ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರದಲ್ಲಿ ದೊಡ್ಡ ಬದಲಾವಣೆ
ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ಕೊಂಚ ಇಳಿಕೆ
ಬೆಂಗಳೂರಿನಲ್ಲಿ ಇಂದು ಚಿನ್ನ, ಬೆಳ್ಳಿಯ ದರ ಹೇಗಿದೆ
ಬೆಂಗಳೂರು (ಜ.21): ಇಂದು ದೇಶಾದ್ಯಂತ ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಕೊಂಚ ಮಟ್ಟಿಗೆ ಏರಿಕೆ ಕಂಡಿದೆ. ಹಾವು ಏಣಿ ಆಟದಂತಾಗುವ ಚಿನ್ನಾಭರಣಗಳ ಬೆಲೆ ನಿರ್ಧಾರದಲ್ಲಿ ಅಂತಾರಾಷ್ಟ್ರೀಯ ವಿಚಾರಗಳು ಮಹತ್ವದ್ದಾಗಿದೆ. ಚಿನ್ನ (Gold)ಅಂದ್ರೆ ಮಹಿಳೆಯರಿಗೆ ವಿಶೇಷವಾದ ಆಕರ್ಷಣೆ. ಅದೆಷ್ಟೇ ಆಭರಣಗಳಿದ್ರೂ ಇನ್ನೂ ಖರೀದಿಸೋ ಬಯಕೆ. ಇದೇ ಕಾರಣಕ್ಕೆ ಪ್ರತಿದಿನ ಚಿನ್ನದ ಬೆಲೆ ಪರಿಶೀಲಿಸೋ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಅಂಥವರಿಗೆ ಇಂದಿನ ದರ ಸ್ವಲ್ಪ ಬೇಸರ ನೀಡಬಹುದು. ಆನ್ ಲೈನ್ನಲ್ಲಿ ಚಿನ್ನ ಹಾಗೂ ಬೆಳ್ಳಿ ಮೇಲೆ ಹೂಡಿಕೆ ಮಾಡಲು ಅವಕಾಶವಿದೆ. ಈ ನಿಟ್ಟಿನಲ್ಲಿಯೂ ನೀವು ಯೋಚಿಸಬಹುದು. ಕಳೆದ ಕೆಲ ದಿನಗಳಿಂದ ಏರಿಳಿತದ ಹಾದಿಯಲ್ಲಿದ್ದ ಚಿನ್ನ ಬೆಳ್ಳಿಯ ದರದಲ್ಲಿ ಕೊಂಚ ಬದಲಾವಣೆಯಾಗಿದೆ. ಜನವರಿ 21ರ ಶುಕ್ರವಾರ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ರಾಜ್ಯಗಳಲ್ಲಿ ಇರುವ ಬೆಲೆಯೆಷ್ಟು?
ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ (Bengaluru) ಚಿನ್ನದ ದರದಲ್ಲಿ 10 ರೂಪಾಯಿ ಏರಿಕೆಯಾಗಿದೆ. ನಿನ್ನೆ 22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 45,550 ರೂಪಾಯಿ ಆಗಿದ್ದರೆ, ಇಂದು 45, 560 ರೂಪಾಯಿ ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲೂ 10 ರೂಪಾಯಿ ಏರಿಕೆಯಾಗಿದ್ದು, ಇಂದಿನ ದರ 49, 800 ಆಗಿದೆ. ಇನ್ನು ಬೆಳ್ಳಿ ದರದಲ್ಲಿ ಸತತ ಮೂರನೇ ದಿನ ದೊಡ್ಡ ಮಟ್ಟದ ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ದರದಲ್ಲಿ 100 ರೂಪಾಯಿ ಇಳಿಕೆಯಾಗಿದ್ದು, ನಿನ್ನೆ 68, 800 ರೂಪಾಯಿ ಇದ್ದ ಬೆಳ್ಳಿ ದರ ಇಂದು 68,700 ರೂಪಾಯಿಗೆ ತಲುಪಿದೆ.
ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ (Delhi)ಕೂಡ ಚಿನ್ನದ ಬೆಲೆಯಲ್ಲಿ ಕೊಂಚ ಬದಲಾವಣೆ ಆಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಏರಿಕೆಯಾಗಿದ್ದು, 47,710 ರೂ. ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲೂ 10 ರೂಪಾಯಿ ಏರಿಕೆಯಾಗಿದ್ದು, 52,050 ರೂಪಾಯಿ ಆಗಿದೆ. ಬೆಳ್ಳಿ ದರದಲ್ಲಿ ಮತ್ತೆ 800 ರೂಪಾಯಿ ಏರಿಕೆಯಾಗಿದೆ. ನಿನ್ನೆ 64,600 ರೂಪಾಯಿ ಇದ್ದ 1 ಕೆಜಿ ಬೆಳ್ಳಿ ದರ ಇಂದು 65,400 ರೂಪಾಯಿ ಆಗಿದೆ.
ಅಯ್ಯೋ, ಸಿಕ್ಕ ನೋಟು ಹರಿದಿದೆ ಅಂತ ತಲೆ ಬಿಸಿ ಬೇಡ, ಅದಕ್ಕಿಲ್ಲಿದೆ ಪರಿಹಾರ!
ಮುಂಬೈನಲ್ಲಿಎಷ್ಟಿದೆ ದರ?
ಮುಂಬೈನಲ್ಲಿ (Mumbai) 22 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೊಂಚ ಏರಿಕೆ ಕಂಡಿದೆ. 10 ರೂಪಾಯಿ ಏರಿಕೆ ಕಂಡು 47,600 ರೂಪಾಯಿ ಆಗಿದೆ. 24 ಕ್ಯಾರಟ್ ನ 10 ಗ್ರಾಂ ಚಿನ್ನದ ದರದಲ್ಲೂ 10 ರೂಪಾಯಿ ಏರಿಕೆ ಕಂಡು 49, 600 ರೂಪಾಯಿ ಆಗಿದೆ. 1 ಕೆಜಿ ಬೆಳ್ಳಿ ದರದಲ್ಲಿ800 ರೂಪಾಯಿ ಏರಿಕೆಯಾಗಿದ್ದು, ನಿನ್ನೆ 64,600 ರೂಪಾಯಿ ಇದ್ದ ಬೆಳ್ಳಿ ದರ ಇಂದು 65,400 ರೂಪಾಯಿ ಆಗಿದೆ.
Business Women : ಹಾಲು ಮಾರಿ ಕೋಟ್ಯಾಧೀಶೆಯಾದ ಗುಜರಾತಿನ ವೃದ್ಧೆ!
ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ (Chennai) 22 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ 10 ರೂಪಾಯಿ ಏರಿಕೆಯಾಗಿದೆ. ನಿನ್ನೆ 45, 810 ರೂಪಾಯಿ ಇದ್ದ 10 ಗ್ರಾಂ ಚಿನ್ನದ ದರ ಇಂದು 45,820 ರೂಪಾಯಿ ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲೂ 10 ರೂಪಾಯಿ ಏರಿಕೆಯಾಗಿದೆ. 24 ಕ್ಯಾರಟ್ ನ 10 ಗ್ರಾಂ ಚಿನ್ನದ ದರ ನಿನ್ನೆ 50, 110 ರೂಪಾಯಿ ಆಗಿದ್ದರೆ, ಇಂದು 50,120 ರೂಪಾಯಿ ಆಗಿದೆ. ಇನ್ನು 1 ಕೆಜಿ ಬೆಳ್ಳಿ ದರದಲ್ಲಿ ಮತ್ತೆ 500 ರೂಪಾಯಿ ಏರಿಕೆಯಾಗಿದ್ದು, 69,300 ರೂಪಾಯಿ ಆಗಿದೆ.