ಅನೇಕ ಬಾಲಿವುಡ್ ಸ್ಟಾರ್ಸ್ ಈಗ ನಮ್ಮ ಕಣ್ಣಿಗೆ ಕಾಣ್ತಿಲ್ಲ. ಅವರು ಏನು ಮಾಡ್ತಿದ್ದಾರೆ ಎಂಬ ಪ್ರಶ್ನೆ ಮೂಡೋದು ಸಹಜ. ಅದ್ರಲ್ಲಿ ರಾಝ್ ಖ್ಯಾತಿಯ ಡಿನೋ ಮೋರಿಯಾ ಸೇರಿದ್ದಾರೆ. ಅವರ ಈಗಿನ ಕೆಲಸ ಏನು ಅನ್ನೋದನ್ನು ನಾವು ಹೇಳ್ತೇವೆ.
ಸಿನಿಮಾ ಕ್ಷೇತ್ರಕ್ಕೆ ಬಂದ ಎಲ್ಲರೂ ಯಶಸ್ವಿಯಾಗಿಲ್ಲ. ಕೆಲವರು ಒಂದೋ ಎರಡೋ ಚಿತ್ರ ಮಾಡಿದ ನಂತ್ರ ಬಣ್ಣದ ಲೋಕದಿಂದ ಮಾಯವಾಗಿದ್ದಾರೆ. ಮತ್ತೆ ಕೆಲವರು ನಿರಂತರವಾಗಿ ನಟಿಸ್ತಿದ್ದರೂ ಅಭಿಮಾನಿಗಳು ಅವರನ್ನು ಮೆಚ್ಚಿಕೊಂಡಿಲ್ಲ. ಬಣ್ಣದ ಲೋಕ ಕೈ ಹಿಡಿಯುತ್ತಿಲ್ಲ ಎನ್ನುವ ಸಮಯದಲ್ಲಿ ಇನ್ನೊಂದು ಕ್ಷೇತ್ರಕ್ಕೆ ಜಿಗಿದು ಅಲ್ಲಿ ಯಶಸ್ವಿಯಾದ ಅನೇಕ ಕಲಾವಿದರು ನಮ್ಮಲ್ಲಿದ್ದಾರೆ. ಅದ್ರಲ್ಲಿ ಬಾಲಿವುಡ್ ನಟ ಡಿನೋ ಮೋರಿಯಾ ಕೂಡ ಒಬ್ಬರು. ಡಿನೋ ಮೋರಿಯಾ, ರಾಝ್ ಮತ್ತು ಅಕ್ಸರ್ ಹಿಟ್ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ನಂತ್ರ ಅವರು ಮಾಡಿದ ಸಿನಿಮಾ ಅವರ ಕೈ ಹಿಡಿಯಲಿಲ್ಲ. ಆ ನಂತ್ರ ಯಾವುದೇ ಆಫರ್ ಡಿನೋ ಮೋರಿಯಾಗೆ ಬಂದಿರಲಿಲ್ಲ. ತಮ್ಮ 41ನೇ ವಯಸ್ಸಿನಲ್ಲಿ ಮತ್ತೆ ಡಿನೋ ಮೋರಿಯಾ ಚಿತ್ರರಂಗದತ್ತ ತಿರುಗಿದ್ದರು. 2021ರಲ್ಲಿ ಡಿನೋ ಮೋರಿಯಾ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಎಂಪೈರ್ ಹೆಸರಿನ ವೆಬ್ ಸರಣಿಯಲ್ಲಿ ಅವರು ನಟಿಸಿದ್ದರು. ಆದ್ರೆ ಈ ಸರಣಿ ಕೂಡ ಡಿನೋ ಮೋರಿಯಾ ಈ ರಂಗದಲ್ಲಿ ಮುಂದುವರೆಯಲು ಪ್ರೋತ್ಸಾಹ ನೀಡಲಿಲ್ಲ. ಆದ್ರೆ ಡಿನೋ ಮೋರಿಯಾ ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ನಟನೆ ಜೊತೆ ಬ್ಯುಸಿನೆಸ್ ಅವರ ಫ್ಯಾಷನ್ ಆದ ಕಾರಣ ಡಿನೋ ಮೋರಿಯಾ ಸ್ಟಾರ್ಟ್ ಅಪ್ ನತ್ತ ಮುಖ ಮಾಡಿದ್ರು. ಈಗ ಡಿನೋ ಮೋರಿಯಾ ಕಂಪನಿಯೊಂದರ ಸಹ ಸಂಸ್ಥಾಪಕರಾಗಿ ಕೆಲಸ ಮಾಡ್ತಿದ್ದಾರೆ. ತಮ್ಮ ಫಿಟ್ನೆಸ್ ಗೆ ಹೆಚ್ಚು ಆದ್ಯತೆ ನೀಡುವ ಡಿನೋ ಮೋರಿಯಾ, ದಿ ಫ್ರೆಶ್ ಪ್ರೆಸ್ ಹೆಸರಿನ ಜ್ಯೂಸ್ ಕಂಪನಿ ನಡೆಸುತ್ತಿದ್ದಾರೆ.
ದಿ ಫ್ರೆಶ್ ಪ್ರೆಸ್, ಕೋಲ್ಡ್ (Cold) ಪ್ರೆಸ್ ಜ್ಯೂಸನ್ನು ಮಾರಾಟ ಮಾಡುತ್ತದೆ. 2018ರಲ್ಲಿ ಈ ಕಂಪನಿ (Company) ಶುರುವಾಯ್ತು. ದಿ ಫ್ರೆಶ್ ಪ್ರೆಸ್‌ನ ಮೂಲ ಸಹ-ಸಂಸ್ಥಾಪಕರು ಮಿಥಿಲ್ ಲೋಧಾ ಮತ್ತು ರಾಹುಲ್ ಜೈನ್. ಇವರ ನಂತ್ರ ಡಿನೋ ಮೋರಿಯಾ ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಈಗ ಸಹ ಸಂಸ್ಥಾಪಕ (Founder) ಸ್ಥಾನದಲ್ಲಿ ಕೆಲಸ ಮಾಡ್ತಿದ್ದಾರೆ.
ನಿಮ್ಗೆ ಸೆಂಟ್ರಲ್ ಕೆವೈಸಿ ಬಗ್ಗೆ ಗೊತ್ತಾ? ಒಮ್ಮೆ ಮಾಡಿಸಿದ್ರೆ ಸಾಕು, ಬ್ಯಾಂಕಿಗೆ ಪದೇಪದೆ ದಾಖಲೆ ನೀಡೋ ರಗಳೆ ಇಲ್ಲ!
ಕೋಲ್ಡ್ ಪ್ರೆಸ್ ಜ್ಯೂಸ್ ಎಂದ್ರೇನು? : ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡುವ ಡಿನೋ ಮೋರಿಯಾ, ಆರೋಗ್ಯಕರ ಜ್ಯೂಸ್ ಮಾರಾಟ ಮಾಡುತ್ತಿದ್ದಾರೆ. ಕೋಲ್ಡ್ ಪ್ರೆಸ್ ಜ್ಯೂಸ್ ಶಾಖ ಅಥವಾ ಆಮ್ಲಜನಕವಿಲ್ಲದೆ ಹೈಡ್ರಾಲಿಕ್ ಯಂತ್ರದ ಸಹಾಯದಿಂದ ತೆಗೆದ ಹಣ್ಣಿನ ರಸವಾಗಿದೆ. ಇದು ಜೀವಸತ್ವ, ಖನಿಜ ಮತ್ತು ಕಿಣ್ವಗಳಿಂದ ಕೂಡಿರುತ್ತದೆ. ನೂರಕ್ಕೆ ನೂರು ಶುದ್ಧ ಹಣ್ಣಿನ ರಸ ಇದಾಗಿದೆ.
Success Story : ಎಂಟನೇ ತರಗತಿ ಓದಿದ ವ್ಯಕ್ತಿ ಹಲ್ದಿರಾಮ್ ಕಂಪನಿ ಕಟ್ಟಿದ್ದು ಹೇಗೆ?
ಜ್ಯೂಸ್ ಕ್ಷೇತ್ರದಲ್ಲಿ ಯಶಸ್ವಿಯಾದ ಕಂಪನಿ : ಡಿನೋ ಮೋರಿಯಾ ಒಡೆತನದ ದಿ ಫ್ರೆಶ್ ಪ್ರೆಸ್ ಕಂಪನಿ ದೇಶಾದ್ಯಂತ 36 ಮಳಿಗೆಗಳನ್ನು ಹೊಂದಿದೆ. ಕಂಪನಿಯು ಪಿವಿಆರ್, ಐನಾಕ್ಸ್ ಮತ್ತು ರಿಲಯನ್ಸ್ ನೊಂದಿಗೆ ಪಾಲುದಾರಿಕೆ ಹೊಂದಿದೆ. ಸ್ಟಾರ್ಟಪ್ ಗೃಹಸ್ ಕಲೆಕ್ಟಿವ್ ಕನ್ಸ್ಯೂಮರ್‌ನಿಂದ ಆರ್ಥಿಕ ಸಹಾಯ ಪಡೆಯುತ್ತಿದೆ. ಭಾರತದಲ್ಲಿ ಇದರ ಮಾರುಕಟ್ಟೆ ಶೇಕಡಾ 25 ರ ದರದಲ್ಲಿ ಬೆಳೆಯುತ್ತಿದೆ. ಕಂಪನಿ 1000 ತ್ವರಿತ ಸೇವಾ ರೆಸ್ಟೋರೆಂಟ್‌ಗಳನ್ನು ತೆರೆಯುವ ಗುರಿಯನ್ನು ಹೊಂದಿದೆ. ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನಲ್ಲಿ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವುದು ಕಂಪನಿ ಗುರಿ. ಇದಲ್ಲದೆ ಗುಜರಾತ್, ರಾಜಸ್ಥಾನ ಮತ್ತು ದೆಹಲಿಯಲ್ಲಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸುವ ಯೋಜನೆಯನ್ನು ಕಂಪನಿ ಹೊಂದಿದೆ. 2030 ರ ವೇಳೆಗೆ ಜಾಗತಿಕ ಕೋಲ್ಡ್ ಪ್ರೆಸ್ ಜ್ಯೂಸ್ ಮಾರುಕಟ್ಟೆ ಮೌಲ್ಯ 1.5 ಶತಕೋಟಿ ಡಾಲರ್ ಅಂದ್ರೆ ಸುಮಾರು 12000 ಕೋಟಿ ರೂಪಾಯಿ ತಲುಪುವ ಸಾಧ್ಯತೆ ಇದೆ.