
ನವದೆಹಲಿ(ಜ.01): 2019ರ ಕೊನೆಯ ತಿಂಗಳಾದ ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಜಿಎಸ್‌ಟಿ ಸಂಗ್ರಹಣೆಯಲ್ಲಿ ದಾಖಲೆ ಬರೆದಿದೆ.
ಕೇಂದ್ರ ಸರ್ಕಾರದ ಉತ್ತೇಜನಕಾರಿ ಕ್ರಮಗಳಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹದ ಮೊತ್ತ ಎರಡನೇ ಬಾರಿ 1.03 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ ಎಂದು ಹಣಕಾಸಿ ಇಲಾಖೆ ತಿಳಿಸಿದೆ.
ಜಿಎಸ್‌ಟಿ ವಂಚಿಸಿದರೆ ಆಸ್ತಿಗೆ ಕತ್ತರಿ: ಕೇಂದ್ರದ ಹೊಸ ನಿರ್ಧಾರ!
ಕಳೆದ ಮೂರು ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹ ಮೊತ್ತ 1 ಲಕ್ಷ ಕೋಟಿ ರೂ.ಗಿಂತ ಕೆಳಗಿತ್ತು. ಆದರೆ ಕಳೆದ ನವೆಂಬರ್ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹ ಮೊತ್ತ 1.03 ಲಕ್ಷ ಕೋಟಿ ರೂ. ಸಗ್ರಹವಾಗಿತ್ತು. ಇದೀಗ ಡಿಸೆಂಬರ್ ತಿಂಗಳಲ್ಲೂ 1.03 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ ಎಂದು ವರದಿ ತಿಳಿಸಿದೆ.
ಕಳೆದ ತಿಂಗಳು ಒಟ್ಟು 1,03,184 ಕೋಟಿ ರೂ. ಜಿಎಸ್ ಟಿ ಸಂಗ್ರಹವಾಗಿದ್ದು, ಇದರಲ್ಲಿ ಸಿಜಿಎಸ್ಟಿ 19,962 ಕೋಟಿ ರೂ. ಎಸ್ಜಿಎಸ್ಟಿ 26,792 ಕೋಟಿ ರೂ. ಐಜಿಎಸ್ಟಿ 48,099 ಕೋಟಿ ರೂ. ಹಾಗೂ ಸೆಸ್ 8,331 ಕೋಟಿ ರೂ. ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಆರ್ಥಿಕ ಹಿಂಜರಿತ: ಜಿಎಸ್‌ಟಿ ದರ ಏರಿಕೆಗೆ ಕೇಂದ್ರ ಸರ್ಕಾರ ಚಿಂತನೆ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.