
ನವದೆಹಲಿ (ಮಾ.28): ದೇಶದಲ್ಲಿ ಡ್ರೋನ್ ಉದ್ಯಮದ ಅಂದಾಜು ವಾರ್ಷಿಕ ಮಾರಾಟ ವಹಿವಾಟು ರೂ. 2020-21 ರಲ್ಲಿ 60 ಕೋಟಿ ಇದೆ. ಇದು 2024-25 ರ ವೇಳೆಗೆ ಸುಮಾರು 900 ಕೋಟಿ ರೂಗೆ ಏರಿಕೆ ಆಗಬಹುದು ಎಂದು ಅಂದಾಜಿಸಲಾಗಿದೆ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್ ಹೇಳಿದ್ದಾರೆ. ಅವರು ರಾಜ್ಯಸಭೆಯಲ್ಲಿ ಈ ಮಾಹಿತಿ ನೀಡಿದರು. 'ಉದಾರೀಕೃತ ಡ್ರೋನ್ ನಿಯಮಗಳು, ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆ ಮತ್ತು ಡ್ರೋನ್ ಆಮದು ನೀತಿಯ ಅನುಷ್ಠಾನದೊಂದಿಗೆ ಭಾರತೀಯ ಡ್ರೋನ್ ಉತ್ಪಾದನಾ ಉದ್ಯಮದ ವಾರ್ಷಿಕ ಮಾರಾಟ ವಹಿವಾಟು 2020-21 ರಲ್ಲಿ ಸರಿಸುಮಾರು 60 ಕೋಟಿಗೆ ಏರಿಕೆಯಾಗಿದ್ದು, 2024-25ರ ವೇಳೆಗೆ 900 ಕೋಟಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ಡ್ರೋನ್ ಬಳಕೆಯ ವಿವಿಧ ಕ್ಷೇತ್ರಗಳಲ್ಲಿ ಇರಬಹುದಾದ ತಾಂತ್ರಿಕ ಅಂತರವನ್ನು ಪರಿಹರಿಸಲು ಭಾರತೀಯ ಉದ್ಯಮ, ಸ್ಟಾರ್ಟ್‌ಅಪ್‌ಗಳು ಮತ್ತು ಅಕಾಡೆಮಿಗಳು ನಿಕಟವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು. ಕೃಷಿ, ಗಣಿಗಾರಿಕೆ, ಔಷಧ ವಿತರಣೆ (medicine delivery), ಕಣ್ಗಾವಲು(surveillance), ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆ (search and rescue), ಸಾರಿಗೆ (transportation), ಮ್ಯಾಪಿಂಗ್, ರಕ್ಷಣೆ (defense)ಮತ್ತು ಕಾನೂನು ಜಾರಿ ಮುಂತಾದ ಆರ್ಥಿಕತೆಯ ಬಹುತೇಕ ಎಲ್ಲಾ ಕ್ಷೇತ್ರಗಳಿಗೆ ಡ್ರೋನ್‌ಗಳಿಂದ ಅಪಾರ ಪ್ರಯೋಜನ ಸಿಗುತ್ತಿವೆ ಎಂದು ಸಿಂಗ್ ಹೇಳಿದರು.
Kisan Drones: ಕೃಷಿ ಕೆಲಸಕ್ಕೂ ಡ್ರೋನ್, 100 ಕಿಸಾನ್ ಡ್ರೋನ್‌ಗೆ ಪ್ರಧಾನಿ ಮೋದಿ ಚಾಲನೆ
ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (DGFT) ಅಧಿಸೂಚನೆ ಸಂಖ್ಯೆ 54/2015-2020 ಪ್ರಕಟವಾದ ದಿನಾಂಕ 9ನೇ ಫೆಬ್ರವರಿ 2022 ರ ಪ್ರಕಾರ ಡ್ರೋನ್‌ಗಳ ಆಮದನ್ನು ಆರ್ & ಡಿ, ರಕ್ಷಣೆ ಮತ್ತು ಭದ್ರತಾ ಉದ್ದೇಶಗಳಿಗೆ ಹೊರತುಪಡಿಸಿ(CBU), ಸೆಮಿ-ನಾಕ್ಡ್ ಡೌನ್ (SKD) ಅಥವಾ ಸಂಪೂರ್ಣವಾಗಿ ನಾಕ್ಡ್ ಡೌನ್ (CKD) ರೂಪದಲ್ಲಾಗಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಡ್ರೋನ್‌ಗಳ ನಿಷೇಧವನ್ನು ಹಂತಹಂತವಾಗಿ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು.
Kisan Drones: ಕೃಷಿಗೆ ನೆರವಾಗಲು ಬಂತು ಸ್ವದೇಶೀ ಡ್ರೋನ್: ದೇಶವ್ಯಾಪಿ ಯೋಜನೆಗೆ ಪ್ರಧಾನಿ ಮೋದಿ ಚಾಲನೆ!
ರಕ್ಷಣೆ, ಭದ್ರತೆ ಮತ್ತು ಸಂಶೋಧನೆ ಉದ್ದೇಶಗಳನ್ನು ಹೊರತುಪಡಿಸಿ ಇತರ ಉದ್ದೇಶಗಳಿಗೆ ಡ್ರೋನ್‌ಗಳ ಆಮದು ಮಾಡಿಕೊಳ್ಳುವುದನ್ನು ಸರ್ಕಾರ ಕಳೆದ ತಿಂಗಳು ನಿಷೇಧಿಸಿದೆ. ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (DGFT) ಅಧಿಸೂಚನೆಯ ಪ್ರಕಾರ 'ಮೇಡ್ ಇನ್ ಇಂಡಿಯಾ' ಡ್ರೋನ್‌ಗಳನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ. ಡ್ರೋನ್ ಬಿಡಿಭಾಗಗಳ ಆಮದಿಗೆ ನಿಷೇಧ ಅನ್ವಯಿಸುವುದಿಲ್ಲ.
ರೂ 120 ಕೋಟಿ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯನ್ನು ಘೋಷಿಸುವುದು ಮತ್ತು ಡ್ರೋನ್ ಕಾರ್ಯಾಚರಣೆ ನಿಯಮಗಳನ್ನು ಉದಾರಗೊಳಿಸುವುದು ಸೇರಿದಂತೆ ಡ್ರೋನ್‌ಗಳು ಮತ್ತು ಡ್ರೋನ್ ಘಟಕಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. "CBU (ಸಂಪೂರ್ಣವಾಗಿ ನಿರ್ಮಿಸಲಾಗಿದೆ) /CKD (ಸಂಪೂರ್ಣವಾಗಿ ನಾಕ್ಡ್ ಡೌನ್)/SKD (ಸೆಮಿ ನಾಕ್ಡ್ ಡೌನ್) ರೂಪದಲ್ಲಿ ಡ್ರೋನ್‌ಗಳ ಆಮದು ನೀತಿ... R&D, ರಕ್ಷಣೆ ಮತ್ತು ಭದ್ರತಾ ಉದ್ದೇಶಗಳಿಗಾಗಿ ಒದಗಿಸಲಾದ ವಿನಾಯಿತಿಗಳೊಂದಿಗೆ ನಿಷೇಧಿಸಲಾಗಿದೆ" ಎಂದು DGFT ಹೇಳಿದೆ. ಈ ಉದ್ದೇಶಗಳಿಗಾಗಿ ಡ್ರೋನ್‌ಗಳ ಆಮದಿಗೆ ಕೂಡ ಸರ್ಕಾರದ ಅನುಮತಿಯ ಅಗತ್ಯವಿರುತ್ತದೆ.
ಹೊಸ ಡ್ರೋನ್ ನಿಯಮಗಳು 2021, ಡ್ರೋನ್‌ಗಳನ್ನು ನಿರ್ವಹಿಸಲು ಪಾವತಿಸಬೇಕಾದ ಅನುಸರಣೆಗಳು ಮತ್ತು ಶುಲ್ಕಗಳನ್ನು ಕಡಿಮೆ ಮಾಡಿದೆ. ನಾಗರಿಕ ವಿಮಾನಯಾನ ಸಚಿವಾಲಯವು ಭಾರತದ ವಾಯುಪ್ರದೇಶದ ನಕ್ಷೆಯನ್ನು ಸಹ ಬಿಡುಗಡೆ ಮಾಡಿದೆ. ಇದು ಅನುಮತಿಯಿಲ್ಲದೆ ಡ್ರೋನ್‌ಗಳನ್ನು ಬಳಸಬಹುದಾದ ಪ್ರದೇಶಗಳು ಮತ್ತು ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೆ ಡ್ರೋನ್‌ಗಳನ್ನು ಬಳಸಲಾಗದ ಪ್ರದೇಶಗಳನ್ನು ಗುರುತಿಸುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.