ಇಂದಿನಿಂದ ಆಗುತ್ತಿರುವ 6 ಬದಲಾವಣೆಗಳು: ಸಣ್ಣ ಉಳಿತಾಯಕ್ಕೆ ಹೆಚ್ಚಿನ ಬಡ್ಡಿ, ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ!

By Santosh Naik  |  First Published Oct 1, 2022, 12:57 PM IST

ಅಕ್ಟೋಬರ್‌ 1ರಿಂದ ದೇಶದಲ್ಲಿ 6 ಪ್ರಮುಖ ಬದಲಾವಣೆಗಳಾಗಿವೆ. ಬ್ಯಾಂಕುಗಳಲ್ಲಿ ಸಣ್ಣ ಉಳಿತಾಯಕ್ಕೆ ಹೆಚ್ಚಿನ ಬಡ್ಡಿ ಸಿಗಲಿದ್ದರೆ, ಕಮರ್ಷಿಯಲ್‌ ಸಿಲಿಂಡರ್‌ ಬೆಲೆಯಲ್ಲಿ ಅಲ್ಪ ಇಳಿಕೆಯಾಗಿದೆ. ಅದರೊಂದಿಗೆ ಪಿಪಿಎಫ್‌ ಬಡ್ಡಿಯಲ್ಲೂ ಏರಿಕೆಯಾಗಿದೆ.


ನವದೆಹಲಿ (ಅ.1): ವಾಣಿಜ್ಯಾತ್ಮಕವಾಗಿ ಅಕ್ಟೋಬರ್‌ 1 ರಿಂದ 6 ಪ್ರಮುಖ ಬದಲಾವಣೆಗಳಾಗಿವೆ. ಗ್ರಾಹಕರು ಹಾಗೂ ಜನಸಾಮಾನ್ಯರ ಮೇಲೆ ಪ್ರಭಾವ ಬೀರುವ ಆರು ಪ್ರಮುಖ ನಿಯಮ ಬದಲಾವಣೆಯ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಇಂದಿನಿಂದ ಆದಾಯ ತೆರಿಗೆ ಪಾವತಿದಾರರು ಕೇಂದ್ರ ಸರ್ಕಾರದ ಅಟಲ್‌ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವಂತಿಲ್ಲ ಎಂದು ನಿಯಮವನ್ನು ಬದಲಾವಣೆ ಮಾಡಲಾಗಿದೆ. ಅದಲ್ಲದೆ, ಡೆಬಿಟ್‌ ಕಾರ್ಡ್‌ ಹಾಗೂ ಕ್ರೆಡಿಟ್‌ ಕಾರ್ಡ್‌ ಬಳಸಿ ಮಾಡಲಾಗುವ ಪಾವತಿಗೆ ಇಂದಿನಿಂದ ಟೋಕನೈಜೇಷನ್‌ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ.  ಅದರೊಂದಿಗೆ ಕಮರ್ಷಿಯಲ್‌ ಗ್ಯಾಸ್‌ ಸಿಲಿಂಡರ್‌ಗಳ ಬೆಲೆಯಲ್ಲಿ ದೇಶಾದ್ಯಂತ ಇಳಿಕೆ ಮಾಡಲಾಗಿದೆ. ಸಣ್ಣ ಉಳಿತಾಯ, ಅಟಲ್‌ ಪಿಂಚಣಿ ಯೋಜನೆ, ಮ್ಯೂಚುವಲ್‌ ಫಂಡ್‌ ನಾಮಿನೇಮಷನ್‌, ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ ಪಾವತಿ, ಕಮರ್ಷಿಯಲ್‌ ಗ್ಯಾಸ್‌ ಸಿಲಿಂಡರ್ ಹಾಗೂ ಡಿಮ್ಯಾಟ್‌ ಖಾತೆಗ ವಿಚಾರದಲ್ಲಿ ಬದಲಾವಣೆಯಾಗಿದೆ.  ಈ ವರ್ಷದ ಆರಂಭದಲ್ಲಿ ಹಣಕಾಸು ಕಾಯಿದೆಯಲ್ಲಿ ಪರಿಚಯಿಸಲಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಗೆ ಸಂಬಂಧಿಸಿದ ಪ್ರಮುಖ ಶಾಸನ ಬದಲಾವಣೆಗಳು ಕೂಡ ಅಕ್ಟೋಬರ್‌ 1 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ (ಸಿಬಿಐಸಿ) ಮಂಡಳಿಯು ಈಗಾಗಲೇ ತಿಳಿಸಿದೆ.

1. ಸಣ್ಣ ಉಳಿತಾಯ ಯೋಜನೆಗಳಿಗೆ ಹೆಚ್ಚಿನ ಬಡ್ಡಿ: ಅಂಚೆ ಕಛೇರಿಯ ಅನೇಕ ಸಣ್ಣ ಉಳಿತಾಯ ಯೋಜನೆಗಳ (Small Savings Schemes) ಮೇಲಿನ ಬಡ್ಡಿಯನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ. 2 ವರ್ಷಗಳ ಅವಧಿಯ ಠೇವಣಿ ಮೇಲಿನ ಬಡ್ಡಿ ದರವನ್ನು 5.5% ರಿಂದ 5.7% ಕ್ಕೆ ಹೆಚ್ಚಿಸಲಾಗಿದೆ. 3 ವರ್ಷಗಳ ಅವಧಿಯ ಠೇವಣಿ ಮೇಲಿನ ಬಡ್ಡಿ ದರವನ್ನು 5.5% ರಿಂದ 5.8% ಕ್ಕೆ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯ (Senior Citizen Savings Scheme ) ಬಡ್ಡಿ ದರ ಈಗ ಶೇ.7.4ರಿಂದ ಶೇ.7.6ಕ್ಕೆ ಏರಿಕೆಯಾಗಿದೆ. ಅದೇ ಸಮಯದಲ್ಲಿ, ಮಾಸಿಕ ಆದಾಯ ಖಾತೆ ಯೋಜನೆಯು ಈಗ 6.6% ಬದಲಿಗೆ 6.7% ವಾರ್ಷಿಕ ಬಡ್ಡಿಯನ್ನು ಪಡೆಯುತ್ತದೆ. ಇದಲ್ಲದೆ, ಕಿಸಾನ್ ವಿಕಾಸ್ ಪತ್ರದ ಮೇಲಿನ ಬಡ್ಡಿ ದರವು 6.9% ರಿಂದ 7.0% ಕ್ಕೆ ಏರಿದೆ. ಅದರೊಂದಿಗೆ ಸುಕನ್ಯಾ ಸಮೃದ್ಧಿ ಯೋಜನೆ (7.6), ಪಿಪಿಎಫ್‌ (7.1), ರಾಷ್ಟ್ರೀಯ ಉಳಿತಾಯ ಪತ್ರ (6.8), ಟರ್ಮ್‌ ಡೆಪಾಸಿಟ್‌ (6.7) ಹಾಗೂ ಆರ್‌ಡಿ (5.8) ಬಡ್ಡಿಯನ್ನು ಏರಿಕೆ ಮಾಡಲಾಗಿದೆ.

2. ಆದಾಯ ತೆರಿಗೆ ಕಟ್ಟವವರಿಗಿಲ್ಲ ಅಟಲ್‌ ಪಿಂಚಣಿ ಯೋಜನೆ:  ಇಂದಿನಿಂದ ಆದಾಯ ತೆರಿಗೆ ಪಾವತಿದಾರರು (Income tax payers) ಅಟಲ್ ಪಿಂಚಣಿ  (Atal Pension Scheme) ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ. ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, 18 ವರ್ಷದಿಂದ 40 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಅವರು ಆದಾಯ ತೆರಿಗೆ ಪಾವತಿಸಲಿ ಅಥವಾ ಇಲ್ಲದಿರಲಿ ಸರ್ಕಾರದ ಈ ಪಿಂಚಣಿ ಯೋಜನೆಗೆ ಸೇರಬಹುದು. ಈ ಯೋಜನೆಯಡಿ ಪ್ರತಿ ತಿಂಗಳು 5000 ರೂ.ವರೆಗೆ ಮಾಸಿಕ ಪಿಂಚಣಿ ನೀಡಲಾಗುತ್ತದೆ. ಈಗ ಆದಾಯ ತೆರಿಗೆ ಪಾವತಿದಾರರು ಕೇಂದ್ರ ಸರ್ಕಾರದ ಅಟಲ್‌ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವಂತಿಲ್ಲ ಎಂದು ನಿಯಮವನ್ನು ಬದಲಾವಣೆ ಮಾಡಲಾಗಿದೆ. 

Tap to resize

Latest Videos

3. ಟೋಕನೈಜೇಷನ್‌ (Tokenization) ವ್ಯವಸ್ಥೆ:  ಕಾರ್ಡ್ ಪಾವತಿಗೆ ಟೋಕನೈಸೇಶನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಒಮ್ಮೆ ಕಾರ್ಯಗತಗೊಳಿಸಿದರೆ, ವ್ಯಾಪಾರಿಗಳು, ಪಾವತಿ ಸಂಗ್ರಾಹಕರು ಮತ್ತು ಪಾವತಿ ಗೇಟ್‌ವೇಗಳು ಇನ್ನು ಮುಂದೆ ಗ್ರಾಹಕರ ಕಾರ್ಡ್ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಆನ್‌ಲೈನ್ ಬ್ಯಾಂಕಿಂಗ್ ವಂಚನೆಗಳನ್ನು ತಡೆಗಟ್ಟುವುದು ಟೋಕನೈಸೇಶನ್ ವ್ಯವಸ್ಥೆಯನ್ನು ಜಾರಿಗೊಳಿಸುವ ಉದ್ದೇಶವಾಗಿದೆ. ಟೋಕನೈಸೇಶನ್ ಕಡ್ಡಾಯವಲ್ಲ, ಆದರೆ ಅದೇ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಿಂದ ಪುನರಾವರ್ತಿತ ಖರೀದಿಗಳನ್ನು ಮಾಡಲು ಇದು ಸುಲಭಗೊಳಿಸುತ್ತದೆ.

4. ಜನರಿಗೆ ನಾಮನಿರ್ದೇಶನ ವಿವರಗಳನ್ನು ನೀಡುವುದು ಅವಶ್ಯಕ: ಇನ್ನು ಮುಂದೆ, ಮ್ಯೂಚುವಲ್ ಫಂಡ್‌ಗಳಲ್ಲಿ(mutual funds) ಹೂಡಿಕೆ ಮಾಡುವ ಜನರು ನಾಮನಿರ್ದೇಶನ ವಿವರಗಳನ್ನು ನೀಡುವುದು ಅವಶ್ಯಕ. ಹಾಗೆ ಮಾಡಲು ವಿಫಲವಾದ ಹೂಡಿಕೆದಾರರು ಘೋಷಣೆಯನ್ನು ಭರ್ತಿ ಮಾಡಬೇಕಾಗುತ್ತದೆ. ನಾಮನಿರ್ದೇಶನ ಸೌಲಭ್ಯವನ್ನು ಘೋಷಣೆಯಲ್ಲಿ ಘೋಷಿಸಬೇಕಾಗುತ್ತದೆ. ಆಸ್ತಿ ನಿರ್ವಹಣಾ ಕಂಪನಿಗಳು (AMC) ಹೂಡಿಕೆದಾರರ ಅವಶ್ಯಕತೆಗೆ ಅನುಗುಣವಾಗಿ ಭೌತಿಕ ಅಥವಾ ಆನ್‌ಲೈನ್ ಮೋಡ್‌ನಲ್ಲಿ ನಾಮನಿರ್ದೇಶನ ನಮೂನೆ ಅಥವಾ ಘೋಷಣೆಯ ನಮೂನೆಯ ಆಯ್ಕೆಯನ್ನು ಒದಗಿಸಬೇಕಾಗುತ್ತದೆ. ಭೌತಿಕ ಆಯ್ಕೆಯ ಅಡಿಯಲ್ಲಿ, ಫಾರ್ಮ್ ಹೂಡಿಕೆದಾರರ ಸಹಿಯನ್ನು ಹೊಂದಿರುತ್ತದೆ, ಆದರೆ ಆನ್‌ಲೈನ್ ಫಾರ್ಮ್‌ನಲ್ಲಿ, ಹೂಡಿಕೆದಾರರು ಇ-ಸೈನ್ ಸೌಲಭ್ಯವನ್ನು ಬಳಸಲು ಸಾಧ್ಯವಾಗುತ್ತದೆ.

ಅಕ್ಟೋಬರ್‌ 1ರಿಂದ ಮತ್ತೆ ಗ್ರಾಹಕರಿಗೆ ತಟ್ಟಲಿದೆ ವಿದ್ಯುತ್ ಹೊರೆ

5. ವಾಣಿಜ್ಯ ಗ್ಯಾಸ್ ಸಿಲಿಂಡರ್ ಅಗ್ಗ: ಅಕ್ಟೋಬರ್ 1 ರಂದು ಇಂಡಿಯನ್ ಆಯಿಲ್ ಬಿಡುಗಡೆ ಮಾಡಿದ ಬೆಲೆಯ ಪ್ರಕಾರ, 19 ಕೆಜಿ ವಾಣಿಜ್ಯ ಸಿಲಿಂಡರ್ (Commercial Gas Cylinder)ಅಗ್ಗವಾಗಿದೆ. ರಾಜಧಾನಿ ದೆಹಲಿಯಲ್ಲಿ ಇದರ ಬೆಲೆ 1,885 ರಿಂದ 1859.50ಕ್ಕೆ ಇಳಿದಿದ್ದು, 25.50 ರೂಪಾಯಿ ಕಡಿಮೆಯಾಗಿದೆ. ಕೋಲ್ಕತ್ತಾದಲ್ಲಿ 1,995.50 ರೂ.ನಿಂದ 1959.00 ರೂಪಾಯಿಗೆ ಇಳಿದಿದ್ದು 36.5 ರೂಪಾಯಿ ಕಡಿಮೆಯಾಗಿದೆ. ಅದೇ ರೀತಿ ಮುಂಬೈನಲ್ಲಿ 1,844 ರೂ. 1811.50ರೂಪಾಯಿಗೆ ಇಳಿದಿದೆ. ಚೆನ್ನೈನಲ್ಲಿ 2,045 ರೂಪಾಯಿಯಿಮದ 2009 ರೂಪಾಯಿಗೆ ಇಳಿಕೆಯಾಗಿದೆ.  ಸತತ ಆರನೇ ಬಾರಿಗೆ ಕಮರ್ಷಿಯಲ್‌ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆಯಾಗಿದೆ.
ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿಯಲ್ಲಿ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ 1053 ರೂ. ಇದಲ್ಲದೇ, ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ದರವನ್ನು 4.5% ರಷ್ಟು ಕಡಿತಗೊಳಿಸಲಾಗಿದೆ. ಇದಾದ ನಂತರ, ರಾಷ್ಟ್ರ ರಾಜಧಾನಿಯಲ್ಲಿ ಜೆಟ್ ಇಂಧನದ ಬೆಲೆ 5,521.17 ರೂ.ನಷ್ಟು ಇಳಿಕೆಯಾಗಿದ್ದು, ಪ್ರತಿ ಕಿಲೋ ಲೀಟರ್‌ಗೆ ರೂ.115,520.27 ಆಗಿದೆ.

ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗೆ ಇಂದಿನಿಂದ ಹೊಸ ಸುರಕ್ಷತೆ: Tokenization ವ್ಯವಸ್ಥೆ ಬಗ್ಗೆ ಇಲ್ಲಿದೆ ಮಾಹಿತಿ..

6. ಡಿಮ್ಯಾಟ್‌ ಖಾತೆಗೆ ಟು ಫ್ಯಾಕ್ಟರ್‌ ವೆರಿಫಿಕೇಷನ್‌ ಕಡ್ಡಾಯ: ಇನ್ನು ಡಿಮ್ಯಾಟ್ ಖಾತೆಗೆ (Demat Account ) ಸಂಬಂಧಿಸಿದಂತೆ ಇಂದಿನಿಂದ, ಡಿಮ್ಯಾಟ್ ಖಾತೆದಾರರಿಗೆ ಎರಡು ಅಂಶಗಳ ದೃಢೀಕರಣವು ಕಡ್ಡಾಯವಾಗಿದೆ. ಎನ್‌ಎಸ್‌ಇ ಪ್ರಕಾರ, ಸದಸ್ಯರು ತಮ್ಮ ಡಿಮ್ಯಾಟ್ ಖಾತೆಗೆ ಲಾಗಿನ್ ಮಾಡಲು ಬಯೋಮೆಟ್ರಿಕ್ ದೃಢೀಕರಣವನ್ನು ದೃಢೀಕರಣ ಅಂಶವಾಗಿ ಬಳಸಬೇಕಾಗುತ್ತದೆ. ಎರಡನೆಯ ದೃಢೀಕರಣವು 'ಜ್ಞಾನದ ಅಂಶ' ಆಗಿರಬಹುದು. ಇದು ಪಾಸ್‌ವರ್ಡ್, ಪಿನ್ ಅಥವಾ ಯಾವುದೇ ಸ್ವಾಧೀನ ಅಂಶವಾಗಿರಬಹುದು, ಅದು ಬಳಕೆದಾರರಿಗೆ ಮಾತ್ರ ತಿಳಿದಿರುತ್ತದೆ.

click me!