ದೀಪಾವಳಿ ಧನ್‌ತೇರಸ್‌ಗೆ ಆರ್‌ಬಿಐ ಗುಡ್ ನ್ಯೂಸ್ ಸಿಕ್ಕಿದೆ. ಬರೋಬ್ಬರಿ 102 ಟನ್ ಚಿನ್ನವನ್ನು ಆರ್‌ಬಿಐ ಬ್ಯಾಂಕ್ ಆಫ್ ಇಂಗ್ಲೆಂಡ್‌ನಿಂದ ಭಾರತಕ್ಕೆ ತಂದಿದೆ.
ನವದೆಹಲಿ(ಅ.30) ದೀಪಾವಳಿ ಹಬ್ಬದ ಸಂಭ್ರಮದಲ್ಲಿ ದೇಶದ ಜನತೆಗೆ ಆರ್‌ಬಿಐ ಗುಡ್ ನ್ಯೂಸ್ ನೀಡಿದೆ. ಇಂಗ್ಲೆಂಡ್‌ನಿಂದ ಭಾರತೀಯ ರಿಸರ್ವ್ ಬ್ಯಾಂಕ್ ಬರೋಬ್ಬರಿ 102 ಟನ್ ಚಿನ್ನವನ್ನು ಭಾರತಕ್ಕೆ ಸುರಕ್ಷಿತಾಗಿ ತಂದಿದೆ. ಈ ಮೂಲಕ 2022ರಿಂದ ಇಲ್ಲೀವರೆಗೆ ಆರ್‍ಬಿಐ 214 ಟನ್ ಚಿನ್ನವನ್ನು ಭಾರತಕ್ಕೆ ತಂದಿದೆ. ಈ ಮೂಲಕ ದೇಶದ ಸಂಪತ್ತನು ದೇಶದಲ್ಲೇ ಇಡುವ ಆರ್‌ಬಿಐ ಪ್ರಯತ್ನ ಬಹುತೇಕ ಯಶಸ್ವಿಯಾಗಿದೆ. ವಿಶೇಷ ಅಂದರೆ ಆರ್‌ಬಿಐ ಬಳಿ ಇರುವ 855 ಟನ್ ಚಿನ್ನದ ಪೈಕಿ ಇದೀಗ 510.5 ಟನ್ ಚಿನ್ನ ಭಾರತದಲ್ಲೇ ಇಡಲಾಗಿದೆ.
ಆರ್ಥಿಕ ಸಂಕಷ್ಟ, ದೇಶದಲ್ಲಿನ ಭದ್ರತೆ ಸೇರಿದಂತೆ ಹಲವು ಕಾರಣಗಳಿಂದ ಭಾರತ ತನ್ನಲ್ಲಿರುವ ಚಿನ್ನದ ಆಸ್ತಿಯನ್ನು ಇಂಗ್ಲೆಂಡ್ ಬ್ಯಾಂಕ್‌ನಲ್ಲಿ ಸಂಗ್ರಹಿಸಿಟ್ಟಿದೆ. 1991ರಲ್ಲಿ ಭಾರತ ಎದುರಿಸಿದ ಆರ್ಥಿಕ ಬಿಕ್ಕಿಟ್ಟಿನ ಸಂದರ್ಭದಲ್ಲಿ ಒಂದಷ್ಟ ಟನ್ ಚಿನ್ನವನ್ನು ಭಾರತ ಇಂಗ್ಲೆಂಡ್‌ನಲ್ಲಿ ಅಡವಿಟ್ಟಿತ್ತು. ತೀವ್ರ ಸಂಕಷ್ಟದಿಂದ ಪಾರಾಗಲು ಭಾರತದ ಬಳಿ ಬೇರೆ ಮಾರ್ಗಗಳು ಇಲ್ಲಿದಿದ್ದ ಕಾರಣ ಅಡವಿಡಲಾಗಿತ್ತು. ಇಷ್ಟೇ ಅಲ್ಲ ಇದಕ್ಕೂ ಮುನ್ನ ಭಾರತದಲ್ಲಿನ ಸುರಕ್ಷಿತ ಸಂಗ್ರಹಾಲಯದ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಇಂಗ್ಲೆಂಡ್‌ನಲ್ಲಿ ಚಿನ್ನ ಇಡಲಾಗಿತ್ತು.
ಇಂಗ್ಲೆಂಡ್‌ನಲ್ಲಿಟ್ಟಿದ್ದ 1 ಲಕ್ಷ ಕೆಜಿ ಚಿನ್ನ ಭಾರತಕ್ಕೆ ವಾಪಸ್ ತಂದ ಆರ್‌ಬಿಐ!
ಕೆಲ ವರ್ಷಗಳಿಂದ ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ಮಹತ್ವದ ನಿರ್ಧಾರ ಕೈಗೊಂಡಿತ್ತು. ಹಲವು ಸುತ್ತಿನ ರಹಸ್ಯ ಮಾತುಕತೆ ಬಳಿಕ ಆರ್‌ಬಿಐ ಇಂಗ್ಲೆಂಡ್‌ನಲ್ಲಿಟ್ಟ ಚಿನ್ನ ಭಾರತಕ್ಕೆ ತರಲು ಮುಂದಾಗಿತ್ತು. ಪ್ರಮುಖವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎದುರಾಗುತ್ತಿರುವ ಸಮಸ್ಯೆಗಳು, ಯುದ್ಧ, ರಾಜಕೀಯ ಬದಲಾವಣೆಗಳಿಂದ ವಿದೇಶಗಳಲ್ಲಿ ಭಾರತದ ಚಿನ್ನ ಸಂಗ್ರಹ ಅಪಾಯಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ ಅನ್ನೋದು ಸುಳ್ಳಲ್ಲ. ಇತ್ತ ಭಾರತದಲ್ಲಿ ಇದೀಗ ಸುರಕ್ಷಿತ ಸಂಗ್ರಹಾಲಯಗಳಿವೆ. ಇಷ್ಟೇ ಅಲ್ಲ ಅರ್‌ಬಿಐ ಸಂಗ್ರಹಾಲಯ ಸುಸಜ್ಜಿತವಾಗಿದೆ. ಹೀಗಾಗಿ ದೇಶದ ಸಂಪತ್ತನ್ನು ದೇಶದಲ್ಲೇ ಸಂಗ್ರಹಿಸಲು ಆರ್‌ಬಿಐ ಹಂತ ಹಂತವಾಗಿ ಕಾರ್ಯನಿರ್ವಹಿಸುತ್ತಿದೆ.
ಇದೇ ವರ್ಷ ಮೇ ತಿಂಗಳಲ್ಲಿ 100 ಟನ್ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್‌ನಿಂದ ಭಾರತಕ್ಕೆ ತರಲಾಗಿತ್ತು. ಇದಕ್ಕೂ ಮೊದಲು ಭಾರತ ಈ ರೀತಿ ಇಂಗ್ಲೆಂಡ್ ಬ್ಯಾಂಕ್‌ನಿಂದ ಭಾರತಕ್ಕೆ ಚಿನ್ನ ತಂದಿದೆ. ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಭಾರತ ಚಿನ್ನವನ್ನು ಇಂಗ್ಲೆಂಡ್‌ನಿಂದ ಭಾರತಕ್ಕೆ ತಂದಿರಲಿಲ್ಲ. ಮೇ ತಿಂಗಳಲ್ಲಿ 100 ಟನ್ ಇದೀಗ 102 ಟನ್ ಚಿನ್ನವನ್ನು ಭಾರತಕ್ಕೆ ತಂದಿದೆ.
ಇದೀಗ ಈ ಪ್ರಯತ್ನದ ಬಳಿಕ ಇಂಗ್ಲೆಂಡ್ ಬ್ಯಾಂಕ್‌ನಲ್ಲಿ ಭಾರತದ 324 ಟನ್ ಚಿನ್ನ ಬಾಕಿ ಉಳಿದಿದೆ. ಹಲವು ದೇಶಗಳು ಬ್ಯಾಂಕ್ ಆಫ್ ಇಂಗ್ಲೆಂಡ್‌ನಲ್ಲಿ ಚಿನ್ನ ಇಟ್ಟಿದೆ. ದೇಶಕ್ಕೆ ಆಪತ್ತು ಎದುರಾದಾಗ ಅಥವಾ ಸಂಕಷ್ಟದ ಸಂದರ್ಭದಲ್ಲಿ ಇಟ್ಟಿರುವ ಚಿನ್ನದಿಂದ ಸಾಲ, ಅಡವಿಟ್ಟು ಹಣ ಪಡೆಯಲು ಸಾಧ್ಯವಾಗಲಿದೆ. ತುರ್ತು ಸಂದರ್ಭಗಳಲ್ಲಿ ಚಿನ್ನದ ಆಧಾರದಲ್ಲಿ ದೇಶಗಳು ಹಣ ಪಡೆಯುತ್ತದೆ. ಹೀಗೆ ಭಾರತ 1991ರಲ್ಲಿ ಇಂಗ್ಲೆಂಡ್‌ನಲ್ಲಿ ಚಿನ್ನ ಅಡವಿಟ್ಟು ಹಣ ಪಡೆದಿದ್ದು. ಅಂದಿನ ಪ್ರಧಾನಿ ಚಂದ್ರಶೇಖರ್ ಈ ನಿರ್ಧಾರ ಮಾಡಿದ್ದರು. ಅಂದು ಭಾರಿ ವಿರೋಧಗಳು ವ್ಯಕ್ತವಾಗಿತ್ತು. ಆದರೆ ತೀವ್ರವಾದ ಆರ್ಥಿಕ ಪರಿಸ್ಥಿತಿ ಎದುರಿಸಿದ ಭಾರತಕ್ಕೆ ಚಿನ್ನ ಅಡವಿಟ್ಟು ಸಾಲ ಪಡೆಯುವ ಮಾರ್ಗ ಬಿಟ್ಟು ಇನ್ಯಾವ ಮಾರ್ಗ ಉಳಿದಿರಲಿಲ್ಲ. ಇಷ್ಟೇ ಅಲ್ಲ ಅಂದು ಜಾಗತಿಕ ಮಟ್ಟದಲ್ಲಿ ಭಾರತ ಆರ್ಥಿಕವಾಗಿ ಮಾತ್ರವಲ್ಲ, ಸಾಮಾಜಿಕವಾಗಿ,ಶೈಕ್ಷಣಿಕವಾಗಿ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರದಲ್ಲಿ ಹಿಂದುಳಿದಿತ್ತು. ಹೀಗಾಗಿ ಟನ್‌ಗಟ್ಟಲೇ ಚಿನ್ನ ಅಡವಿಟ್ಟು ಸಾಲ ಪಡೆದು ಕೊಂಡಿತ್ತು. ಇದೀಗ ಹಂತ ಹಂತವಾಗಿ ಭಾರತ ತಾನು ಶೇಖರಿಸಿಟ್ಟ ಚಿನ್ನವನ್ನು ಭಾರತಕ್ಕೆ ತರುತ್ತಿದೆ.
ಹಲವರಿಗೆ ದೀಪಾವಳಿ ಗಿಫ್ಟ್ ನೀಡಿದ ಮುಕೇಶ್ ಅಂಬಾನಿಗೆ RBIನಿಂದ ಬಂತು ಅತೀ ದೊಡ್ಡ ಉಡುಗೊರೆ!