Bank Holidays:ಆಗಸ್ಟ್ ತಿಂಗಳಲ್ಲಿ ಬ್ಯಾಂಕಿಗೆ ಎಷ್ಟು ದಿನ ರಜೆ? ಆರ್ ಬಿಐ ಹಾಲಿಡೇ ಕ್ಯಾಲೆಂಡರ್ ಹೀಗಿದೆ

Published : Jul 23, 2022, 06:41 PM ISTUpdated : Jul 23, 2022, 06:42 PM IST
Bank Holidays:ಆಗಸ್ಟ್ ತಿಂಗಳಲ್ಲಿ ಬ್ಯಾಂಕಿಗೆ ಎಷ್ಟು ದಿನ ರಜೆ? ಆರ್ ಬಿಐ ಹಾಲಿಡೇ ಕ್ಯಾಲೆಂಡರ್  ಹೀಗಿದೆ

ಸಾರಾಂಶ

ಆಗಸ್ಟ್ ಅಂದ್ರೇನೆ ಹಬ್ಬಗಳ ಸೀಸನ್. ಹೀಗಾಗಿ ಈ ತಿಂಗಳಲ್ಲಿ ಬ್ಯಾಂಕುಗಳು ಕೂಡ ಹೆಚ್ಚು ದಿನ ಮುಚ್ಚಿರುತ್ತವೆ. ಹಾಗಾದ್ರೆ ಆಗಸ್ಟ್ ತಿಂಗಳಲ್ಲಿ ಎಷ್ಟು ದಿನ ಬ್ಯಾಂಕುಗಳು ಕ್ಲೋಸ್ ಆಗಿರುತ್ತವೆ? ಇಲ್ಲಿದೆ ಮಾಹಿತಿ.   

ನವದೆಹಲಿ (ಜು.23): ಜುಲೈ ತಿಂಗಳು ಮುಗಿಯಲು ಇನ್ನು ಕೆಲವು ದಿನಗಳಷ್ಟೇ ಬಾಕಿ ಉಳಿದಿವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಆಗಸ್ಟ್ ತಿಂಗಳ ಬ್ಯಾಂಕ್ ರಜಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಗಸ್ಟ್ ಅಂದ್ರೇನೆ ಹಬ್ಬಗಳ ತಿಂಗಳು. ಸ್ವಾತಂತ್ರ್ಯ ದಿನಾಚರಣೆ, ವರಮಹಾಲಕ್ಷ್ಮೀ ಹಬ್ಬ, ಗೌರಿ ಗಣೇಶ ಹೀಗೆ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ಈ ತಿಂಗಳು ರಜೆಗಳು ಹೆಚ್ಚಿರುತ್ತವೆ. ಆರ್ ಬಿಐ ರಜಾಪಟ್ಟಿ  ಪ್ರಕಾರ ಆಗಸ್ಟ್ ತಿಂಗಳಲ್ಲಿ ಬ್ಯಾಂಕುಗಳು ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರಗಳು ಸೇರಿದಂತೆ ಒಟ್ಟು 16 ದಿನಗಳ ಕಾಲ ಮುಚ್ಚಿರಲಿವೆ. ಬ್ಯಾಂಕುಗಳಿಗೆ ಸಂಬಂಧಿಸಿ ಆರ್ ಬಿಐ ಪ್ರತಿ ತಿಂಗಳು ಹಾಲಿ ಡೇ ಲಿಸ್ಟ್ ಬಿಡುಗಡೆ ಮಾಡುತ್ತದೆ. ಬ್ಯಾಂಕಿಗೆ ರಜೆಯಿರುವ ದಿನ ಆನ್ ಲೈನ್ ವಹಿವಾಟಿಗೆ ಹಾಗೂ ಎಟಿಎಂ ವ್ಯವಹಾರಗಳಿಗೆ ಯಾವುದೇ ತೊಂದರೆ ಇರೋದಿಲ್ಲ.ಆದ್ರೆ ಆಗಸ್ಟ್ ನಲ್ಲಿ ಬ್ಯಾಂಕಿನ  ಶಾಖೆಗೆ ಭೇಟಿ ನೀಡಿ ಯಾವುದಾದ್ರೂ ಕೆಲಸ ಮಾಡಬೇಕಿದ್ರೆ ಮಾತ್ರ ರಜಾದಿನಗಳ ಪಟ್ಟಿ ನೋಡಿಕೊಂಡು ಹೋಗೋದು ಒಳ್ಳೆಯದು. ಇಲ್ಲವಾದ್ರೆ ನಿಮ್ಮ ಸಮಯ ವ್ಯರ್ಥವಾಗುತ್ತದೆ. ಅಂದ ಹಾಗೇ ಎಲ್ಲ ಹಬ್ಬಗಳಿಗೆ ನೀಡುವ ರಜೆಗಳು ಎಲ್ಲ ರಾಜ್ಯಗಳು ಅಥವಾ ಪ್ರದೇಶಗಳಲ್ಲಿರುವ ಬ್ಯಾಂಕುಗಳಿಗೆ ಅನ್ವಯಿಸೋದಿಲ್ಲ. ಆಯಾ ಪ್ರಾದೇಶಿಕ ಆಚರಣೆ ಅಥವಾ ಹಬ್ಬಗಳಿಗೆ ಅನುಗುಣವಾಗಿ ಅನ್ವಯಿಸುತ್ತವೆ. ಸಾರ್ವಜನಿಕ (Pulic) ಹಾಗೂ ಗೆಜೆಟೆಡ್ ರಜೆಗಳು (Gazetted holidays) ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಭಾನುವಾರ (Sunday) ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ (Saturday) ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ. ಮುಂದಿನ ತಿಂಗಳು ಬ್ಯಾಂಕಿಗೆ ಹೋಗುವ ಪ್ಲ್ಯಾನ್ ಇರೋರು ತಪ್ಪದೇ ಈ ಹಾಲಿ ಡೇ ಲಿಸ್ಟ್ ನೋಡಿಕೊಂಡು ಹೋಗೋದು ಒಳ್ಳೆಯದು. ಇಲ್ಲವಾದ್ರೆ ನೀವು ಅಂದುಕೊಂಡ ಕೆಲಸ ಆ ದಿನ ಪೂರ್ಣಗೊಳ್ಳದೆ ಇರಬಹುದು. 

ಬ್ಯಾಂಕ್ (Bank) ರಜೆಗಳನ್ನು (Holidays)  ಆರ್ ಬಿಐ (RBI) ಮೂರು ವರ್ಗಗಳನ್ನಾಗಿ ವಿಂಗಡಿಸಿದೆ. 1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್​ ಕ್ಲೋಸಿಂಗ್ ರಜೆಗಳು. ಆರ್ ಬಿಐ (RBI) ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕುಗಳು, ಕೋಆಪರೇಟಿವ್ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ ಅನ್ವಯಿಸಲಿವೆ. 

ಐಟಿಆರ್ ಸಲ್ಲಿಕೆ ಕೊನೆಯ ದಿನ ಬ್ಯಾಂಕ್ ತೆರೆದಿರುತ್ತಾ? ಇಲ್ಲವಾದ್ರೆ ಏನೆಲ್ಲ ಸಮಸ್ಯೆಯಾಗುತ್ತೆ?

ಆಗಸ್ಟ್ ತಿಂಗಳ ರಜಾಪಟ್ಟಿ ಹೀಗಿದೆ
ಆಗಸ್ಟ್  1- ದ್ರುಕ್ಪ ಶೀ-ಝಿ (ಸಿಕ್ಕಿಂ)
ಆಗಸ್ಟ್ 7- ಭಾನುವಾರ
ಆಗಸ್ಟ್ 8 - ಮೊಹರಂ (ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರ)
ಆಗಸ್ಟ್ 9 - ಮೊಹರಂ (ಅಶುರಾ) ಸಂದರ್ಭದಲ್ಲಿ ಚಂಡೀಗಢ, ಗುವಾಹಟಿ, ಇಂಫಾಲ್, ಡೆಹ್ರಾಡೂನ್, ಶಿಮ್ಲಾ, ತಿರುವನಂತಪುರಂ, ಭುವನೇಶ್ವರ, ಜಮ್ಮು, ಪಣಜಿ, ಶಿಲ್ಲಾಂಗ್ ಹೊರತುಪಡಿಸಿ ದೇಶದ ಇತರ ಸ್ಥಳಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. 
ಆಗಸ್ಟ್ 11 - ರಕ್ಷಾ ಬಂಧನ 
ಆಗಸ್ಟ್ 13- ದೇಶಪ್ರೇಮಿಗಳ ದಿನ (ಇಂಫಾಲ್), ಎರಡನೇ ಶನಿವಾರ
ಆಗಸ್ಟ್ 14- ಭಾನುವಾರ
ಆಗಸ್ಟ್ 15- ಸ್ವಾತಂತ್ರ್ಯ ದಿನ
ಆಗಸ್ಟ್ 16-ಪಾರ್ಸಿ ಹೊಸ ವರ್ಷ
ಆಗಸ್ಟ್ 18 -ಜನ್ಮಾಷ್ಟಮಿ (ಭುವನೇಶ್ವರ, ಡೆಹ್ರಾಡೂನ್, ಕಾನ್ಪುರ ಹಾಗೂ ಲಖನೌ)
ಆಗಸ್ಟ್  19 -ಜನ್ಮಾಷ್ಟಮಿ
ಆಗಸ್ಟ್ 20- ಶ್ರೀಕೃಷ್ಣ ಅಷ್ಟಮಿ (ಹೈದರಾಬಾದ್ ಮಾತ್ರ)
ಆಗಸ್ಟ್ 21-ಭಾನುವಾರ
ಆಗಸ್ಟ್ 27-ನಾಲ್ಕನೇ ಶನಿವಾರ
ಆಗಸ್ಟ್ 28-ಭಾನುವಾರ
ಆಗಸ್ಟ್ 31-ಗಣೇಶ ಚತುರ್ಥಿ

ಈಗ ಲಂಚ್ ಟೈಮ್‌, ಆಮೇಲೆ ಬನ್ನಿ; ಬ್ಯಾಂಕ್‌ ಉದ್ಯೋಗಿಗಳು ಇನ್ನು ಇದನ್ನ ಹೇಳೋ ಹಾಗಿಲ್ಲ!

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!