Van Thinh Phat chairwoman case ತನ್ನ ತಾಯಿಯ ಜೊತೆ ರಸ್ತೆಯಲ್ಲಿ ಬ್ಯೂಟಿ ಪ್ರಾಡಕ್ಟ್ ಮಾರಿಕೊಂಡು ಜೀವನ ಸಾಗಿಸ್ತಿದ್ದ ಮಹಿಳೆ ಮುಂದೊಂದು ದಿನ ಎಷ್ಟು ದೊಡ್ಡ ವ್ಯಕ್ತಿಯಾದಳು ಎಂದರೆ, ದೇಶದ ರಿಯಲ್ ಎಸ್ಟೇಟ್ ಜಗತ್ತಿನ ರಾಣಿ ಎನಿಸಿಕೊಂಡರು. ಹೀಗೆ ಬೆಳೆದ ಈ ಮಹಿಳೆಗೆ ಶುಕ್ರವಾರ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ನವದೆಹಲಿ (ಏ.12): ವಿಯೆಟ್ನಾಂ ನ್ಯಾಯಾಲಯ ತನ್ನ ದೇಶದ ಮಹಿಳಾ ಬಿಲಿಯನೇರ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ರಿಯಲ್ ಎಸ್ಟೇಟ್ ದಿಗ್ಗಜ ಎನಿಸಿಕೊಂಡಿದ್ದ ಟ್ರೌಂಗ್ ಮೈ ಲ್ಯಾನ್ ಹೆಸರಿನ ಶತಕೋಟ್ಯಧಿಪತಿ ಮಹಿಳೆಯನ್ನು ಶತಕೋಟಿ ಡಾಲರ್ ವಂಚನೆ ಪ್ರಕರಣದಲ್ಲಿ ಗುರುವಾರ ಶಿಕ್ಷೆಗ ಗುರಿಯಾಗಿದ್ದಾರೆ. ಇದು ಇಡೀ ವಿಯೆಟ್ನಾಂ ದೇಶದ ಅತೀದೊಡ್ಡ ಹಣಕಾಸು ವಂಚನೆ ಎಂದೇ ಹೇಳಲಾಗಿದೆ. ಈಕೆಯ ಹಗರಣ ಬರೋಬ್ಬರಿ 42 ಸಾವಿರ ಜನರ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ. ಅಷ್ಟಕ್ಕೂ ಟ್ರೌಂಗ್ ಮೈ ಲ್ಯಾನ್ ಯಾರು? ಬರೋಬ್ಬರಿ ಒಂದು ದಶಕದಿಂದ ವಂಚನೆ ಮಾಡುವ ಮೂಲಕವೇ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತನ್ನ ಸಾಮ್ರಾಜ್ಯವನ್ನು ಕಟ್ಟಿದ್ದ ಈಕೆ ಗಲ್ಲು ಶಿಕ್ಷೆಯ ಹಂತಕ್ಕೆ ತಲುಪಿದ್ದಾದರೂ ಏಕೆ ಎನ್ನುವ ವಿವರ ಇಲ್ಲಿದೆ. ವಿಯೆಟ್ನಾಂನ ಹೋ ಚಿ ಮಿನ್ಹ್ ನಗರದ 67 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಟ್ರೌಂಗ್ ಮೈ ಲೇನ್ ಬರೋಬ್ಬರಿ 11 ವರ್ಷಗಳ ಕಾಲ ದೇಶದ ಅತಿದೊಡ್ಡ ಬ್ಯಾಂಕ್‌ಗಳನ್ನು ವಂಚಿಸಿದ ಆರೋಪದ ಮೇಲೆ ಮರಣದಂಡನೆ ವಿಧಿಸಲಾಗಿದೆ
ಇದು ದೇಶದ ಇತಿಹಾಸದಲ್ಲಿ ಅತ್ಯಂತ ಅಪರೂಪದ ನಿರ್ಧಾರ, ಏಕೆಂದರೆ ಈ ದೇಶದಲ್ಲಿ ಮರಣದಂಡನೆ ಅಸಾಮಾನ್ಯ ಶಿಕ್ಷೆಯಲ್ಲ, ಆದರೆ ಆರ್ಥಿಕ ವಿಷಯಗಳಲ್ಲಿ ಇಷ್ಟು ದೊಡ್ಡ ವ್ಯಕ್ತಿಗೆ ಈ ಶಿಕ್ಷೆ ನೀಡಿರುವುದು ಇದೇ ಮೊದಲಾಗಿದೆ. ಒಂದು ದಶಕದಿಂದ ನಡೆಯುತ್ತಿದ್ದ ಈ ವಂಚನೆ ಪ್ರಕರಣದ ಬಗ್ಗೆ ಮಾತನಾಡುವುದಾದರೆ, ಫೋರ್ಬ್ಸ್ ವರದಿಗಳ ಪ್ರಕಾರ, ಟ್ರಾಂಗ್ ಮೈ ಲೆನ್ ವಿಯೆಟ್ನಾಂನ ಪ್ರಸಿದ್ಧ ಕೈಗಾರಿಕೋದ್ಯಮಿ ಮತ್ತು ಪ್ರಮುಖ ಡೆವಲಪರ್ ವ್ಯಾನ್ ಥಿನ್ ಫ್ಯಾಟ್ (ವಿಟಿಪಿ) ಅಧ್ಯಕ್ಷರಾಗಿದ್ದಾರೆ. ಅವರ ಕಂಪನಿಯು ಐಷಾರಾಮಿ ಅಪಾರ್ಟ್‌ಮೆಂಟ್‌ಗಳು, ಹೋಟೆಲ್‌ಗಳು, ಕಚೇರಿಗಳು ಮತ್ತು ಶಾಪಿಂಗ್ ಮಾಲ್‌ಗಳ ನಿರ್ಮಾಣದಲ್ಲಿದೆ. ಅಕ್ಟೋಬರ್ 2022 ರಲ್ಲಿ, ಈ ಮಹಿಳಾ ಬಿಲಿಯನೇರ್ ಅನ್ನು ಎಸ್‌ಸಿಬಿ ಬ್ಯಾಂಕ್‌ನಲ್ಲಿ ಹಣಕಾಸು ಹಗರಣದ ಆರೋಪದ ಮೇಲೆ ಬಂಧಿಸಲಾಗಿತ್ತು. ಇದರ ನಂತರ, ಅವರ ವಿರುದ್ಧ 12.5 ಬಿಲಿಯನ್ ಡಾಲರ್ ಮೊಕದ್ದಮೆ ಹೂಡಲಾಗಿತ್ತು. ಹಾಗಿದ್ದರೂ, ಈ ಹಗರಣದ ಮೂಲಕ ಬ್ಯಾಂಕ್ 27 ಬಿಲಿಯನ್ ಡಾಲರ್ ನಷ್ಟ ಮಾಡಿಕೊಂಡಿದೆ ಎಂದು ವಕೀಲರು ಹೇಳಿದ್ದಾರೆ.
ಟ್ರೌಂಗ್ ಮೈ ಲ್ಯಾನ್ ಸೈಗಾನ್ ಕಮರ್ಷಿಯಲ್ ಬ್ಯಾಂಕ್ (SCB) ನಿಂದ 44 ಶತಕೋಟಿ ಡಾಲರ್ ಸಾಲವನ್ನು ತೆಗೆದುಕೊಂಡಿದ್ದಕ್ಕಾಗಿ ಶಿಕ್ಷೆಗೆ ಒಳಲಾಗಿದ್ದಾರೆ. ಇದಲ್ಲದೆ, ಕೋರ್ಟ್ ತನ್ನ ತೀರ್ಪಿನಲ್ಲಿ 27 ಬಿಲಿಯನ್ ಡಾಲರ್ ಹಣವನ್ನು ಬ್ಯಾಂಕ್‌ಗೆ ವಾಪಾಸ್ ಮಾಡುವಂತೆ ಆದೇಶ ನೀಡಿದೆ. ಆದರೆ, ವಕೀಲರ ಪ್ರಕಾರಣ ಈ ಹಣವನ್ನು ಎಂದಿಗೂ ವಸೂಲಿ ಮಾಡಲು ಸಾಧ್ಯವಾಗೋದಿಲ್ಲ ಎಂದಿದ್ದಾರೆ. ಐದು ವಾರಗಳ ವಿಚಾರಣೆಯ ಸಂದರ್ಭದಲ್ಲಿ ನೀಡಿದ ವಾದಗಳ ಆಧಾರದ ಮೇಲೆ, ಲ್ಯಾನ್ 2011 ಮತ್ತು 2022 ರ ನಡುವೆ SCB ಬ್ಯಾಂಕ್ ಅನ್ನು ಅಕ್ರಮವಾಗಿ ನಿಯಂತ್ರಿಸಿದ್ದರು ಮತ್ತು ತಮ್ಮ ನಕಲಿ ಕಂಪನಿಗಳ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿದ್ದರು ಎಂದು ಕೋರ್ಟ್ ತಿಳಿಸಿದೆ.
ಇದನ್ನು ಅತ್ಯಂತ ಚಾಣಾಕ್ಷತನದಿಂದ ಮಾಡಲಾಗಿದ್ದು, ಲಂಚ ನೀಡುವ ಮೂಲಕ ಬ್ಯಾಂಕ್ ಅಧಿಕಾಇರಗಳ ಬಾಯನ್ನೂ ಮುಚ್ಚಿಸಲಾಗಿದೆ. ಲ್ಯಾನ್ ಮತ್ತು ಅವರ ಸಹಚರರು ಈ ನಕಲಿ ಕಂಪನಿಗಳಿಗೆ ಶತಕೋಟಿ ಡಾಲರ್ ಮೌಲ್ಯದ 2,500 ಅಕ್ರಮ ಸಾಲಗಳನ್ನು ಒದಗಿಸಿದ್ದಾರೆ, ಇದರಿಂದಾಗಿ ಬ್ಯಾಂಕ್‌ಗೆ ಸುಮಾರು $27 ಶತಕೋಟಿ ನಷ್ಟವಾಗಿದೆ ಎಂದು ಪ್ರಾಸಿಕ್ಯೂಟರ್‌ಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
'ಇಲ್ಲಿ ಸೊಳ್ಳೆನಾದ್ರೂ ಕಾಣುತ್ತಾ ನೋಡಿ ..' ಎಂದ ಬರಡು ಭೂಮಿಯಲ್ಲಿ 1.5 ಲಕ್ಷ ಕೋಟಿ ಹೂಡಿಕೆ ಮಾಡಿದ ಅದಾನಿ!
ಈ ಹಗರಣದಲ್ಲಿ ಇತರ 85 ಜನರು ಲಂಚ ಮತ್ತು ಅಧಿಕಾರ ದುರುಪಯೋಗ ಸೇರಿದಂತೆ ಬ್ಯಾಂಕಿಂಗ್ ಕಾನೂನಿನ ಉಲ್ಲಂಘನೆಯ ಆರೋಪದ ಮೇಲೆ ಶಿಕ್ಷೆಯನ್ನು ಎದುರಿಸುವ ಸಾಧ್ಯತೆ ಇದೆ. ಸುಮಾರು 42,000 ಜನರು ಈ ವಂಚನೆಗೆ ಬಲಿಯಾಗಿದ್ದಾರೆ, ಅವರನ್ನು ಪೊಲೀಸರು ಗುರುತಿಸಿದ್ದಾರೆ. ವಂಚನೆ ಪ್ರಕರಣವನ್ನು ಒಂದು ತಿಂಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಯಿತು ಮತ್ತು ವರದಿಯ ಪ್ರಕಾರ, ಸುಮಾರು 2,700 ಜನರನ್ನು ಸಾಕ್ಷಿ ನುಡಿಯಲು ಕೋರ್ಟ್‌ಗೆ ಕರೆಯಲಾಗಿದೆ. ವಿಯೆಟ್ನಾ ಸರ್ಕಾರದ ಪರವಾಗಿ 10 ಸಾಲಿಸಿಟರ್ ಜನರಲ್‌ಗಳು ಹಾಗೂ 200 ವಕೀಲರು ಭಾಗವಹಿಸಿದ್ದರು. ಅದಲ್ಲದೆ, ಟ್ರೌಂಗ್ ಲ್ಯಾನ್ ವಿರುದ್ಧ 104 ಬಾಕ್ಸ್‌ಗಳಲ್ಲಿ 6 ಟನ್ ತೂಕದ ಸಾಕ್ಷ್ಯವನ್ನು ಕೋರ್ಟ್‌ಗೆ ನೀಡಲಾಗಿದೆ. ಕೊನೆಗೆ ಕೋರ್ಟ್, ಟ್ರೌಂಗ್ ಮೈ ಲ್ಯಾನ್ ಅವರನ್ನು ಲಂಚ, ದುರುಪಯೋಗ ಮತ್ತು ಬ್ಯಾಂಕಿಂಗ್ ನಿಯಮಗಳನ್ನು ಉಲ್ಲಂಘಿಸಿದ ಅಪರಾಧಿ ಎಂದು ಘೋಷಣೆ ಮಾಡಿದೆ.
'ಕಾವೇರಿಯ ಕಣ್ಣುಗಳ ಮುಂದೆ ನನ್ನೆಲ್ಲಾ ಸಂಪತ್ತು ಶೂನ್ಯ..' ಅದಾನಿ ಭಾವುಕ ಪೋಸ್ಟ್!
ಯಾರೀಕೆ ಟ್ರೌಂಗ್ ಮೈ ಲ್ಯಾನ್: ಟ್ರಾಂಗ್ ಮೈ ಲ್ಯಾನ್ ಹೋ ಚಿ ಮಿನ್ಹ್ ನಗರದಲ್ಲಿ (ಹಿಂದೆ ಸೈಗಾನ್) ಸಿನೋ-ವಿಯೆಟ್ನಾಮೀಸ್ ಕುಟುಂಬಕ್ಕೆ ಸೇರಿದವರು. 1956 ರಲ್ಲಿ ಜನಿಸಿದ್ದ ಈಕೆ, ಆರಂಭದಲ್ಲಿ ತಾಯಿಯ ಜೊತೆ ರಸ್ತೆ ಬದಿ ಬ್ಯೂಟಿ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ 1986 ರ ಸಮಯದಲ್ಲಿ, ಕಮ್ಯುನಿಸ್ಟ್ ಪಕ್ಷವು ಡೋಯ್ ಮೋಯ್ ಎಂದು ಕರೆಯಲ್ಪಡುವ ಆರ್ಥಿಕ ಸುಧಾರಣೆಗಳ ಅವಧಿಯನ್ನು ಪ್ರಾರಂಭಿಸಿದಾಗ, ಟ್ರೌಂಗ್ ಲ್ಯಾನ್ ಭೂಮಿ ಮತ್ತು ಇತರ ಆಸ್ತಿಗಳನ್ನು ಖರೀದಿಸಲು ಮತ್ತು ಮಾರಾಟ ಮಾಡುವ ಉದ್ಯೋಗಕ್ಕೆ ಇಳಿದು ದೇಶದ ಬಿಲಿಯನೇರ್ ಉದ್ಯಮಿ ಎನಿಸಿಕೊಂಡಿದ್ದರು.