Economic Survey 2023:ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದ ಆರ್ಥಿಕ ಸಮೀಕ್ಷೆ; ಇಲ್ಲಿದೆ ನೋಡಿ ಹೈಲೈಟ್ಸ್

By Suvarna News  |  First Published Jan 31, 2023, 5:44 PM IST

*ಚಾಲ್ತಿ ಖಾತೆ ಕೊರತೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದ ಆರ್ಥಿಕ ಸಮೀಕ್ಷೆ
*ಸಾಮಾಜಿಕ ವಲಯದ ವೆಚ್ಚ 2023ನೇ ಆರ್ಥಿಕ ಸಾಲಿನಲ್ಲಿ 21.3 ಲಕ್ಷ ಕೋಟಿ ರೂ.ಗೆ ಏರಿಕೆ
*ದೇಶದ ತೆರಿಗೆ ಸಂಗ್ರಹದಲ್ಲಿ ಪ್ರಗತಿ
 


ನವದೆಹಲಿ (ಜ.31): ನಾಳೆ ಕೇಂದ್ರ ಬಜೆಟ್  ಮಂಡನೆಯಾಗಲಿದೆ. ಅದಕ್ಕೆ ಮುಂಚಿತವಾಗಿ ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದಾರೆ. ಈ ಆರ್ಥಿಕ ಸಮೀಕ್ಷೆ ಹಿಂದಿನ ಆರ್ಥಿಕ ಸಾಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವ ಜೊತೆಗೆ ಭವಿಷ್ಯದ ಯೋಜನೆಗಳನ್ನು ರೂಪಿಸಲು ನೆರವು ನೀಡುವ ಒಳನೋಟವನ್ನು ಕೂಡ ಒದಗಿಸುತ್ತದೆ. ಭಾರತದ ಆರ್ಥಿಕ ಸಮೀಕ್ಷೆಯನ್ನು ಹಣಕಾಸು ಸಚಿವಾಲಯ ಸಿದ್ಧಪಡಿಸಿ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಕೇಂದ್ರ ಬಜೆಟ್ ಮಂಡನೆಯ ಹಿಂದಿನ ದಿನ ಮಂಡಿಸಲಾಗುತ್ತದೆ. ಇದು ದೇಶದ ಕಳೆದ ಸಾಲಿನ ಆರ್ಥಿಕ ಪರಿಸ್ಥಿತಿಯ ಚಿತ್ರಣ ನೀಡುತ್ತದೆ. ಭಾರತದ ಆರ್ಥಿಕ ಸಮೀಕ್ಷೆಯನ್ನು ಭಾರತದ ಮುಖ್ಯ ಆರ್ಥಿಕ ಸಲಹೆಗಾರರ ಮುಂದಾಳತ್ವದಲ್ಲಿ ಸಿದ್ಧಪಡಿಸಲಾಗುತ್ತದೆ. ಒಂದರ್ಥದಲ್ಲಿ ಆರ್ಥಿಕ ಸಮೀಕ್ಷೆಯನ್ನು ಕಳೆದ ಸಾಲಿನ ಪ್ರಗತಿ ಪತ್ರ ಹಾಗೂ ಮುಂದಿನ ವರ್ಷದ ಯೋಜನೆಗಳ ನೀಲಿ ನಕ್ಷೆ ಎಂದೇ ಕರೆಯಬಹುದು. ಈ ಬಾರಿಯ ಆರ್ಥಿಕ ಸಮೀಕ್ಷೆಯಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಹಾಗಾದ್ರೆ ಈ ಬಾರಿಯ ಆರ್ಥಿಕ ಸಮೀಕ್ಷೆಯಲ್ಲಿ ಯಾವೆಲ್ಲ ಪ್ರಮುಖ ವಿಚಾರಗಳ ಬಗ್ಗೆ ಪ್ರಸ್ತಾಪಿಸಲಾಗಿದೆ? ಇಲ್ಲಿದೆ 2023ನೇ ಆರ್ಥಿಕ ಸಮೀಕ್ಷೆಯ ಹೈಲೈಟ್ಸ್.

*ಭಾರತದ ಆರ್ಥಿಕತೆಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಭಾರತಕ್ಕೆ ವಿದೇಶಿ ನೇರ ಬಂಡವಾಳದ ಹರಿವು ಮತ್ತೆ ಹೆಚ್ಚುವ ಸಾಧ್ಯತೆಯಿದೆ. ಆ ಮೂಲಕ ಭಾರತದ ಉದ್ಯಮ ವಾತಾವರಣವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಸಾಧ್ಯತೆಯಿದೆ.
*ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಉತ್ಪಾದನಾ ವಲಯಕ್ಕೆ ಪ್ರಸಕ್ತ ಹಣಕಾಸು ಸಾಲಿನ ಮೊದಲಾರ್ಧದಲ್ಲಿ (ಏಪ್ರಿಲ್-ಸೆಪ್ಟೆಂಬರ್) ಎಫ್ ಡಿಐ ಒಳಹರಿವು 2021-22ನೇ ಸಾಲಿನ ಮೊದಲಾರ್ಧಕ್ಕಿಂತ ಕಡಿಮೆ ಇತ್ತು. 

Tap to resize

Latest Videos

undefined

Economic Survey 2023:ಮುಂದಿನ ದಿನಗಳಲ್ಲಿ ಧಾನ್ಯಗಳು, ಮಸಾಲ ಪದಾರ್ಥ, ಹಾಲಿನ ಬೆಲೆ ಏರಿಕೆ ನಿರೀಕ್ಷೆ

*ಪ್ರಸಕ್ತ ಚಾಲ್ತಿ ಖಾತೆ ಕೊರತೆಯನ್ನು (CAD) ನಿರ್ವಹಿಸಬೇಕಾದ ಅಗತ್ಯವಿದೆ. ಜಾಗತಿಕ ಮಟ್ಟದಲ್ಲಿ ಸರಕುಗಳ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಚಾಲ್ತಿ ಖಾತೆ ಕೊರತೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. 
*ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ನವೆಂಬರ್ ನಲ್ಲಿಕೇಂದ್ರ ಸರ್ಕಾರದ ಬಂಡವಾಳ ವೆಚ್ಚ (Capex) ಶೇ.63.4ರಷ್ಟು ಬೆಳವಣಿಗೆ ದಾಖಲಿಸಿದೆ.
*ಕಾರ್ಪೋರೇಟ್ ಸಂಸ್ಥೆಗಳಿಗೆ 2019ರಲ್ಲಿ ತೆರಿಗೆ ಕಡಿತ ಮಾಡಿರೋದು ಖಾಸಗಿ ವಲಯದ ತ್ವರಿತ ಚೇತರಿಕೆಗೆ ನೆರವು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಾಗೆಯೇ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ ಯೋಜನೆ ( Production Linked Incentive scheme) ಕೂಡ ಖಾಸಗಿ ವಲಯಕ್ಕೆ ನೆರವು ನೀಡಿದೆ. 
*ಸಾಮಾಜಿಕ ವಲಯದ ವೆಚ್ಚ 2023ನೇ ಆರ್ಥಿಕ ಸಾಲಿನಲ್ಲಿ 21.3 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಏಳು ವರ್ಷಗಳ ಹಿಂದೆ ಇದು 9.1ಲಕ್ಷ ಕೋಟಿ ರೂ. ಇತ್ತು. ಇನ್ನು ಕಾರ್ಮಿಕರ ಮಾರುಕಟ್ಟೆ ಕೂಡ ಕೋವಿಡ್ ಪೂರ್ವದ ಮಟ್ಟಕ್ಕೆ ಚೇತರಿಕೆ ಕಂಡಿದೆ ಎಂದು ಸಮೀಕ್ಷೆ ತಿಳಿಸಿದೆ. ನಿರುದ್ಯೋಗ ಪ್ರಮಾಣ 2018-19ರಲ್ಲಿ ಶೇ.5.8ರಷ್ಟಿದ್ದು, 2020-21ರಲ್ಲಿ ಶೇ. 4.2ಕ್ಕೆ ಇಳಿಕೆಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಜಾಗತಿಕ ಬೆಳವಣಿಗೆ ದರ ಇಳಿಸಿದ IMF;2023ರಲ್ಲಿ ಭಾರತದ ಆರ್ಥಿಕ ಪ್ರಗತಿ ದರ ಶೇ.6.1

*ಭಾರತದ ಜಗತ್ತಿನ ಆರನೇ ಅತೀದೊಡ್ಡ ವಿದೇಶಿ ವಿನಿಮಯ ಸಂಗ್ರಹ ಹೊಂದಿರುವ ರಾಷ್ಟ್ರವಾಗಿದೆ. 2022ರ ಡಿಸೆಂಬರ್ ನಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹ 563 ಶತಕೋಟಿ ಡಾಲರ್ ಇತ್ತು. ಇದು 9.3 ತಿಂಗಳುಗಳ ಆಮದಿಗೆ ಸಾಕಾಗುತ್ತದೆ. 
*ಭಾರತದ ನಿವ್ವಳ ತೆರಿಗೆ ಆದಾಯ ವರ್ಷದಿಂದ ವರ್ಷಕ್ಕೆ ಪ್ರಗತಿ ಕಾಣುತ್ತಿದೆ. 2022ರ ಏಪ್ರಿಲ್ ನಿಂದ ನವೆಂಬರ್ ತನಕ ಶೇ.15.5 ಬೆಳವಣಿಗೆ ದಾಖಲಿಸಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. ನೇರ ತೆರಿಗೆಗಳು ಹಾಗೂ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹದಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

click me!