Vikram Kirloskar: ಟೊಯೋಟಾ ಕಿರ್ಲೋಸ್ಕರ್‌ ಮೋಟರ್‌ ಉಪಾಧ್ಯಕ್ಷ ಹೃದಯಾಘಾತದಿಂದ ನಿಧನ: ಸಿಎಂ ಸಂತಾಪ

By BK AshwinFirst Published Nov 30, 2022, 8:04 AM IST
Highlights

ಖ್ಯಾತ ಉದ್ಯಮಿ ವಿಕ್ರಮ್ ಎಸ್ ಕಿರ್ಲೋಸ್ಕರ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದು, ಇವರ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಉದ್ಯಮಿ ಕಿರಣ್‌ ಮಜುಂದಾರ್‌ ಶಾ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ. 

ಖ್ಯಾತ ಉದ್ಯಮಿ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ (Toyota Kirloskar Motor) ಉಪಾಧ್ಯಕ್ಷ (Vice Chairperson) ವಿಕ್ರಮ್ ಎಸ್ ಕಿರ್ಲೋಸ್ಕರ್ (Vikram S Kirloskar) ಅವರು ಹೃದಯಾಘಾತದಿಂದ ಬೆಂಗಳೂರಿನಲ್ಲಿ (Bengaluru) ಮೃತಪಟ್ಟಿದ್ದಾರೆ. ನವೆಂಬರ್ 29ರ ಮಧ್ಯರಾತ್ರಿ ನಿಧನರಾಗಿದ್ದಾರೆ ಎಂದು ಕಂಪನಿಯ ಹೇಳಿಕೆ ತಿಳಿಸಿದೆ. ಇಂದು ಅಂದರೆ ನವೆಂಬರ್ 30, ಬುಧವಾರ ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ಹೆಬ್ಬಾಳ ಚಿತಾಗಾರದಲ್ಲಿ (Hebbal Crematorium) ಅಂತ್ಯಕ್ರಿಯೆ ನಡೆಯಲಿದೆ. ಇವರಿಗೆ 64 ವರ್ಷ ವಯಸ್ಸಾಗಿತ್ತು. ವಿಕ್ರಮ್‌ ಕಿರ್ಲೋಸ್ಕರ್‌ ನಿಧನಕ್ಕೆ ಸಿಎಂ ಬೊಮ್ಮಾಯಿ, ಕಿರಣ್‌ ಮಜುಂದಾರ್‌ ಶಾ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.

ವಿಕ್ರಮ್ ಎಸ್ ಕಿರ್ಲೋಸ್ಕರ್ ನಿಧನದ ಬಗ್ಗೆ  "ನವೆಂಬರ್ 29 ರಂದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಉಪಾಧ್ಯಕ್ಷರಾದ ಶ್ರೀ ವಿಕ್ರಮ್ ಎಸ್. ಕಿರ್ಲೋಸ್ಕರ್ ಅವರ ಅಕಾಲಿಕ ನಿಧನವನ್ನು ತಿಳಿಸಲು ನಾವು ತುಂಬಾ ದುಃಖಿತರಾಗಿದ್ದೇವೆ. ಈ ದುಃಖದ ಸಮಯದಲ್ಲಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವು ಪ್ರತಿಯೊಬ್ಬರನ್ನು ಪ್ರಾರ್ಥಿಸುವಂತೆ ಕೇಳಿಕೊಳ್ಳುತ್ತೇವೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನಮ್ಮ ಸಹಾನುಭೂತಿಗಳು’’ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನು ಓದಿ: ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಬಲಪಡಿಸಲು ಟೋಯೋಟಾ ಮಹತ್ವದ ಘೋಷಣೆ

We extend our deepest sympathies to his family and friends. Last respect can be paid at Hebbal Crematorium, Bengaluru, on 30th November 2022 at 1pm. [2/2] pic.twitter.com/2XuhErUnzD

— Toyota India (@Toyota_India)

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಉದ್ಯಮಿ ವಿಕ್ರಮ್ ಎಸ್‌. ಕಿರ್ಲೋಸ್ಕರ್‌ ನಿಧನಕ್ಕೆ ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ. ಭಾರತದ ಆಟೋಮೋಟಿವ್ ಉದ್ಯಮದ ದಿಗ್ಗಜರಲ್ಲಿ ಒಬ್ಬರಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಉಪಾಧ್ಯಕ್ಷರಾದ ಶ್ರೀ ವಿಕ್ರಮ್ ಕಿರ್ಲೋಸ್ಕರ್ ಅವರ ದುಃಖ ಮತ್ತು ಅಕಾಲಿಕ ನಿಧನಕ್ಕೆ ಹೃತ್ಪೂರ್ವಕ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನಷ್ಟವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ಮತ್ತು ಸ್ನೇಹಿತರಿಗೆ ನೀಡಲಿ ಎಂದು ಕರ್ನಾಟಕ ಮುಖ್ಯಮಂತ್ರಿ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. 

Heartfelt condolences on the sad & untimely demise of one of the stalwarts of India's automotive industry, Vice Chairperson of Toyota Kirloskar Motor, Shri Vikram Kirloskar. May his soul rest in peace. May God grant the family & friends the strength to bear this loss.

Om Shanti. pic.twitter.com/R6sxB3NCwm

— Basavaraj S Bommai (@BSBommai)

ಇನ್ನು, ವಿಕ್ರಮ್ ಎಸ್ ಕಿರ್ಲೋಸ್ಕರ್ ನಿಧನಕ್ಕೆ ಕಿರಣ್ ಮಜುಂದಾರ್-ಶಾ (Kiran - Mazumdar Shaw) ಸಂತಾಪ ಸೂಚಿಸಿದ್ದಾರೆ. “ವಿಕ್ರಮ್ ಅವರ ನಿಧನದಿಂದ ನಾನು ಆಘಾತಗೊಂಡಿದ್ದೇನೆ ಹಾಗೂ ಜರ್ಜರಿತಗೊಂಡಿದ್ದೇನೆ.. ಅವರು ಅಂತಹ ಆತ್ಮೀಯ ಸ್ನೇಹಿತರಾಗಿದ್ದರು, ಅವರನ್ನು ನಾನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇನೆ. ಗೀತಾಂಜಲಿ ಮಾನಸಿ ಅವರ ಕುಟುಂಬದ ನೋವು ಮತ್ತು ದುಃಖವನ್ನು ನಾನು ಹಂಚಿಕೊಳ್ಳುತ್ತೇನೆ ಎಂದು ಬೆಂಗಳೂರಿನ ಪ್ರಧಾನ ಕಚೇರಿಯ ಬಯೋಫಾರ್ಮಾಸ್ಯುಟಿಕಲ್ಸ್ ಕಂಪನಿ ಬಯೋಕಾನ್‌ನ (Biocon) ಕಾರ್ಯನಿರ್ವಾಹಕ ಅಧ್ಯಕ್ಷರು ಹೇಳಿದ್ದಾರೆ. 

Devastated with Vikram’s shocking demise. He was such a dear friend who I will hugely miss. I share the pain and unconsolable grief of Gitanjali Manasi n the family. May he rest in eternal peace. Om Shanthi 🙏 pic.twitter.com/PwT8kywtdM

— Kiran Mazumdar-Shaw (@kiranshaw)

ಕಿರ್ಲೋಸ್ಕರ್ ಗ್ರೂಪ್ (Kirloskar Group) ಒಂದು ಶತಮಾನಕ್ಕೂ ಹೆಚ್ಚು ಕಾಲ ಭಾರತದ ಕೈಗಾರಿಕೀಕರಣಕ್ಕೆ ಕೊಡುಗೆ ನೀಡಿದೆ. ಭಾರತದ ಮೊದಲ ಕಬ್ಬಿಣದ ನೇಗಿಲಿನ ತಯಾರಕರಾಗಿ ಸ್ಥಾಪಿತವಾದ ಈ ಗುಂಪು ಸ್ಥಳೀಯ ತಂತ್ರಜ್ಞಾನ ಮತ್ತು ಉದ್ಯಮ ಅಭಿವೃದ್ಧಿಪಡಿಸುವುದನ್ನು ಮುಂದುವರೆಸಿದೆ. 

click me!