ಆದಾಯ ತೆರಿಗೆ ಇಲಾಖೆ ಇ-ಪೋರ್ಟಲ್ ವಿರುದ್ಧ ತೆರಿಗೆದಾರರ ದೂರು; ವಿಸ್ತರಣೆಯಾಗುತ್ತಾ ಐಟಿಆರ್ ಸಲ್ಲಿಕೆ ಗಡುವು?

Published : Jul 23, 2022, 09:14 PM IST
 ಆದಾಯ ತೆರಿಗೆ ಇಲಾಖೆ ಇ-ಪೋರ್ಟಲ್ ವಿರುದ್ಧ ತೆರಿಗೆದಾರರ ದೂರು; ವಿಸ್ತರಣೆಯಾಗುತ್ತಾ ಐಟಿಆರ್ ಸಲ್ಲಿಕೆ ಗಡುವು?

ಸಾರಾಂಶ

*2022-2023ನೇ ಮೌಲ್ಯಮಾಪನ ವರ್ಷಕ್ಕೆ ಐಟಿಆರ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕ *ಟ್ರೆಂಡ್ ಆಗುತ್ತಿರುವ ಐಟಿಆರ್ ಗಡುವು ವಿಸ್ತರಣೆ ಆಗ್ರಹದ ಹ್ಯಾಶ್ ಟ್ಯಾಗ್  *ಸೋಷಿಯಲ್ ಮೀಡಿಯಾದಲ್ಲಿಆದಾಯ ತೆರಿಗೆ ಇಲಾಖೆ ಮೇಲೆ ಒತ್ತಡ ಹೇರುತ್ತಿರುವ ತೆರಿಗೆದಾರರು  

ನವದೆಹಲಿ (ಜು. 23): 2022-2023 ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ಐಟಿಆರ್ ) ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕ. ಈ ಬಾರಿ ಸರ್ಕಾರ ಅಂತಿಮ ಗಡುವು ವಿಸ್ತರಿಸುವ ಯೋಚನೆಯಲ್ಲಿಲ್ಲ. ಆದರೆ, ಹಲವು ತೆರಿಗೆದಾರರು ಅಂತಿಮ ಗಡುವನ್ನು ತಕ್ಷಣ ವಿಸ್ತರಿಸುವಂತೆ ಟ್ವಿಟರ್ ನಲ್ಲಿ ಆದಾಯ ತೆರಿಗೆ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಕೇಂದ್ರ ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್, ಈ ವರ್ಷ  ಐಟಿಆರ್ ಅಂತಿಮ ಗಡುವು ವಿಸ್ತರಿಸುವ ಯಾವುದೇ ಯೋಚನೆ ಸರ್ಕಾರಕ್ಕೆ ಇಲ್ಲ ಎಂದು ಬುಧವಾರ ಹೇಳಿದ್ದರು.  ಆದರೆ, ಇ-ಫೈಲಿಂಗ್ ವೆಬ್ ಸೈಟ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾ ಬಳಕೆದಾರರು ದೂರಿದ್ದಾರೆ. ಐಟಿಆರ್ ಸಲ್ಲಿಕೆಯ ಅಂತಿಮ ದಿನಾಂಕವನ್ನು ತಕ್ಷಣ ಮುಂದೂಡಬೇಕು ಎಂಬ ಹ್ಯಾಶ್ ಟ್ಯಾಗ್ ಮೂಲಕ ತೆರಿಗೆದಾರರು ಸೋಷಿಯಲ್ ಮೀಡಿಯಾದ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ. ‘Extend Due Date Immediately’ ಎಂಬ ಹ್ಯಾಶ್ ಟ್ಯಾಗ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. 'ಆನ್ ಲೈನ್ ಫೈಲಿಂಗ್  ಸಂದರ್ಭದಲ್ಲಿ ಎದುರಿಸಿದ ಕಷ್ಟಗಳನ್ನು ಪರಿಹರಿಸಿ. ಐಟಿಆರ್-3ನಲ್ಲಿ  ಕೊನೆಯ ಹೆಸರು ಅಟೋಮ್ಯಾಟಿಕ್ ಆಗಿ ಬರುತ್ತಿಲ್ಲ. ಹಾಗೆಯೇ ಅದರಲ್ಲಿ ನಮೂದಿಸಲು ಕೂಡ ಅವಕಾಶ ನೀಡುತ್ತಿಲ್ಲ. ಹೀಗಾಗಿ ಐಟಿಆರ್ ಆನ್ ಲೈನ್ ಪರಿಶೀಲನೆ ಹಾಗೂ  ಸಲ್ಲಿಕೆ ಸಾಧ್ಯವಾಗುತ್ತಿಲ್ಲ? ದಂಡದ ತೂಗುಕತ್ತಿ ನನ್ನ ತಲೆ ಮೇಲಿದೆ. ಏನು ಮಾಡೋದು?' ಎಂದು ತೆರಿಗೆದಾರರೊಬ್ಬರು ಟ್ವೀಟ್ ಮಾಡಿದ್ದರು.

ಈ ದೂರಿಗೆ ಪ್ರತಿಕ್ರಿಯಿಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 'ಈ ಪ್ರಕರಣದ ಮಾಹಿತಿಗಳನ್ನು ಪ್ಯಾನ್ ಹಾಗೂ ನಿಮ್ಮ ಮೊಬೈಲ್ ಸಂಖ್ಯೆ ಜೊತೆಗೆ orm@cpc.incometax.gov.in.ಗೆ ಕಳುಹಿಸಿ. ನಮ್ಮ ತಂಡ ನಿಮ್ಮ ಜೊತೆ ಸಂಪರ್ಕದಲ್ಲಿರುತ್ತದೆ. ದುರ್ಬಳಕೆಯಾಗುವ ಸಾಧ್ಯತೆಯಿರುವ ಕಾರಣ ಪ್ಯಾನ್ ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ದಯವಿಟ್ಟು ಹಂಚಿಕೊಳ್ಳಬೇಡಿ ಎಂದು ನಾವು ಕೋರುತ್ತೇವೆ' ಎಂದಿದ್ದಾರೆ.

ಐಟಿಆರ್ ಸಲ್ಲಿಕೆ ಕೊನೆಯ ದಿನ ಬ್ಯಾಂಕ್ ತೆರೆದಿರುತ್ತಾ? ಇಲ್ಲವಾದ್ರೆ ಏನೆಲ್ಲ ಸಮಸ್ಯೆಯಾಗುತ್ತೆ?

'ಐಟಿಆರ್ ಫೈಲಿಂಗ್ ಪೋರ್ಟಲ್ https://eportal.incometax.gov.in ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದು, ನಿರಂತರವಾಗಿ ಲೋಡ್ ಆಗುತ್ತಿದ್ದು, ಆ ಬಳಿಕ ವಿಫಲವಾಗುತ್ತಿದೆ' ಎಂದು ಇನ್ನೊಬ್ಬರು ಬಳಕೆದಾರರು ದೂರಿದ್ದಾರೆ. ಮತ್ತೊಬ್ಬರು 'ಇಂದು ಬೆಳಗ್ಗೆಯಿಂದ ಲೋಡಿಂಗ್ ಎಂದು ತೋರಿಸುತ್ತಿದೆ. ಇದು ಯಾವಾಗ ಸರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ದಯವಿಟ್ಟು ನನಗೆ ತಿಳಿಸಿ' ಎಂದು ಟ್ವೀಟ್ ಮಾಡಿದ್ದಾರೆ.

ಆದಾಯ ತೆರಿಗೆ ಇಲಾಖೆ 2021ರ ಜೂನ್ 7 ರಂದು ಪ್ರಾರಂಭಿಸಿದ ಇ-ಫೈಲಿಂಗ್ (e-filling) ಪೋರ್ಟಲ್ ನಲ್ಲಿ(Portal) ಸಮಸ್ಯೆಗಳಿವೆ ಎಂಬ ದೂರು ಕೇಳಿಬರುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ತೆರಿಗೆದಾರರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ   2021-22ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಅವಧಿಯನ್ನು ಜುಲೈ 31ರಿಂದ ಸೆಪ್ಟೆಂಬರ್ 30ರ ತನಕ ವಿಸ್ತರಿಸಿತ್ತು. ಆ ಬಳಿಕ ಮತ್ತೆ ಅದೇ ರೀತಿ ಸಮಸ್ಯೆ ಕಂಡುಬಂದ ಕಾರಣ ಡಿಸೆಂಬರ್ 31ಕ್ಕೆ ವಿಸ್ತರಿಸಲಾಯಿತು.  

ತೆರಿಗೆದಾರರ ದೂರುಗಳ ನಡುವೆಯೂ ಇಂದು ಟ್ವೀಟ್ ಮಾಡಿರುವ ತೆರಿಗೆ ಇಲಾಖೆ, 'ಪ್ರಿಯ ತೆರಿಗೆದಾರರೇ, ಈ ತನಕ ನೀವು ಐಟಿಆರ್ ಸಲ್ಲಿಕೆ ಮಾಡದಿದ್ದರೆ, ಮಾಡಲು ಮರೆಯಬೇಡಿ. 2022-23ನೇ ಮೌಲ್ಯಮಾಪನ ವರ್ಷಕ್ಕೆ ಐಟಿಆರ್ ಸಲ್ಲಿಕೆಗೆ 2022ರ ಜುಲೈ 31 ಕೊನೆಯ ದಿನಾಂಕ' ಎಂದು ಹೇಳಿದೆ. 

Bank Holidays:ಆಗಸ್ಟ್ ತಿಂಗಳಲ್ಲಿ ಬ್ಯಾಂಕಿಗೆ ಎಷ್ಟು ದಿನ ರಜೆ? ಆರ್ ಬಿಐ ಹಾಲಿಡೇ ಕ್ಯಾಲೆಂಡರ್ ಹೀಗಿದೆ

ವಿಳಂಬವಾದ್ರೆ ಸಮಸ್ಯೆ
ನಿಗದಿತ ದಿನಾಂಕದೊಳಗೆ ಐಟಿಆರ್ (ITR) ಸಲ್ಲಿಕೆ ಮಾಡದಿದ್ರೂ ವಿಳಂಬ ಐಟಿಆರ್  (Belated ITR) ಸಲ್ಲಿಕೆಗೆ ಅವಕಾಶವಿದ್ದರೂ ತೆರಿಗೆದಾರರು (Taxpayers) ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ವಿಳಂಬ ಐಟಿಆರ್ ಸಲ್ಲಿಕೆ ಮಾಡೋ ತೆರಿಗೆದಾರರು (Taxpayers) ತಡವಾಗಿರೋದಕ್ಕೆ ದಂಡ ಶುಲ್ಕ ಕಟ್ಟಬೇಕು. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!