ವಿಶ್ವದ 8ನೇ ಅತಿ ದೊಡ್ಡ ಬ್ಯಾಂಕ್‌ ಅಮೆರಿಕದ ಸ್ವಿಸ್‌ ಬ್ಯಾಂಕ್‌ ಕೂಡ ಪತನದತ್ತ..?

By Kannadaprabha News  |  First Published Mar 16, 2023, 8:15 AM IST

ಅಮೆರಿಕದ ಸ್ವಿಸ್‌ ಬ್ಯಾಂಕ್‌ ಅಥವಾ ಕ್ರೆಡಿಟ್‌ ಸೂಸಿ ಬ್ಯಾಂಕ್‌ ಕೂಡ ಮಹಾಪತನವಾಗಲಿದೆ ಎಂದು ಹೇಳಲಾಗುತ್ತಿದ್ದು,  ಹತ್ತೇ ದಿನದಲ್ಲಿ 4ನೇ ಬ್ಯಾಂಕ್‌ಗೆ ಪತನ ಭೀತಿ ಎದುರಾಗಿದೆ. 


ನವದೆಹಲಿ (ಮಾರ್ಚ್‌ 16, 2023): ಅಮೆರಿಕದಲ್ಲಿ ಒಂದಾದ ಮೇಲೊಂದರಂತೆ ಮೂರು ಬ್ಯಾಂಕುಗಳು ಕುಸಿದ ನಂತರ ಮುಂದಿನ ಸರದಿ ಜಗತ್ತಿನ 8ನೇ ಅತಿದೊಡ್ಡ ಬ್ಯಾಂಕ್‌ ಎಂಬ ಖ್ಯಾತಿ ಗಳಿಸಿರುವ ‘ಕ್ರೆಡಿಟ್‌ ಸೂಸಿ’ಯದು ಎಂದು ಖ್ಯಾತ ಹೂಡಿಕೆ ತಜ್ಞ ರಾಬರ್ಟ್‌ ಕಿಯೋಸಾಕಿ ಹೇಳಿದ್ದಾರೆ. ಇದು ನಿಜವಾದರೆ ಅಮೆರಿಕದ ಆರ್ಥಿಕತೆಯಲ್ಲಿ ಅಲ್ಲೋಲಕಲ್ಲೋಲವಾಗುವ ಸಾಧ್ಯತೆಯಿದೆ. 

2008ರಲ್ಲಿ ಆರ್ಥಿಕ ಹಿಂಜರಿಕೆಗೂ (Economic Crisis) ಮೊದಲು ಲೀಮನ್‌ ಬ್ರದರ್ಸ್‌ ಹಣಕಾಸು ಸಂಸ್ಥೆ ಬಾಗಿಲು ಮುಚ್ಚಲಿದೆ ಎಂದು ಭವಿಷ್ಯ ನುಡಿಯುವ ಮೂಲಕ ರಾಬರ್ಟ್‌ ಪ್ರಸಿದ್ಧಿಗೆ ಬಂದಿದ್ದರು. ಅವರು ಹೇಳಿದಂತೆ ಲೀಮನ್‌ ಬ್ರದರ್ಸ್‌ (Lehman Brothers) ಕುಸಿದು ಜಗತ್ತಿನಾದ್ಯಂತ ಆರ್ಥಿಕ ಹಿಂಜರಿಕೆ ಉಂಟಾಗಲು ಮೂಲ ಕಾರಣವಾಗಿತ್ತು. ಇದೀಗ ‘ಕ್ರೆಡಿಟ್‌ ಸೂಸಿ’ (Credit Suisse) ಬ್ಯಾಂಕ್‌ (Bank) ಕುಸಿಯುವ ಸಾಧ್ಯತೆಯಿದೆ ಎಂದು ಟಿವಿ ಸಂದರ್ಶನವೊಂದರಲ್ಲಿ ಅವರು ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ.

Tap to resize

Latest Videos

ಇದನ್ನು ಓದಿ: ಅಮೆರಿಕ ಬ್ಯಾಂಕ್‌ ಕುಸಿತ: ಆತಂಕಗೊಂಡ ಭಾರತೀಯ ಸ್ಟಾರ್ಟಪ್‌ ಬೆಂಬಲಕ್ಕೆ ನಿಂತ ಕೇಂದ್ರ ಸರ್ಕಾರ

ಕಳೆದ ಹತ್ತು ದಿನಗಳಲ್ಲಿ ಅಮೆರಿಕದ (United States) ಸಿಲ್ವರ್‌ಗೇಟ್‌ ಕ್ಯಾಪಿಟಲ್‌, ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ಹಾಗೂ ಸಿಗ್ನೇಚರ್‌ ಬ್ಯಾಂಕ್‌ಗಳು ಪತನಗೊಂಡಿವೆ.

ನಷ್ಟದಲ್ಲಿ ಕ್ರೆಡಿಟ್‌ ಸೂಸಿ ಬ್ಯಾಂಕ್‌:
ಕ್ರೆಡಿಟ್‌ ಸೂಸಿ ಬ್ಯಾಂಕ್‌ 2021ರ ನಂತರ ಸಾಕಷ್ಟು ಹಣಕಾಸು ಅಕ್ರಮಗಳಲ್ಲಿ ಭಾಗಿಯಾದ ಆರೋಪದಿಂದಾಗಿ ಮಾರುಕಟ್ಟೆ ಮೌಲ್ಯವನ್ನು ಶೇ.80 ರಷ್ಟು ಕಳೆದುಕೊಂಡಿದೆ. ಇದೀಗ ಬಾಂಡ್‌ ಮಾರುಕಟ್ಟೆಯಲ್ಲಿ ಈ ಬ್ಯಾಂಕ್‌ ಸಾಕಷ್ಟು ಹಣ ಹೊಂದಿದೆ. ಆದರೆ, ಅಮೆರಿಕದ ಬಾಂಡ್‌ ಮಾರುಕಟ್ಟೆಯೇ ಕುಸಿತದ ಭೀತಿಯಲ್ಲಿದೆ. ಅಮೆರಿಕದಲ್ಲಿ ಷೇರು ಮಾರುಕಟ್ಟೆಗಿಂತ ಬಾಂಡ್‌ ಮಾರುಕಟ್ಟೆಯಲ್ಲಿ ಹೆಚ್ಚಿನ ಹಣವಿದೆ. ಹೀಗಾಗಿ ಬಾಂಡ್‌ ಮಾರುಕಟ್ಟೆ ಕುಸಿದರೆ ಕ್ರೆಡಿಟ್‌ ಸೂಸಿ ಕೂಡ ಕುಸಿಯಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ತೀವ್ರ ಆರ್ಥಿಕ ಹಿಂಜರಿತ ಪರಿಣಾಮ: ಅಮೆರಿಕದ ಮತ್ತೊಂದು ಬ್ಯಾಂಕ್‌ ಮಹಾಪತನ; 1 ವಾರದಲ್ಲಿ 3ನೇ ಬ್ಯಾಂಕ್‌ ದಿವಾಳಿ

‘ಅಮೆರಿಕನ್‌ ಡಾಲರ್‌ ಈಗ ಜಗತ್ತಿನಲ್ಲಿ ಬೆಲೆ ಕಳೆದುಕೊಳ್ಳುತ್ತಿದೆ. ಹೀಗಾಗಿ ಸರ್ಕಾರ ಹೆಚ್ಚೆಚ್ಚು ಡಾಲರ್‌ ಪ್ರಿಂಟ್‌ ಮಾಡಲಿದೆ. ಅದು ಸಮಸ್ಯೆಗಳನ್ನು ಸೃಷ್ಟಿಸಲಿದೆ’ ಎಂದು ಕಿಯೋಸಾಕಿ ಹೇಳಿದ್ದಾರೆ.

ಕಿಯೋಸಾಕಿ ಈ ಹೇಳಿಕೆ ನೀಡಿದ ಕೆಲ ಗಂಟೆಗಳಲ್ಲೇ ಕ್ರೆಡಿಟ್‌ ಸೂಸಿ ಬ್ಯಾಂಕ್‌ ತನ್ನ ಹಣಕಾಸು ಲೆಕ್ಕಪತ್ರದಲ್ಲಿ ‘ಹೆಚ್ಚು ಕಮ್ಮಿ’ ಆಗಿರುವುದು ನಿಜ ಎಂದು ಒಪ್ಪಿಕೊಂಡಿದೆ.

ಇದನ್ನೂ ಓದಿ: ಹೆಸರಿನ ಗೊಂದಲ: ಅಮೆರಿಕದ ಎಸ್‌ವಿಬಿ ಬ್ಯಾಂಕ್‌ ಪತನದಿಂದ ಮುಂಬೈ ಎಸ್‌ವಿಸಿ ಗ್ರಾಹಕರಿಗೆ ಆತಂಕ..!

ಕ್ರೆಡಿಟ್‌ ಸೂಸಿ ಷೇರು ಶೇ. 30 ರಷ್ಟು ಕುಸಿತ
ನ್ಯೂಯಾರ್ಕ್‌: ಅಮೆರಿಕ ಬ್ಯಾಂಕ್‌ ಪತನ ಬೆನ್ನಲ್ಲೇ ಷೇರುಪೇಟೆಯೂ ಬುಧವಾರ ಕುಸಿತ ಕಂಡಿದೆ. ಡೌ ಜೋನ್ಸ್‌ ಪೇಟೆ ಬುಧವಾರ 500 ಅಂಕಗಳ ಕುಸಿತ ಕಂಡಿದ್ದು, ಕ್ರೆಡಿಸ್‌ ಸೂಸಿ ಬ್ಯಾಂಕಿನ ಷೇರುಗಳು ಸಹ ಶೇ. 30 ರಷ್ಟು ಕುಸಿತ ಕಂಡಿವೆ. ಇದು ಈ ಷೇರಿನ ದಾಖಲೆಯ ಕುಸಿತವಾಗಿದೆ.

ರಾಜೀನಾಮೆ: ಈ ನಡುವೆ, ಕ್ರೆಡಿಟ್‌ ಸೂಸಿ ಏಷ್ಯಾ - ಫೆಸಿಫಿಕ್‌ ಸಹ - ಮುಖ್ಯಸ್ಥ ನೀಲಕಂಠ ಮಿಶ್ರಾ ರಾಜೀನಾಮೆ ನೀಡಿ ಎಕ್ಸಿಸ್‌ ಬ್ಯಾಂಕ್‌ ಸೇರಲು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದ ಬ್ಯಾಂಕ್‌ ಪತನದಿಂದ 1 ಲಕ್ಷ ಉದ್ಯೋಗ ನಷ್ಟ..? ಭಾರತದ ಸ್ಟಾರ್ಟಪ್‌ಗಳ ನೆರವಿಗೆ ಸಜ್ಜಾದ ಕೆಂದ್ರ ಸರ್ಕಾರ

click me!