Home Loan EMIs:ಗೃಹ ಸಾಲ ಮರುಪಾವತಿ ತಡವಾದ್ರೆ ಈ ತೊಂದ್ರೆ ತಪ್ಪದು!

By Suvarna News  |  First Published Jan 21, 2022, 10:09 PM IST

*ಗೃಹ ಸಾಲ ಸಿಗೋದು ಸುಲಭ,ಆದ್ರೆ ಪ್ರತಿ ತಿಂಗಳು ಇಎಂಐ ಕಟ್ಟೋದು ಸರಳವಲ್ಲ
*ನಿರಂತರವಾಗಿ ಇಎಂಐ ಪಾವತಿ ಮುಂದೂಡಿದ್ರೆ ದಂಡ ಬೀಳೋದು ಗ್ಯಾರಂಟಿ
*ಗೃಹ ಸಾಲ ಮರುಪಾವತಿ ತಡವಾದ್ರೆ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ


Business Desk: ಸ್ವಂತ ಮನೆ ಖರೀದಿಸೋದು ಬಹುತೇಕರಿಗೆ ಜೀವನದ ಬಹುದೊಡ್ಡ ಕನಸು. ಆದ್ರೆ ಗೃಹ ಸಾಲ (Home loan) ಮರುಪಾವತಿಸಲು (Repayment) ತಡ ಮಾಡಿದ್ರೆ ಹೊಸ ಮನೆಯೇ ನಿಮಗೆ ದುಸ್ವಪ್ನವಾಗಿ ಕಾಡಬಹುದು. ಮನೆ ಖರೀದಿಗೆ (purchase) ಅಗತ್ಯವಾದ ಹಣದ ಸರಳ ಹಾಗೂ ಅಗ್ಗದ ಮೂಲವೆಂದ್ರೆ ಗೃಹ ಸಾಲ (Home Loan).ಇಂದು ವಿವಿಧ ಬ್ಯಾಂಕುಗಳು (Banks) ನಾನಾ ವಿಧದ ಗೃಹಸಾಲಗಳನ್ನು ಒದಗಿಸುತ್ತಿವೆ.  ಹೀಗಾಗಿ ನಿಮ್ಮ ಅಗತ್ಯಕ್ಕೆ ತಕ್ಕದಾದ ಗೃಹಸಾಲವನ್ನು ಆಯ್ಕೆ ಮಾಡಬಹುದು. ಗೃಹ ಸಾಲ ಪಡೆಯೋದು ತುಂಬಾ ಸುಲಭದ ಕೆಲಸ ಅನ್ನಿಸಬಹುದು. ಆದ್ರೆ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ (Repayment) ಮಾಡೋದು ಅಷ್ಟು ಸುಲಭದ ಕೆಲಸವಲ್ಲ, ಅದಕ್ಕೆ ಸಮರ್ಪಕವಾದ ಆರ್ಥಿಕ ಯೋಜನೆ ಅಗತ್ಯ. ಸಾಲ ಮರುಪಾವತಿ ತಡವಾದ್ರೆ ಸಾಲಗಾರನ ಮೇಲೆ ಇದು ಅನೇಕ ವಿಧದಲ್ಲಿ ಪರಿಣಾಮ ಬೀರಬಲ್ಲದು. ಗೃಹ ಸಾಲ ಮರುಪಾವತಿ ತಡವಾದ್ರೆ ಏನೆಲ್ಲ ತೊಂದರೆಗಳು ಎದುರಾಗಬಹುದು?  ಇಲ್ಲಿದೆ ಮಾಹಿತಿ.

ದಂಡ ವಿಧಿಸಬಹುದು ಅಥವಾ ಎನ್ ಪಿಎ ಖಾತೆ ಎಂದು ಪರಿಗಣಿಸಬಹುದು
ಒಂದು ವೇಳೆ ನೀವು ನಿರಂತರ 3 ತಿಂಗಳುಗಳ ಕಾಲ ಇಎಂಐ (EMI) ಮರುಪಾವತಿ (Repayment) ಮಾಡದಿದ್ರೆ ಆಗ ನಿಮ್ಮನ್ನು ಸಣ್ಣ ಸುಸ್ತಿದಾರನೆಂದು (Defaulter) ಭಾವಿಸಲಾಗುತ್ತದೆ. ಇಂಥ ಪ್ರಕರಣದಲ್ಲಿ ಬ್ಯಾಂಕು (Bank) ಅಥವಾ ಸಾಲ (Loan) ನೀಡಿದ ಸಂಸ್ಥೆ ಪಾವತಿಗೆ ಸಂಬಂಧಿಸಿ ನಿಮಗೆ ಜ್ಞಾಪನ ಸಂದೇಶಗಳನ್ನು ಕಳುಹಿಸಬಹುದು. ಆದ್ರೆ ನೀವು ಇಎಂಐ (EMI) ಪಾವತಿಯನ್ನು ಮತ್ತಷ್ಟು ಮುಂದೆ ಹಾಕಿದ್ರೆ ತೊಂದರೆ ಎದುರಾಗುತ್ತದೆ. ಮತ್ತೂ ಮೂರು ತಿಂಗಳು ನೀವು ಇಎಂಐ ಮರುಪಾವತಿಸದಿದ್ರೆ ನಿಮ್ಮನ್ನು ಪ್ರಮುಖ ಸುಸ್ತಿದಾರನೆಂದು (Defaulter) ಬ್ಯಾಂಕ್ ಪರಿಗಣಿಸುತ್ತದೆ. ಅಲ್ಲದೆ, ಬಾಕಿಯಿರೋ ಸಾಲವನ್ನು ವಸೂಲಿ ಮಾಡಲು ನಿಮ್ಮ ಆಸ್ತಿಯನ್ನು ಹರಾಜು ಹಾಕೋ ಪ್ರಕ್ರಿಯೆಗೆ ಚಾಲನೆ ನೀಡಲು  ಕೂಡ ಕಾನೂನಿನಲ್ಲಿ ಅವಕಾಶವಿದೆ. ಇಎಂಐ ಪಾವತಿಗೆ ತಡ ಮಾಡಿದ್ರೆ ಬ್ಯಾಂಕ್ ಮೊದಲು ಕೈಗೊಳ್ಳೋ ಕ್ರಮವೆಂದ್ರೆ ದಂಡ (Fine) ವಿಧಿಸೋದು. ದಂಡದ ಪ್ರಮಾಣ ಬಾಕಿಯಿರೋ ಇಎಂಐ ಮೊತ್ತದ ಮೇಲೆ ಮಾಸಿಕ ಶೇ.1ರಿಂದ ಶೇ.2ರಷ್ಟಿರುತ್ತದೆ. ಒಂದು ವೇಳೆ ನೀವು ಪ್ರಮುಖ ಸುಸ್ತಿದಾರನೆಂದು (Defaulter) ಪರಿಗಣಿಸಲ್ಪಟ್ಟರೆ ಬ್ಯಾಂಕ್ ನಿಮ್ಮ ಸಾಲವನ್ನು ವಸೂಲಾಗದ ಸಾಲ (NPA) ಎಂದು ಪರಿಗಣಿಸಿ ವಸೂಲಾತಿ ಪ್ರಕ್ರಿಯೆ ಪ್ರಾರಂಭಿಸಬಹುದು. ಬ್ಯಾಂಕುಗಳು ಸಾಲವನ್ನು ಎನ್ ಪಿಎ (NPA) ಎಂದು ಘೋಷಿಸೋ ಮುನ್ನ ನೋಟಿಸ್ (Notice) ಕಳುಹಿಸುತ್ತವೆ. ಕೆಲವೊಮ್ಮೆ ಎನ್ ಪಿಎ ಖಾತೆಗಳ ವಸೂಲಾತಿಗೆ ಬ್ಯಾಂಕುಗಳು ಮೂರನೇ ವ್ಯಕ್ತಿ ಅಥವಾ ಸಂಸ್ಥೆಯನ್ನು ಏಜೆಂಟ್ ಆಗಿ ನೇಮಿಸುತ್ತವೆ ಕೂಡ. ಇದು ಸಾಲಗಾರನಿಗೆ ಮುಜುಗರದ ಪರಿಸ್ಥಿತಿಯನ್ನು ತಂದೊಡ್ಡಬಹುದು ಕೂಡ.

Tap to resize

Latest Videos

PVC Aadhar Cards : ಉಪಯೋಗಕ್ಕೆ ಬಾರದ ಪ್ರೂಫ್ ಇನ್ನು

ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ
ಗೃಹ ಸಾಲ ಇಎಂಐಗಳನ್ನು ಅನಿಯಮಿತವಾಗಿ ಪಾವತಿಸೋದ್ರಿಂದ ಕ್ರೆಡಿಟ್ ಸ್ಕೋರ್ (Credit score) ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಸಾಲಗಾರ ಆಗಾಗ ಇಎಂಐ ಮಿಸ್ ಮಾಡಿದ್ರೆ ಕ್ರೆಡಿಟ್ ಸ್ಕೋರ್ ಅತ್ಯಧಿಕ ಕಡಿಮೆ ಮಟ್ಟಕ್ಕೆ ಕುಸಿಯೋ ಸಾಧ್ಯತೆಯಿದೆ. ಕಡಿಮೆ ಕ್ರೆಡಿಟ್ ಸ್ಕೋರ ಸಾಲದ ಬಡ್ಡಿದರ ಹೆಚ್ಚಳಕ್ಕೆ ಕಾರಣವಾಗಬಲ್ಲದು. 

Reasons for inflation: ದಿನದಿಂದ ದಿನಕ್ಕೆ ಜೀವನ ನಿರ್ವಹಣಾ ವೆಚ್ಚ ದುಬಾರಿ; ಜಾಗತಿಕ ಹಣದುಬ್ಬರಕ್ಕೆ ಏಳು ಕಾರಣಗಳು!

ಹೊಸ ಸಾಲ ಅಥವಾ ಬೇರೆ ಬ್ಯಾಂಕಿಗೆ ವರ್ಗಾವಣೆ ನಿರಾಕರಣೆ
ಒಂದು ವೇಳೆ ನೀವು ನಿಮ್ಮ ಗೃಹ ಸಾಲವನ್ನು ಬೇರೆ ಬ್ಯಾಂಕು ಅಥವಾ ಹಣಕಾಸಿನ ಸಂಸ್ಥೆಗಳಿಗೆ ವರ್ಗಾಯಿಸಲು ಬಯಸಿದ್ರೆ, ಹೊಸ ಬ್ಯಾಂಕು ಅಥವಾ ಸಂಸ್ಥೆ ನಿಮ್ಮ ಸಾಲದ ಮರುಪಾವತಿ ಇತಿಹಾಸವನ್ನು ಗಮನಿಸಿ ಅರ್ಜಿಯನ್ನು ನಿರಾಕರಿಸೋ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ, ವೈಯಕ್ತಿಕ ಸಾಲ, ಕಾರ್ ಸಾಲ ಸೇರಿದಂತೆ ಇತರ ವಿಭಾಗಗಳಲ್ಲಿ ಕೂಡ ಸಾಲ ಪಡೆಯೋದು ಕಷ್ಟವಾಗಬಹುದು. 


 

click me!