ಈಗ ಲಂಚ್ ಟೈಮ್‌, ಆಮೇಲೆ ಬನ್ನಿ; ಬ್ಯಾಂಕ್‌ ಉದ್ಯೋಗಿಗಳು ಇನ್ನು ಇದನ್ನ ಹೇಳೋ ಹಾಗಿಲ್ಲ!

Published : Jul 23, 2022, 06:35 PM IST
ಈಗ ಲಂಚ್ ಟೈಮ್‌, ಆಮೇಲೆ ಬನ್ನಿ; ಬ್ಯಾಂಕ್‌ ಉದ್ಯೋಗಿಗಳು ಇನ್ನು ಇದನ್ನ ಹೇಳೋ ಹಾಗಿಲ್ಲ!

ಸಾರಾಂಶ

ಅದೆಷ್ಟೇ ಡಿಜಿಟಲೀಕರಣವಾಗಿದ್ದರೂ, ಬ್ಯಾಂಕ್‌ಗೆ ಬಂದು ತಮ್ಮ ಕೆಲಸ ಕಾರ್ಯಗಳನ್ನು ಮಾಡುವ ಸಾಕಷ್ಟು ಗ್ರಾಹಕರು ಈಗಲೂ ಇದ್ದಾರೆ. ಆದರೆ, ಬ್ಯಾಂಕ್‌ನಲ್ಲಿ ಲಂಚ್ ಟೈಮ್‌ ಬ್ರೇಕ್‌ ದೊಡ್ಡ ಸಮಸ್ಯೆ. ಊಟಕ್ಕೆ ಹೋದವರು ಒಂದು ಗಂಟೆ ಆದ್ರೂ ಬರದೇ ಇರುವ ಸಾಕಷ್ಟು ಪ್ರಕರಣಗಳಿವೆ. ಇದರ ನಡುವೆ ಆರ್‌ಟಿಐ ಅರ್ಜಿಯೊಂದಕ್ಕೆ ಉತ್ತರಿಸಿರುವ ಆರ್‌ಬಿಐ ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿಸಿದೆ.  

ನವದೆಹಲಿ (ಜುಲೈ 23): ಹಿರಿಯ ಗ್ರಾಹಕರು, ಮೊಬೈಲ್‌ ಬ್ಯಾಂಕಿಂಗ್‌ ಬಗ್ಗೆ ತಿಳಿಯದೇ ಇರುವವರು ಈಗಲೂ ಬ್ಯಾಂಕ್‌ಗೆ ಬಂದು ಹಣ ವರ್ಗಾವಣೆ, ಹಣ ಪಡೆಯುವ ಕೆಲಸ ಮಾಡುತ್ತಾರೆ. ಆದರೆ, ಬ್ಯಾಂಕ್‌ನ ಲಂಚ್‌ ಟೈಮ್‌ ಸಮಯದಲ್ಲಿ ಹೋದರಂತೂ ಕಥೆ ಮುಗಿದೇ ಹೋಯಿತು. ಲಂಚ್‌ ಟೈಮ್ ಎನ್ನುವ ಕಾರಣ ನೀಡಿ ಗಂಟೆಗಟ್ಟಲೆ ಗ್ರಾಹಕರನ್ನು ಕಾಯಿಸುವ ಸಾಕಷ್ಟು ಘಟನೆಗಳು ನಡೆದಿವೆ. ಸನ್ಣ ಚಲನ್‌ ತುಂಬಲು ಕೌಂಟರ್‌ಗೆ ಹೋದರೆ, ಒಂದೋ ಕೌಂಟರ್‌ನಲ್ಲಿ ಜನವೇ ಇರೋದಿಲ್ಲ. ಜನರಿದ್ದರೆ, ಇದು ಲಂಚ್ ಟೈಮ್‌ ಆಮೇಲೆ ಬನ್ನಿ ಎನ್ನುವ ಉತ್ತರ. ಆಫೀಸ್‌ ಕೆಲಸದ ನಡುವೆ ಬ್ಯಾಂಕ್‌ಗೆ ಬಂದರೆ ಕಥೆ ಮುಗಿದ ಹಾಗೆ. ಆದರೆ, ಇತ್ತಿಚೆಗೆ ಆರ್‌ಟಿಐ ಅರ್ಜಿಯೊಂದಕ್ಕೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಉತ್ತರ ನೀಡಿದ್ದು, ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿಸಿಕೊಟ್ಟಿದೆ.  ಆರ್‌ಟಿಐಗೆ ಪ್ರತಿಕ್ರಿಯಿಸಿದ ಆರ್‌ಬಿಐ, ಬ್ಯಾಂಕ್ ಅಧಿಕಾರಿಗಳು ಒಟ್ಟಿಗೆ ಊಟಕ್ಕೆ ಹೋಗುವಂತಿಲ್ಲ ಎಂದು ಹೇಳಿದೆ. ಊಟದ ವಿರಾಮದ ಸಮಯದಲ್ಲಿ ಒಂದೊಂದು ವಿಭಾಗದಲ್ಲಿ ಒಬ್ಬೊಬ್ಬರಾಗಿ ಊಟಕ್ಕೆ ತೆರಳಬೇಕು. ಈ ಸಮಯದಲ್ಲಿ ಸಾಮಾನ್ಯ ವಹಿವಾಟುಗಳು ಮುಂದುವರಿಯುತ್ತಲೇ ಇರಬೇಕು. ಗ್ರಾಹಕರನ್ನು ಗಂಟೆಗಟ್ಟಲೆ ಕಾಯುವಂತೆ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ.  ಬ್ಯಾಂಕ್ ಉದ್ಯೋಗಿಗಳು ಮಧ್ಯಾಹ್ನದ ಊಟದ ಹೆಸರಿನಲ್ಲಿ ನಿಮ್ಮನ್ನು ಗಂಟೆಗಟ್ಟಲೆ ಕಾಯುವಂತೆ ಮಾಡಿದರೆ, ನಿಮ್ಮೊಂದಿಗೆ ಚೆನ್ನಾಗಿ ಮಾತನಾಡದಿದ್ದರೆ ಅಥವಾ ಕೆಲಸಕ್ಕೆ ತಡವಾದರೆ, ನೀವು ಈ ಕುರಿತಾಗಿ ದೂರು ಕೂಡ ನೀಡಬಹುದು.

ಎಲ್ಲಿ ದೂರು ನೀಡಬೇಕು?
- ಗ್ರಾಹಕರ ದೂರುಗಳ ಪರಿಹಾರಕ್ಕಾಗಿ, ಕೆಲವು ಬ್ಯಾಂಕ್‌ಗಳು ದೂರುಗಳನ್ನು ದಾಖಲಿಸಲು ರಿಜಿಸ್ಟರ್‌ಗಳನ್ನು ನಿರ್ವಹಿಸುತ್ತವೆ. ಇಲ್ಲಿ ನೀವು ದೂರು ದಾಖಲಿಸಬಹುದು.

- ರಿಜಿಸ್ಟರ್ ಕೆಲಸ ಮಾಡದಿದ್ದರೆ, ನೀವು ಆ ಉದ್ಯೋಗಿಯ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಅಥವಾ ನೋಡಲ್ ಅಧಿಕಾರಿಗೆ ದೂರು ನೀಡಬಹುದು.

- ಇದಲ್ಲದೆ, ಗ್ರಾಹಕರ ದೂರುಗಳನ್ನು ವ್ಯವಹರಿಸಲು ಸಾಮಾನ್ಯವಾಗಿ ಪ್ರತಿ ಬ್ಯಾಂಕ್‌ನಲ್ಲಿ ಕುಂದುಕೊರತೆ ಪರಿಹಾರ ವೇದಿಕೆ ಇರುತ್ತದೆ. ಅವರು ಗ್ರಾಹಕರ ಸಮಸ್ಯೆಯನ್ನು ಅಲ್ಲಿ ಹೇಳಬಹುದು


ಕುಂದುಕೊರತೆ ಪರಿಹಾರ ವೇದಿಕೆಯಲ್ಲಿ ಗ್ರಾಹಕರು ಬ್ಯಾಂಕ್ ಉದ್ಯೋಗಿಯ ವಿರುದ್ಧ ಹೇಗೆ ದೂರು ನೀಡಬಹುದು?: ಯಾವುದೇ ಗ್ರಾಹಕರ ದೂರನ್ನು ಪರಿಹರಿಸುವುದು ಕುಂದುಕೊರತೆ ಪರಿಹಾರ ವೇದಿಕೆಯ ಉದ್ದೇಶವಾಗಿದೆ. ಆದ್ದರಿಂದ, ನೀವು ಬ್ಯಾಂಕಿನ ಕುಂದುಕೊರತೆ ಪರಿಹಾರ ಸಂಖ್ಯೆಯನ್ನು ತೆಗೆದುಕೊಳ್ಳುವ ಮೂಲಕ ದೂರು ನೀಡಬಹುದು. ನೀವು ಬಯಸಿದರೆ ನೀವು ಇಮೇಲ್ ಮಾಡಬಹುದು.

ನಂಬರ್‌ ಎಲ್ಲಿ ಸಿಗುತ್ತದೆ: ನೀವು ಆಯಾ ಬ್ಯಾಂಕ್‌ನ ವೆಬ್‌ಸೈಟ್‌ನಿಂದ ಕುಂದುಕೊರತೆ ಪರಿಹಾರ ಸಂಖ್ಯೆಯನ್ನು ಪಡೆಯಬಹುದು. ನೀವು ಬಯಸಿದರೆ, ನೀವು ಬ್ಯಾಂಕಿನ ಕಸ್ಟಮರ್ ಕೇರ್‌ಗೆ ಕರೆ ಮಾಡುವ ಮೂಲಕವೂ ಸಂಖ್ಯೆಯನ್ನು ಪಡೆಯಬಹುದು.

ಗ್ರಾಹಕರ ದೂರಿನ ಮೇಲೆ ಬ್ಯಾಂಕ್ ಕ್ರಮ ಕೈಗೊಳ್ಳದಿದ್ದರೆ ಗ್ರಾಹಕ ಏನು ಮಾಡಬೇಕು?: RBI ಗ್ರಾಹಕರ ದೂರುಗಳನ್ನು ಪರಿಹರಿಸಲು 2006 ರಲ್ಲಿ ಬ್ಯಾಂಕಿಂಗ್ ಒಂಬುಡ್ಸ್‌ಮನ್ ಯೋಜನೆಯನ್ನು ಪರಿಚಯಿಸಿತು. ಗ್ರಾಹಕರು ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ದೂರು ನೀಡಬಹುದು. ಸಮಸ್ಯೆಗೆ ಸಂಬಂಧಿಸಿದ ಬ್ಯಾಂಕ್, ಬ್ಯಾಂಕ್ ಗ್ರಾಹಕರ ದೂರನ್ನು ಸ್ವೀಕರಿಸಿದೆ ಮತ್ತು ಒಂದು ತಿಂಗಳಾದರೂ ಅವರ ಕಡೆಯಿಂದ ಗ್ರಾಹಕರಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದಾದಲ್ಲಿ ಒಂಬುಡ್ಸ್‌ಮನ್‌ಗೆ ದೂರು ನೀಡಬಹುದು. ಗ್ರಾಹಕರ ದೂರನ್ನು ಬ್ಯಾಂಕ್ ತಿರಸ್ಕರಿಸಿದಲ್ಲಿ, ಗ್ರಾಹಕನಿಗೆ ಬ್ಯಾಂಕ್ ನೀಡಿದ ಉತ್ತರದಿಂದ ತೃಪ್ತನಾಗದೇ ಇದ್ದಲ್ಲಿ ಒಂಬುಡ್‌ಮನ್ಸ್‌ಗೆ ದೂರು ನೀಡಬಹುದು.

ಆರ್ ಬಿಐ ಎಂಪಿಸಿ ಸಭೆ ವೇಳಾಪಟ್ಟಿಯಲ್ಲಿ ಬದಲಾವಣೆ;ಆಗಸ್ಟ್ ನಲ್ಲಿ ಹೊಸ ದಿನಾಂಕ ನಿಗದಿ

ಬ್ಯಾಂಕಿಂಗ್ ಓಂಬುಡ್ಸ್‌ಮನ್‌ಗೆ ದೂರು ಸಲ್ಲಿಸುವಾಗ ಗ್ರಾಹಕರಿಗೂ ಇದೆ ಷರತ್ತು: ಗ್ರಾಹಕರು ನೇರ ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ದೂರು ನೀಡಲು ಸಾಧ್ಯವಿಲ್ಲ. ಮೊದಲಿಗೆ, ಅವರು ಯಾವುದೇ ಸಮಸ್ಯೆಯನ್ನು ಎದುರಿಸಿದ ಬ್ಯಾಂಕ್‌ಗೆ ಲಿಖಿತ ದೂರು ನೀಡಬೇಕು.  ಇನ್ನು ದೂರು ಪ್ರಕ್ರಿಯೆಯ ಪ್ರಾರಂಭದ 1 ವರ್ಷದೊಳಗೆ ನೀವು ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ದೂರು ನೀಡಬೇಕು. 2 ವರ್ಷ, 3 ವರ್ಷ ಅಥವಾ 5 ವರ್ಷಗಳ ನಂತರ ನೀವು ಬ್ಯಾಂಕ್ ಅಥವಾ ಅದರ ಉದ್ಯೋಗಿಗಳಿಗೆ ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ದೂರು ನೀಡುವುದು ಸಾಧ್ಯವಿಲ್ಲ.

ನಾವೀನ್ಯತೆ: ಸತತ 3ನೇ ವರ್ಷ ಕರ್ನಾಟಕ ದೇಶಕ್ಕೇ ನಂಬರ್‌ 1

ಬ್ಯಾಂಕಿಂಗ್‌ಗೆ ಸಂಬಂಧಿಸಿದ ಈ 6 ವಿಷಯಗಳು ಉಪಯುಕ್ತವಾಗಬಹುದು: 
- ಬ್ಯಾಂಕಿನ ಕಡೆಯಿಂದ ಚೆಕ್ ಸಂಗ್ರಹಣೆಯಲ್ಲಿ ವಿಳಂಬವಾದಲ್ಲಿ, ಅದು ಗ್ರಾಹಕರಿಗೆ ಪರಿಹಾರವನ್ನು ನೀಡಬೇಕಾಗುತ್ತದೆ.

- ನೀವು ನೀಡಿದ ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸೇವೆ (ಇಸಿಎಸ್) ಸೂಚನೆಗಳಲ್ಲಿ ಬ್ಯಾಂಕ್‌ನ ಕಡೆಯಿಂದ ಯಾವುದೇ ವಿಳಂಬವಾದರೆ, ನೀವು ಅದರ ಮೇಲೆ ಪರಿಹಾರವನ್ನು ಸಹ ಪಡೆಯಬಹುದು.

- ಖಾತೆಯಲ್ಲಿ ಬ್ಯಾಲೆನ್ಸ್ ಕೊರತೆಯಿಂದಾಗಿ ESC ವಿಫಲವಾದರೆ, ಅದಕ್ಕಾಗಿ ನೀವು ದಂಡವನ್ನು ಪಾವತಿಸಬೇಕಾಗುತ್ತದೆ.

- ದೇಶದ ಯಾವುದೇ ಬ್ಯಾಂಕ್ ನಲ್ಲಿ ಹರಿದ ಮತ್ತು ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಯಾವುದೇ ಬ್ಯಾಂಕ್ ಇದನ್ನು ತೆಗೆದುಕೊಳ್ಳಲು ನಿರಾಕರಿಸುವಂತಿಲ್ಲ

- ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರೆ, ಯಾವುದೇ ಕಾರಣವನ್ನು ನೀಡದೆ ಬ್ಯಾಂಕ್ ಅದನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಯಾವುದೇ ಬ್ಯಾಂಕ್ ಈ ರೀತಿ ಮಾಡಿದರೆ ಅದರ ಬಗ್ಗೆ ದೂರು ನೀಡಬಹುದು.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇನ್ಮುಂದೆ Zepto, Blinkit, Swiggy 10 ನಿಮಿಷದ ಡೆಲಿವರಿ ಸಿಗಲ್ಲ: ಸರ್ಕಾರದ ಆದೇಶ! ಖುಷಿಯಿಂದ ಒಪ್ಕೊಂಡ ಗ್ರಾಹಕರು
ಮುಂಬೈ ಪಾಲಿಕೆ ಚುನಾವಣೆಗಾಗಿ ಷೇರು ಮಾರುಕಟ್ಟೆ ಕ್ಲೋಸ್! ಜೆರೋಧಾ ಸಿಇಒ ನಿತಿನ್ ಕಾಮತ್ ಕೆಂಡಾಮಂಡಲ