ಕೋವಿಡ್ ಸಾಂಕ್ರಾಮಿಕದಿಂದಾಗಿ ಜಗತ್ತಿನ ಆರ್ಥಿಕತೆಗೆ ಪೆಟ್ಟು ಬಿದ್ದರೂ ಕೂಡಾ, ಭಾರತೀಯ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿದ್ದಾರೆ. ಭಾರತದ 100 ಮಂದಿ ಶ್ರೀಮಂತರ ಒಟ್ಟು ಸಂಪತ್ತು 2.04 ಲಕ್ಷ ಕೋಟಿಯಷ್ಟು ಹೆಚ್ಚಳವಾಗಿ 65.34 ಲಕ್ಷ ಕೋಟಿ ರೂ.ಗೆ ತಲುಪಿದೆ.
ನವದೆಹಲಿ: ಫೋರ್ಬ್ಸ್ ನಿಯತಕಾಲಿಕೆ (Forbes Magazine) ಭಾರತದ ಟಾಪ್ 100 ಶ್ರೀಮಂತರ (Top 100 Richest Indians) ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಅದಾನಿ ಸಮೂಹದ (Adani Group) ಗೌತಮ್ ಅದಾನಿ (Gautam Adani) 12 ಲಕ್ಷ ಕೋಟಿ ರೂ. ಅಸ್ತಿಯೊಂದಿಗೆ ಮೊದಲ ಸ್ಥಾನ, 7 ಲಕ್ಷ ಕೋಟಿ ರೂ. ಆಸ್ತಿಯೊಂದಿಗೆ ರಿಲಯನ್ಸ್ ಇಂಡಸ್ಟ್ರೀಸ್‌ನ (Reliance Industries) ಮುಕೇಶ್ ಅಂಬಾನಿ (Mukesh Ambani) 2ನೇ ಸ್ಥಾನ ಮತ್ತು ಡಿ ಮಾರ್ಟ್ ಮಾಲೀಕ ರಾಧಾಕೃಷ್ಣ ಧಮಾನಿ (Radhakishan Damani) 2.2 ಲಕ್ಷ ಕೋಟಿ ರೂ. ಆಸ್ತಿಯೊಂದಿಗೆ 3ನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ಸೈರಸ್ ಪೂನಾವಾಲಾ (1.73 ಲಕ್ಷ ಕೋಟಿ ರೂ.), ಶಿವ ನಡಾರ್ (1.72 ಲಕ್ಷ ಕೋಟಿ ರೂ.), ಸಾವಿತ್ರಿ ಜಿಂದಾಲ್ (1.32 ಲಕ್ಷ ಕೋಟಿ ರೂ.), ದಿಲೀಪ್ ಸಾಂಘ್ವಿ (1.25 ಲಕ್ಷ ಕೋಟಿ ರೂ.), ಹಿಂದೂಜಾ ಸಹೋದರರು (1.22 ಲಕ್ಷ ಕೋಟಿ ರೂ.), ಕುಮಾರ ಮಂಗಳಂ ಬಿರ್ಲಾ (1.21 ಲಕ್ಷ ಕೋಟಿ ರೂ.), ಬಜಾಜ್ ಕುಟುಂಬ (1.17 ಲಕ್ಷ ಕೋಟಿ ರೂ.) 7-10 ನೇ ಸ್ಥಾನದಲ್ಲಿದೆ.
ಕೋವಿಡ್ ವೇಳೆಯೂ ಶ್ರೀಮಂತರ ಹೆಚ್ಚಳ
ಕೋವಿಡ್ ಸಾಂಕ್ರಾಮಿಕದಿಂದಾಗಿ ಜಗತ್ತಿನ ಆರ್ಥಿಕತೆಗೆ ಪೆಟ್ಟು ಬಿದ್ದರೂ ಕೂಡಾ, ಭಾರತೀಯ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿದ್ದಾರೆ. ಭಾರತದ 100 ಮಂದಿ ಶ್ರೀಮಂತರ ಒಟ್ಟು ಸಂಪತ್ತು 2.04 ಲಕ್ಷ ಕೋಟಿಯಷ್ಟು ಹೆಚ್ಚಳವಾಗಿ 65.34 ಲಕ್ಷ ಕೋಟಿ ರೂ.ಗೆ ತಲುಪಿದೆ. ಭಾರತದ ಟಾಪ್ 10 ಶ್ರೀಮಂತರ ಒಟ್ಟು ಸಂಪತ್ತು ಮೌಲ್ಯವೇ 31.44 ಲಕ್ಷ ಕೋಟಿ ರೂ. ನಷ್ಟಿದೆ.
ಇದನ್ನು ಓದಿ: Forbes 2022: ಜಗತ್ತಿನ ಟಾಪ್ 10 ಗರಿಷ್ಠ ಸಂಪಾದನೆ ಮಾಡುವ ಫುಟ್ಬಾಲಿಗರು, ರೊನಾಲ್ಡೋ, ಮೆಸ್ಸಿಗಿಂತ ಶ್ರೀಮಂತ ಈ ಫುಟ್ಬಾಲಿಗ
ದೇಶದ ಟಾಪ್ 5 ಶ್ರೀಮಂತರು
ಹೆಸರು ಆಸ್ತಿ ಮೌಲ್ಯ
ಗೌತಮ್ ಅದಾನಿ 12 ಲಕ್ಷ ಕೋಟಿ ರೂ.
ಮುಖೇಶ್ ಅಂಬಾನಿ 7.1 ಲಕ್ಷ ಕೋಟಿ ರೂ.
ರಾಧಾಕೃಷ್ಣ ಧಮಾನಿ 2.2 ಲಕ್ಷ ಕೋಟಿ ರೂ.
ಸೈರಸ್ ಪೂನಾವಾಲಾ 1.73 ಲಕ್ಷ ಕೋಟಿ ರೂ.
ಟಾಪ್-100 ಶ್ರೀಮಂತರ ಪಟ್ಟಿ: ಕರ್ನಾಟಕದ 10 ಮಂದಿಗೆ ಸ್ಥಾನ
ಅಮೆರಿಕದ ಫೋರ್ಬ್ಸ್ ನಿಯತಕಾಲಿಕೆ ಭಾರತದ 100 ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಕರ್ನಾಟಕದ 10 ಜನರು ಸ್ಥಾನ ಪಡೆದುಕೊಂಡಿದ್ದಾರೆ. ಈ ಪೈಕಿ ದೇಶದ ನಂ.1 ಅದಾನಿ, ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜೀ 76000 ಕೋಟಿ ರೂ. ಆಸ್ತಿಯೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಇಸ್ಫೋಸಿಸ್‌ನ ಸಂಸ್ಥಾಪಕ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ 35000 ಕೋಟಿ ರೂ ಆಸ್ತಿಯೊಂದಿಗೆ 2ನೇ ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಏಷ್ಯಾದ ಬ್ಯುಸಿನೆಸ್ ವಿಮೆನ್ ಪಟ್ಟಿ ಪ್ರಕಟಿಸಿದ ಫೋರ್ಬ್ಸ್; ಮೂವರು ಭಾರತೀಯ ಮಹಿಳೆಯರಿಗೆ ಸ್ಥಾನ
ಉಳಿದಂತೆ ಶಿಕ್ಷಣ ಸ್ಟಾರ್ಟಪ್ ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರ ಮತ್ತು ದಿವ್ಯಾ ಗೋಕುಲ್‌ನಾತ್ (29000 ಕೋಟಿ ರೂ.), ಷೇರು ಮಾರುಕಟ್ಟೆ ಸ್ಟಾರ್ಟಪ್ ಜೆರೋಧಾ ಸಂಸ್ಥಾಪಕ ನಿತಿನ್ ಮತ್ತು ನಿಖಿಲ್ ಕುಟುಂಬ (27 ಸಾವಿರ ಕೋಟಿ ರೂ.), ಇಸ್ಫೋಸಿಸ್‌ನ ಸೇನಾಪತಿ ಗೋಪಾಲಕೃಷ್ಣ (24 ಸಾವಿರ ಕೋಟಿ ರೂ.), ಇಸ್ಫೋಸಿಸ್‌ನ ನಂದನ್ ನೀಲೇಕಣಿ (22 ಸಾವಿರ ಕೋಟಿ ರೂ.), ಬಯೋಕಾನ್‌ನ ಕಿರಣ್ ಮಜುಂದಾರ್ ಶಾ (22 ಸಾವಿರ ಕೋಟಿ ರು.), ಕಲ್ಯಾಣಿ ಗ್ರೂಪ್‌ನ ಬಾಬಾ ಕಲ್ಯಾಣಿ (19 ಸಾವಿರ ಕೋಟಿ ರೂ.), ಇಸ್ಫೋಸಿಸ್‌ನ ಕೆ. ದಿನೇಶ್ (18 ಸಾವಿರ ಕೋಟಿ ರೂ.), ಎಂಬಸಿ ಗ್ರೂಪ್‌ನ ಜಿತೇಂದ್ರ ವೀರ್ವಾನಿ (15 ಸಾವಿರ ಕೋಟಿ ರು.) ಸಂಪತ್ತು ಮೌಲ್ಯದೊಂದಿಗೆ ನಂತರದ ಸ್ಥಾನಗಳಲ್ಲಿದ್ದಾರೆ.
ಇದನ್ನೂ ಓದಿ: ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಮರಳಿ ಮೂರನೇ ಸ್ಥಾನಕ್ಕೆ ಜಿಗಿದ ಗೌತಮ್ ಅದಾನಿ