ಒಂದು ಸಣ್ಣ ಕೋನ್ ಐಸ್ ಕ್ರೀಂಗಾಗಿ ಪರದಾಡಿದ ಸಿರಿವಂತೆ ಮುಕೇಶ್ ಅಂಬಾನಿ ಸೊಸೆ ರಾಧಿಕಾ!

By Roopa Hegde  |  First Published Nov 13, 2024, 11:55 AM IST

ರಾಧಿಕಾ ಅಂಬಾನಿ, ದೇಶದಲ್ಲಿರುವ ಎಲ್ಲ ಐಸ್ ಕ್ರೀಂ ಫ್ಯಾಕ್ಟರಿ ಖರೀದಿಸುವ ತಾಕತ್ತು ಹೊಂದಿದ್ದಾರೆ. ಆದ್ರೆ ದುಬೈನಲ್ಲಿ ಒಂದು ಐಸ್ ಕ್ರೀಂಗೆ ಪರದಾಡ್ತಿದ್ದಾರೆ. ಅವರ ವಿಡಿಯೋ ನೋಡಿದ ಫ್ಯಾನ್ಸ್, ಅಂಬಾನಿ ಸೊಸೆ ಮುಗ್ದತೆಗೆ ಮಾರುಹೋಗಿದ್ದಾರೆ. 
 


ಭಾರತದ ಶ್ರೀಮಂತ ಕುಟುಂಬ ಅಂಬಾನಿ (India richest family Ambani) ಫ್ಯಾಮಿಲಿಯ ಮುದ್ದಿನ ಜೋಡಿ ಅನಂತ್ ಅಂಬಾನಿ (Anant Ambani) ಹಾಗೂ ರಾಧಿಕಾ ಮರ್ಚೆಂಟ್ (Radhika Merchant) ಅವರನ್ನು ದುಬೈ (Dubai) ಕೈಬೀಸಿ ಕರೆದಿದೆ. ಚಳಿಗಾಲದ ಋತು ಶುರುವಾಗ್ತಿದ್ದಂತೆ ನವದಂಪತಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿನ ಸುಂದರ ಪರಿಸರದಲ್ಲಿ ಕೈ ಕೈ ಹಿಡಿದು ಓಡಾಡ್ತಿದ್ದಾರೆ. ಅನಂತ್ ಹಾಗೂ ರಾಧಿಕಾ ದುಬೈನ್ ಗ್ಲೋಬಲ್ ವಿಲೇಜ್ (Global Village) ಗೆ ಭೇಟಿ ನೀಡಿದ್ದರು. ಅಲ್ಲಿ ರಾಧಿಕಾ ಐಸ್ ಕ್ರೀಂಗೆ ಕಸರತ್ತು ಮಾಡ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.  

ಇನ್ಸ್ಟಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಅನಂತ್ ಹಾಗೂ ರಾಧಿಕಾ ಜೊತೆಗಿರುವ ಅನೇಕ ವಿಡಿಯೋ ವೈರಲ್ ಆಗಿದೆ. ಒಂದು ವಿಡಿಯೋದಲ್ಲಿ ರಾಧಿಕಾ ಹಾಗೂ ಅನಂತ್, ಐಸ್ ಕ್ರೀಂ ಸ್ಟಾಲ್ ಮುಂದೆ ಕಾಣಿಸಿಕೊಂಡಿದ್ದಾರೆ. ಕೋನ್ ಐಸ್ ಕ್ರೀಂ ಹಿಡಿಯಲು ರಾಧಿಕಾ ಶತಪ್ರಯತ್ನ ಮಾಡ್ತಿದ್ದಾರೆ. ರಾಧಿಕಾ ಕೈಗೆ ಐಸ್ ಕ್ರೀಂ ನೀಡದೆ ಆಟ ಆಡಿಸ್ತಿದ್ದಾರೆ ಮಾರಾಟಗಾರರು. ಐಸ್ ಕ್ರೀಂ ಹಿಡಿಯಲು ಕೈಯನ್ನು ಅತ್ತ, ಇತ್ತ ತಿರುಗಿಸುವ ರಾಧಿಕಾ ಮುಖದಲ್ಲಿ ಖುಷಿಯೊಂದಿದೆ. ಭಾರತದ ಅತ್ಯಂತ ಶ್ರೀಮಂತ ಕುಟುಂಬದ ಸೊಸೆ, ಚಿಕ್ಕ ಹುಡುಗಿಯಂತೆ ಐಸ್ ಕ್ರೀಂಗೆ ಹೋರಾಡೋದನ್ನು ನೀವು ಈ ವಿಡಿಯೋದಲ್ಲಿ ಕಾಣ್ಬಹುದು. ಹಿಂದೆ ನಿಂತಿರುವ ಅನಂತ್ ಅಂಬಾನಿ, ರಾಧಿಕಾ ಆಟವನ್ನು ನೋಡಿ ಎಂಜಾಯ್ ಮಾಡ್ತಿದ್ದಾರೆ. ಈ ವಿಡಿಯೋ ನೋಡಿದ ಬಳಕೆದಾರರು, ರಾಧಿಕಾರನ್ನು ಮೆಚ್ಚಿದ್ದಾರೆ. ಸೂಪರ್ ಕಪಲ್ ಎನ್ನುವ ಕಮೆಂಟ್ ಬಂದಿದೆ. 

Tap to resize

Latest Videos

undefined

ಬರೋಬ್ಬರಿ 65,000 ಕೋಟಿ ರೂ ಹೂಡಿಕೆಗೆ ಮುಂದಾದ ಅಂಬಾನಿ, 2.5 ಲಕ್ಷ ಉದ್ಯೋಗ ಸೃಷ್ಟಿ!

ಇನ್ನೊಂದು ವಿಡಿಯೋದಲ್ಲಿ ಅನಂತ್ ಹಾಗೂ ರಾಧಿಕಾ, ಮಸಾಲೆ ಪದಾರ್ಥವಿರುವ ಶಾಪ್ ಮುಂದೆ ನಿಂತು, ಅದನ್ನು ಪರೀಕ್ಷಿಸ್ತಿದ್ದಾರೆ. ಗ್ಲೋಬಲ್ ವಿಲೇಜನ್ನು ಬಜೆಟ್ ಸ್ನೇಹಿ ಎಂದೇ ಕರೆಯಲಾಗುತ್ತದೆ. ವೈವಿಧ್ಯಮಯ ಸಾಂಸ್ಕೃತಿಕ ಅನುಭವ, ಆಹಾರ ಮತ್ತು ಮನರಂಜನೆಯನ್ನು ಈ ಗ್ಲೋಬಲ್ ವಿಲೇಜ್ ನಲ್ಲಿ ಪಡೆಯಬಹುದು. ರಾಧಿಕಾ ಹಾಗೂ ಅನಂತ್ ಸಾಮಾನ್ಯ ಜನರಂತೆ ಈ ವಿಲೇಜ್ ಸುತ್ತಿ, ಅಲ್ಲಿನ ಆಹಾರದ ರುಚಿ ನೋಡ್ತಿದ್ದಾರೆ. ಅವರ ಸರಳತೆ ಫ್ಯಾನ್ಸ್ ಗಮನ ಸೆಳೆದಿದೆ.

ಕಳೆದ ಐದು ತಿಂಗಳ ಹಿಂದೆ ಜುಲೈ 12ರಂದು ರಾಧಿಕಾ ಹಾಗೂ ಅನಂತ್ ಅಂಬಾನಿ ಮದುವೆ ಅದ್ಧೂರಿಯಾಗಿ ನಡೆದಿದೆ. ಸುಮಾರು ಒಂದು ತಿಂಗಳುಗಳ ಕಾಲ ನಡೆದ ಈ ಮದುವೆ ಸಮಾರಂಭ ಇಡೀ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಸೆಲೆಬ್ರಿಟಿಗಳಿಂದ ತುಂಬಿದ್ದ ಮದುವೆ ಕಾರ್ಯಕ್ರಮದ ಸುದ್ದಿ ವಿಶ್ವದ ಮೂಲೆ ಮೂಲೆ ತಲುಪಿತ್ತು. ಹಾಗಾಗಿ ರಾಧಿಕಾ, ಅನಂತ್ ಎಲ್ಲಿ ಹೋದ್ರೂ ಜನರು ಅವರನ್ನು ಗುರುತಿಸ್ತಿದ್ದಾರೆ. ಅವರ ಸರಳ ಸ್ವಭಾವಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. 

ಕಿತ್ತಳೆ ಜ್ಯೂಸ್‌ ಜೊತೆಗೆ ಕೋಟಿ ಕೋಟಿ ದುಡ್ಡು ಗೆದ್ದ ಮಹಿಳೆ!

ಹೆಸರು ಬದಲಿಸಿಕೊಂಡ ರಾಧಿಕಾ ಮರ್ಚೆಂಟ್ : ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಸೊಸೆ ರಾಧಿಕಾ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಅಧಿಕೃತವಾಗಿ ರಾಧಿಕಾ ಮರ್ಚೆಂಟ್ ಈಗ ರಾಧಿಕಾ ಅಂಬಾನಿಯಾಗಿದ್ದಾರೆ. ಅನಂತ್ ಅಂಬಾನಿ ಮದುವೆ ಆದ್ಮೇಲೆ ಮೊದಲ ಬಾರಿ ಸಂದರ್ಶನದಲ್ಲಿ ಮಾತನಾಡಿದ ರಾಧಿಕಾ, ತಮ್ಮ ವೃತ್ತಿಜೀವನ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ತಿಳಿಸಿದ್ರು. ಎನ್ಕೋರ್ ಹೆಲ್ತ್‌ಕೇರ್‌ನಲ್ಲಿ ಡೊಮೆಸ್ಟಿಕ್ ಮಾರ್ಕೆಟಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ರಾಧಿಕಾ ಅಂಬಾನಿ, ಕಂಪನಿಯ ಹಿಡಿತವನ್ನು ಬಲಪಡಿಸಲು ಶ್ರಮಿಸುತ್ತಿರುವುದಾಗಿ ಹೇಳಿದ್ದಾರೆ. 

ಈ ಮಧ್ಯೆ ರಾಧಿಕಾ ಗರ್ಭಿಣಿ ಎನ್ನುವ ಸುದ್ದಿ ಇದೆ. ಮದುವೆಯಾದ ಎರಡೇ ತಿಂಗಳಿಗೆ ರಾಧಿಕಾ ಗರ್ಭಿಣಿ ಎನ್ನುವ ಚರ್ಚೆ ಬಿಸಿ ಪಡೆದಿತ್ತು. ಈಗ 2025ರ ಫೆಬ್ರವರಿಯಲ್ಲಿ ರಾಧಿಕಾ ಮಗುವಿಗೆ ಜನ್ಮ ನೀಡಲಿದ್ದಾರೆ ಎನ್ನಲಾಗ್ತಿದೆ. ಸುದ್ದಿ ಸತ್ಯವಾದ್ರೆ ಈ ವರ್ಷ ಮದುವೆ ಸಂಭ್ರಮವಾದ್ರೆ ಮುಂದಿನ ವರ್ಷ ಹೊಸ ಅತಿಥಿ ಆಗಮನದ ಖುಷಿ ಅಂಬಾನಿ ಮನೆಯಲ್ಲಿರಲಿದೆ.  

click me!