ಟ್ವಿಟ್ಟರ್‌ ಕಚೇರಿ ಬಾಡಿಗೆ ಕಟ್ಟೋಕೂ ದುಡ್ಡಿಲ್ಲದೆ ಕಾಫಿ ಮೇಕರ್, ಲೋಗೋವನ್ನೂ ಹರಾಜಿಗೆ ಹಾಕಿದ ಎಲಾನ್‌ ಮಸ್ಕ್‌..!

By BK Ashwin  |  First Published Jan 18, 2023, 5:54 PM IST

ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿರುವ ಟ್ವಿಟ್ಟರ್‌ ಪ್ರಧಾನ ಕಚೇರಿಯಲ್ಲಿರುವ ಹಲವು ವಸ್ತುಗಳನ್ನು ಹರಾಜಿಗೆ ಹಾಕಲಾಗುತ್ತಿದ್ದು, ಇದರಲ್ಲಿ ನೀವೂ ಸಹ ಭಾಗಿಯಾಗಬಹುದಾಗಿದೆ. 


ನಿಮಗೆ ಟ್ವಿಟ್ಟರ್‌ ಪಕ್ಷಿ ಅಂದ್ರೆ ಟ್ವಿಟ್ಟರ್‌ ಲೋಗೋ ಅಂದ್ರೆ ಇಷ್ಟನಾ..? ಅಲ್ಲದೆ, ಟ್ವಿಟ್ಟರ್‌ ಸಿಬ್ಬಂದಿ ಬಳಕೆ ಮಾಡುತ್ತಿದ್ದ ಎಸ್ಪ್ರೆಸ್ಸೋ ಕಾಫಿ ಮಷಿನ್‌ ಬಗ್ಗೆ ಒಲವಿದ್ಯಾ..? ಟ್ವಿಟ್ಟರ್‌ ಬಳಕೆದಾರರು ಹೆಚ್ಚಿರುವಂತೆ ಈ ಮೈಕ್ರೋ ಬ್ಲಾಗಿಂಗ್ ಸಾಮಾಜಿಕ ಜಾಲತಾಣಕ್ಕೆ ಅಭಿಮಾನಿಗಳು ಸಹ ಸಾಕಷ್ಟಿದ್ದಾರೆ. ಇಂತಹ ಅಭಿಮಾನಿಗಳು ಮಂಗಳವಾರ ಆರಂಭವಾಗಿರೋ ಆನ್‌ಲೈನ್‌ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ. ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿರುವ ಟ್ವಿಟ್ಟರ್‌ ಪ್ರಧಾನ ಕಚೇರಿಯಲ್ಲಿರುವ ಹಲವು ವಸ್ತುಗಳನ್ನು ಹರಾಜಿಗೆ ಹಾಕಲಾಗುತ್ತಿದ್ದು, ಇದರಲ್ಲಿ ನೀವೂ ಸಹ ಭಾಗಿಯಾಗಬಹುದಾಗಿದೆ. 

ಹೆರಿಟೇಜ್‌ ಗ್ಲೋಬಲ್‌ ಪಾರ್ಟ್‌ನರ್ಸ್‌ ಇಂಕ್. (Heritage Global Partners Inc.) ಎಂಬ ಸಂಸ್ಥೆ 27 ಗಂಟೆಗಳ ಕಾಲ ನಡೆಯಲಿರುವ ಆನ್‌ಲೈನ್‌ ಹರಾಜು (Online Auction) ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರಿಂದ ಟ್ವಿಟ್ಟರ್‌ (Twitter) ಸಂಸ್ಥೆ ತಮಗಾಗುತ್ತಿರುವ ನಷ್ಟವನ್ನು ತುಂಬಿಕೊಳ್ಳಲಿದೆ ಎಂದು ಹೇಳಿಕೊಳ್ಳಲಾಗುತ್ತಿದೆ. ಎಲಾನ್‌ ಮಸ್ಕ್‌ (Elon Musk) ಕಳೆದ ವರ್ಷ 44 ಬಿಲಿಯನ್‌ ಡಾಲರ್‌ಗೆ ಟ್ವಿಟ್ಟರ್‌ ಖರೀದಿಸಿದ ಬಳಿಕ ಕಂಪನಿ ಸಾಕಷ್ಟು ನಷ್ಟವಾಗಿದ್ದು, ಇದನ್ನು ತಡೆಯಲು ನಾನಾ ಪ್ರಯತ್ನಗಳನ್ನು ಮಾಡುತ್ತಿದೆ. ಈ ಪೈಕಿ ಈ ಹರಾಜು ಸಹ ಒಂದು ಎಂದೂ ಹೇಳಲಾಗ್ತಿದೆ. 

Tap to resize

Latest Videos

ಇದನ್ನು ಓದಿ: ಟ್ವಿಟ್ಟರ್‌ ಕಚೇರಿಗೆ ಸ್ವಂತ ಟಾಯ್ಲೆಟ್ ಪೇಪರ್ ತರುತ್ತಿರುವ ಉದ್ಯೋಗಿಗಳು: ಕಾರಣ ಹೀಗಿದೆ..

ಟ್ವಿಟ್ಟರ್ ಕಾರ್ಪೊರೇಟ್‌ ಕಚೇರಿಯ 631 ವಸ್ತುಗಳನ್ನು ಹರಾಜಿಗೆ (Auction) ಹಾಕಲಾಗುತ್ತಿದೆ. ಈ ಪೈಕಿ ಕೈಗಾರಿಕಾ ಪ್ರಮಾಣದ ಅಡಿಗೆ ಪಾತ್ರೆಗಳು, ಹಾಗೂ ಕಚೇರಿಯ ಪೀಠೋಪಕರಣಗಳಾದ ಬಿಳಿ ಬಣ್ಣದ ಬೋರ್ಡ್‌ ಹಾಗೂ ಡೆಸ್ಕ್‌ಗಳನ್ನು ಹರಾಜಿಗೆ ಹಾಕ್ತಿದ್ದಾರೆ. ಅಷ್ಟೇ ಅಲ್ಲದೆ, ಸೈನ್‌ ಬೋರ್ಡ್‌ ಹಾಗೂ ಕೆಎನ್‌95 ಮಾಸ್ಕ್‌ಗಳ 100 ಕ್ಕೂ ಹೆಚ್ಚು ಬಾಕ್ಸ್‌ಗಳನ್ನು ಹರಾಜಿಗೆ ಹಾಕಲಾಗುತ್ತಿದೆ. ಅಲ್ಲದೆ, ಡಿಸೈನರ್‌ ಕುರ್ಷಿಗಳು, ಕಾಫಿ ಮಷಿನ್‌ಗಳು, ಐಮ್ಯಾಕ್‌ಗಳು ಹಾಗೂ ಪ್ರಮುಖವಾಗಿ ಕಂಪನಿಯ ದೊಟ್ಟ ಟ್ವಿಟ್ಟರ್‌ ಪಕ್ಷಿಯ(ಲೋಗೋ) (Logo) ಪ್ರತಿಮೆ,  ‘’@’’ ಸಂಕೇತದ ಶಿಲ್ಪಕಲೆಯನ್ನೂ ಹರಾಜಿಗೆ ಇಡಲಾಗಿದೆ. 

ಟ್ವಿಟ್ಟರ್‌ ಪಕ್ಷಿಯ ಪ್ರತಿಮೆಗೆ (Statue) 25 ಡಾಲರ್‌ಗೆ ಆರಂಭಿಕ ಬಿಡ್‌ಗಳು (Bids) ಬಂದಿದ್ದರೆ, ನಿಯೋನ್‌ ಲೋಗೋಗೆ 17,500 ಡಾಲರ್‌ ಅಂದರೆ ಅತ್ಯಧಿಕ ಮೊತ್ತದ ಬಿಡ್‌ಗಳನ್ನು ನೀಡಲಾಗಿದೆ. ಹಾಗೆ, ಹರಾಜಿಗೆ 20 ಗಂಟೆಗಳು ಬಾಕಿ ಇದ್ದಾಗಲೂ ಇದಕ್ಕೆ 64 ಬಿಡ್‌ಗಳು ದೊರೆತಿದ್ದವು ಎಂದೂ ತಿಳಿದುಬಂದಿದೆ. ಟ್ವಿಟ್ಟರ್‌ ಪಕ್ಷಿ ಪ್ರತಿಮೆಗೆ 55 ಬಿಡ್‌ಗಳು ಬಂದಿದ್ದು, ಇದರ ಮೌಲ್ಯ 16 ಸಾವಿರ ಡಾಲರ್‌ ಆಗಿದ್ದು,  ‘’@’’ ಶಿಲ್ಪ ಕಲೆಗೆ 4,100 ಡಾಲರ್‌ ಮೌಲ್ಯವಿದೆ. 

ಇದನ್ನೂ ಓದಿ: Twitter ಮುಖ್ಯಸ್ಥ ಸ್ಥಾನಕ್ಕೆ ಗುಡ್‌ಬೈ ಹೇಳ್ತಾರಾ ಎಲಾನ್‌ ಮಸ್ಕ್..? ಜನರ ಒಲವು ಹೀಗಿದೆ ನೋಡಿ..

ಟ್ವಿಟ್ಟರ್ ಹಣಕಾಸು ಪರಿಸ್ಥಿತಿಗೂ ಇದಕ್ಕೂ ಸಂಬಂಧವಿಲ್ಲ..! 
ಈ ಮದ್ಯೆ, ಟ್ವಿಟ್ಟರ್‌ ಆನ್‌ಲೈನ್‌ ಹರಾಜು ನಡೆಸುತ್ತಿರುವವರು, ಈ ರೀತಿ ಹರಾಜಿಗೆ ಕಾರಣ ಟ್ವಿಟ್ಟರ್‌ನ ಹಣಕಾಸು ಪರಿಸ್ಥಿತಿಯಲ್ಲ ಎಂದಿದ್ದಾರೆ. ಹೆರಿಟೇಜ್ ಗ್ಲೋಬಲ್ ಪಾರ್ಟ್‌ನರ್ಸ್‌ನ ಪ್ರತಿನಿಧಿಯೊಬ್ಬರು ಕಳೆದ ತಿಂಗಳು ಫಾರ್ಚೂನ್ ನಿಯತಕಾಲಿಕೆಗೆ ಈ ಬಗ್ಗೆ ಮಾಹಿತಿ ನೀಡಿದ್ದು "ಈ ಹರಾಜಿಗೂ ಅವರ ಹಣಕಾಸಿನ ಸ್ಥಿತಿಗೂ ಯಾವುದೇ ಸಂಬಂಧವಿಲ್ಲ" ಎಂದು ಹೇಳಿದ್ದರು. ಆದರೆ, ಹರಾಜನ್ನು ಆಯೋಜಿಸಿದ ಸಂಸ್ಥೆ ಬ್ಲೂಮ್‌ಬರ್ಗ್‌ ಪ್ರಶ್ನೆಗಳಿಗೆ ತಕ್ಷಣವೇ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ. 

ಆದರೂ, ಕಂಪನಿಯಲ್ಲಿ ವೆಚ್ಚವನ್ನು ಆಮೂಲಾಗ್ರವಾಗಿ ಕಡಿತಗೊಳಿಸಲು ಪ್ರಯತ್ನಿಸುತ್ತಿರುವ ಎಲಾನ್‌ ಮಸ್ಕ್‌ಗೆ ಹೆಚ್ಚಿನ ನಗದು ಸ್ವಾಗತಾರ್ಹವಾಗಿದೆ. ಏಕೆಂದರೆ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿರುವ ತ್ತೊಂದು ಕಚೇರಿಯ ಬಾಡಿಗೆ ಪಾವತಿಸಲು ಸಂಸ್ಥೆ ವಿಫಲವಾಗಿದೆ, ಇದರ ವಿರುದ್ಧ ಮೊಕದ್ದಮೆಯೂ ದಾಖಲಾಗಿದೆ. ಅಲ್ಲದೆ, ಎಷ್ಯಾ - ಫೆಸಿಫಿಕ್‌ ಭಾಗದ ಸಿಂಗಾಪುರದಲ್ಲಿರುವ ಸೇರಿದಂತೆ ಇತರ ಕಚೇರಿಗಳನ್ನು ಸಹ ಖಾಲಿ ಮಾಡಲಾಗುತ್ತಿದ್ದು, ಸಿಬ್ಬಂದಿಯನ್ನು ತೆರವುಗೊಳಿಸಲು ಮತ್ತು ಮನೆಯಿಂದ ಕೆಲಸ ಮಾಡಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ:  ಟ್ವಿಟ್ಟರ್‌ ಕಚೇರಿಯ ಕೊಠಡಿಗಳನ್ನು ಬೆಡ್‌ರೂಂ ಆಗಿ ಪರಿವರ್ತಿಸಿದ ಎಲಾನ್‌ ಮಸ್ಕ್..!

ಇನ್ನು ಮಾಧ್ಯಮ ಸಂಬಂಧಗಳ ತಂಡವನ್ನೇ ಕಿತ್ತೊಗೆದಿರೋ ಟ್ವಿಟ್ಟರ್‌ ಸಂಸ್ಥೆ, ಬ್ಲೂಮ್‌ಬರ್ಗ್‌ ನ್ಯೂಸ್ ಇಮೇಲ್ ಮಾಡಿದ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

click me!