ಕೋಲ್ಹಾಪುರಿ ಚಪ್ಪಲ್ ಬಳಿಕ ಪ್ರಾಡಾದ ಮತ್ತೊಂದು ಫ್ರಾಡ್: ಹೊಸ ಸೇಫ್ಟಿಪಿನ್‌ಗೆ ಬೆಲೆ ಎಷ್ಟಿರಬಹುದು ಹೇಳಿ?

Published : Nov 08, 2025, 03:08 PM IST
pradas another fraud sales safty pin worth 69000

ಸಾರಾಂಶ

ಲಕ್ಸುರಿ ಫ್ಯಾಷನ್ ಬ್ರಾಂಡ್ ಪ್ರಾಡಾ ಈಗ ಹೊಸದೊಂದು ಸೇಫ್ಟಿ ಪಿನ್ ಬಿಡುಗಡೆ ಮಾಡಿದ್ದು, ಆದರ ಬೆಲೆ ಕೇಳಿದರೆ ತಲೆ ತಿರುಗೋದು ಗ್ಯಾರಂಟಿ. ಹೌದು ಇದೊಂದು ಸೇಫ್ಟಿ ಪಿನ್‌ಗೆ ಕೊಡುವ ಹಣದಲ್ಲಿ ನೀವು ಮನೆಗೆ ವಾಶಿಂಗ್ ಮಿಷನ್ ಟಿವಿ ಫ್ರಿಡ್ಜ್‌ನ್ನು ಕೊಳ್ಳಬಹುದು.

ಕೋಲ್ಹಾಪುರಿ ಚಪ್ಪಲ್ ಬಳಿಕ ಪ್ರಾಡಾದ ಮತ್ತೊಂದು ಅವಾಂತರ

ಒಂದು ಸಣ್ಣ ಸೇಫ್ಟಿ ಪಿನ್‌ಗೆ ಎಷ್ಟು ರೂಪಾಯಿ ಕೊಡ್ಬಹುದು ನೀವು. ಒಂದು ಎರಡು, ಐದು ಹೆಚ್ಚೆಂದರೆ 10. ಹತ್ತು ರೂಪಾಯಿ ಕೊಟ್ರೆ ಸೇಫ್ಟಿ ಪಿನ್‌ನ ದೊಡ್ಡ ಗೊಂಚಲೇ ಸಿಗುತ್ತದೆ. ಆದರೆ ಲಕ್ಸುರಿ ಫ್ಯಾಷನ್ ಬ್ರಾಂಡ್ ಪ್ರಾಡಾ ಮಾತ್ರ ಈಗ ಹೊಸದೊಂದು ಸೇಫ್ಟಿ ಪಿನ್ ಬಿಡುಗಡೆ ಮಾಡಿದ್ದು, ಆದರ ಬೆಲೆ ಕೇಳಿದರೆ ತಲೆ ತಿರುಗೋದು ಗ್ಯಾರಂಟಿ. ಹೌದು ಇದೊಂದು ಸೇಫ್ಟಿ ಪಿನ್‌ಗೆ ಕೊಡುವ ಹಣದಲ್ಲಿ ನೀವು ಮನೆಗೆ ವಾಶಿಂಗ್ ಮಿಷನ್ ಟಿವಿ ಫ್ರಿಡ್ಜ್‌ನ್ನು ಕೊಳ್ಳಬಹುದು.

ಒಂದು ಸೇಫ್ಟಿ ಪಿನ್ ಬೆಲೆ ಎಷ್ಟು?

ಹೌದು ಕೆಲ ದಿನಗಳ ಹಿಂದಷ್ಟೇ ಲಕ್ಸುರಿ ಫ್ಯಾಷನ್ ಬ್ರಾಂಡ್ ಪ್ರಾಡಾ ಭಾರತದ ಪ್ರಸಿದ್ಧವಾದ ಜನ ಸಾಮಾನ್ಯರು ಬಳಸುವ ಕೋಲ್ಹಾಪುರಿ ಚಪ್ಪಲ್‌ಗೆ ಒಂದೂವರೆ ಲಕ್ಷ ರೂಪಾಯಿ ಬೆಲೆಗೆ ಮಾರಾಟಕ್ಕೀಡುವ ಮೂಲಕ ವಿವಾದಕೀಡಾಗಿತ್ತು. ನಂತರ ಅದು ಕ್ಷಮೆ ಕೇಳಿದ್ದು, ಗೊತ್ತೆ ಇದೆ. ಹೀಗಿರುವ ಪ್ರಾಡಾ ಈಗ ಮತ್ತೊಂದು ಫ್ರಾಡ್ ಮಾಡ್ತಿದೆ ನೋಡಿ, ಸಣ್ಣದೊಂದು ಸೇಫ್ಟಿ ಫಿನ್‌ಗೆ ಉಲ್ಲನ್ ಸುತ್ತಿ ಅದಕ್ಕೆ ಬರೋಬ್ಬರಿ 775 ಡಾಲರ್ ದರ ನಿಗದಿಡಿಸಿದೆ. ಅಂದರೆ ಸುಮಾರು 68,758 ಭಾರತೀಯ ರೂಪಾಯಿ ದರ ನಿಗದಿ ಮಾಡಿದೆ. ಇದನ್ನು ಕೇಳಿದ ನೆಟ್ಟಿಗರು ಹೌಹಾರಿದ್ದು ತರಹೇವಾರಿ ಕಾಮೆಂಟ್ ಮಾಡಿದ್ದಾರೆ.

ನೆಟ್ಟಿಗರಿಂದ ತೀವ್ರ ಟೀಕೆ

ಪ್ರಾಡಾ ಇತ್ತೀಚೆಗೆ ಬಿಡುಗಡೆ ಮಾಡಿದ 'ಕ್ರೋಚೆಟ್ ಸೇಫ್ಟಿ ಪಿನ್ ಬ್ರೂಚ್' ಹೆಸರಿನ ಸೇಫ್ಟಿ ಪಿನ್‌ ಮೇಲೆ ಕಲರ್‌ಫುಲ್ ಆಗಿರುವ ಉಲ್ಲನ್ ದಾರಗಳಿಂದ ಬಳ್ಳಿಯಂತೆ ಚಿತ್ರಿಸಲಾಗಿದೆ. ಈ ಸಾಮಾನ್ಯದಲ್ಲಿ ಸಾಮಾನ್ಯ ಎನಿಸುವ ಈ ಸೇಫ್ಟಿ ಪಿನ್ ದರ ನೋಡಿದ ಮೇಲೆ ಸುಮ್ಮನೇ ಕೂರೋಕೆ ಹೇಗೆ ಸಾಧ್ಯ. ಹೀಗಾಗಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಅನೇಕರು ಈ ಡಜನ್‌ಗಟ್ಟಲೇ ಸೇಫ್ಟಿ ಪಿನ್‌ಗಳಿರುವ ಗೊಂಚಲಿನ ಬೆಲೆ ಹೆಚ್ಚೆಂದರೆ 20ರಿಂದ 50 ರೂ ಇರುತ್ತದೆ ಎಂದಿದ್ದಾರೆ. ಹಾಗೆಯೇ ಇದೊಂದು ಹಗಲು ದರೋಡೆ ಎಂದು ಕರೆದಿದ್ದಾರೆ. ಹಾಗೆಯೇ ಇದೇ ರೀತಿಯ ಸೇಫ್ಟಿ ಪಿನ್ ಅನ್ನು ನನ್ನ ತಾಯಿ ನನ್ನ ಅಜ್ಜಿ ಸಾಸ್ ಬಾಹು ಸೀರಿಯಲ್ ಡ್ರಾಮಾ ನೋಡಿಕೊಂಡು ಮಾಡ್ತಿದ್ದರು.ಆದರೆ ಪ್ರಾಡಾ ಇಂತಹ ಸೇಫ್ಟಿ ಪಿನ್‌ಗೆ 70 ಸಾವಿರ ಬೆಲೆ ನಿಗದಿ ಮಾಡಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

 

 

ಪ್ರಾಡಾ ಕ್ರೋಚೆಟ್ ಸೇಫ್ಟಿ ಪಿನ್ ಬ್ರೂಚ್ $775 ಗೆ ಇದನ್ನು ಹಿತ್ತಾಳೆ ಹಾಗೂ ಹತ್ತಿಯಿಂದ ಮಾಡಲಾಗಿದೆ. ಆದರೆ ಇದೇ ದರಕ್ಕೆ ಇದೇ ರೀತಿಯ ಸೇಫ್ಟಿ ಪಿನ್ ಅನ್ನು ನಾನು ಚಿನ್ನ ಹಾಗೂ ಬೆಳ್ಳಿಯಲ್ಲಿ ಮಾಡಿಕೊಡುವೆ ಯಾರಾದರೂ ಖರೀದಿಸಲು ಸಿದ್ಧರಿದ್ದೀರಾ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಹಾಗೆಯೇ ಮತ್ತೊಬ್ಬರು ಹೇಯ್ ಪ್ರಾಡಾ ನಾನು ನಿಮಗೆ ಉತ್ತಮ ಬೆಲೆಗೆ ಪಿನ್‌ಗಳನ್ನು ಪೂರೈಸುತ್ತೇನೆ ನನ್ನ ಜೊತೆ ಒಪ್ಪಂದಕ್ಕೆ ಸಹಿ ಹಾಕಲು ಬನ್ನಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ನಾನು ಇದನ್ನು ನೋಡುವವರೆಗೂ ನಾನು ಎಲ್ಲವನ್ನೂ ನೋಡಿದ್ದೇನೆ ಎಂದು ಭಾವಿಸಿದ್ದೆ ಆದರೆ ಈ ಸೇಫ್ಟಿ ಪಿನ್ ಬೆಲೆ ಕೇಳಿ ಶಾಕ್ ಆಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದಕ್ಕೂ ಮೊದಲು ಭಾರತೀಯ ಮೂಲದ ಬಹುತೇಕ ಎಲ್ಲಾ ಜನಸಾಮಾನ್ಯರು ಬಳಸುವ ಕೊಲ್ಹಾಪುರಿ ಚಪ್ಪಲಿಯನ್ನು ಒಂದೂವರೆ ಲಕ್ಷ ರೂಪಾಯಿಗೆ ಮಾರಾಟ ಮಾಡುವ ಮೂಲಕ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಮಿಲನ್ ಫ್ಯಾಷನ್ ವೀಕ್‌ನಲ್ಲಿ ಪ್ರಾಡಾ ಈ ಕೊಲ್ಹಾಪುರಿ ಚಪ್ಪಲಿಗಳನ್ನು ಪ್ರದರ್ಶಿಸಿತ್ತು. ಪ್ರಾಡಾದ ಮಾಡೆಲ್‌ಗಳು ಈ ಕೊಲ್ಹಾಪುರಿ ಚಪ್ಪಲಿಗಳನ್ನು ಧರಿಸಿ ಫ್ಯಾಷನ್ ರನ್‌ವೇಯಲ್ಲಿ ನಡೆದು ಹೋದರು. ಮಹಾರಾಷ್ಟ್ರದ ಪ್ರಸಿದ್ಧ ಕೊಲ್ಹಾಪುರಿ ಚಪ್ಪಲಿಯ ಜೊತೆಗಿನ ಸಾಮ್ಯತೆಯ ಹೊರತಾಗಿಯೂ ಪ್ರಾಡಾ ಅದರ ಭಾರತೀಯ ಮೂಲವನ್ನು ಎಲ್ಲೂ ಉಲ್ಲೇಖ ಮಾಡಲೇ ಇಲ್ಲ. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ಖಾರದ ಪುಡಿ ಹಿಡಿದು ದರೋಡೆಗೆ ಬಂದ ಸುಕುಮಾರಿ: ಜ್ಯುವೆಲ್ಲರಿ ಶಾಪ್ ಮಾಲೀಕನ ಕೈಗೆ ಸಿಕ್ಕಿ ಬೆನ್ನು ಪುಡಿಪುಡಿ

ಇದನ್ನೂ ಓದಿ: ಪಂಚೆ ಎತ್ತಿ ಕಟ್ಟಿ ರಸ್ತೆ ಡಿವೈಡರ್ ಧ್ವಂಸಗೊಳಿಸಿದ ಕೇರಳ ಮಾಜಿ ಶಾಸಕನ ವಿರುದ್ಧ ಕೇಸ್

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

'ತೆರಿಗೆ ಶೇ.50 ರಿಂದ 15ಕ್ಕೆ ಇಳಿಸಿ..'ಅಮೆರಿಕದ ಜೊತೆಗಿನ ಒಪ್ಪಂದಕ್ಕೆ ಕೊನೇ ಆಫರ್‌ ನೀಡಿದ ಭಾರತ!
Swiggy Report 2025: ಸೆಕೆಂಡಿಗೆ 3ರಂತೆ, 93 ಮಿಲಿಯನ್ ಬಿರಿಯಾನಿ ಆರ್ಡರ್‌ ಬಂದಿವೆ! ಬೆಚ್ಚಿಬೀಳಿಸುತ್ತೆ ವರದಿ!