UAE Trade Deal:ಮೇನಲ್ಲಿ FTA ಅನುಷ್ಠಾನ; ಲೋಹ, ಖರ್ಜೂರ,ಕಚ್ಚಾ ತೈಲದ ಮೇಲಿನ ಆಮದು ಸುಂಕ ತಗ್ಗಿಸಲಿದೆ ಭಾರತ

Suvarna News   | Asianet News
Published : Mar 28, 2022, 04:56 PM ISTUpdated : Mar 28, 2022, 05:22 PM IST
UAE Trade Deal:ಮೇನಲ್ಲಿ FTA ಅನುಷ್ಠಾನ; ಲೋಹ, ಖರ್ಜೂರ,ಕಚ್ಚಾ ತೈಲದ ಮೇಲಿನ ಆಮದು ಸುಂಕ ತಗ್ಗಿಸಲಿದೆ ಭಾರತ

ಸಾರಾಂಶ

*ಉಭಯ ರಾಷ್ಟ್ರಗಳ ನಡುವಿನ ಒಪ್ಪಂದದ ಮಾಹಿತಿ ನೀಡಿದ ಸಚಿವ ಪಿಯೂಷ್ ಘೋಯಲ್ *ಯುಎಇಗೆ ಭೇಟಿ ನೀಡಿದ ಸಂದರ್ಭದಲ್ಲಿ ಒಪ್ಪಂದದ ಮಾಹಿತಿ ಬಹಿರಂಗಪಡಿಸಿದ ಸಚಿವರು *ಒಪ್ಪಂದದ ಅನ್ವಯ 1,157 ಸರಕುಗಳ ಮೇಲಿನ ಸುಂಕ ತಗ್ಗಿಸಲಿರೋ ಭಾರತ  

ನವದೆಹಲಿ (ಮಾ.28):  ಮುಕ್ತ ವಾಣಿಜ್ಯ ಒಪ್ಪಂದದ (FTA) ಭಾಗವಾಗಿ  ಭಾರತ ಯುಎಇನಿಂದ ( UAE) ಆಮದು ಮಾಡಿಕೊಳ್ಳುವ ಖರ್ಜೂರ (Dates), ಲೋಹಗಳು (Metals), ಸಿಮೆಂಟ್ (Cement), ಅಡುಗೆ ಅನಿಲ (Cooking gas) ಹಾಗೂ ಕಚ್ಚಾ ತೈಲ (Crude oil) ಮೇಲಿನ ಆಮದು ಸುಂಕವನ್ನು (Import duty)ತಗ್ಗಿಸಲಿದೆ. ಮುಕ್ತ ವಾಣಿಜ್ಯ ಒಪ್ಪಂದ (FTA)ಮೇನಲ್ಲಿ ಅನುಷ್ಠಾನಕ್ಕೆ ಬರೋ ನಿರೀಕ್ಷೆಯಿದೆ.

ಈ ಒಪ್ಪಂದದ ಮಾಹಿತಿಗಳನ್ನು ಭಾನುವಾರ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಷ್ ಘೋಯಲ್ (Piyush Goyal) ಎಮಿರೇಟ್ಸ್ ಗೆ (Emirates) ಭೇಟಿ ನೀಡಿದ ಸಂದರ್ಭದಲ್ಲಿ ಬಹಿರಂಗಪಡಿಸಲಾಗಿದೆ. ಈ ಒಪ್ಪಂದದ ಅನ್ವಯ 1,157 ಸರಕುಗಳು ಅಥವಾ ಉತ್ಪನ್ನಗಳ  ಶೇ.9.7 ಮೇಲೆ ಭಾರತ ತೆರಿಗೆ ಸುಂಕಗಳನ್ನು ತಗ್ಗಿಸಲಿದೆ. ಹಾಗೆಯೇ ಯುಎಇ ಶೇ.0.7  ಸರಕುಗಳನ್ನು ವಾಣಿಜ್ಯ ಒಪ್ಪಂದದಿಂದ ಹೊರಗಿಡಲಿದೆ.

CEPA Deal : ಭಾರತ-ಯುಎಇ ವ್ಯಾಪಾರ ಸಮೃದ್ಧಿಯ ಶಕೆ: ಪಿಯೂಷ್‌ ಗೋಯಲ್‌

ಮೇನಲ್ಲಿ ಜಾರಿಗೆ ಬರಲಿರೋ ಯುಎಇ ಜೊತೆಗಿನ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದದ (CEPA) ಅಡಿಯಲ್ಲಿ ಭಾರತ ಅದರ ಸುಮಾರು 2/3ರಷ್ಟು ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ತೆಗೆಯೋ ಉದ್ದೇಶವನ್ನು ಹೊಂದಿದೆ. ಇದಕ್ಕೆ ಪ್ರತಿಯಾಗಿ ಯುಎಇ ಶೇ.80ರಷ್ಟು ಸರಕುಗಳ ಮೇಲಿನ ಸುಂಕಗಳನ್ನು ತಕ್ಷಣವೇ ತಗ್ಗಿಸಲಿದೆ.
ಇನ್ನು ಭಾರತ ಮುಂದಿನ 5ರಿಂದ 7 ವರ್ಷಗಳಲ್ಲಿ ಶೇ.18ರಷ್ಟು ಇನ್ನಷ್ಟು ಸರಕುಗಳ ಮೇಲಿನ ಸುಂಕಗಳನ್ನು ತೆಗೆಯಲಿದೆ. ಈ ಸುಂಕ ವಿನಾಯ್ತಿಯನ್ನು 10 ವರ್ಷಗಳಲ್ಲಿ ಶೇ.2ರಷ್ಟು ಮತ್ತಷ್ಟು ಸರಕುಗಳಿಗೆ ವಿಸ್ತರಿಸಲಾಗುವುದು. ಈ ಮುಕ್ತ ವಾಣಿಜ್ಯ ಒಪ್ಪಂದದಿಂದ ಯುಎಇಯಿಂದ ಶೇ.5ರಷ್ಟು ಆಮದು ಸುಂಕಕ್ಕೊಳಪಟ್ಟಿರೋ 26 ಬಿಲಿಯನ್ ಡಾಲರ್ ಮೌಲ್ಯದ ಭಾರತೀಯ ಉತ್ಪನ್ನಗಳಿಗೆ ಪ್ರಯೋಜನವಾಗಲಿದೆ. ಯುಎಇ ಸುಮಾರು ಶೇ.97ರಷ್ಟು ಆಮದಿನ ಮೇಲಿನ ಸುಂಕವನ್ನು ರದ್ದುಗೊಳಿಸೋದಾಗಿ ಹೇಳಿದೆ. ಇದ್ರಲ್ಲಿ ಮೌಲ್ಯದ ಆಧಾರದಲ್ಲಿ ಲೆಕ್ಕ ಹಾಕೋದಾದ್ರೆ ಶೇ.99ರಷ್ಟು ಭಾರತದ ರಫ್ತು ಸೇರಿದೆ.ತಕ್ಷಣದ ಸುಂಕ ವಿನಾಯ್ತಿಯಿಂದ ಭಾರತದಿಂದ ರಫ್ತಾಗೋ ರತ್ನಗಳು ಹಾಗೂ ಆಭರಣಗಳು, ಜವಳಿ, ಕೃಷಿ ಹಾಗೂ ಮೀನು ಉತ್ಪನ್ನಗಳು, ಚರ್ಮ ಉತ್ಪನ್ನಗಳು, ಪಾದರಕ್ಷೆಗಳು, ಕ್ರೀಡಾ ಸಾಮಗ್ರಿಗಳು ಹಾಗೂ ಔಷಧಗಳಿಗೆ ಪ್ರಯೋಜನವಾಗೋ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇದೇ ಮೊದಲ ಬಾರಿಗೆ ಭಾರತೀಯ ಜನೌಷಧಗಳ ರಫ್ತನ್ನು ಉತ್ತೇಜಿಸಲು ಫಾರರ್ಮಾ ವಿಭಾಗದಲ್ಲೇ ಪ್ರತ್ಯೇಕ ವಿಭಾಗವನ್ನು ತೆರೆಯಲಾಗಿದೆ. ಅಮೆರಿಕ, ಆಸ್ಟ್ರೇಲಿಯಾ, ಯುರೋಪ್, ಕೆನಡಾ, ಜಪಾನ್ ಹಾಗೂ ಇಂಗ್ಲೆಂಡ್ ರಾಷ್ಟ್ರಗಳಿಂದ ನಿಯಂತ್ರಕರ ಅನುಮೋದನೆ ಪಡೆದಿರೋ  ಔಷಧಗಳು ಯುಎಇಯಲ್ಲಿ ಸ್ವಯಂಚಾಲಿತ ನೋಂದಣಿ ಹಾಗೂ ಮಾರ್ಕೆಟಿಂಗ್ ಮನ್ನಣೆ ಪಡೆಯೋ ನಿರೀಕ್ಷೆಯಿದೆ. ಈ ನಡುವೆ ಕೇಂದ್ರ ಸರ್ಕಾರ ದೇಶೀಯ ಕೈಗಾರಿಕೆಗಳಿಗೆ ಹೆಚ್ಚಿನ ಭದ್ರತೆ ಒದಗಿಸಲು ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದಕ್ಕೆ ಸಂಬಂಧಿಸಿ ಅನೇಕ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು,ಇದ್ರಿಂದ ಬೇರೆ ರಾಷ್ಟ್ರಗಳು ಈ ಒಪ್ಪಂದವನ್ನು ದುರುಪಯೋಗಪಡಿಸಿಕೊಳ್ಳೋದನ್ನು ತಡೆಯಬಹುದಾಗಿದೆ ಎಂದು ತಿಳಿಸಿದೆ. 

ಒಣದ್ರಾಕ್ಷಿ ಬೆಲೆ ಏಕಾಏಕಿ ಕುಸಿತ, ರೈತ ಕಂಗಾಲು!

ಕೇವಲ 5 ತಿಂಗಳ ಹಿಂದೆ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ (CEPA) ಕುರಿತು ಭಾರತ ಹಾಗೂ ಯುಎಇ ಮಾತುಕತೆ ಪ್ರಾರಂಭಿಸಿದವು. ಇದು ವ್ಯಾಪಾರ, ವಾಣಿಜ್ಯ ಮತ್ತು ಹೂಡಿಕೆಗಳಿಗೆ ಅಗಾಧ ಅವಕಾಶಗಳನ್ನು ಸೃಷ್ಟಿಸುವುದಲ್ಲದೆ, ಕಠಿಣವಾದ ಆದರೆ ಸಂಭಾವ್ಯ ಪರಿವರ್ತನೆಯ ಸಮಯದಲ್ಲಿ ನಿರಂತರ ಜಾಗತಿಕ ಚೇತರಿಕೆಗೆ ಕೊಡುಗೆ ನೀಡುತ್ತದೆ. ಪ್ರಗತಿಯ ಬಗೆಗಿನ ಪರಸ್ಪರ ಆಶಯ ಮತ್ತು ಎರಡೂ ದೇಶಗಳಲ್ಲಿನ ಜನರಿಗೆ ದೂರಗಾಮಿ ಪ್ರಯೋಜನಗಳನ್ನು ತಲುಪಿಸುವ ಅಚಲ ಬದ್ಧತೆ ಎರಡೂ ಕಡೆಗಳಲ್ಲಿ ಗಾಢವಾಗಿದೆ ಎಂದು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಷ್ ಘೋಯಲ್ ಕೆಲವು ದಿನಗಳ ಹಿಂದಷ್ಟೇ ಹೇಳಿದ್ದರು.  ಅನೇಕ ಉತ್ಪನ್ನಗಳಿಗೆ ವಿಶೇಷವಾಗಿ ರತ್ನಗಳು ಮತ್ತು ಆಭರಣಗಳು, ಜವಳಿ, ಚರ್ಮ, ಪಾದರಕ್ಷೆ, ಪ್ಲಾಸ್ಟಿಕ್‌, ಕೃಷಿ ಉತ್ಪನ್ನಗಳು, ಇಂಜಿನಿಯರಿಂಗ್‌ ಸರಕುಗಳು ಮತ್ತು ಔಷಧಿಗಳಂತಹ ಕಾರ್ಮಿಕರು ಹೆಚ್ಚು ಬೇಡಿಕೆಯಿರುವ ವಲಯಗಳಲ್ಲಿ ಸುಧಾರಿತ ಮಾರುಕಟ್ಟೆಯನ್ನು ಪಡೆಯುತ್ತವೆ. ಮತ್ತೊಂದೆಡೆ, ಯುಎಇಯ ರಫ್ತುದಾರರು ಭಾರತದ ದೊಡ್ಡ ಮಾರುಕಟ್ಟೆಗೆ ವಿಶೇಷವಾಗಿ ಪೆಟ್ರೋಲಿಯಂ, ಲೋಹಗಳು, ಖನಿಜಗಳು, ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್‌ಗಳಂತಹ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಪಡೆಯುತ್ತಾರೆ ಎಂದು ಕೂಡ ಘೋಯಲ್ ತಿಳಿಸಿದ್ದರು. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌