ಕೋಳಿಗೆ ಬೆಂಕಿ ಹಚ್ಚಿದ್ರೆ ಮೊಟ್ಟೆ ಇಡತ್ತೆ. ದೀಪಾವಳಿಯ ಹೊಸ ಪಟಾಕಿಯ ವಿಡಿಯೋ ನೋಡಿ ನಕ್ಕೂ ನಕ್ಕೂ ಸುಸ್ತಾದ ನೆಟ್ಟಿಗರು.
ದೀಪದ ಹಬ್ಬ ಬಂದೇ ಬಿಟ್ಟಿದೆ. ವಿವಿಧ ಬಗೆಯ ಪಟಾಕಿಗಳು ಇದಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ದೀಪಾವಳಿಯ ಸಮಯದಲ್ಲಿ ಪಟಾಕಿ ಹಚ್ಚಿದ್ರೆ ವಾಯು ಮಾಲಿನ್ಯ ಆಗುತ್ತದೆ ಎಂದು ಹೇಳಿರುವ ಕೆಲ ಸರ್ಕಾರಗಳು ದೀಪಾವಳಿ ಟೈಮ್ನಲ್ಲಿ ಪಟಾಕಿ ಬ್ಯಾನ್ ಮಾಡಿವೆ. ದಿನನಿತ್ಯ ವಾಹನಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯ ಹಾಗೂ ವಿವಿಧ ಸಂದರ್ಭಗಳಲ್ಲಿ ಹಚ್ಚುವ ಪಟಾಕಿಗಳಿಂದ ಏನೂ ಆಗುವುದಿಲ್ಲ, ದೀಪಾವಳಿ ಬಂತೆಂದರೆ ಸಾಕು ಸರ್ಕಾರಗಳು ಜಾಗೃತವಾಗಿ ಬಿಡುತ್ತವೆ ಎಂದೆಲ್ಲಾ ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಟೀಕೆ ಮಾಡುವುದೂ ನಡೆಯುತ್ತಲೇ ಇದೆ. ಯಾರು ಏನೇ ಹೇಳಿದರೂ, ವರ್ಷಕ್ಕೊಮ್ಮೆ ಬರುವ ಹಬ್ಬದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುವವರಿಗೇನೂ ಕೊರತೆ ಇಲ್ಲ.
ಇದೀಗ ಹಸಿರು ಪಟಾಕಿ ಸಾಕಷ್ಟು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದೇ ರೀತಿ ಕೆಲವರು ವಿಭಿನ್ನ ರೀತಿಯಲ್ಲಿ, ಕುತೂಹಲ ಎನ್ನುವಂಥ ಪಟಾಕಿಗಳನ್ನು ಕಂಡು ಹಿಡಿದಿದ್ದಾರೆ. ಅದರಲ್ಲಿ ಒಂದು ಈ ಕೋಳಿ ಪಟಾಕಿ. ಹೌದು! ಕೋಳಿ ಪಟಾಕಿಯ ಮಜವೇ ಬೇರೆ ರೀತಿಯಾಗಿದೆ. ಈ ಕೋಳಿಯ ಎದುರಿಗೆ ಬೆಂಕಿ ಕೊಟ್ಟರೆ, ಹಿಂದುಗಡೆಯಿಂದ ಮೊಟ್ಟೆ ಹಾಕುತ್ತದೆ. ಆದರೆ ಅದು ಹಾಕುವುದು ಬಿಳಿ ಮೊಟ್ಟೆಯಲ್ಲ, ಬದಲಿಗೆ ಕೆಂಪು ಮೊಟ್ಟೆ! ಬಲೂನ್ ರೀತಿಯಲ್ಲಿ ಕೋಳಿಯ ಹಿಂಭಾಗದಿಂದ ಮೊಟ್ಟೆ ಬರುತ್ತದೆ. ಇದರ ವಿಡಿಯೋ ಅನ್ನು 4597.nandini ಎನ್ನುವವರು ಶೇರ್ ಮಾಡಿಕೊಂಡಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ತಮಾಷೆಯ ರೂಪದಲ್ಲಿ ವೈರಲ್ ಆಗುತ್ತಿದೆ. ಇಂಥ ಪಟಾಕಿ ನಮಗೂ ಬೇಕು, ನಮಗೂ ಬೇಕು ಎಂದು ಎಲ್ಲರೂ ಕಮೆಂಟ್ ಮೂಲಕ ಹೇಳುತ್ತಿದ್ದಾರೆ.
ಐತಿಹಾಸಿಕ ಕ್ಷಣಕ್ಕೆ ಸಜ್ಜಾಗುತ್ತಿದೆ ಅಯೋಧ್ಯೆ: ಮೊದಲ ದೀಪಾವಳಿಯಂದೇ ರಾಮಲಲ್ಲಾ ವಿಶ್ವ ದಾಖಲೆ?
ಸರ್ಕಾರದ ಮಾರ್ಗಸೂಚಿಯಂತೆ, ಈ ಕೋಳಿ ಪಟಾಕಿಯಲ್ಲಿ ಯಾವುದೇ ರೀತಿಯ ಮಾಲಿನ್ಯವೂ ಇಲ್ಲ. ಗಲಾಟೆಯೂ ಇಲ್ಲ. ಮಜ ಅಂತೂ ಸಕತ್ ಸಿಗುತ್ತದೆ. ಅಂದಹಾಗೆ, ಬೆಂಗಳೂರಿನ ಮಟ್ಟಿಗೆ ಹೇಳುವುದಾದರೆ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾತ್ರಿ 8 ಗಂಟೆಯಿಂದ ತಡರಾತ್ರಿ 10 ಗಂಟೆವರೆಗೆ ಹಸಿರು ಪಟಾಕಿ ಸಿಡಿಸಲು ಮಾತ್ರ ಅವಕಾಶ ನೀಡಲಾಗಿದೆ. ಒಂದು ವೇಳೆ ಅವಧಿ ಮೀರಿ ಪಟಾಕಿ ಸಿಡಿಸಿದರೆ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಇದಾಗಲೇ ಎಚ್ಚರಿಸಿದ್ದಾರೆ.
ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಪ್ರಕಾರ, ಈ ಅವಧಿಯಲ್ಲಿ ಮಾತ್ರ ಪಟಾಕಿ ಸಿಡಿಸಬೇಕು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು. ಹಸಿರು ಪಟಾಕಿ ಖರೀದಿಸುವಾಗ ಅದರ ಮೇಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಖಚಿತ ಪಡಿಸಿಕೊಳ್ಳಬೇಕು. ಚಿಕ್ಕ ಮಕ್ಕಳು ಪಟಾಕಿ ಹಚ್ಚುವಾಗ ಅವರ ಪೋಷಕರೂ ಜತೆಯಲ್ಲಿರಬೇಕು. ಮೊದಲ ಪ್ರಯತ್ನದಲ್ಲಿ ಸಿಡಿಯದ ಪಟಾಕಿ ಗಳನ್ನು ಹತ್ತಿರಕ್ಕೆ ಹೋಗಿ ಮತ್ತೊಮ್ಮೆ ಪರೀಕ್ಷಿಸುವುದು ಬೇಡ. ಪಟಾಕಿ ಸಿಡಿಸುವಾಗ ಕೈಗಳಿಗೆ ಗ್ಲೌಸ್ ಧರಿಸುವುದು ಕಡ್ಡಾಯ, ಕಣ್ಣುಗಳಿಗೆ ಸುರಕ್ಷತಾ ಕನ್ನಡಕ ಧರಿಸಿ. ಯಾವುದಾದರೂ ಅವಘಡ ಸಂಭವಿಸಿದರೆ ತಕ್ಷಣವೇ 112 ಹಾಗೂ 108 ಸಂಪರ್ಕಿಸಿ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಡಯಟ್, ವರ್ಕ್ಔಟ್ನಿಂದ ತೂಕ ಕಡಿಮೆ ಆಗ್ಲಿಲ್ಲ... ಅಸಲಿ ವಿಷಯವೇ ಬೇರೆ ಇತ್ತು: ವಿದ್ಯಾ ಬಾಲನ್ ಓಪನ್ ಮಾತು