Reasons for inflation: ದಿನದಿಂದ ದಿನಕ್ಕೆ ಜೀವನ ನಿರ್ವಹಣಾ ವೆಚ್ಚ ದುಬಾರಿ; ಜಾಗತಿಕ ಹಣದುಬ್ಬರಕ್ಕೆ ಏಳು ಕಾರಣಗಳು!

* 2008ರ ಬಳಿಕ ಅತ್ಯಧಿಕ ಮಟ್ಟ ತಲುಪಿದ ಜಾಗತಿಕ ಹಣದುಬ್ಬರ 
*ಇಂಧನ ಬೆಲೆಯಲ್ಲಿ ಭಾರೀ ಏರಿಕೆ
* ಬೆಲೆ ಮೇಲೆ ಪರಿಣಾಮ ಬೀರಿವೆ ಸರಕು ಅಭಾವ, ವೇತನ ಹೆಚ್ಚಳ 

Inflation Seven reasons the cost of living is going up around the world

Business Desk: ದಿನಸಿ ಸಾಮಗ್ರಿಗಳಿಂದ ಹಿಡಿದು ಮನೆಯನ್ನು ಬೆಚ್ಚಗಿರಿಸೋ ಕಾರ್ಯದ ತನಕ ನಿತ್ಯದ ಜೀವನ ನಿರ್ವಹಣಾ ವೆಚ್ಚಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕ್ಷಿಪ್ರ ಏರಿಕೆ ಕಂಡುಬಂದಿದೆ. ಈ ಬೆಳವಣಿಗೆ ಕೇವಲ ಇಂಗ್ಲೆಂಡ್ ಅಥವಾ ಅಮೆರಿಕಕ್ಕೆ ಮಾತ್ರ ಸೀಮಿತವಾಗಿಲ್ಲ,ಬದಲಿಗೆ ಜಗತ್ತಿನಾದ್ಯಂತ ಇಂಥದೊಂದು ಪರಿಸ್ಥಿತಿಯಿದೆ. 2008ರ ಬಳಿಕ ಜಾಗತಿಕ ಹಣದುಬ್ಬರ ಅತ್ಯಧಿಕ ಮಟ್ಟದಲ್ಲಿದ್ದು, ಇದಕ್ಕೆ ಕಾರಣಗಳೇನು? ಇಲ್ಲಿದೆ ಮಾಹಿತಿ.

1.ಇಂಧನ ಬೆಲೆಯಲ್ಲಿ ಹೆಚ್ಚಳ
ಕೊರೋನಾ ಪ್ರಾರಂಭವಾದ ಸಮಯದಲ್ಲಿ ತೈಲ ಬೆಲೆಯಲ್ಲಿ ಕುಸಿತ ಕಂಡುಬಂದಿತ್ತು. ಆದ್ರೆ ನಂತರದ ದಿನಗಳಲ್ಲಿ ಬೇಡಿಕೆ ಹೆಚ್ಚಿದ ಪರಿಣಾಮ ತೈಲ ಬೆಲೆ ಏಳು ವರ್ಷಗಳಲ್ಲೇ ಅತ್ಯಧಿಕ ಮಟ್ಟಕ್ಕೆ ತಲುಪಿತು. ಅಮೆರಿಕದಲ್ಲಿ ಪ್ರಸ್ತುತ ಗ್ಯಾಸೊಲಿನ್ ಬೆಲೆ ಒಂದು ಗ್ಯಾಲನ್ ಗೆ ಅಂದಾಜು 3.31 ಡಾಲರ್ ಇದೆ. ಒಂದು ವರ್ಷದ ಹಿಂದೆ ಒಂದು ಗ್ಯಾಲನ್ ಗೆ 2.39 ಡಾಲರ್ ಇತ್ತು. ಇಂಗ್ಲೆಂಡ್ ಹಾಗೂ ಇತರ ಯುರೋಪಿಯನ್ ರಾಷ್ಟ್ರಗಳಲ್ಲಿ ಕೂಡ ಇದೇ ಕಥೆಯಿದೆ. ಇನ್ನು ಅನಿಲ ದರ ಕೂಡ ಹೆಚ್ಚಿದ್ದು, ಜನರ ಕಣ್ಣಂಚಿನಲ್ಲಿ ನೀರು ತರಿಸುತ್ತಿದೆ. ಏಷ್ಯಾದ ರಾಷ್ಟ್ರಗಳಲ್ಲಿ ಅನಿಲ ಇಂಧನಕ್ಕೆ ಹೆಚ್ಚಿದ ಬೇಡಿಕೆ ಕೂಡ ಬೆಲೆಯೇರಿಕೆಗೆ ಕಾರಣವಾಗಿದೆ. ಜೊತೆಗೆ ಕಳೆದ ವರ್ಷ ಯುರೋಪ್ ನ ತೀವ್ರ ಚಳಿಗಾಲ ಕೂಡ ಅನಿಲಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಸಿತ್ತು. ಇದು ಕೂಡ ಅನಿಲ ದರ ಹೆಚ್ಚಳಕ್ಕ ಕಾರಣವಾಗಿದೆ. 

Vehicle Insurance: ವಾಹನ ಕಳವಾಗಿದ್ರೂ, ಅನ್ಯ ವ್ಯಕ್ತಿ ಚಲಾಯಿಸಿದ್ರೂ ವಿಮಾ ಕಂಪನಿ ಪರಿಹಾರ ನೀಡಬೇಕು: ದೆಹಲಿ ಹೈಕೋರ್ಟ್

2. ಸರಕು ಅಭಾವ
ಪೆಂಡಾಮಿಕ್ ಅವಧಿಯಲ್ಲಿ ನಿತ್ಯದ ಗೃಹ ಬಳಕೆ ವಸ್ತುಗಳ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿತ್ತು. ಇನ್ನುಕೋವಿಡ್ ನಿರ್ಬಂಧ ಹಾಗೂ ಲಾಕ್ ಡೌನ್ ಕಾರಣಕ್ಕೆ ಏಷ್ಯಾದಲ್ಲಿನ ಅನೇಕ ಉತ್ಪಾದನಾ ಕಂಪನಿಗಳು ಮುಚ್ಚಲ್ಪಟ್ಟಿದ್ದವು. ಇದ್ರಿಂದ ಪ್ಲಾಸ್ಟಿಕ್, ಸ್ಟೀಲ್ ಮುಂತಾದ ಸರಕುಗಳ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಉತ್ಪಾದನೆ ಸ್ಥಗಿತ, ಜಾಗತಿಕ ಪೂರೈಕೆ ದರ ಹೆಚ್ಚಳ, ಪೂರೈಕೆಯಲ್ಲಿ ವ್ಯತ್ಯಾಯ ಮುಂತಾದ ಕಾರಣದಿಂದ ಸರಕುಗಳ ಅಭಾವ ಏರ್ಪಟ್ಟಿದೆ.

3. ಶಿಪ್ಪಿಂಗ್ ವೆಚ್ಚ ಹಚ್ಚಳ
ಜಗತ್ತಿನಾದ್ಯಂತ ಸರಕುಗಳ ಸಾಗಣೆ ವೆಚ್ಚದಲ್ಲಿ ಏರಿಕೆ ಕಂಡುಬಂದಿದೆ. ಕೊರೋನಾ ಎರಡನೇ ಅಲೆ ಬಳಿಕ ಶಿಪ್ಪಿಂಗ್ ಕಂಪನಿಗಳಿಗೆ ಬೇಡಿಕೆ ಹೆಚ್ಚಿದ ಕಾರಣ ಬೆಲೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ವಾಯು, ಜಲ ಹಾಗೂ ರಸ್ತೆ ಸಾರಿಗೆ ಎಲ್ಲವೂ ದುಬಾರಿಯಾಗಿವೆ.

4.ವೇತನ ಹೆಚ್ಚಳ
ಕೊರೋನಾ ಪೆಂಡಾಮಿಕ್ ಅವಧಿಯಲ್ಲಿ ಉದ್ಯೋಗ ತೊರೆದ ಅಥವಾ ಬದಲಾಯಿಸಿದವರ ಪ್ರಮಾಣ ದೊಡ್ಡದಿದೆ.ಅಮೆರಿಕದಲ್ಲಿ ಕಳೆದ ವರ್ಷ ಏಪ್ರಿಲ್ ಅವಧಿಯಲ್ಲಿ ನಾಲ್ಕು ಮಿಲಿಯನ್ ಗೂ ಅಧಿಕ ಮಂದಿ ಉದ್ಯೋಗ ತೊರೆದಿದ್ದಾರೆ ಎಂಬ ಮಾಹಿತಿಯನ್ನು ಅಲ್ಲಿನ ಕಾರ್ಮಿಕ ಇಲಾಖೆ ವರದಿ ನೀಡಿದೆ. ಹೀಗಾಗಿ ಅನೇಕ ಸಂಸ್ಥೆಗಳು ನೌಕರರ ಕೊರತೆ ಅನುಭವಿಸಿದವು. ಹೀಗಾಗಿ ಹೊಸ ನೇಮಕಾತಿ ಅಥವಾ ಇರೋ ಉದ್ಯೋಗಿಗಳನ್ನೇ ಉಳಿಸಿಕೊಳ್ಳಲು ವೇತನ ಹೆಚ್ಚಳ, ಬೋನಸ್ ನೀಡೋದು ಅನಿವಾರ್ಯವಾಗಿತ್ತು. ಸಂಸ್ಥೆಗಳು ಈ ಹೆಚ್ಚುವರಿ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಿದ ಕಾರಣ ಸರಕುಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

Business Women : ಹಾಲು ಮಾರಿ ಕೋಟ್ಯಾಧೀಶೆಯಾದ ಗುಜರಾತಿನ ವೃದ್ಧೆ!

5.ಹವಾಮಾನ ಪರಿಣಾಮ
ಜಗತ್ತಿನ ಅನೇಕ ಭಾಗಗಳಲ್ಲಿ ಕಂಡುಬಂದ ವ್ಯತಿರಿಕ್ತ ಹವಾಮಾನ ಪರಿಸ್ಥಿತಿಗಳು ಕೂಡ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿವೆ. ಗಲ್ಫ್ ಆಫ್ ಮೆಕ್ಸಿಕೋನಲ್ಲಿ ಕಾಣಿಸಿಕೊಂಡ ಚಂಡಮಾರುತಗಳು ಜಾಗತಿಕ ತೈಲ ಪೂರೈಕೆ ಮೇಲೆ ಪರಿಣಾಮ ಬೀರಿದವು. ಹಾಗೆಯೇ ಬ್ರೆಜಿಲ್ ನಲ್ಲಿ ಕಾಣಿಸಿಕೊಂಡ ಬರ ಕಾಫಿ ಇಳುವರಿ ತಗ್ಗಲು ಕಾರಣವಾಗೋ ಮೂಲಕ ಕಾಫಿ ಬೆಲೆಯೇರಿಕೆಗೆ ಕಾರಣವಾಯ್ತು.

6.ವ್ಯಾಪಾರಕ್ಕೆ ಅಡ್ಡಿ
ಆಮದು ಸುಂಕ ಹೆಚ್ಚಳ ಕೂಡ ಬೆಲೆಯೇರಿಕೆಗೆ ಕಾರಣವಾಗಿದೆ. ಚೀನಾದ ಸರಕುಗಳ ಮೇಲೆ  ಅಮೆರಿಕ ವಿಧಿಸಿರೋ ದುಬಾರಿ ಆಮದು ಸುಂಕ ಅಲ್ಲಿನ ಗ್ರಾಹಕರ ಜೇಬಿಗೆ ಹೆಚ್ಚಿನ ಹೊರೆಯಾಗಿ ಪರಿಣಮಿಸಿದೆ. 

7.ಪೆಂಡಾಮಿಕ್ ಬೆಂಬಲ ಸ್ಥಗಿತ
ಕೊರೋನಾ ಸಮಯದಲ್ಲಿ ಎಲ್ಲ ರಾಷ್ಟ್ರಗಳ ಸರ್ಕಾರಗಳು ಸಾವರ್ಜನಿಕ ವೆಚ್ಚ ಹೆಚ್ಚಿಸಿದ್ದವು. ಉದ್ಯಮಗಳು, ಕಡಿಮೆ ವೇತನದ ಜನರಿಗೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಬಂಬಲ ನೀಡೋ ಯೋಜನೆಗಳನ್ನು ಪ್ರಕಟಿಸಿದ್ದವು. ಆದ್ರೆ ಈಗ ಈ ಬೆಂಬಲ ಹಿಂತೆಗೆದುಕೊಂಡಿವೆ. ಇದು ಕೂಡ ಬೆಲೆಯೇರಿಕೆಗೆ ಕಾರಣವಾಗಿದೆ. 


 

Latest Videos
Follow Us:
Download App:
  • android
  • ios