Dominos Pizza ಆರ್ಡರ್ ಮಾಡುವವರಿಗೆ ಶಾಕಿಂಗ್ ಸುದ್ದಿ!

Published : May 25, 2021, 02:00 PM ISTUpdated : May 25, 2021, 02:14 PM IST
Dominos Pizza ಆರ್ಡರ್ ಮಾಡುವವರಿಗೆ ಶಾಕಿಂಗ್ ಸುದ್ದಿ!

ಸಾರಾಂಶ

* ಲಾಕ್ಡೌನ್‌ನಿಂದ ಆನ್‌ಲೈನ್‌ ಆರ್ಡರ್‌ ಮೊರೆ ಹೋದ ಜನಸಾಮಾನ್ಯರು * ಮನೆಯೂಟ ತಿಂದು ಬೇಜಾರಾದ್ರೆ ಮನೆ ಬಾಗಿಲಿಗೇ ಬರುತ್ತೆ ಹೊರಗಿನ ಊಟ * ಆದ್ರೆ ಆನ್‌ಲೈನ್ ಆರ್ಡರ್‌ ಮಾಡೋರು ಎಚ್ಚರ ವಹಿಸ್ಲೇಬೇಕು, ನಿಮಗೆ ಗೊತ್ತಿಲ್ದೇ ನಡೆಯುತ್ತಿದೆ ಹ್ಯಾಕರ್ಸ್‌ ಆಟ

ನವದೆಹಲಿ(ಮೇ.25): ದೇಶಾದ್ಯಂತ ಕೊರೋನಾ ಸೋಂಕು ಕಾಲಿಟ್ಟಾಗಿನಿಂದ ಇದನ್ನು ನಿಯಂತ್ರಿಸುವ ಸಲುವಾಗಿ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಿರುವಾಗ ಹೊರಗೆ ಓಡಾಡುವ ಉಸಾಬರ೯ ಬೇಡವೆಂದು ಅನೇಕ ಮಂದಿ ಆನ್‌ಲೈನ್‌ ಮೂಲಕವೇ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಇನ್ನು ಕೆಲ ಮಂದಿ ಮನೆಯಲ್ಲೇ ತಯಾರಿಸಿದ ತಿಂಡಿ ತಿನಿಸು ತಿಂದು ಬೇಜಾರಾಗಿ ಆನ್‌ಲೈನ್‌ ಮೂಲಕ ಊಟ, ಪಿಜ್ಜಾ, ತಿಂಡಿ ತರಿಸುತ್ತಿದ್ದಾರೆ. ಆದರೀಗ ಆನ್‌ಲೈನ್‌ ಮೂಲಕ ಆರ್ಡರ್‌ ಮಾಡುವವರು ಎಚ್ಚೆತ್ತುಕೊಳ್ಳಬೇಕಿದೆ. ಹೌದು ನಿಮಗರಿವಿಲ್ಲದಂತೆಯೇ ನಿಮ್ಮೆಲ್ಲಾ ಮಾಹಿತಿ ಅನ್ಯರ ಪಾಲಾಗುತ್ತಿದೆ. 

ನೀರು ತುಂಬಿದ ರಸ್ತೆಯಲ್ಲಿ ಪಾರ್ಸಲ್ ಹಿಡಿದು ನಿಂತ ಡಿಲೆವರಿ ಬಾಯ್! ಕಮೆಂಟ್ಸ್ ಚೆನ್ನಾಗಿವೆ

ಹೌದು ಡಾಮಿನೋಸ್‌ನ ಪಿಜ್ಜಾ ಬಹಳ ಫೇಮಸ್‌, ಇದನ್ನು ಆರ್ಡರ್‌ ಮಾಡುವವರ ಸಂಖ್ಯೆಯೂ ಕಡಿಮೆ ಇಲ್ಲ. ಆದರೀಗ ಈ ಪಿಜ್ಜಾ ತರಿಸುವವರಿಗೊಂದು ಶಾಕಿಂಗ್ ನ್ಯೂಸ್ ಕಾದಿದೆ. , ಡಾಮಿನೋಸ್​ಪಿಜ್ಜಾ ಆರ್ಡರ್​ ಮಾಡಿದವರು ಸೇಫ್​​ ಇಲ್ಲ ಎನ್ನಲಾಗಿದೆ. ಪಿಜ್ಜಾ ಆರ್ಡರ್​​ ಮಾಡಿದವರ ಎಲ್ಲಾ ವೈಯಕ್ತಿಕ ಮಾಹಿತಿ ಸೋರಿಕೆಯಾಗಿ ಹ್ಯಾಕರ್ಸ್‌ ಪಾಲಾಗಿದೆ ಎನ್ನಲಾಗಿದೆ. ಪಿಜ್ಜಾ ಆರ್ಡರ್​ ಮಾಡಿದವರ ಕ್ರೆಡಿಟ್ ಕಾರ್ಡ್​​ ಮಾಹಿತಿ, ಮೊಬೈಲ್​​ ಸಂಖ್ಯೆ, ಮೇಲ್​​ ಐಡಿ, GPS ಲೊಕೇಷನ್​​​ ಸೋರಿಕೆಯಾಗಿದೆ. ಬರೋಬ್ಬರಿ 18 ಕೋಟಿ ಮಂದಿ ವೈಯಕ್ತಿಕ ಮಾಹಿತಿ ಡಾರ್ಕ್​​ ವೆಬ್​​ನಲ್ಲಿ ಪ್ರಕಟವಾಗಿದ್ದು, 10 ಲಕ್ಷಕ್ಕೂ ಹೆಚ್ಚು ಕ್ರೆಡಿಟ್​​ ಕಾರ್ಡ್​​ಗಳ ಮಾಹಿತಿ ಸೋರಿಕೆಯಾಗಿದೆ ಎನ್ನಲಾಗಿದೆ. 

18 ಕೋಟಿ ಡಾಮಿನೋಸ್​ ಗ್ರಾಹಕರ ಬರೋಬ್ಬರಿ 13 TBಯಷ್ಟು ಮಾಹಿತಿಯನ್ನು ಹ್ಯಾಕರ್ಸ್​​​​​​ ಕದ್ದಿದ್ದಾರೆ. ಅಲ್ಲದೇ ಈ ಮಾಹಿತಿಯನ್ನು ಹ್ಯಾಕ್​​ ಮಾಡಿ ಡಾರ್ಕ್​​ ವೆಬ್​ಗಳಿಗೆ ನೀಡಲಾಗಿದೆ. ಈ ಮಾಹಿತಿ ಮೂಲಕ ಡಾಮಿನೋಸ್​ ಗ್ರಾಹಕರ ಬ್ಯಾಂಕ್​ ಖಾತೆಗಳಿಗೆ ಕನ್ನ ಹಾಕುವ, ಮೊಬೈಲ್​​ ಸಂಖ್ಯೆ, ಮೇಲ್​​ ಐಡಿ, GPS ಲೊಕೇಷನ್​​​ಗಳನ್ನು ದುರ್ಬಳಕೆ ಮಾಡಿಕೊಳ್ಳುವ ಆತಂಕ ಸೃಷ್ಟಿಯಾಗಿದೆ. ಇದರಿಂದ ಆನ್​​ಲೈನ್​ ವಂಚನೆ ಪ್ರಕರಣಗಳು ಹೆಚ್ಚಾಗಲಿವೆ.

'ಬಿರಿಯಾನಿ, ಫೂಟ್ ಮಸಾಜರ್, ಪಿಝಾ..! ಇದೇನು ಪ್ರತಿಭಟನೆಯಾ, ಪಿಕ್‌ನಿಕ್ಕಾ'..?

ಇತ್ತ ತಮ್ಮ ಗ್ರಾಹಕರ ಮಾಹಿತಿ ಹ್ಯಾಕ್​​ ಆಗಿರುವುದನ್ನು ಡಾಮಿನೋಸ್​​ ಇಂಡಿಯಾ ಕೂಡಾ ಒಪ್ಪಿಕೊಂಡಿದೆ. ಆದರೆ ಕ್ರೆಡಿಟ್​ ಕಾರ್ಡ್​​, ಬ್ಯಾಂಕ್​ ಖಾತೆ ಮಾಹಿತಿಗಳು ಸೋರಿಕೆಯಾಗಿರುವುದನ್ನು ಅಲ್ಲಗಳೆದಿದ್ದಾರೆ. ಆದರೆ 2015ರಿಂದ 201ರವರೆಗೆ ಡಾಮಿನೋಸ್​​ ಇಂಡಿಯಾ ಸರ್ವರ್​​ಗೇ ಹ್ಯಾಕರ್ಸ್​​ ಕನ್ನ ಹಾಕಿದ್ದು, ಎಲ್ಲಾ ಮಾಹಿತಿಗಳು ಸೋರಿಕೆಯಾಗಿವೆ ಎನ್ನಲಾಗುತ್ತಿದೆ. ಕದ್ದ ಮಾಹಿತಿ ಮೂಲಕ ಸ್ಪೈ ಮಾಡಲಾಗುತ್ತಿದೆಯಂತೆ. ವ್ಯಕ್ತಿಗಳ ಮೇಲೆ ಗೂಢಚಾರಿಕೆ ಮಾಡಲು ಮಾಹಿತಿಯನ್ನು ಬಳಸಲಾಗುತ್ತಿದೆ ಎಂಬುವುದು ಆತಂಕಕಾರಿ ಸಂಗತಿ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌