
ಕಷ್ಟಪಟ್ಟು ಕೆಲ್ಸ ಮಾಡಿದ್ರೆ ಗುಡಿಸಲಿನಲ್ಲಿರುವ ವ್ಯಕ್ತಿ ಕೂಡ ಬಂಗಲೆ ಕಟ್ಟಿಸ್ಬಹುದು. ಈ ವ್ಯಕ್ತಿಯ ಬಾಲ್ಯ ಕೂಡ ಗುಡಿಸಲಿನಲ್ಲಿ ಕಳೆದಿತ್ತು. ಅಮ್ಮ ಹೊಲದಲ್ಲಿ ಕೆಲ್ಸ ಮಾಡಿದ್ರೆ ಅಪ್ಪ, ಪಂಕ್ಚರ್ ರಿಪೇರಿ ಕೆಲ್ಸ ಮಾಡ್ತಿದ್ದ. ಹೆತ್ತವರ ಕಷ್ಟಗಳನ್ನು ನೋಡಿಯೇ ಬೆಳೆದ ವ್ಯಕ್ತಿ ಸುಮ್ಮನೆ ಕುಳಿತುಕೊಳ್ಳಲಿಲ್ಲ. ದೊಡ್ಡವನಾಗ್ತಿದ್ದಂತೆ ಢಾಬಾದಲ್ಲಿ ಮಾಣಿಯಾಗಿ ಕೆಲ್ಸ ಮಾಡಿದ. ಬಣ್ಣಗಳ ಮಾರಾಟ ಮಾಡಿದ, ಪಟಾಕಿ ಮಾರಾಟ ಮಾಡಿದ. ಹೊಟ್ಟೆಗಾಗಿ ಆಟೊ ಓಡಿಸಿದ. ಈಗ ರಾಜಸ್ತಾನದ ದುಬಾರಿ ವಿಐಪಿ ಕಾರ್ ನಂಬರ್ ಖರೀದಿ ಮಾಡಿದ್ದಾರೆ. ಅವರ ಹೆಸರು ರಾಹುಲ್ ತನೇಜಾ (Rahul Taneja).
ಐಷಾರಾಮಿ ಕಾರು ಖರೀದಿ ಮಾಡೋದು ಮಾತ್ರ ಅಲ್ಲ ಕಾರಿಗೆ ವಿಐಪಿ ನಂಬರ್ ಪಡೆಯೋದು ಈಗ ಫ್ಯಾಷನ್. ಜನರು ದುಬಾರಿ ಬೆಲೆ ಕೊಟ್ಟು ವಿಐಪಿ ನಂಬರ್ ಖರೀದಿ ಮಾಡ್ತಾರೆ. ಕಾರುಗಳಿಗೆ ವಿಐಪಿ ನಂಬರ್ ಪಡೆಯೋದ್ರಲ್ಲಿ ಜೈಪುರದ ರಾಹುಲ್ ತನೇಜಾ ಮುಂದಿದ್ದಾರೆ. ಹಿಂದೊಮ್ಮೆ ದುಬಾರಿ ಬೆಲೆ ತೆತ್ತು ವಿಐಪಿ ನಂಬರ್ ಪಡೆದಿದ್ದ ರಾಹುಲ್ ತನೇಜಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ರಾಹುಲ್, VIP ಸಂಖ್ಯೆ RJ 45 CG 0001 ಗೆ 31 ಲಕ್ಷ ರೂಪಾಯಿ ನೀಡಿದ್ದಾರೆ. 2018 ರಲ್ಲಿ, ರಾಹುಲ್ ತಮ್ಮ ಜಾಗ್ವಾರ್ XJL ಗಾಗಿ ರಾಜಸ್ಥಾನದ ಆ ಸಮಯದಲ್ಲಿ ಅತ್ಯಂತ ದುಬಾರಿ ವಿಐಪಿ ಸಂಖ್ಯೆ RJ 45 CG 0001 ಅನ್ನು ಖರೀದಿಸಿದ್ದರು. ೀಗ ತನೇಜಾ ಜೈಪುರ ಆರ್ ಟಿಒದಿಂದ 31 ಲಕ್ಷ ರೂಪಾಯಿ ಬೆಲೆಯ RJ 60 CM 0001 ಸಂಖ್ಯೆ ಖರೀದಿ ಮಾಡಿದ್ದಾರೆ. ತಮ್ಮ ಆಡಿ RSQ 8 ಗಾಗಿ ಈ ವಿಐಪಿ ನಂಬರ್ ಖರೀದಿ ಮಾಡಿದ್ದಾರೆ. ರಾಹುಲ್ ತಮ್ಮ ಮೊದಲ ಐಷಾರಾಮಿ ಕಾರು BMW ಸೆವೆನ್ ಗಾಗಿ, , RJ 14 CP 0001 ಸಂಖ್ಯೆಯನ್ನು ಖರೀದಿ ಮಾಡಿದ್ದರು. ಈ ನಂಬರನ್ನು ಅವರು ಹರಾಜಿನಲ್ಲಿ 10 ಲಕ್ಷ ರೂಪಾಯಿಗೆ ಪಡೆದಿದ್ದರು.
ರಿಯಲ್ ಎಸ್ಟೇಟ್‌ನಲ್ಲಿ ಅಪ್ಪ ಮಗನ ಚಮತ್ಕಾರ: ಶೇ.47 ಲಾಭದೊಂದಿಗೆ 2 ಲಕ್ಸುರಿ ಫ್ಲಾಟ್‌ಗಳ ಸೇಲ್ ಮಾಡಿದ ಅಮಿತಾಭ್
ನವೆಂಬರ್ 16 ರಂದು ರಾಹುಲ್ ತನೇಜಾ ಮಗ ರೆಹಾನ್ ತನೇಜಾಗೆ 18 ವರ್ಷ ತುಂಬಲಿದೆ. ಮಗನಿಗೆ ರಾಹುಲ್, ಆಡಿ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ಏಳು ವರ್ಷಗಳ ಹಿಂದೆ, ರಾಹುಲ್ ತನೇಜಾ ಜಾಗ್ವಾರ್ ಖರೀದಿಸಿದ್ದರು, ಆಗ್ಲೇ ಮಗನಿಗೆ ಪ್ರಾಮೀಸ್ ಮಾಡಿದ್ರು. ಚೆನ್ನಾಗಿ ಹಣ ಬಂದ್ರೆ 18 ವರ್ಷ ತುಂಬಿದಾಗ ಐಷಾರಾಮಿ ಕಾರನ್ನು ಗಿಫ್ಟ್ ನೀಡ್ತೇನೆ ಎಂದಿದ್ರು. ಅದ್ರಂತೆ ಈಗ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ದುಬಾರಿ ಬೆಲೆ ಬಗ್ಗೆ ರಾಹುಲ್ ಹೇಳೋದೇನು? :
ಇಷ್ಟೊಂದು ಹಣ ಖರ್ಚು ಮಾಡಿ ವಿಐಪಿ ನಂಬರ್ ಖರೀದಿ ಮಾಡಿರೋ ರಾಹುಲ್ ವಾಸ್ತವದಲ್ಲಿ ಬದುಕಲು ಇಷ್ಟಪಡ್ತಾರೆ. ಮಗನ ಸಂತೋಷವೇ ನನ್ನ ಸಂತೋಷ. ಮಗನಿಗೆ ಕಾರು, ಕಾರಿನ ನಂಬರ್ ಕ್ರೇಜ್ ಇದೆ. ಹಾಗಾಗಿ ಇದನ್ನು ಖರೀದಿ ಮಾಡಿದ್ದೇನೆ ಅಂತ ರಾಹುಲ್ ಹೇಳಿದ್ದಾರೆ. 19ನೇ ವಯಸ್ಸಿನಲ್ಲಿಯೇ ಕಾರ್ ಪ್ಯಾಲೇಸ್ ಶುರು ಮಾಡಿದ್ದ ರಾಹುಲ್ ತನೇಜಾ ಫ್ಯಾಷನ್ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಮಿಸ್ಟರ್ ಜೈಪುರ್, ಮಿಸ್ಟರ್ ರಾಜಸ್ತಾನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಲೈವ್ ಕ್ರಿಯೇಷನ್ಸ್ ಹೆಸರಿನ ಈವೆಂಟ್ ಉದ್ಯಮ ನಡೆಸುತ್ತಿರುವ ರಾಹುಲ್ ಇಂಡಿಯನ್ ಆರ್ಟಿಸ್ಟ್.ಕಾಮ್ ಮುಖ್ಯಸ್ಥರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.