
ನವದೆಹಲಿ (ಏ.13): ದೇಶದ 20 ರಾಜ್ಯಗಳ 76 ಕಂಪನಿಗಳ ಮೇಲೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ನಡೆಸಿದ ಅತಿದೊಡ್ಡ ತಪಾಸಣೆಯ ಬಳಿಕ ನಕಲಿ ಔಷಧಗಳನ್ನು ತಯಾರಿಸಿದ ಕಾರಣಕ್ಕಾಗಿ 18 ಫಾರ್ಮಾ ಕಂಪನಿಗಳ ಲೈಸೆನ್ಸ್‌ಅನ್ನು ಗುರುವಾರ ರದ್ದು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಿಮಾಚಲ ಪ್ರದೇಶದಲ್ಲಿ 70 ಮತ್ತು ಉತ್ತರಾಖಂಡ್‌ನಲ್ಲಿ 45 ಮತ್ತು ಮಧ್ಯಪ್ರದೇಶದಲ್ಲಿ 23 ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಕುರಿತಂತೆ ಎಎನ್‌ಐ ವರದಿ ಮಾಡಿದ್ದು, ನಕಲಿ ಔಷಧಗಳನ್ನು ತಯಾರಿಸಿದ ಕಂಪನಿಗಳ ಪಟ್ಟಿಯನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಎಎನ್‌ಐ ಪಟ್ಟಿಯ ಪ್ರಕಾರ, ಕ್ರಮ ಕೈಗೊಂಡಿರುವ ಹೆಚ್ಚಿನ ಕಂಪನಿಗಳು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ನೋಂದಣಿ ಆಗಿದ್ದವಾಗಿದೆ. ಡೆಹ್ರಾಡೂನ್‌ನಲ್ಲಿ ನೋಂದಾಯಿಸಲಾದ ಹಿಮಾಲಯ ಮೆಡಿಟೆಕ್ ಪ್ರೈವೇಟ್ ಲಿಮಿಟೆಡ್‌ನ ಪರವಾನಗಿಯನ್ನು 2022ರ ಡಿಸೆಂಬರ್ 30 ರಿಂದ ತಕ್ಷಣವೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿತ್ತು. ಆ ಬಳಿಕ ಫೆಬ್ರವರಿ 7 ರಿಂದ ಈ ಕಂಪನಿಯು 12 ಉತ್ಪನ್ನಗಳನ್ನು ತಯಾರಿಸುವ ಅನುಮತಿಯನ್ನು ಡಿಸಿಜಿಐ ರದ್ದು ಮಾಡಿತ್ತು. ಹಿಮಾಚಲ ಪ್ರದೇಶದ ಬಡ್ಡಿಯ ಶ್ರೀ ಸಾಯಿ ಬಾಲಾಜಿ ಫಾರ್ಮಾಟೆಕ್ ಪ್ರೈವೇಟ್ ಲಿಮಿಟೆಡ್‌ಗೆ ಶೋಕಾಸ್ ಮತ್ತು ಔಷಧ ಉತ್ಪಾದನೆ ನಿಲ್ಲಿಸುವ ನೋಡಿಸ್ ನೀಡಲಾಗಿತ್ತು. ಬಳಿಕ, ಡ್ರಗ್ ಇನ್ಸ್‌ಪೆಕ್ಟರ್‌ಗಳು ಪರಿಶೀಲನೆಯ ಬಳಿಕ ಔಷಧ ಉತ್ಪಾದನೆ ನಿಲ್ಲಿಸುವ ಆದೇಶವನ್ನು ಹಿಂಪಡೆಯಲಾಯಿತು.
ಇಜಿ ಫಾರ್ಮಾಸ್ಯುಟಿಕಲ್ಸ್‌ಗೂ (ಹಿಮಾಚಲ ಪ್ರದೇಶ) ಶೋಕಾಸ್ ನೋಟಿಸ್ ನೀಡಲಾಗಿದೆ ಮತ್ತು ಅನುಸರಣೆಯ ಪರಿಶೀಲನೆಯ ನಂತರ ಉತ್ಪಾದನೆಯನ್ನು ನಿಲ್ಲಿಸುವ ಆದೇಶವನ್ನು ಹಿಂಪಡೆಯಲಾಗಿದೆ. ಅಥೆನ್ಸ್ ಲೈಫ್ ಸೈನ್ಸಸ್, ಮೌಜಾ ರಾಂಪುರ್ ಜತ್ತನ್, ನಹಾನ್ ರೋಡ್ ಕಲಾ ಅಂಬ್, ಜಿಲ್ಲೆ ಸಿರ್ಮೌರ್ 173030 (ಹಿಮಾಚಲ) ಕೇವಲ ಶೋಕಾಸ್ ನೋಟಿಸ್ ನೀಡಲಾಗಿದೆ. ಹಿಮಾಚಲದ ಲ್ಯಾಬೋರೇಟ್ ಫಾರ್ಮಾಸ್ಯುಟಿಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಯುನಿಟ್-2) ಎಚ್ಚರಿಕೆಯೊಂದು ಒಂದು ಶೋಕಾಸ್ ನೋಟಿಸ್‌ಅನ್ನು ಕೂಡ ನೀಡಲಾಗಿತ್ತು.
ಹಿಮಾಚಲದ ಸೋಲನ್‌ನಲ್ಲಿರುವ ಜಿಎನ್‌ಬಿ ಮೆಡಿಕಾ ಲ್ಯಾಬ್, ಮಾತ್ರೆಗಳು, ಕ್ಯಾಪ್ಸುಲ್‌ಗಳು, ಡ್ರೈ ಸಿರಪ್‌ಗಳು (ಬೀಟಾ-ಲ್ಯಾಕ್ಟಮ್), ಚುಚ್ಚುಮದ್ದು (ಲಿಕ್ವಿಡ್ ಇಂಜೆಕ್ಷನ್ -ವಿಯಲ್, ಆಂಪೂಲ್‌ಗಳು ಮತ್ತು ಪಿಎಫ್‌ಎಸ್) ಸ್ಯಾಚೆಟ್ ಮತ್ತು ಪ್ರೊಟೀನ್ ಪೌಡರ್ (ಸಾಮಾನ್ಯ ವಿಭಾಗ) ಉತ್ಪಾದನೆಯನ್ನು ನಿಲ್ಲಿಸುವಂತೆ ಸೂಚಿಲಾಗಿದೆ. ಈ ಕಂಪನಿಗಳು ತಯಾರಿಸಿರುವ ಔಷಧಗಳ ಪರಿಶೀಲನೆಗಾಗಿ ಔಷಧ ನಿರೀಕ್ಷಕರಿಗೆ ಕಳುಹಿಸಲಾಗಿದೆ.
ಕಳಪೆ ಗುಣಮಟ್ಟದ ಔಷಧಿ ತಯಾರಿಸಿದ 18 ಫಾರ್ಮಾ ಕಂಪೆನಿಗಳ ಲೈಸೆನ್ಸ್ ರದ್ದು..!
ಗ್ನೋಸಿಸ್ ಫಾರ್ಮಾಸ್ಯುಟಿಕಲ್ ಪ್ರೈವೇಟ್ ಲಿಮಿಟೆಡ್ ಕಂಪನಿಗೂ ಶೋಕಾಸ್ ನೋಟಿಸ್ ನೀಡಲಾಗಿದ್ದು, ಕಾಸ್ಮೆಟಿಕ್ ಮ್ಯಾನುಫ್ಯಾಕ್ಚರಿಂಗ್ ಬಂದ್ ಮಾಡುವಂತೆ ಸೂಚನೆ ನೀಡಿದೆ. ಫರಿದಾಬಾದ್‌ನಲ್ಲಿ ನೋಂದಾಯಿಸಲಾದ ನೆಸ್ಟರ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ಗೆ ಈ ವರ್ಷದ ಜನವರಿ 30 ರಂದು ಶೋಕಾಸ್ ನೋಟಿಸ್ ನೀಡಲಾಗಿತ್ತು. ಅನುಸರಣೆಯನ್ನು ಸಲ್ಲಿಸಿದ ನಂತರ ಸಂಸ್ಥೆಯ ಔಷಧಗಳನ್ನು ಪರುಪರಿಶೀಲನೆ ಮಾಡಲಾಗಿದೆ.
ಬರೀ 10 ಸಾವಿರ ಬಂಡವಾಳದಿಂದ ಸನ್ ಫಾರ್ಮಾ ಪ್ರಾರಂಭಿಸಿದ್ದ ದಿಲೀಪ್ ಸಿಂಘ್ವಿ,ಇಂದು ದೇಶದ ಏಳನೇ ಸಿರಿವಂತ ಉದ್ಯಮಿ!
ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯಿದೆಯ ಶೆಡ್ಯೂಲ್ ಎಂ ಮತ್ತು ಅದರ ಅಡಿಯಲ್ಲಿ ರೂಪಿಸಲಾದ ನಿಯಮಗಳ ನಿಬಂಧನೆಗಳನ್ನು ಅನುಸರಿಸಲು ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಲಾಗಿದೆ. ನಕಲಿ ಔಷಧಗಳ ತಯಾರಿಕೆಗೆ ಸಂಬಂಧಿಸಿದಂತೆ ದೇಶಾದ್ಯಂತ ಫಾರ್ಮಾ ಕಂಪನಿಗಳ ಮೇಲೆ ಭಾರಿ ಶಿಸ್ತುಕ್ರಮ ಇನ್ನೂ ನಡೆಯುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.