ಮನೆಗೆಲಸದ ಜೊತೆಗೆ ಷೇರು ಮಾರ್ಕೆಟ್‌ನಲ್ಲಿ ಟ್ರೇಡಿಂಗ್ ಮಾಡುವ ಮೂಲಕ ಒಬ್ಬ ಮಹಿಳಾ ಟ್ರೇಡರ್ ಪ್ರತಿ ತಿಂಗಳು ಲಕ್ಷಾಂತರ ರೂ. ಹಣ ಗಳಿಸುತ್ತಿದ್ದಾರೆ.
ಮುಂಬೈ: ಇಂದು ಷೇರು ಮಾರುಕಟ್ಟೆಯಲ್ಲಿ ಮಹಿಳೆಯರು ಸಹ ವ್ಯವಹರಿಸುತ್ತಿದ್ದಾರೆ. ಪುರುಷರಿಗಿಂತ ಮಹಿಳಾ ಹೂಡಿಕೆದಾರರು ಹೆಚ್ಚು ಲಾಭ ಗಳಿಸುತ್ತಿರುವ ಮಾಹಿತಿಯನ್ನು ಸೆಬಿ ಹೇಳಿತ್ತು. ಮಹಿಳೆಯರು ತಮ್ಮ ಕೆಲಸದ ಜೊತೆಯಲ್ಲಿ ಷೇರು ಮಾರುಕಟ್ಟೆಯಲ್ಲಿಯೂ ವ್ಯವಹರಿಸುತ್ತಿದ್ದಾರೆ. ಈ ಮೂಲಕ ಮನೆಯ ಕೆಲಸಗಳ ನಡುವೆ ಸಮಯ ಮಾಡಿಕೊಂಡು ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಅಂತಹ ಮಹಿಳಾ ಹೂಡಿಕೆದಾರರಲ್ಲಿ ಒಬ್ಬರು ಮುಕ್ತಾ ಧಾಮನ್ಕರ್ (Mukta Dhamankar). ತಂದೆಯನ್ನು ನೋಡಿ ಷೇರು ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮುಕ್ತಾ ಇಂದು ಪ್ರತಿ ತಿಂಗಳು ಲಕ್ಷ ಲಕ್ಷ ಹಣ ಎಣಿಸುತ್ತಿದ್ದಾರೆ.
ತಂದೆಯನ್ನು ನೋಡಿ ಮಾರುಕಟ್ಟೆಗೆ ಪ್ರವೇಶಿಸಿದ ಮುಕ್ತಾ ಧಾಮನ್ಕರ್ ಇಂದು ಯಶಸ್ವಿ ವ್ಯಾಪಾರಿಯಾಗಿದ್ದಾರೆ. ಪೌಷ್ಟಿಕತಜ್ಞೆಯಾಗಿರುವ ಮುಕ್ತಾ ಧಾಮನ್ಕರ್, ಯುನಿಸೆಫ್‌ನಲ್ಲಿ ಸಂಶೋಧನಾ ಸಹಾಯಕಿಯಾಗಿದ್ದರು. ಪತಿ ನೌಕಾಪಡೆಯಲ್ಲಿ ಅಧಿಕಾರಿಯಾಗಿದ್ದು, ಮದುವೆ ಬಳಿಕವೂ ಮುಕ್ತಾ ಧಾಮನ್ಕರ್ ಕೆಲಸ ಮಾಡುತ್ತಿದ್ದರು, ಆದರೆ ತಾಯಿಯಾದ ನಂತರ ಅವರ ಹೆಚ್ಚಿನ ಸಮಯ ಮನೆಯಲ್ಲೇ ಕಳೆಯುತ್ತಿತ್ತು. ಒಂದು ದಿನ ಅವರಿಗೆ ಕುಳಿತುಕೊಳ್ಳುವುದನ್ನು ಬಿಟ್ಟು ಏನಾದರೂ ಮಾಡಬೇಕೆಂದು ಅನಿಸಿತು. ಹೀಗಾಗಿ ತಮಾಷೆ ತಮಾಷೆಯಾಗಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದರು. ಅವರಿಗೆ ಲಾಭವಾದಾಗ, ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ಷೇರು ಮಾರುಕಟ್ಟೆಯ ವ್ಯವಹಾರಗಳಲ್ಲಿ ತೊಡಗಿಸಿಕೊಂಡರು.
ಈಗ ಯಶಸ್ವಿ ವ್ಯಾಪಾರಿಯಾಗಿರುವ ಮುಕ್ತಾ ಧಾಮನ್ಕರ್ ಅವರು ಮನೆಯಲ್ಲೇ ಕುಳಿತು ಸ್ಟಾಕ್ ಟ್ರೇಡಿಂಗ್ ಮಾಡುತ್ತಾರೆ. ಮಕ್ಕಳು ಮತ್ತು ಕುಟುಂಬವನ್ನು ನೋಡಿಕೊಳ್ಳೋದರ ಜೊತೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಾರೆ. ಒಮ್ಮೆ ಮುಕ್ತಾ ಅವರಿಗೆ ವಹಿವಾಟು ನಡೆಸುವಾಗ 2 ಸಾವಿರ ರೂ. ಲಾಭವಾಗಿತ್ತು. ಇದು ಮುಕ್ತಾ ಅವರ ಷೇರು ಮಾರುಕಟ್ಟೆಯಲ್ಲಿನ ಮೊದಲ ಸಂಪಾದನೆಯಾಗಿತ್ತು. ಇದಾದ ನಂತರ ಯಮಿತವಾಗಿ ಸ್ಟಾಕ್ ಟ್ರೇಡಿಂಗ್ ಮಾಡಲು ನಿರ್ಧರಿಸಿದರು. ಇಂದು ಪ್ರತಿ ತಿಂಗಳು 1.5 ಲಕ್ಷ ರೂಪಾಯಿ ಸಂಪದಾನೆ ಮಾಡುತ್ತಿದ್ದಾರೆ.
ಆರಂಭದ ದಿನಗಳಲ್ಲಿ ಮುಕ್ತಾ ಅವರಿಗೆ ವಹಿವಾಟು ಅಷ್ಟು ಸುಲಭವಾಗಿರಲಿಲ್ಲ. ಅನೇಕ ಬಾರಿ ಅವರ ತಂದೆ ಬ್ಲೂಚಿಪ್ ಷೇರುಗಳಲ್ಲಿ ಹೂಡಿಕೆ ಮಾಡುತ್ತಿದ್ದರು, ಇದರಿಂದ ಅವರು ಬಹಳಷ್ಟು ವಿಷಯಗಳನ್ನು ಕಲಿಯಲು ಸಾಧ್ಯವಾಯಿತು. ಇಲ್ಲಿಂದಲೇ ಅವರಿಗೆ ವಹಿವಾಟಿಗೆ ಬರಲು ಪ್ರೇರಣೆ ಸಿಕ್ಕಿತು.
ಮುಕ್ತಾ ಧಾಮನ್ಕರ್ ಎಲ್ಲಿ ಹೂಡಿಕೆ ಮಾಡುತ್ತಾರೆ?
ಮುಕ್ತಾ ಧಾಮನ್ಕರ್ ರಾತ್ರಿ ಮನೆಯವರೆಲ್ಲಾ ಮಲಗಿದ ನಂತರ ಷೇರುಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಈ ಸಮಯದಲ್ಲಿ ಎಲ್ಲಿ ಹೂಡಿಕೆ ಮಾಡಬೇಕು ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳುತ್ತಿದ್ದರು. ಇದರ ಜೊತೆಗೆ ಜಾಗತಿಕ ಮತ್ತು ಭಾರತೀಯ ಆರ್ಥಿಕ ವ್ಯವಹಾರಗಳನ್ನು ಮಾತ್ರವಲ್ಲದೆ ಕಾರ್ಪೊರೇಟ್ ಸುದ್ದಿಗಳನ್ನು ಓದಲು ಶುರು ಮಾಡಿದರು. ಬೆಳಗ್ಗೆ ಎಲ್ಲಾ ಕೆಲಸಗಳು ಮುಗಿದ ಕೂಡಲೇ ಷೇರು ಮಾರುಕಟ್ಟೆಯತ್ತ ಮುಖ ಮಾಡುತ್ತಿದ್ದರು. ಷೇರು ಮಾರುಕಟ್ಟೆಯಿಂದ ನಿಯಮಿತವಾಗಿ ಗಳಿಕೆ ಮಾಡುವುದು ತಮಗೆ ಸುಲಭವಾಗಿರಲಿಲ್ಲ ಎಂದು ಮುಕ್ತಾ ಹೇಳುತ್ತಾರೆ.
ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಧೈರ್ಯವಿದ್ರೆ ಮಾತ್ರ ಗೆಲುವು; 20-25 ಸಾವಿರ ಹೂಡಿಕೆ 1 ಕೋಟಿಗೂ ಅಧಿಕ ಆಯ್ತು
ಇದಕ್ಕಾಗಿ ಮುಕ್ತಾ ಅವರು ಒಂದು ತಂತ್ರವನ್ನು ಅನುಸರಿಸಿದರು. ತಂದೆ ಹಾಗೆಯೇ ವಿವಿಧ ಷೇರುಗಳಲ್ಲಿ ಸಣ್ಣ ಸಣ್ಣ ಮೊತ್ತವನ್ನು ಹೂಡುತ್ತಿದ್ದರು. ಅವರಿಗೆ ಎರಡರಿಂದ ಮೂರು ಸಾವಿರ ರೂಪಾಯಿ ಲಾಭವಾದಾಗ ವಹಿವಾಟು ಮಾಡದಿರಲು ಪ್ರಯತ್ನಿಸುತ್ತಿದ್ದರು. ಒಂದು ದಿನ 5 ಸಾವಿರ ರೂಪಾಯಿ ಲಾಭವಾದರೆ ಮುಂದೆ ವಹಿವಾಟು ಮಾಡುತ್ತಿರಲಿಲ್ಲ. ಮುಕ್ತಾ ಷೇರುಗಳ ಜೊತೆಗೆ ಮ್ಯೂಚುವಲ್ ಫಂಡ್, ಸರ್ಕಾರಿ ಬಾಂಡ್, ಆಸ್ತಿ, ಚಿನ್ನದಲ್ಲೂ ಹಣ ಹೂಡಿಕೆ ಮಾಡುತ್ತಾರೆ.
ಗಮನಿಸಿ- ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಹೂಡಿಕೆ ಮಾಡುವ ಮೊದಲು ನಿಮ್ಮ ಮಾರುಕಟ್ಟೆ ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ.
ಇದನ್ನೂ ಓದಿ: ಕೇವಲ ಒಂದು ಟೆಕ್ನಿಕ್ ಬಳಸಿ ಷೇರು ಮಾರುಕಟ್ಟೆಯಿಂದ 2 ಕೋಟಿ ಗಳಿಸಿದ ಹಳ್ಳಿ ಹುಡುಗಿ