ಮಕ್ಕಳ ಭವಿಷ್ಯ ಚಿಂತಿಸುತ್ತಿದ್ದೀರಾ? ಇಲ್ಲಿ ಉಳಿತಾಯ ಮಾಡಿ 18ನೇ ವಯಸ್ಸಿಗೆ ಕೋಟಿ ರೂ ಗಳಿಸಿ!

By Chethan KumarFirst Published Oct 30, 2024, 2:08 PM IST
Highlights

ಎಲ್ಲಾ ಪೋಷಕರು ಮಕ್ಕಳ ಶಿಕ್ಷಣ, ಭವಿಷ್ಯದ ಬಗ್ಗೆ ಚಿಂತಿಸುವುದು ಸಾಮಾನ್ಯ. ಆದರೆ 18x15x12 ಸೂತ್ರದಡಿ ಇಲ್ಲಿ ಹೂಡಿಕೆ ಮಾಡಿದರೆ ಮಕ್ಕಳಿಗೆ 18ನೇ ವಯಸ್ಸಾಗುವಷ್ಟರಲ್ಲೇ ಕೋಟಿ ರೂಪಾಯಿ ಗಳಿಸಲು ಸಾಧ್ಯವಿದೆ. 
 

ನವದೆಹಲಿ(ಅ.30) ಕುಟುಂಬ, ಮಕ್ಕಳು, ಶಿಕ್ಷಣ, ಜೀವನಕ್ಕೆ ಅದೆಷ್ಟು ದುಡ್ಡಿದ್ದರು ಸಾಲದು ಅನ್ನೋ ಮಾತು ಎಲ್ಲಾ ಪೋಷಕರು ಹೇಳುತ್ತಲೇ ಇರುತ್ತಾರೆ. ಇದು ನಿಜ. ಮಕ್ಕಳ ಶಿಕ್ಷಣ, ಅವರ ಭವಿಷ್ಯ, ಹೆಣ್ಮು ಮಕ್ಕಳಾದರೆ ಮದುವೆ ಹೀಗೆ ಎಲ್ಲವೂ ದುಬಾರಿ ಖರ್ಚುಗಳೇ. ಆದರೆ ಮಕ್ಕಳ ಹೆಸರಿನಲ್ಲಿ ಸರಿಯಾದ ಕಡೆ ಹೂಡಿಕೆ, ಉಳಿತಾಯ ಮಾಡಿದರೆ ಮಕ್ಕಳ ಭವಿಷ್ಯಕ್ಕೆ ಯಾವುದೇ ಆಪತ್ತು ಇರುವುದಿಲ್ಲ. ಹೌದು, ಮಕ್ಕಳ ಹೆಸರಿನಲ್ಲಿ ಉಳಿತಾಯ ಮಾಡಲು ಆರಂಭಿಸಿದರೆ, ಮಕ್ಕಳು 18 ವಯಸ್ಸಿಗೆ ಬಂದಾಗ ಕೋಟಿ ರೂಪಾಯಿ ಗಳಿಸಲು ಎಸ್ಐಪಿ(SIP) ಪಾರ್ಮುಲಾದಲ್ಲಿ ಹೂಡಿಕೆ ಮಾಡಬೇಕು 

ಸಿಸ್ಟಮ್ಯಾಟಿಕ್ ಇನ್‌ವೆಸ್ಟ್ ಪ್ಲಾನ್(SIP) ಮೂಲಕ ಹೂಡಿಕೆ ಅಥವಾ ಉಳಿತಾಯ ಮಾಡಿದರೆ ಕೋಟಿ ರೂಪಾಯ ಗಳಿಸಲು ಸಾಧ್ಯವಿದೆ.  ಇದು ಮಕ್ಕಳ ಹೆಸರಿನಲ್ಲಿ ಮಾಡಿದರೆ ಸಣ್ಣ ಮೊತ್ತದ ಉಳಿತಾಯದಿಂದ ಮಕ್ಕಳು 18ನೇ ವಯಸ್ಸಿಗೆ ಬಂದಾಗ 1 ಕೋಟಿ ರೂಪಾಯಿ ಕೈಸೇರಲಿದೆ. ಇದಕ್ಕೆ 18x15x12 ಸೂತ್ರ ಪಾಲಿಸಿದರೆ ಸಾಕು. ಕೋಟ್ಯಾಧೀಶರಾಗಲು ಸಾಧ್ಯವಿದೆ. ಜೊತೆಗೆ ಮಕ್ಕಳ, ಉನ್ನತ ಶಿಕ್ಷಣ, ಮದುವೆ ಸೇರಿದಂತೆ ಎಲ್ಲಾ ಖರ್ಚು ವೆಚ್ಚಗಳ ಆತಂಕವೂ ಇರುವುದಿಲ್ಲ.

Latest Videos

MRF ದಾಖಲೆ ಮುರಿದ ಕಂಪನಿ, 4 ತಿಂಗಳ ಹಿಂದೆ 3 ರೂಪಾಯಿ ಇದ್ದ ಸ್ಟಾಕ್‌ನ ಬೆಲೆ ಇಂದು 2.36 ಲಕ್ಷ!

ಮಗುವಿನ ಆರಂಭಿಕ ದಿನಗಳಲ್ಲಿ ಎಸ್ಐಪಿ ಉಳಿತಾಯ ಖಾತೆ ಆರಂಭಿಸುವುದು ಉತ್ತಮ. ಬಳಿಕ 18x15x12 ಸೂತ್ರ ಪಾಲಿಸಬೇಕು. ಅಂದರೆ 18 ನಿಮ್ಮ ಮಗು 18 ವಯಸ್ಸಿನವರಗೆ ಇಲ್ಲಿ ಉಳಿತಾಯ ಮಾಡಬೇಕು. 18ನೇ ವಯಸ್ಸಿಗೆ ಈ ಯೋಜನೆ ಮೆಚ್ಯೂರಿಟಿ ಪಡೆದು ಕೋಟಿ ರೂಪಾಯಿ ಕೈಸೇರಲಿದೆ. ಇನ್ನು ಸೂತ್ರದಲ್ಲಿರುವ 15 ಅಂದರೆ ತಿಂಗಳಿಗೆ 15,000 ರೂಪಾಯಿ ಎಸ್ಐಪಿ ಮೂಲಕ ಉಳಿತಾಯ ಮಾಡಬೇಕು. 12 ಅಂದರೆ ಶೇಕಡಾ 12ರಷ್ಟು ಬಡ್ಡಿ ಸಿಗಲಿದೆ. ಇದೇ ಸೂತ್ರದ ಪ್ರಕಾರ ಉಳಿತಾಯ ಮಾಡಿಬೇಕು. ಇದು ಹೇಗೆ ಅನ್ನೋದ ಇಲ್ಲಿದೆ ನೋಡಿ.

ತಿಂಗಳಿಗೆ 15,000 ರೂಪಾಯಿ ಮಗುವಿನ ಹೆಸರಿನಲ್ಲಿ ಉಳಿತಾಯ ಮಾಡಿದರೆ 18 ವರ್ಷಕ್ಕೆ 32,40,000 ಆಗಲಿದೆ.  ಇನ್ನು ಶೇಕಡಾ 12ರಷ್ಟು ಬಡಿ ಸೇರಿಸಿದರೆ ಬಡ್ಡಿ ಮೊತ್ತ 82,41,589 ರೂಪಾಯಿ ಆಗಲಿದೆ. ಇವೆರಡನ್ನು ಒಟ್ಟಗೂಡಿಸಿದರೆ 18ನೇ ವರ್ಷಕ್ಕೆ 1,14,81,589 ರೂಪಾಯಿ ಕೈಸೇರಲಿದೆ. ಮಗು 18ನೇ ವಯಸ್ಸಿಗೆ 1.14 ಲಕ್ಷ ರೂಪಾಯಿ ಪಡೆದುಕೊಳ್ಳಲಿದೆ. ಇದು ಉನ್ನತ ಶಿಕ್ಷಣ ಸೇರಿದಂತೆ ಇತರ ಖರ್ಚು ವೆಚ್ಚಗಳಿಗೆ ನೆರವಾಗಲಿದೆ.

ಎಸ್ಐಪಿಯಲ್ಲಿ ಹಲವು ಪ್ರಯೋಜನಗಳಿವೆ. ಸುದೀರ್ಘ ಸಮಯದವರೆಗೆ ಹೂಡಿಕೆ ಮಾಡಬಹುದು. ಸಣ್ಣ ಮೊತ್ತವನ್ನೂ ಹೂಡಿಕೆ ಮಾಡಲು ಅವಕಾಶವಿದೆ. ಮೊತ್ತಕ್ಕೆ ಅನುಗುಣವಾಗಿ ಬಡ್ಡಿ ಸಿಗಲಿದೆ. ಇಲ್ಲಿ ಪ್ರಮುಖವಾಗಿ ಬಡ್ಡಿ ಹೆಚ್ಚು ಆಕರ್ಷಿತವಾಗಿದೆ. ಕಾರಣ ಶೇಕಡಾ 12 ರಷ್ಟು ಬಡ್ಡಿಯನ್ನು ಎಸ್ಐಪಿ ನೀಡಲಿದೆ. ಇತರ ಯಾವುದೇ ಜನಪ್ರಿಯ ಹೂಡಿಕೆ ಅಥವಾ ಉಳಿತಾಯ ಯೋಜನೆಗಳಿಗೆ ಹೋಲಿಸಿದೆರ ಇದು ಗರಿಷ್ಠ ಶೇಕಡಾ ಬಡ್ಡಿ ದರವಾಗಿದೆ.ಇನ್ನು ಉಳಿತಾಯವನ್ನು ತಿಂಗಳಿಗೆ, ಮೂರು ತಿಂಗಳಿಗೆ, 6 ತಿಂಗಳು ಹಾಗೂ ವರ್ಷಕ್ಕೊಮ್ಮೆ ಮಾಡುವ ರೀತಿಯಲ್ಲೂ ಹೂಡಿಕೆ ಮಾಡಬಹುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಉಳಿತಾಯ ಮಾಡುತ್ತಾ ಸಾಗಬಹುದು. ಪ್ರತಿ ತಿಂಗಳು ಕಟ್ಟಲು ಕಷ್ಟವಾಗುತ್ತದ್ದರೆ, ಮೂರು ತಿಂಗಳಿಗೆ ಅಥವಾ ವರ್ಷಕ್ಕೊಮ್ಮೆ ಕಟ್ಟುವಂತೆ ಮಾಡಲು ಸಾಧ್ಯವಿದೆ. ಮತ್ತೊಂದು ವಿಶೇಷ ಅಂದರೆ ಯಾವಾಗ ಎಸ್ಐಪಿ ಯೋಜನೆ ನಿಲ್ಲಿಸಬೇಕು ಎಂದಾದರೆ ತಕ್ಷಣ ನಿಲ್ಲಿಸಿ ಹಣ ವಾಪಸ್ ಪಡೆಯಹುದು. ಇಷ್ಟೇ ಅಲ್ಲ ಯೋಜನೆ ಆರಂಭಿಸಿದ ಬಳಿಕ ಹೆಚ್ಚಿನ ಮೊತ್ತ ಪಾವತಿಸಬೇಕು ಎಂದಾದರೂ ಸಾಧ್ಯವಿದೆ. ಹೀಗಾಗಿ ಹೂಡಿಕೆದಾರರಿಗೆ ಹೆಚ್ಚಿನ ಅನುಕೂಲತೆ ಇದರಲ್ಲಿದೆ.

click me!