ಒಣದ್ರಾಕ್ಷಿ ಬೆಲೆ ಏಕಾಏಕಿ ಕುಸಿತ, ರೈತ ಕಂಗಾಲು!

By Kannadaprabha News  |  First Published Mar 28, 2022, 8:46 AM IST

* ಆರ್ಥಿಕ ಚೈತನ್ಯಕ್ಕೆ ಬೇಕು ಸರ್ಕಾರ ಸಹಾಯ ಹಸ್ತ

* ದ್ರಾಕ್ಷಿಗೆ ಒಣಗಿದ ಬೆಲೆ: ಬೆಳೆಗಾರನಿಗೆ ಹುಳಿ

* ಇಳುವರಿಯೂ ಕುಸಿತ, ಬೆಲೆ ದಿಢೀರ್‌ ಕುಸಿತಕ್ಕೆ ಕಂಗಾಲು ರೈತ


ಶಿವಾನಂದ ಪಿ.ಮಹಾಬಳಶಟ್ಟಿ

ರಬಕವಿ-ಬನಹಟ್ಟಿ(ಮಾ.28): ಹೊಸ ವರ್ಷದ ನಂತರದಲ್ಲಿನ ಶಿವರಾತ್ರಿ, ಯುಗಾದಿ ಹಬ್ಬಗಳಿಗೆ ಹೆಚ್ಚಿನ ದರ ಸಿಗಬಹುದೆಂಬ ನಿರೀಕ್ಷೆ ಹೊತ್ತು ಮೂರ್ನಾಲ್ಕು ತಿಂಗಳು ಕಾದು ಕುಳಿತರೂ ಬೆಲೆ ಏರಿಕೆ ಕಾಣದೇ ಒಣದ್ರಾಕ್ಷಿ ದರ ಕುಸಿತ ಕಂಡಿದೆ. ಇದರಿಂದಾಗಿ ಬೆಳೆಗಾರನಿಗೆ ಒಣದ್ರಾಕ್ಷಿ ಹುಳಿಯಾಗಿದೆ.

Tap to resize

Latest Videos

ಒಣದ್ರಾಕ್ಷಿ ಬೆಲೆ ಏಕಾಏಕಿ ಕುಸಿತ ಕಂಡು ಕೆಜಿಗೆ .50 ರಿಂದ .60 ಗಳವರೆಗೆ ಕಡಿಮೆಯಾಗಿದೆ. ದ್ರಾಕ್ಷಿ ಬೆಳೆದ ಬೆಳೆಗಾರರಲ್ಲಿ ಮೊಗದಲ್ಲಿ ಆತಂಕ ಮೂಡುವಂತೆ ಮಾಡಿದೆ. ಮಾಚ್‌ರ್‍ ಮೊದಲ ವಾರದವರೆಗೂ ಪ್ರತಿ ಕೆಜಿಗೆ .200 ಇದ್ದ ಒಣದ್ರಾಕ್ಷಿ ದಿಢೀರನೆ .130 ರಿಂದ .150 ಗಳವರೆಗೆ ಇಳಿಕೆ ಕಂಡಿದೆ. ಈ ಹಿಂದಿನ ಕಹಿ ಅನುಭವದಿಂದಾಗಿ ತಾಲೂಕಿನ ಜಗದಾಳ ಗ್ರಾಮವೊಂದರಲ್ಲಿಯೇ ಸುಮಾರು 300 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆದು, 500 ಟನ್‌ಗಳಷ್ಟುಉತ್ಪಾದನೆ ಮಾಡುತ್ತಿದ್ದರು ರೈತರು. ಆದರೀಗ 75 ಟನ್‌ಗೆ ಇಳಿಕೆ ಕಂಡಿದೆ. ಕಾರಣ, ಬೆಲೆಯಲ್ಲಿ ಆಗುತ್ತಿರುವ ಏರುಪೇರು.

ಮುಗಿಯದ ಸಂಕಷ್ಟಗಳ ಸರಮಾಲೆ:

ದ್ರಾಕ್ಷಿ ಬೆಳೆಯುವಾಗ ದೌನಿ ರೋಗ, ಕೊಳೆ ಹಾಗೂ ಬೂದಿ ರೋಗ, ಅಕಾಲಿಕ ಮಳೆಯಿಂದಾಗಿ ದ್ರಾಕ್ಷಿ ಬೆಳೆ ಬಾರದೆ ಸಮಸ್ಯೆ ಎದುರಾಗಿತ್ತು. ಕೀಟನಾಶಕಗಳ ಸಾಲವನ್ನು ಇನ್ನೂ ತೀರಿಸಿಲ್ಲ. ಇಂತಹ ಸ್ಥಿತಿಯಲ್ಲಿ ಬೆಲೆ ಕುಸಿದಿರುವುದು ದಿಕ್ಕು ತೋಚದಂತಾಗಿದೆ.

4ಟನ್‌ ಬದಲು 7.5 ಕ್ವಿಂಟಲ್‌ ಮಾತ್ರ:

ಈಗಾಗಲೇ ದ್ರಾಕ್ಷಿಗೆ ರೋಗದಿಂದ ತೀವ್ರ ಸಮಸ್ಯೆ ಎದುರಿಸಿದ್ದು, ಎಕರೆಗೆ 4 ಟನ್‌ವರೆಗೆ ಬರಬೇಕಾದ ಒಣದ್ರಾಕ್ಷಿ ಕೇವಲ 7.5 ಕ್ವಿಂಟಲ್‌ನಷ್ಟುಮಾತ್ರ ಬಂದಿರುವುದು ರೈತರನ್ನು ಚಿಂತೆಗೆ ದೂಡುವಂತೆ ಮಾಡಿದೆ. ಉತ್ತಮ ದ್ರಾಕ್ಷಿ ಫಸಲು ತೆಗೆಯುವಲ್ಲಿ ವಿಫಲರಾಗಿದ್ದು, ಕೊನೆಗೆ ಒಣದ್ರಾಕ್ಷಿಯ ದರ ಚೆನ್ನಾಗಿ ಸಿಕ್ಕು ಆರ್ಥಿಕ ಚೈತನ್ಯ ನೀಡಬಹುದು ಎಂಬ ಮಹಾದಾಸೆಗೆ ದರ ಕುಸಿತ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪ್ರತಿ ಎಕರೆ ದ್ರಾಕ್ಷಿ ಬೆಳೆಗೆ ಕನಿಷ್ಠ .2 ಲಕ್ಷಗಳವರೆಗೂ ಖರ್ಚಾಗುವುದು. ಆದರೆ, ಮಾರುಕಟ್ಟೆಯಲ್ಲಿ ಇದಕ್ಕೆ ಪೂರಕವಾಗಿ ಮಾರಾಟ ಮಾಡಿದ ದ್ರಾಕ್ಷಿಯಿಂದ .1.5 ಲಕ್ಷಗಳಷ್ಟುಮಾತ್ರ ಹಣ ಕೈಸೇರಲಿದೆ. ಹೀಗಿರುವಾಗ ಬೆಳೆಯನ್ನೇ ನಂಬಿ ಬದುಕಿರುವ ಬಾಳು ಹೇಗೆ ಎಂಬುವುದೇ ಯಕ್ಷಪ್ರಶ್ನೆ.

ಸಂಕಷ್ಟಕ್ಕೆ ಶೀಘ್ರ ಸ್ಪಂದಿಸಬೇಕಾಗಿದೆ ಸರ್ಕಾರ

ನೂರಾರು ಹೆಕ್ಟೇರ್‌ ಪ್ರದೇಶಗಳಲ್ಲಿ ದಾಕ್ಷಿ ಬೆಳೆ ಬೆಳೆದಿದ್ದು, ಲಕ್ಷಾಂತರ ರುಪಾಯಿಗಳನ್ನು ಖರ್ಚು ಮಾಡಿದ್ದಾರೆ. ರೋಗ ಬಾಧೆ ಸೇರಿದಂತೆ ವಾತಾವರಣದ ವ್ಯತ್ಯಾಸದಿಂದ ಇಳುವರಿಯೂ ಕೂಡ ಇಳಿಕೆ ಕಂಡಿದೆ. ಇದರ ಮಧ್ಯ ದರ ಕುಸಿತವು ಇನ್ನಷ್ಟುಸಂಕಷ್ಟಕ್ಕೆ ದೂಡುವಂತೆ ಮಾಡಿದೆ. ಹಾನಿಯಾದ ರೈತರಿಗೆ ಸರ್ಕಾರದಿಂದ ಸಿಗುವ ಪರಿಹಾರಗಳು ವೇಳೆಗೆ ಸರಿಯಾಗಿ ಸಿಗದೇ ಸಾಲಗಾರರನ್ನಾಗಿಸುವಂತೆ ಮಾಡಿದೆ. ಈಗಲಾದರೂ ಸರ್ಕಾರದ ಪರಿಹಾರಗಳನ್ನು ಶೀಘ್ರ ಬಿಡುಗಡೆ ಮಾಡುವ ಮೂಲಕ ರೈತನ ಬಾಳಿಗೆ ಬೆಳಕಾಗಬೇಕು ಎನ್ನುವುದು ರೈತರ ಕಳಕಳಿಯ ಮನವಿ.

ದ್ರಾಕ್ಷಿ ಬೆಳೆದ ರೈತ ಹಾನಿಗೊಳಗಾಗಿದ್ದಾನೆ. ಸರ್ಕಾರದ ಮಹತ್ತರ ಯೋಜನೆಯಾಗಿರುವ ಫಸಲ್‌ ಬೀಮಾ ಯೋಜನೆಯಡಿ ಪ್ರತಿ ಹೆಕ್ಟೇರ್‌ ಪ್ರದೇಶದ ಹಾನಿಗೆ .2.8 ಲಕ್ಷಗಳವರೆಗೆ ಪರಿಹಾರ ಒದಗಿಸುತ್ತದೆ. ಹಾನಿಯಾದ ಸಂದರ್ಭದಲ್ಲಿ ಪರಿಹಾರ ಒದಗಿಸದೇ ವಿಳಂಬನೀತಿಯಿಂದ ರೈತರು ಮತ್ತಷ್ಟುಆರ್ಥಿಕ ಸಂಕಷ್ಟಎದುರಿಸುವಲ್ಲಿ ಕಾರಣವಾಗಿದೆ.

ಸತ್ಯಪ್ಪ ಅಸ್ಕಿ ಪ್ರಗತಿಪರ ರೈತ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಧ್‌ ಪ್ರವೇಶಿಸಿ ಒಣ ದ್ರಾಕ್ಷಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು. ವಾಣಿಜ್ಯ ಬೆಳೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ದ್ರಾಕ್ಷಿ ಬೆಳೆಗಾರರಿಗೆ ಪೂರಕವಾದ ಸಹಕಾರ ದೊರೆತಲ್ಲಿ ಬೆಳೆ ಮುನ್ನಡೆಸಲು ಸಾಧ್ಯ.

ಬಸವರಾಜ ಕಾನಟ್ಟಿಯುವ ರೈತ ಜಗದಾಳ.

click me!