ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಖರೀದಿಗೆ ಉತ್ತಮ ಸಮಯವಾಗಿದೆ. 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ಚಿನ್ನ ಖರೀದಿಸುವ ಯೋಚನೆ ಇದ್ರೆ, ಇಂದೇ ಬಂಗಾರವನ್ನು ನಿಮ್ಮ ಮನೆಗೆ ಬರಮಾಡಿಕೊಳ್ಳಿ. ಇಂದು ಸಹ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ನವೆಂಬರ್ 12ರಂದು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,350 ರೂ.ವರೆಗೂ ಇಳಿಕೆಯಾಗಿತ್ತು. ನವೆಂಬರ್ 10ರಂದು 550 ರೂ.ವರೆಗೆ ಚಿನ್ನದ ಬೆಲೆ ಕಡಿಮೆಯಾಗಿತ್ತು. ಇದೀಗ ಮತ್ತೆ ಮೂರನೇ ದಿನವೂ ಬೆಲೆ ಇಳಿಕೆಯಾಗಿದೆ.
ಚಿನ್ನದಂಗಡಿಗೆ ಹೋಗುವ ಮುನ್ನು ಮಾರುಕಟ್ಟೆಯಲ್ಲಿನ ಇಂದಿನ ಬೆಲೆ ತಿಳಿದುಕೊಳ್ಳವುದು ಅವಶ್ಯಕವಾಗಿದೆ. 22 ಕ್ಯಾರಟ್, 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಇರುತ್ತದೆ. ಹಾಗಾಗಿ ಬೆಲೆಯನ್ನು ತಿಳಿದುಕೊಂಡು ಚಿನ್ನದಂಗಡಿಗೆ ತೆರಳಿ. ಭಾರತದಲ್ಲಿನ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ನೋಡೋಣ ಬನ್ನಿ.
undefined
ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,084 ರೂ. (1 ರೂ.ಇಳಿಕೆ)
8 ಗ್ರಾಂ: 56,672 ರೂ. (8 ರೂ.ಇಳಿಕೆ)
10 ಗ್ರಾಂ: 70,840 ರೂ. (10 ರೂ.ಇಳಿಕೆ)
100 ಗ್ರಾಂ: 7.08,400 ರೂ. (100 ರೂ.ಇಳಿಕೆ)
ಭಾರತದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,728 ರೂ. (1 ರೂ.ಇಳಿಕೆ)
8 ಗ್ರಾಂ: 61,824 ರೂ. (8 ರೂ.ಇಳಿಕೆ)
10 ಗ್ರಾಂ: 77,280 ರೂ. (10 ರೂ.ಇಳಿಕೆ)
100 ಗ್ರಾಂ: 7,72,800 ರೂ. (100 ರೂ.ಇಳಿಕೆ)
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ದೇಶದ ಪ್ರಮುಖ ನಗರಗಳಾದ ಚೆನ್ನೈ, ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 70,840 ರೂ., 70840 ರೂ., 70,990 ರೂ., 70,840 ರೂ ಮತ್ತು 70,840 ರೂಪಾಯಿ ಆಗಿದೆ.
ಇದನ್ನೂ ಓದಿ: ಸಾವಿರಾರು ಕೋಟಿ ಒಡೆಯ ಮುಕೇಶ್ ಅಂಬಾನಿಗೆ ಫ್ರೀ ಆಫರ್ ಕೊಟ್ಟ ಮಕ್ಕಳು; ಏನ್ಮಾಡ್ತಾರೆ ರಿಲಯನ್ಸ್ ಮಾಲೀಕ?
ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ
ಚಿನ್ನದ ಜೊತೆಯಲ್ಲಿಯೂ ಬೆಳ್ಳಿ ದರ ಸಹ ಕಡಿಮೆಯಾಗಿದೆ. ಚಿನ್ನದ ಬೆಲೆ ಏರಿಕೆಯಾಗುತ್ತಿದ್ದಂತೆ ಹೂಡಿಕೆದಾರರು ಬೆಳ್ಳಿ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಹಾಗಾಗಿ ಬೆಳ್ಳಿ ಖರೀದಿಯೂ ಸಹ ಹೆಚ್ಚಾಗಿದೆ. ಕಳೆದ ಮೂರ ದಿನಗಳಲ್ಲಿ 1 ಕೆಜಿ ಬೆಳ್ಳಿ ಬೆಲೆಯಲ್ಲಿ 3,000 ರೂ.ವರೆಗೆ ಇಳಿಕೆಯಾಗಿದೆ. ದೇಶದಲ್ಲಿ ಇಂದಿನ ಬೆಳ್ಳಿ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಬೆಳ್ಳಿ ದರ
10 ಗ್ರಾಂ: 909 ರೂಪಾಯಿ
100 ಗ್ರಾಂ: 9,090 ರೂಪಾಯಿ
1 ಕೆಜಿ: 90,900 ರೂಪಾಯಿ
ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಧೈರ್ಯವಿದ್ರೆ ಮಾತ್ರ ಗೆಲುವು; 20-25 ಸಾವಿರ ಹೂಡಿಕೆ 1 ಕೋಟಿಗೂ ಅಧಿಕ ಆಯ್ತು