ಟಿಡಿಎಸ್‌ ಸಲ್ಲಿಕೆ ದಿನಾಂಕ ಜೂ.30ರವರೆಗೆ ವಿಸ್ತರಣೆ!

By Suvarna News  |  First Published May 25, 2021, 9:50 AM IST

* ಮೂಲದಲ್ಲೇ ಕಡಿತ ಆಗುವ ತೆರಿಗೆ

* ಟಿಡಿಎಸ್‌ ಸಲ್ಲಿಕೆ ದಿನಾಂಕ ಜೂ.30ರವರೆಗೆ ವಿಸ್ತರಣೆ

* ಫಾರ್ಮ್- 16 ನೀಡುವ ದಿನಾಕ ಜುಲೈ 15ಕ್ಕೆ ವಿಸ್ತಾರ


ನವದೆಹಲಿ: ಕಂಪನಿಗಳು ತಮ್ಮ ಉದ್ಯೋಗಿಗಳ ಟಿಡಿಎಸ್‌ ಅನ್ನು (ಮೂಲದಲ್ಲೇ ಕಡಿತ ಆಗುವ ತೆರಿಗೆ) ತರಿಗೆ ಇಲಾಖೆಗೆ ತುಂಬುವ ಗಡುವನ್ನು ಮೇ 31ರಿಂದ ಜೂನ್‌ 30ರವರೆಗೆ ವಿಸ್ತರಿಸಲಾಗಿದೆ. ಇದೇ ವೇಳೆ, ಕಂಪನಿಗಳು ತೆರಿಗೆ ಕಡಿತಕ್ಕೆ ಸಂಬಂಧಿಸಿದ ಫಾಮ್‌ರ್‍-16 ಅನ್ನು ಉದ್ಯೋಗಿಗಳಿಗೆ ನೀಡುವ ಗಡುವನ್ನು ಜೂನ್‌ 15ರಿಂದ ಜುಲೈ 15ಕ್ಕೆ ವಿಸ್ತರಿಸಲಾಗಿದೆ.

‘ಕೋವಿಡ್‌ ಸೋಂಕಿನ ಈ ಸಂಕಷ್ಟದ ಸಮಯದಲ್ಲಿ ಕಂಪನಿಗಳು ಹಾಗೂ ತೆರಿಗೆದಾರರಿಗೆ ಈಗಿನ ಗಡುವಿನಲ್ಲಿ ಕರ್ತವ್ಯ ಪೂರೈಸುವುದು ಕಷ್ಟಆಗಬಹುದು. ಹೀಗಾಗಿ ಗಡುವು ವಿಸ್ತರಿಸಲಾಗಿದೆ’ ಎಂದು ತೆರಿಗೆ ಇಲಾಖೆ ಹೇಳಿದೆ.

Tap to resize

Latest Videos

ತೆರಿಗೆ ಇಲಾಖೆ ಇತ್ತೀಚೆಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ದಿನಾಂಕವನ್ನು ತೆರಿಗೆ ಇಲಾಖೆ ಸೆಪ್ಟೆಂಬರ್‌ 30ಕ್ಕೆ ವಿಸ್ತರಿಸಿತ್ತು.

click me!