ ಹಾದಿಯನ್ನು ಸ್ಮರಿಸುತ್ತಿದೆ.

ಸುವರ್ಣನ್ಯೂಸ್.ಕಾಂ BUSINESS SECTION 2018ರಲ್ಲಿ ಸಾಗಿ ಬಂದ ದಾರಿಯ ಕುರಿತು ನೋಡುವುದಾದರೆ.. ಪ್ರಮುಖವಾಗಿ ಈ ವರ್ಷದಲ್ಲಿ ನಮ್ಮ ಓದುಗರು ದೇಶದ ಅರ್ಥ ವ್ಯವಸ್ಥೆಯ ಆಗುಹೋಗುಗಳು, ಪೆಟ್ರೋಲ್, ಡೀಸೆಲ್ ಬೆಲೆಯ ಏರಿಳಿತ, ಜಿಡಿಪಿ, ಬ್ಯಾಂಕಿಂಗ್ ವ್ಯವಸ್ಥೆ, ವಿಶ್ವ ವೇದಿಕೆಯಲ್ಲಿ ಭಾರತದ ಅರ್ಥ ವ್ಯವಸ್ಥೆಯ ಗುಣಗಾನ ಮುಂತಾದವುಗಳ ಕುರಿತು ಹೆಚ್ಚು ಪ್ರಾಶಸ್ತ್ಯ ನೀಡಿದ್ದಾರೆ. 


ಅದರಂತೆ BUSINESS SECTION ನಲ್ಲಿ ಓದುಗರು ಹೆಚ್ಚು ಮಹತ್ವ ನೀಡಿದ ಸುದ್ದಿಗಳತ್ತ ಗಮನ ಹರಿಸುವುದಾದರೆ....

1. ತೈಲಬೆಲೆ:

ಹೌದು, 2018ರಲ್ಲಿ ಬಹುಶಃ ಈ ದೇಶದ ನಾಗರಿಕ ಪೆಟ್ರೋಲ್, ಡೀಸೆಲ್ ಬೆಲೆಗಳ ಕುರಿತು ತಲೆ ಕೆಡಿಸಿಕೊಂಡಷ್ಟು ಬೇರಾವ ವಿಷಯಗಳತ್ತ ಗಮನ ಹರಿಸಿಲ್ಲ. ಅದರಲ್ಲೂ ಅಂತಾರಾಷ್ಟ್ರೀಯ ವಿದ್ಯಮಾನಗಳ ಪರಿಣಾಮದಿಂದಾಗಿ, ದೇಶದಲ್ಲಿ ತೈಲ ಬೆಲೆ ಹೆಚ್ಚಳವಾದಾಗ ಜನ ತುಸು ಗಲಿಬಿಲಿಗೊಂಡಿದ್ದು ನಿಜ.

ಅದರಂತೆ ನಿಮ್ಮ ಸುವರ್ಣನ್ಯೂಸ್.ಕಾಂನಲ್ಲಿ ತೈಲಬೆಲೆ ಕುರಿತು ಅತೀ ಹೆಚ್ಚು ಓದಿದ್ದು..

SBI ಗ್ರಾಹಕರಿಗೆ ಭರ್ಜರಿ ಆಫರ್ : 5 ಲೀಟರ್ ಪೆಟ್ರೋಲ್ ಉಚಿತ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ತನ್ನ ಗ್ರಾಹಕರಿಗೆ ಭರ್ಜರಿ ಆಫರ್‌ವೊಂದನ್ನು ನೀಡಿದೆ. ತನ್ನ ಗ್ರಾಹಕರಿಗೆಲ್ಲಾ ಉಚಿತವಾಗಿ 5 ಲೀಟರ್ ಪೆಟ್ರೋಲ್ ನೀಡಲು ಸಿದ್ಧವಾಗಿದೆ! ಗ್ರಾಹಕರು 100 ರು. ಪೆಟ್ರೋಲ್ ಖರೀದಿಸಿದರೆ 5 ಲೀಟರ್ ಉಚಿತ ಪೆಟ್ರೋಲ್ ಪಡೆಯಬಹುದು.

2. ಬ್ಯಾಂಕ್ ಬಂದ್:

ದೇಶದ ರಾಜಕೀಯ ಕ್ಷೇತ್ರದಲ್ಲಿ ಏನೇ ಬದಲಾವಣೆಗಳಾದರೂ ಜನಸಾಮಾನ್ಯ ತಡೆದುಕೊಳ್ಳಬಲ್ಲ. ಅದು ಅವನ ಜೀವನಕ್ಕೆ ಪರೋಕ್ಷವಾಗಿ ಸಂಬಂಧಿಸಿದ ವಿಷಯವಾಗಿದ್ದರಿಂದ ಅದರ ಕುರಿತು ಆತ ಸ್ವಲ್ಪ ಮಾತ್ರ ತಡೆದುಕೊಳ್ಳಬಲ್ಲ.

ಆದರೆ ತನ್ನ ಜೀವನಕ್ಕೆ ನೇರವಾಗಿ ಸಂಬಂಧಿಸಿದ ಸಾರಿಗೆ ಕ್ಷೇತ್ರ, ವೈದ್ಯಕೀಯ, ಬ್ಯಾಂಕ್, ಜೀವನಾವಶ್ಯಕ ವಸ್ತುಗಳ ಅಲಭ್ಯತೆ ಆತನನ್ನು ನೇರವಾಗಿ ಬಾಧಿಸುತ್ತದೆ.

ಅದರಂತೆ ಸಾಮಾನ್ಯನ ಜೀವನದ ಪ್ರಮುಖ ಅಂಗವಾದ ಬ್ಯಾಂಕ್‌ಗಳು ಕಾರಣಾಂತರಗಳಿಂದ ಕಾರ್ಯಸ್ಥಗಿತಗೊಳಿಸಿದರೆ ಅದು ಖಂಡಿತ ಆತನಿಗೆ ಬಿಸಿ ಮುಟ್ಟಿಸಿರಲಿಕ್ಕೆ ಸಾಕು.

ಅದರಂತೆ ನಿಮ್ಮ ಸುವರ್ಣನ್ಯೂಸ್.ಕಾಂನಲ್ಲಿ ಬ್ಯಾಂಕ್ ಕುರಿತು ಅತೀ ಹೆಚ್ಚು ಓದಿದ್ದು..

5 ದಿನ ಬ್ಯಾಂಕ್ ಇರಲ್ಲ: ಡೇಟ್ಸ್ ನೋಡ್ಕೊಂಡ್ ಬಿಡಿ!

3. ರಿಲಯನ್ಸ್ ಜಿಯೋ ರಿಟೇಲ್ ಸ್ಟೋರ್:

ರಿಲಯನ್ಸ್ ಸಾಮ್ರಾಜ್ಯದ ಅಧಿಪತಿ ಮುಖೇಶ್ ಅಂಬಾನಿ, ಮಗಳ ಮದುವೆ ಮಾಡಿ ಒಂಚೂರು ರೆಸ್ಟ್ ಮಾಡ್ತಾರೆ ಅಂತಲೇ ಉದ್ಯಮ ಕ್ಷೇತ್ರ ಭಾವಿಸಿತ್ತು. ಆದರೆ ಸುಮ್ಮನೆ ಕೂರುವ ಜಾಯಮಾನ ತನ್ನದಲ್ಲ ಎನ್ನುವುದನ್ನು ರಿಲಯನ್ಸ್ ಇಂಡಸ್ಟ್ರೀಸ್ ಮತ್ತೆ ಸಾಬೀತು ಮಾಡಿದೆ.

ಇ-ಕಾಮರ್ಸ್, ಮೊಬೈಲ್, ನೆಟ್‌ವರ್ಕ್ ಕ್ರಾಂತಿ, ಡಿಜಿಟಲ್ ಕ್ಷೇತ್ರ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಯಶಸ್ವಿ ಹೆಜ್ಜೆ ಇಡುತ್ತಿರುವ ರಿಲಯನ್ಸ್, ಇದೀಗ ಮತ್ತೊಂದು ಯೋಜನೆಯೊಂದಿಗೆ ಭಾರತೀಯರ ಮನೆ ಮನೆಗೆ ಬರಲಿದೆ.

ಅದರಂತೆ ನಿಮ್ಮ ಸುವರ್ಣನ್ಯೂಸ್.ಕಾಂನಲ್ಲಿ ರಿಲಯನ್ಸ್ ಕುರಿತು ಅತೀ ಹೆಚ್ಚು ಓದಿದ್ದು..

ಶೇ. 90 ರಷ್ಟು ಭಾರತೀಯರಿಗೆ ಮುಖೇಶ್ ಮಗಳ ಮದುವೆ ಗಿಫ್ಟ್!

4. ವಿಪ್ರೋ ವೇತನ:
ವಿಪ್ರೋ ಸಂಸ್ಥೆ ಹೊಸದಾಗಿ ತನ್ನ ಕಂಪನಿ ಸೇರುವ ಉದ್ಯೋಗಿಗಳ ವೇತನವನ್ನು ವಾರ್ಷಿಕ 3.5 ಲಕ್ಷ ರೂ. ನಿಗದಿ ಮಾಡಿದೆ. ಈ ಮೊದಲು ಇದು 3.2 ಲಕ್ಷ ರೂ. ಇತ್ತು.

ಅದರಂತೆ ವಿಪ್ರೋ ಫ್ರೆಶರ್ಸ್ ವೇತನ ಇದೀಗ ತಿಂಗಳಿಗೆ 30 ಸಾವಿರ ರೂ. ಆಗಲಿದ್ದು, ಶಿಕ್ಷಣ ಮುಗಿಸಿ ಈಗಷ್ಟೇ ಇಂಡಸ್ಟ್ರಿಗೆ ಕಾಲಿಡುವವರಿಗೆ ಸಿಹಿ ಸುದ್ದಿಯಾಗಿ ಪರಿಣಮಿಸಿದೆ.

ಇದೇ ವೇಳೆ ಸಂಸ್ಥೆಗೆ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹೊಸ ಕೋಡಿಂಗ್ ವ್ಯವಸ್ಥೆಯನ್ನು ಕೂಡ ವಿಪ್ರೋ ಜಾರಿಗೆ ತರಲಿದೆ. ಅಲ್ಲದೇ ಶೇ. 30 ರಷ್ಟು ಹೆಚ್ಚು ನೇಮಕಾತಿ ಮಾಡಿಕೊಳ್ಳಲು ಸಂಸ್ಥೆ ಮುಂದಾಗಿದೆ.

ಅದರಂತೆ ನಿಮ್ಮ ಸುವರ್ಣನ್ಯೂಸ್.ಕಾಂನಲ್ಲಿ ವಿಪ್ರೋ ಕುರಿತು ಅತೀ ಹೆಚ್ಚು ಓದಿದ್ದು..

ವಿಪ್ರೋದಲ್ಲಿ ಫ್ರೆಶರ್ಸ್‌ಗೂ ಕೈತುಂಬ ಸಂಬಳ: ಈಗ್ಲೇ ರೆಸ್ಯೂಮ್ ಕಳ್ಸಿ!

5. ಇರಾನ್ ತೈಲ:

ಮೊದಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದ ಜನತೆಗೆ, ಇರಾನ್ ಮೇಲಿನ ಆರ್ಥಿಕ ದಿಗ್ಬಂಧನ ಮತ್ತಷ್ಟು ಆತಂಕ ತಂದೊಡ್ಡಿತ್ತು. ಒಂದು ವೇಳೆ ಭಾರತಕ್ಕೆ ಇರಾನ್ ಕಚ್ಚಾತೈಲ ಆಮದು ನಿಂತರೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುವುದು ಖಚಿತ ಎಂಬ ಆತಂಕ ಜನರಲ್ಲಷ್ಟೇ ಅಲ್ಲ ಕೇಂದ್ರ ಸರ್ಕಾರದಲ್ಲೂ ಮನೆ ಮಾಡಿತ್ತು.

ಇರಾನ್ ಮೇಲಿನ ಅಮೆರಿಕದ ನಿರ್ಭಂಧವನ್ನು ತೀವ್ರವಾಗಿ ಖಂಡಿಸಿರುವ ಅಧ್ಯಕ್ಷ ಹಸನ್ ರೋಹಾನಿ, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವಿರುದ್ಧ ಮತ್ತೊಮ್ಮೆ ಗುಡುಗಿದ್ದರು.

ತೈಲ ರಫ್ತು ಮಾಡುವ ಇರಾನ್ ಹಕ್ಕನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯುವಿಲ್ಲ ಎಂದು ಹೇಳಿದ್ದ ರೋಹಾನಿ, ಒಂದು ವೇಳೆ ಅಮೆರಿಕ ಇರಾನ್‌ನ ತೈಲ ರಫ್ತಿನ ಮೇಲೆ ನಿರ್ಬಂಧ ವಿಧಿಸಿದರೆ ಮಧ್ಯಪ್ರಾಚ್ಯದ ಯಾವೊಂದು ದೇಶವೂ ತೈಲ ರಫ್ತು ಮಾಡದಂತೆ ತಡೆಯಲಾಗುವುದು ಎಂದು ಎಚ್ಚರಿಸಿದ್ದರು.

ಅದರಂತೆ ನಿಮ್ಮ ಸುವರ್ಣನ್ಯೂಸ್.ಕಾಂನಲ್ಲಿ ಇರಾನ್ ತೈಲದ ಕುರಿತು ಅತೀ ಹೆಚ್ಚು ಓದಿದ್ದು..

ಸಮುದ್ರದಲ್ಲೇ ತೈಲ ಹಡಗಿಗೆ ತಡೆ: ಇರಾನ್ ಗುಡುಗಿಗೆ ಜಗತ್ತು ಗಡಗಡ!

 

ಈ ಸುದ್ದಿಗಳನ್ನೂ ಓದಿ-ಗುಡ್ ಬೈ 2018: ದಿನವೂ ಏಕೆ ಪೆಟ್ರೋಲ್ ಸುದ್ದಿ?, ಮಾರುಕಟ್ಟೆಯಷ್ಟೇ ನಾವೂ ಜಿದ್ದಿ!

ಗುಡ್ ಬೈ 2018: ಆರ್ಥಿಕ ನಾಗಾಲೋಟದಲ್ಲಿ ಮೋದಿ ಕೈ ಬಿಟ್ಟ ಪ್ರಮುಖರು!

ಗುಡ್ ಬೈ 2018: ಆರ್ಥಿಕತೆಯಲ್ಲಿ ವಿಶ್ವಗುರುವಾಗುವತ್ತ ಭಾರತದ ನಡಿಗೆ!

ಗುಡ್ ಬೈ 2018: ಇರಾನ್ ತೈಲ ಬರತ್ತೆ, ಬರಲ್ಲಗಳ ಮಧ್ಯೆ ಮುಗಿದ ವರ್ಷ!

ಗುಡ್ ಬೈ2018: ಅಪನಗದೀಕರಣ ನಂತರದ ಭಾರತ!

click me!