ಆರ್ಥಿಕ ಸಂಕಷ್ಟ:ಹಣಕಾಸು ಸಚಿವಾಲಯ ನಿರ್ಣಯವಾಗುವುದು ಇಷ್ಟ!

By Suvarna NewsFirst Published Jan 2, 2020, 6:39 PM IST
Highlights

ಆರ್ಥಿಕ ಸಂಕಷ್ಟದಿಂದ ಪಾರಾಗಲು ಹಣಕಾಸು ಸಚಿವಾಲಯದ ಪ್ಲ್ಯಾನ್|  ಹಣಕಾಸು ಸಚಿವಾಲಯದಿಂದ ವೆಚ್ಚಗಳಿಗೆ ಕಡಿವಾಣ ಹಾಕುವ ನಿರ್ಧಾರ| ವರ್ಷದ ಕೊನೆಯ ತ್ರೈಮಾಸಿಕದಲ್ಲಿ ವೆಚ್ಚಗಳಿಗೆ ಕಡಿವಾಣ ಹಾಕಲು  ಸೂಚನೆ|ಕೇಂದ್ರ ಸರ್ಕಾರದ ಎಲ್ಲಾ ಹಣಕಸು ಸಚಿವಾಲಯಗಳಿಗೆ ನಿರ್ದೆಶನ| ನಿಗದಿತ ಬಜೆಟ್ ಅಂದಾಜನ್ನು ಮೀರದೇ ನಿಯಂತ್ರಣ ವಿಧಿಸಿಕೊಳ್ಳಲು ಸೂಚನೆ|

ನವದೆಹಲಿ(ಜ.02): ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವೆಚ್ಚಗಳಿಗೆ ಕಡಿವಾಣ ಹಾಕುವ ನಿರ್ಧಾರವನ್ನು ಹಣಕಾಸು ಸಚಿವಾಲಯ ಪ್ರಕಟಿಸಿದೆ.

ಹಾಲಿ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ವೆಚ್ಚಗಳಿಗೆ ಕಡಿವಾಣ ಹಾಕಲು ಸರ್ಕಾರದ ಎಲ್ಲಾ ಇಲಾಖೆಗಳು ಹಾಗೂ ಸಚಿವಾಲಯಗಳಿಗೆ ಹಣಕಾಸು ಸಚಿವಾಲಯ ನಿರ್ದೇಶನ ರವಾನಿಸಿದೆ. 

ನಿಗದಿತ ಬಜೆಟ್ ಅಂದಾಜನ್ನು ಮೀರದೇ ನಿಯಂತ್ರಣ ವಿಧಿಸಿಕೊಳ್ಳಲು ಎಲ್ಲಾ ಇಲಾಖೆಗಳಿಗೆ ಹಣಕಾಸು ಸಚಿವಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ.  ಪರಿಷ್ಕೃತ ಮಾನದಂಡದ ಪ್ರಕಾರ ಈಗಿರುವ ಬಜೆಟ್ ಅಂದಾಜಿಗಿಂತ ವೆಚ್ಚಗಳನ್ನು ಶೇ.3-8 ಕಡಿತಗೊಳಿಸುವುದು ಸಚಿವಾಲಯದ ಉದ್ದೇಶವಾಗಿದೆ. 

ಭಾರತದ ಆರ್ಥಿಕ ಕುಸಿತದ IMF ಬಗ್ಗೆ ಕಳವಳ

2019-20 ರ ಕೊನೆಯ ತ್ರೈಮಾಸಿಕದಲ್ಲಿ ವೆಚ್ಚಗಳನ್ನು ಬಜೆಟ್ ಎಸ್ಟಿಮೇಟ್ (ಬಿಇ) ನ ಶೇ.25ರಷ್ಟಕ್ಕೆ ನಿಯಂತ್ರಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಹಣಕಾಸು ವರ್ಷದ ಕೊನೆಯ ತಿಂಗಳಾದ ಮಾರ್ಚ್‌ನಲ್ಲಿ ವೆಚ್ಛ ಶೇ.10 ನ್ನು ಮೀರಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಒಂದು ವೇಳೆ ಪರಿಷ್ಕೃತ ಅಂದಾಜು ಹಂತದಲ್ಲಿ ಹೆಚ್ಚುವರಿ ವೆಚ್ಚ ಎದುರಾದರೂ ಸಂಸತ್‌ನ ಅನುಮೋದನೆ ಬಳಿಕವೇ ಪಡೆದುಕೊಳ್ಳತಕ್ಕದ್ದು ಎಂದು ಸ್ಪಷ್ಟ ಸಂದೇಶ ರವಾನಿಸಲಾಗಿದೆ.

ಯಾವುದೇ ಸಚಿವಾಲಯ ಈ ಹಿಂದಿನ ತ್ರೈಮಾಸಿಕದಲ್ಲಿ ತನಗೆ ನೀಡಲಾಗಿದ್ದ ಹಣವನ್ನು ಬಳಕೆ ಮಾಡದೇ ಹಾಗೆಯೇ ಉಳಿಸಿಕೊಂಡಿದ್ದರೆ ಅದನ್ನು ಈ ತ್ರೈಮಾಸಿಕದ್ಲಲಿ ಬಳಕೆ ಮಾಡಿಕೊಳ್ಳದಂತೆಯೂ ಮನವಿ ಮಾಡಲಾಗಿದೆ.

ಭಾರತಕ್ಕೆ ದಾಖಲೆ ವಿದೇಶೀ ಬಂಡವಾಳ; ಆರ್ಥಿಕ ಪ್ರಗತಿಯ ಸಂಕೇತವಿದು!

ನಗದು ನಿರ್ವಹಣೆಯ ಮಿತಿಯನ್ನು 4ನೇ ತ್ರೈಮಾಸಿಕದಲ್ಲಿ ಶೇ.25 ಕ್ಕೆ ಇಳಿಕೆ ಮಾಡಲಾಗಿದೆ. ಆರ್ಥಿಕ ವರ್ಷದ ಕೊನೆಯ ತಿಂಗಳಿನ ವೆಚ್ಚದ ಮಿತಿಯನ್ನು ಶೇ.15 ರಿಂದ ಶೇ.10ಕ್ಕೆ ಇಳಿಕೆ ಮಾಡಲಾಗಿದೆ.  

ಇದೇ ವೇಳೆ ಜನವರಿ-ಫೆಬ್ರವರಿಯಲ್ಲಿನ  ನಗದು ನಿರ್ವಹಣೆಯ ಮಿತಿಯನ್ನು ಶೇ. 18ರಿಂದ ಶೇ.15 ಕ್ಕೆ ಇಳಿಕೆ ಮಾಡಿ ಹಣಕಾಸು ಸಚಿವಾಲಯ ಪ್ರಕಟಣೆ ಹೊರಡಿಸಿದೆ.

click me!